ನೂರಡಿ ರಸ್ತೆಯ ಸಾಹಸಗಳು
ಇಬ್ಬರು ಗೆಳೆಯರು ಸುಂದರೇಶ್ ಮುಂದೆ ಶ್ರೀರಾಂ ಹಿಂದೆ ರಸ್ತೆ ದಾಟುತ್ತಿರಬೇಕಾದರೆ ನಡುವಯಸ್ಸಿನ ಹೆಂಗಸೊಬ್ಬಳು ಬಂದು ಲಪ್ಪೆಂದು ಬಿಗಿಯಾಗಿ ಸುಂದರೇಶ್ ಕೈ ಹಿಡಿದಳು. ಇಬ್ಬರು ಗೆಳೆಯರು ಅನಿರೀಕ್ಷಿತ ನಡವಳಿಕೆಯಿಂದ ತತ್ತರಿಸಿದರು. ಆಗ ಶ್ರೀರಾಂ ಅಕ್ಷರಶಃ ಅವಳ ಕೈ ಕಿತ್ತು ಹಾಕಿ ನೋಡಿದರೆ ಸುಂದರೇಶ್ ಮುಖವೆಲ್ಲ ಕೆಂಪೇರಿ ಬೆವರುತ್ತಿದ್ದರಂತೆ. ಅಲ್ಲದೆ ಸರ ಸರನೆ ರಸ್ತೆ ದಾಟುತ್ತಿದ್ದಾರೆ ! ಇದಕ್ಕೂ ಮೀರಿ “ನನ್ನ ಮರೆತು ಬಿಟ್ರಾ ಅಣ್ಣಾ” ಎಂದು ಬೊಬ್ಬಿಡುತ್ತಾ ಓಡೋಡಿ ಬಂದು ಅವಳು ಸಮೀಪಿಸುತ್ತಿದ್ದಾಳೆ. ಇದೇನೋ ವಿಚಿತ್ರ ಪ್ರಸಂಗವಿರಬೇಕೆಂದು ಅರಿತ ಶ್ರೀರಾಂ ಶೀಘ್ರ ಕಾರ್ಯೋನ್ಮುಖರಾದರು.
ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರಹ.
‘ತವರಿಗೂ ಒಂದು ತವರು ಹಿಂಬಾಗಿಲು’
ಆಧುನಿಕ ಮನೆಗಳಲ್ಲಿ ಹಿಂಬಾಗಿಲಿಗೆ ಜಾಗವೇ ಇರುವುದಿಲ್ಲ. ಒಂದುವೇಳೆ ಹಿಂಬಾಗಿಲು ಇದ್ದರೂ, ಅದರ ವಿನ್ಯಾಸದಲ್ಲಿ ಎಷ್ಟೊಂದು ಒಪ್ಪ ಓರಣ ಇರುತ್ತದೆ. ಕಾಲ ಬದಲಾದಂತೆ ಹಿಂಬಾಗಿಲ ಅವಶ್ಯಕತೆಯೂ ಇಲ್ಲವಾಗಿದೆ. ಆದರೆ ಹಿಂದಿನ ಕಾಲದ ಮನೆಗಳಲ್ಲಿ ಒಪ್ಪ ಓರಣಕ್ಕೆ ಆದ್ಯತೆಯಿಲ್ಲದ ಹಿಂಬಾಗಿಲುಗಳ ಬಳಿಯೇ ಹೃದಯ ಬಿಚ್ಚಿ ಮಾತನಾಡುವ ‘ತಾವು’ ಇರುತ್ತಿತ್ತು. ಹಿಂಬಾಗಿಲುಗಳ ಈ ಲೋಕವು…
ತೇಜಸ್ವಿ ನೆನಪು ಮಧುರ
ಪ್ರೆಸ್ಸು ಮ್ಯಾಗಝಿನೂ ಗಗನಕುಸುಮದಂತೆ ಬಲುದೂರದಲ್ಲಿ ಮಿನುಗಿ ಹೋಗಿದ್ದು ಇವರ ಪ್ರಜ್ಞೆಯ ಪರಧಿಯ ಮೇಲೆ ದಾಖಲಾದ ಅನುಭವ ಇವರನ್ನು ಕಂಗೆಡಿಸಿತ್ತು. ಡಿಗ್ರಿ ಮುಗಿಸಿ ಹತ್ತಿರತ್ತಿರ ನಾಲ್ಕು ವರ್ಷಗಳಾದರೂ ಹೊಟ್ಟೆಪಾಡಿಗಾಗಿ ದುಡಿಮೆ ಮಾಡಲಿಲ್ಲವೆಂದು ಕೊರಗುತ್ತಿದ್ದರು. ಕುಂಟನೋ, ಕುರುಡನೋ, ಹೆಳವನೋ ಆಗಿರುವವನಂತೆ ಇನ್ನೊಬ್ಬರಿಗೆ ಭಾರವಾಗಿ ಕುಳಿತಿರುವೆನಲ್ಲ ಎಂದು ಬೇಜಾರು ಮಾಡಿಕೊಳ್ಳುತ್ತಿದ್ದರು. ‘ನಿರುದ್ಯೋಗದ ಮುದ್ದೆಯಾಗಿ ಹೋಗಿದ್ದೇನೆ. ತೋಟ ಮಾಡಿಯೇ ತೀರುವೆ’ ಎಂದು ನಿರ್ಧರಿಸಿದರು.’ಮೂಡಿಗೆರೆ ಹ್ಯಾಂಡ್ ಪೋಸ್ಟ್’ ನಲ್ಲಿ ರಾಜೇಶ್ವರಿ ತೇಜಸ್ವಿ ಬರಹ.
ರಾಜೇಶ್ವರಿ ತೇಜಸ್ವಿ ಎಂಬ ‘ಧೀ ಶಕ್ತಿ’ಯ ನೆನಪಿನಲ್ಲಿ..
‘ನನ್ನ ತೇಜಸ್ವಿ’ ಪುಸ್ತಕದಲ್ಲಿ ತೇಜಸ್ವಿ-ರಾಜೇಶ್ವರಿಯರ ನಡುವಿನ ಪ್ರೇಮನಿವೇದನೆಯ ಸನ್ನಿವೇಶ ಸುಂದರವಾಗಿ ಮೂಡಿಬಂದಿದೆ. ಸಿನೆಮಾದ ಸನ್ನಿವೇಶ ಎಂಬಂತೆ ಮೇಲ್ನೋಟಕ್ಕೆ ಕಾಣಬಂದರೂ, ಸಂವೇದನಾಶೀಲ ಓದುಗರಿಗೆ ಇದರಲ್ಲಿ ಕಂಡುಬರುವುದು ಆಕೆಯ ಸ್ಥೈರ್ಯ! ಸಾಂಪ್ರದಾಯಿಕವಾಗಿ ಪುರುಷನೇ ಪ್ರೇಮನಿವೇದನೆ ಮಾಡಿಕೊಳ್ಳುವುದನ್ನು ಹೆಚ್ಚಾಗಿ ಕಾಣುತ್ತೇವೆ. ಆದರೆ ಆ ಕಾಲದಲ್ಲಿಯೇ ರಾಜೇಶ್ವರಿ ಅವರು ದಿಟ್ಟತನದಿಂದ, ತಮ್ಮ ಪ್ರೇಮನಿವೇದನೆ ಮಾಡಿಕೊಂಡಿದ್ದರು.
ಆನೆಗಳಿಗೆ ತೇಜಸ್ವಿ ತೋಟಾನೇ ಯಾಕೆ ಬೇಕಾಯ್ತು?
ಕಾಫಿ ಬೆಳೆಗಾರರು ತೋಟಗಳನ್ನು ವಿಸ್ತರಿಸುವುದಲ್ಲದೆ ಹೊರರಾಜ್ಯಗಳಿಂದ ಉದ್ಯೋಗಗಳನ್ನರಸಿ ಬರುವವರು- ಇದ್ದಿಲು ಸುಡಲು, ನಾಟ ಕೊಯ್ಯಲು, ಬಿದಿರು ಕಡಿದು ಲೋಡು ಮಾಡಲು ಬಂದವರೆಲ್ಲಾ ಕಾಡೊಳಗೆ ಹೂಡಿದ ತಮ್ಮ ತಾತ್ಕಾಲಿಕ, ಬಿಡಾರಗಳನ್ನೇ ಶಾಶ್ವತ ಮಾಡಿಕೊಂಡು ರಾಜಕೀಯ ಪಕ್ಷಗಳ ಆಶ್ರಯದಲ್ಲಿ ಓಟಿನ ಬಲದಿಂದ ಕುಳಿತು ಬಿಡುತ್ತಾರೆ. ಓಟಿನ ಬಲವಿಲ್ಲದ ಮರಗಳು ಕೇವಲ ನಾಟಾಗಳಾಗಿ ನೆಲಕ್ಕುರುಳುತ್ತವೆ. ಕಾಡಿನ ಪ್ರಾಣಿ ಸಮುದಾಯಗಳಿಗಂತೂ ಬದುಕುವುದೇ ಸವಾಲಾಗಿದೆ. ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರಹ
ಪೇರಳೆಯ ಸಿಹಿ ಕೊಡುವ ಕಾಡಿನೊಡಲ ಜೀವ
ಈ ಮಾಯಾಲೋಕವೇ ತನ್ನ ನೂರಾರು ಕನಸುಗಳನ್ನೇ ನನಸಿನ ತಟ್ಟೆಯಲ್ಲಿಟ್ಟು ತಿನ್ನಿಸುವ ಮೃಷ್ಟಾನ್ನವಾಗಿತ್ತು ಚಂದ್ರಮ್ಮನಿಗೆ. ಆದರೆ 2005 ರಲ್ಲಿ ನೂರಾರು ಜೀವಗಳಿಗೆ ಉಸಿರು ಕೊಡುತ್ತಿದ್ದ ಕಂಪೆನಿಯ ಉಸಿರೇ ನಿಂತು ಹೋದಾಗ ಚಂದ್ರಮ್ಮನ ಕುಟುಂಬ ತತ್ತರಿಸಿತು. ತನ್ನೊಳಗೆ ಇಳಿದುಹೋದ, ತನ್ನದೇ ಹುಟ್ಟು ಮಗು ಎನ್ನುವ ಪ್ರಾಮಾಣಿಕತೆಯಲ್ಲೇ, ಪ್ರೀತಿಯಿಂದಲೇ ಪೊರೆದ ಕಂಪೆನಿ ಕಣ್ಣು ಮುಚ್ಚಿದಾಗ ಅರೆಕ್ಷಣ ಮುಂದೇನು ಮಾಡೋದು? ಅನ್ನೋ ಚಿಂತೆ ಚಂದ್ರಮ್ಮನನ್ನು ಆವರಿಸಿತಾದರೂ ಅದಾಗಲೇ ಕುದುರೆಮುಖ ಅವಳನ್ನು ಪೊರೆದಿತ್ತು.
ಯಾರೋ ಕುಯೆಂಪು ಅನ್ನೊರ ಮಗನಂತೆ
ಕಾಫಿಬೋರ್ಡು ಮಧ್ಯವರ್ತಿಗಳ ಹಾವಳಿಯನ್ನೂ ತಪ್ಪಿಸಲಾಗದೆ ದಲ್ಲಾಳಿಗಳ ಕೈಗೊಂಬೆಯಂತೆ ವರ್ತಿಸಿತು. ಕಾಫಿ ಬೆಳೆಯನ್ನು ಬಿಟ್ಟರೆ ಎಲ್ಲಾ ಬೆಳೆಗಾರರು ತಮ್ಮ ಉತ್ಪಾದನೆಯನ್ನು ತಾವೇ ಮಾರಿಕೊಳ್ಳುತ್ತಿದ್ದರು. ಕಾಫಿ ಬೆಳೆಗಾರನು ಎದುರಿಸುತ್ತಿದ್ದ ಸಮಸ್ಯೆ ಮತ್ತು ಮುಂದೊದಗಬಹುದಾದ ಆಪತ್ತು ವಿಪತ್ತುಗಳನ್ನು ಚಿಂತಿಸಿ ೧೯೭೧ರಲ್ಲೇ ತೇಜಸ್ವಿಯು ತಾವು ಬೆಳೆದ ಕಾಫಿಯನ್ನು ಸಂತೆಯಲ್ಲಿ ಮಾರಿಕೊಳ್ಳುವೆನೆಂಬ ಹೇಳಿಕೆ ಕೊಟ್ಟು ಕಾಫಿ ಬೋರ್ಡಿನ ಬಗ್ಗೆ ಮೊಟ್ಟಮೊದಲ ಬಾರಿಗೆ ಸಿಡಿದೆದ್ದರು. ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರಹ
ಚಳಿ, ಕಾಫಿ ಪಿಕ್ಕಿಂಗ್ , ಪಲ್ಪರ್ ಮತ್ತು ಮೂಡಿಗೆರೆ
ಏಳೆಂಟು ವರ್ಷಗಳ ಹಿಂದೆ ಗೌರಿಹಬ್ಬದಲ್ಲಿ ಬಳೆ ಕೊಳ್ಳಲಿಕ್ಕೆಂದು ಮೂಡಿಗೆರೆ ಪೇಟೆ ಬೀದಿಗೆ ಹೋದೆ. ಅಲ್ಲೊಬ್ಬರು ಈ ಗೊಬ್ಬೆ ಸೀರೆ ಉಟ್ಟವರು ವಯಸ್ಸಾದ ಮಹಿಳೆ ಮೊಮ್ಮಕಳೊಟ್ಟಿಗೆ ಹೋಗುತ್ತಿದ್ದರು. ಅವರು ತುರುಬಿಗೆ ಕುಪ್ಪಿಗೆ ಎಂಬ ಆಭರಣ ಸಿಕ್ಕಿಸಿಕೊಂಡಿದ್ದರು. ಮತ್ತು ಕಿವಿಗೆ ಹಾಕಿದ್ದ ಬುಗುಡಿಯಿಂದ ಬಂದ ಬಂಗಾರದ ಸರ ಕುಪ್ಪಿಗೆಗೆ ಸೇರಿಕೊಂಡಂತೆ ಇತ್ತು. ಮೆಲ್ಲಗೆ ಅವರ ಹಿಂದೆಯೇ ಒಂದಷ್ಟು ದೂರ ನಡೆದೆ. ಆ ಆಭರಣದ ಚೆಂದ ನೋಡಿದೆ. ಮನಸ್ಸಿಗೆ ಚೆಂದವಾಯಿತು. ಅಂದು ಇಂತಹ ಉಡಿಗೆ ತೊಡಿಗೆಯವರೇ
ಬೀರುವಿನೊಳಗೇ ಅವಿತು ಕೂತ ಅತಿಥಿಗಳು
ಒಮ್ಮೆ ನಾವು ಮೈಸೂರಿಗೆ ಹೋಗಿ ಒಂದಷ್ಟು ದಿನಗಳ ಕಾಲ ಉಳಿದು, ಮರಳಿ ಮನೆಗೆ ಬಂದೆವು. ಬಂದವಳೇ ಬಟ್ಟೆ ಬ್ಯಾಗು ಹಿಡಿದುಕೊಂಡು ಒಳಹೋಗಿ, ಅಲ್ಲಿದ್ದ ಗೋಡೆ ಬೀರಿನ ಬಾಗಿಲು ತೆಗೆದೆ. ಒಂದು ಸಲ ಶಾಕ್ ಹೊಡಿತು. ಗೊಳೋ ಎಂದು ಜೋರಾಗಿ ಅಳುತ್ತಿದ್ದೆ. ‘ಯಾಕೆ, ಏನೇ ಆಯ್ತು,’ ಹೀಗೆ ಅಳಕ್ಕೆ ಎಂದು, ರೂಮಿಗೆ ಗದರಿಕೊಂಡೇ ಬಂದರು ತೇಜಸ್ವಿ. ಇನ್ನೂ ಜೋರಾಯಿತು ನನ್ನ ಅಳು. ನನಗೆ ಮಾತೇ ಹೊರಡಲಿಲ್ಲ. ‘ಏನೇ’ ಎಂದು, ಹಾರು ಹೊಡೆದುಕೊಂಡು ಬಿದ್ದಿದ್ದ ಬಾಗಿಲಿನತ್ತ ನೋಡಿದರು. ಬೇಸ್ತು ಬಿದ್ದರು. ಈ ಹೊಸ ಅತಿಥಿಗಳಿಂದ ನನಗಾದ ನಷ್ಟ ಎಣಿಸಲಾಗದ್ದು.
ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ , ರಾಜೇಶ್ವರಿ ತೇಜಸ್ವಿ ಬರೆದ ಬರಹ ಇಂದಿನ ಓದಿಗಾಗಿ.




