ಅವನಿಗೆ ಒಂದು ಹಿಡಿ ಮಣ್ಣನ್ನೂ ಕೊಡಲಿಲ್ಲ.
ಆ ಮನೆಯ ಅಂಗಳದಲ್ಲಿ ಎಷ್ಟೊಂದು ದೊರೆಯಂತೆ ಮೆರೆದಿದ್ದವನು… ಎಷ್ಟು ಬಡಿದಾಡಿ ರಕ್ತ ಹರಿಸಿದ್ದವನು. ಈಗ ಅದೇ ಅಂಗಳವ ಹಾದು ಹೋಗುವ ಹಾದಿ ಹೋಕರತ್ತ ಕ್ಷೀಣ ದನಿ ಹೊರಡಿಸಿ ಕೈ ಒಡ್ಡಿ ತಿನ್ನಲು ಏನಾದರೂ ಕೊಡಿ ಎಂದು ಬೇಡುತ್ತಿದ್ದ. ಕೊಡುವವರು ಕೊಡುತ್ತಿದ್ದರು. ಅವನ ಮೂರನೇ ಹೆಂಡತಿ ಮೈಸೂರು ಸೇರಿದ್ದವಳು ತನ್ನ ಮಗಳ ಸಮೇತ ನಾಪತ್ತೆ ಆದವಳು ಮತ್ತೆ ಎಲ್ಲೂ ಕಂಡಿರಲಿಲ್ಲ. ಶಾಂತಿ ಮಾತ್ರ ಬಚಾವಾಗಿ ಗಂಡನ ಮನೆಯಲ್ಲಿ ಅನುಕೂಲವಾಗಿ ಇದ್ದಳು.
ಮೊಗಳ್ಳಿ ಗಣೇಶ್ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆ ಸರಣಿಯ 39ನೇ ಕಂತು
ರಾಜರ ಸ್ವಭಾವ, ರಾಜ್ಯವಿಸ್ತಾರದ ಪ್ರೇರಣೆ
ಪ್ರಾಚೀನ ಭಾರತದ ಪ್ರಸಿದ್ಧ ರಾಜರು ಮತ್ತು ರಾಜವಂಶಗಳನ್ನು ಪಟ್ಟಿ ಮಾಡಿ ಅರ್ಥೈಸಿಕೊಳ್ಳುವುದು ಒಂದು ಸವಾಲೇ ಸರಿ. ಒಂದೊಂದು ಕಾಲದಲ್ಲಿ ಒಂದೊಂದು ರೀತಿಯ ಸವಾಲುಗಳನ್ನು ಎದುರಿಸುತ್ತ, ಪ್ರಜೆಗಳಿಗೆ ಸುವ್ಯವಸ್ಥೆಯನ್ನುಕಲ್ಪಿಸಿದ ಕತೆಗಳು ಸಾವಿರಾರು. ಈ ರಾಜವಂಶಗಳನ್ನು ಅರಿಯುವುದಕ್ಕಾಗಿ ಆ ನಿಟ್ಟಿನಲ್ಲಿ ನಾನು ಮಾಡಿಕೊಂಡ ಒಂದು ಪಟ್ಟಿಯನ್ನು ಇಲ್ಲಿ ಕೊಟ್ಟಿರುವೆ. ಅದರ ಪ್ರಕಾರ, ವಿವರಗಳನ್ನು ಕೊಡುತ್ತ ಹೋಗುತ್ತಿದ್ದೇನೆ. ವೈವಿಧ್ಯತೆಯ ಮಹಾಸಾಗರದತ್ತ ಹರಿದು ಬಂದ ನದಿಗಳೆಷ್ಟೋ, ನದಿಗಳು ನಡೆದು ಬಂದ ದಿಕ್ಕುಗಳೆಷ್ಟೋ.
ಕೆ.ವಿ.ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯ ಬರಹ ಇಲ್ಲಿದೆ.
ಇಲ್ಲಿ ಉಳಿದರು ಹೀಗೆ ನಡೆದರು ಅಂಬೇಡ್ಕರ್
ಗಾಂಧೀಜಿ ಹಳ್ಳಿಗಳನ್ನು ಭಾರತದ ಬೆನ್ನೆಲುಬು, ನಾಗರಿಕತೆಯ ತೊಟ್ಟಿಲು ಎಂದು ವೈಭವೀಕರಿಸಿದರೆ ಅಂಬೇಡ್ಕರರಿಗೆ ಅವು ಜಾತ್ಯಾಧಾರಿತ ತಾರತಮ್ಯವನ್ನು ಸ್ಥಿರಗೊಳಿಸಿ ಆಳುವ ಕೂಪಗಳಾಗಿ ಕಾಣುತ್ತಿದ್ದವು. ಒಡಹುಟ್ಟಿದವರಿಗೆ ಸೇವೆಗಳು ನಿರ್ಬಂಧಿಸಲಾದ, ಕೆಲವು ಜಾತಿಗಳವರನ್ನು ಹೀನರೆಂದು ತಿಳಿಯುವ ಹಳ್ಳಿಯಲ್ಲಿ ಅವರು ವಾಸಿಸಿದವರು. ಪಟ್ಟಣಗಳು ಅವಕಾಶಗಳನ್ನು ಒದಗಿಸುವ, ಶಿಕ್ಷಣಕ್ಕೆ ಉತ್ತೇಜನ ನೀಡುವ ಜಾತಿಯನ್ನು ಆಧರಿಸದೇ ಉದ್ಯೋಗ ಬದುಕು ನೀಡುವ ತಾಣಗಳಾಗಿ ಕಂಡಿದ್ದವು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಲಂಡನ್ ವಾಸದ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ
ತಾಷ್ಕೆಂಟ್ಗೆ ವಿದಾಯ
ಯುದ್ಧದ ಹಿಂಸೆ ಮತ್ತು ಅಸಹಾಯಕತೆಯನ್ನು ಸಹಿಸುತ್ತ, ಸಾವು ನೋವು ಅನುಭವಿಸುತ್ತ ಮುನ್ನಡೆಯುವ ಛಲ ಲೋಕದ ಜನಸಮುದಾಯಗಳಿಗೆ ಅದು ಹೇಗೆ ಬರುವುದೊ! ಬಹುಶಃ ಅನುಭವಿಸಿದಾಗಲೇ ಗೊತ್ತಾಗುವುದು. ಇದೇ ಉಜ್ಬೆಕಿಸ್ತಾನ ಮೂಲದ ಮೊಘಲ ಸಂತತಿಯ ಔರಂಗಜೇಬ್, ನನ್ನ ಜನ್ಮಸ್ಥಳ ವಿಜಯಪುರದ ಮೇಲೆ ದಂಡೆತ್ತಿ ಬಂದು ಆದಿಲಶಾಹಿ ಸಾಮ್ರಾಜ್ಯವನ್ನು ಹಾಳುಗೆಡವಿದ. ಅನೇಕ ಸೂಫಿಸಂತರ ಕೊಲೆ ಮಾಡಿದ. ಯುದ್ಧದಲ್ಲಿ ಯಾರು ಮುಸ್ಲಿಮರು? ಯಾರು ಹಿಂದುಗಳು? ಯಾರು ಕ್ರೈಸ್ತರು? ಯುದ್ಧದಲ್ಲಿ ಧರ್ಮವಿಲ್ಲ, ನೀತಿಯಿಲ್ಲ, ನ್ಯಾಯವಿಲ್ಲ. ಅದು ಕೇವಲ ಯುದ್ಧ. ಗೆದ್ದವರನ್ನೂ ಆರ್ಥಿಕವಾಗಿ ಮತ್ತು ನೈತಿಕವಾಗಿ ಸೋಲಿಸುವ ಯುದ್ಧ.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ 47ನೇ ಕಂತು ಇಲ್ಲಿದೆ.
ಚಿತೆಯ ಜೊತೆ ಚಿತೆಯಾಗಿದ್ದೆ
ಆ ಹೆಂಗಸು ನನ್ನತ್ತ ಎರಡು ಮೂರು ಬಾರಿ ನೋಡಿತು. ಅವಳ ಕಣ್ಣಲ್ಲಿದ್ದ ನೀರೆಲ್ಲ ತೀರಿ ಹೋಗಿದ್ದವೇನೊ! ಸ್ಮಶಾನದ ಮೂಲೆಯಲ್ಲಿ ಶವದತ್ತ ನೋಡುತ್ತಲೇ ಕೂತು ಕೂಸಿಗೆ ಎದೆ ಕಚ್ಚಿಸಿದ್ದಳು. ಆ ಕೂಸಿನ ಹೆಜ್ಜೆಗಳಿನ್ನೂ ಮೂಡಿಯೇ ಇಲ್ಲಾ… ಅವನು ನಡೆ ನಡತೆ ನುಡಿಗಳ ಮುಗಿಸಿದ್ದ. ಆ ಹೆಂಗಸಿನ ಹೆಜ್ಜೆಗಳು ಬಾಕಿ ಇದ್ದವು. ಸ್ಮಶಾನ ಬಿಟ್ಟು ಬೇಗ ಮನೆಗೆ ತೆರಳಲು ಮುಂದಾಗಿದ್ದರು. ಸ್ಮಶಾಸನದಲ್ಲಿ ಸಂಸಾರವೇ! ಆಕೆಯೂ ಆ ಜನರ ಜೊತೆ ಎದ್ದು ಹೊರಟಳು ಏನೂ ಆಗಿಯೇ ಇಲ್ಲ ಎಂಬಂತೆ.
ಮೊಗಳ್ಳಿ ಗಣೇಶ್ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆ ಸರಣಿಯ 38ನೇ ಕಂತು
ಚೆಗೆವಾರನನ್ನು ನೆನಪಿಸುವ ʻಮೋಟಾರ್ ಸೈಕಲ್ ಡೈರೀಸ್ʼ
1952ರಲ್ಲಿ ಅದೊಂದು ದಿನ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಒಂದಾದ ಅರ್ಜಂಟೀನಾದಲ್ಲಿ ಮೆಡಿಕಲ್ ಓದುತ್ತಿದ್ದ ಸ್ನೇಹಿತರಾದ ಅರ್ನೆಸ್ಟೋ ಚೆಗೆವಾರ ಮತ್ತು ಆಲ್ಬರ್ಟೋ ಗ್ರೆನಾಡೋಗೆ ಒಂದು ಅಪೂರ್ವವಾದ ಉಮೇದು ಉಂಟಾಗುತ್ತದೆ. ಅದು ಎಂಥವರನ್ನೂ ಬೆಚ್ಚಿಬೀಳಿಸುವಂಥಾದ್ದು. ಸುಮಾರು ಎಂಟು ಸಾವಿರ ಮೈಲಿ ವಿಸ್ತಾರದ ಇಡೀ ದಕ್ಷಿಣ ಅಮೆರಿಕವನ್ನು 1939ನೇ ಮಾಡೆಲ್ಲಿನ ಮೋಟಾರ್ ಬೈಕಿನಲ್ಲಿ ಸುತ್ತಾಡಿಕೊಂಡು ಬರಬೇಕು, ಎಂದು. ಹಾಗೆಂದೇ ಪ್ರಯಾಣ ಹೊರಟ ಗೆಳೆಯರಿಬ್ಬರ ಸ್ವಭಾವ, ನಡವಳಿಕೆ ಒಂದಕ್ಕೊಂದು ತಾಳಮೇಳವಿಲ್ಲದ್ದು.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಬ್ರೆಜಿ಼ಲ್ನ ʻಮೋಟಾರ್ ಸೈಕಲ್ ಡೈರೀಸ್ʼ ಸಿನಿಮಾದ ವಿಶ್ಲೇಷಣೆ
ಉಜ್ಬೆಕಿಸ್ತಾನದ ನೆನಪಿನಲ್ಲಿ ಇತಿಹಾಸದ ನೋಟಗಳು
ನಮ್ಮ ಗೈಡ್, ಇತಿಹಾಸ ತಜ್ಞೆ ಗುಲ್ಚೆಹರಾ ನಮ್ಮನ್ನು ಈ ಮದ್ರಸಾ ಮುಂದೆ ಇರುವ ಬೃಹತ್ತಾದ ಏಕಶಿಲಾ ಕುಂಡವನ್ನು ತೋರಿಸಿದಳು. ಅದು ಒಂದು ಟ್ಯಾಂಕರ್ ನೀರು ತುಂಬುವಷ್ಟು ಆಳ ಮತ್ತು ಅಗಲ ಹೊಂದಿದೆ. ೧೯೧೭ರಲ್ಲಿ ರಷ್ಯಾದಲ್ಲಿ ನಡೆದ ಅಕ್ಟೋಬರ್ ಮಹಾಕ್ರಾಂತಿ ನಡೆದ ಘಟನೆಯಲ್ಲಿ ಕಮ್ಯುನಿಸ್ಟ್ ಸರ್ಕಾರ ಬಂದದ್ದು ಗೊತ್ತಾದ ಕೂಡಲೆ ಸಮರಕಂದದ ಯುವತಿಯರು ತಮ್ಮ ಬುರ್ಖಾಗಳನ್ನು ತಂದು ಈ ಕುಂಡದಲ್ಲಿ ಹಾಕಿ ಸುಟ್ಟರು ಎಂದು ಗುಲ್ ಚೆಹರಾ ತಿಳಿಸಿದಳು. ಹಾಗೆ ಬುರ್ಖಾಗಳನ್ನು ಸುಟ್ಟವರಲ್ಲಿ ಆಗ ಯುವತಿಯಾಗಿದ್ದ ತನ್ನ ಅಜ್ಜಿಯೂ ಇದ್ದಳೆಂದು ಹೇಳಿದಳು. ನಮಗೆಲ್ಲ ಆಶ್ವರ್ಯವೆನಿಸಿತು. ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗೆಲೆಲ್ಲʼ ಸರಣಿಯ ೪೬ನೇ ಕಂತು ಇಂದಿನ ಓದಿಗಾಗಿ
ನಿಶೆಯ ಹೆಬ್ಬಾವಿನ ಬಾಯಲ್ಲಿ ಮಲಗಿದ್ದೆ
“ನನ್ನ ಸ್ವಕಾರಣದಿಂದ ಪಿಎಚ್.ಡಿ ಸಂಶೋಧನೆಗೂ, ಅತಿಥಿ ಉಪನ್ಯಾಸಕ ವೃತ್ತಿಗೂ ರಾಜಿನಾಮೆ ನೀಡುತ್ತಿರುವೆ’ ಎಂದು ಒಂದು ಸಾಲಿನ ರಾಜಿನಾಮೆ ಬರೆದು ಲಕೋಟೆಯಲ್ಲಿಟ್ಟು ಯಾರ್ಯಾರಿಗೆ ಕೊಡಬೇಕೊ ಅವರಿಗೆಲ್ಲ ಕೊಟ್ಟು ಹಾಸ್ಟಲಿಗೆ ಬಂದೆ. ಆ ಕ್ಷಣವೇ ಕ್ಯಾಂಪಸ್ಸನ್ನು ತೊರೆದೆ. ಯಾರಿಗೂ ಹೇಳಲಿಲ್ಲ. ಇಷ್ಟು ಕಾಲ ಪೊರೆದ ಕ್ಯಾಂಪಸ್ಸೇ ನಿನ್ನನ್ನು ಬಿಟ್ಟು ಹೋಗುತ್ತಿರುವೆ. ನಿನ್ನ ಈ ನೆಲದ ಸಾರವನೆಲ್ಲ ತಾಯ ಎದೆ ಹಾಲ ಕುಡಿದಂತೆ ಹೀರಿ ಅರಗಿಸಿಕೊಂಡಿರುವೆ. ಹೋಗುವೆ ನನ್ನ ಮುದ್ದಿನ ನವಿಲುದಾರಿಗಳೇ ಎಂದು ಕತ್ತಲಲ್ಲಿ ಬಂದಿದ್ದೆ”
ʻನನ್ನ ಅನಂತ ಅಸ್ಪೃಶ್ಯ ಆಕಾಶʼ ಮೊಗಳ್ಳಿ ಗಣೇಶ್ ಆತ್ಮಕತೆಯ ಮೂವತ್ತೇಳನೆಯ ಕಂತು.
ಕೆ.ವಿ.ತಿರುಮಲೇಶ್ ಅವರ ಹೊಸ ಸರಣಿ ಆರಂಭ
ಅಳಿಲು ತಾನು ಸಂಗ್ರಹಿಸಿದ ಕಾಳುಗಳನ್ನು ಯಾರಿಗೂ ಕಾಣದಂತೆ ಬಚ್ಚಿಟ್ಟು ಎಲ್ಲಿ ಬಚ್ಚಿಟ್ಟಿದ್ದೇನೆನ್ನುವುದನ್ನು ಮರೆತ ಹಾಗೆ ಹಿರಿಯ ಬರಹಗಾರ ಕೆ.ವಿ. ತಿರುಮಲೇಶ್ ಅವರು ಇತಿಹಾಸದ ಕುರಿತು ಮಾಡಿಕೊಂಡು ಮರೆತಿದ್ದ ಟಿಪ್ಪಣಿಗಳ ಪುಸ್ತಕವೊಂದು ಈಗ ಬಹು ವರ್ಷಗಳ ನಂತರ ಸಿಕ್ಕಿದೆ. ಅವು ಭಾರತದ ರಾಜವಂಶಗಳನ್ನು ಅರಿಯುವ ನಿಟ್ಟಿನಲ್ಲಿ ಪೋಣಿಸಿಕೊಂಡ ಶತಮಾನಗಳ ಮಾಹಿತಿ. ಈ ಮಾಹಿತಿಯನ್ನು ಲೇಖನ ರೂಪದಲ್ಲಿ ಅವರು ಬರೆಯಲಿದ್ದು, ʼನನ್ನ ಹಿಸ್ಟರಿ ಪುಸ್ತಕʼ ಸರಣಿ ಲೇಖನಗಳು ಪ್ರಕಟವಾಗಲಿವೆ. ಸರಣಿಯ ಮೊದಲ ಬರಹ ಇಂದಿನ ಓದಿಗಾಗಿ.










