ಹೊಸಹರಿವಿನ ಕವಿತೆಗಳ ಜೊತೆಗೆ: ಶ್ರೀದೇವಿ ಕೆರೆಮನೆ ಅಂಕಣ
“ದೇಶಪ್ರೇಮವೆಂದರೆ ಈಗ ನಾವು ತಿಳಿದಿರುವಂತಹ ಯುದ್ಧೋನ್ಮಾದವಲ್ಲ. ಹಾಗೆಂದು ನಮ್ಮನ್ನು ನಾವು ಅಡವಿಟ್ಟುಕೊಳ್ಳುವ ಹೇಡಿತನವೂ ಅಲ್ಲ. ಒಂದು ಮನೆಯನ್ನು ಕೇವಲ ಕಲ್ಲು ಮಣ್ಣಿನಿಂದ ನಿರ್ಮಿಸಲಾಗುವುದಿಲ್ಲ. ಹಾಗೆ ನಿರ್ಮಿಸಿದರೆ ಅದು ಕೇವಲ ಕಟ್ಟಡವಾಗುತ್ತದೆಯೇ ಹೊರತು…”
ದೇವರೇ ನಿನ್ನೆಸರ ಬದಲಿಸಿಕೊ.. : ಶರಣಬಸವ ಕೆ ಗುಡದಿನ್ನಿ ಬರೆದ ಕಥೆ
“ಅಪ್ಪ ಆ ಕಾಲಕ್ಕಾಗಲೇ ಮಟ್ಕಾ ಬರೆಯುತ್ತಿದ್ದ. ಬರೀ ಕುರಿ ಕಾಯ್ದೇ ಬದುಕಿದ್ದ ಆತನಿಗೆ ಅವುಗಳನ್ನ ಮಾರಿದ ಮೇಲೆ ಹೊಲ-ಗದ್ದೆಗಳಲಿ ಹೋಗಿ ಬಗ್ಗಿ ಕೆಲಸ ಮಾಡಲು ಸೈರಣೆ ಆಗುತ್ತಿರಲಿಲ್ಲವೆನಿಸುತ್ತದೆ. ಅಲ್ಲದೇ ಹುಡುಕಿಕೊಂಡು ಕೈಯಲ್ಲಿ ಕಾಸಿಡಿದುಕೊಂಡು…”
ಎಂ.ಆರ್. ಕಮಲ ಬರೆದ ಹೊಸ ಪುಸ್ತಕದಿಂದ ಒಂದು ಲೇಖನ
“ಮನೆಯಲ್ಲಿ ಅಷ್ಟು ವರ್ಷಗಳ ಕಾಲ ಬದುಕಿದ್ದರಿಂದ ಎಲ್ಲ ವಸ್ತುಗಳು ಅಸ್ಪಷ್ಟವಾಗಿದ್ದರೂ ಪತ್ತೆ ಹಚ್ಚುವಷ್ಟು ಚುರುಕಾಗಿತ್ತು ಅಜ್ಜಿ. ಕೊನೆಗೆ ಅಜ್ಜಿಗೆ ಕಣ್ಣು ಕಾಣುತ್ತೋ ಇಲ್ಲವೋ ಅಂತ ಪತ್ತೆ ಹಚ್ಚಲು ನಮ್ಮ ತಂದೆ ಒಂದು ಉಪಾಯ ಮಾಡಿದ್ದರು. ಅಜ್ಜಿಯನ್ನು ಸಿನೆಮಾಕ್ಕೆ ಕರೆದುಕೊಂಡುಹೋಗಿ ಪರದೆಯ ಮುಂದೆ ಕೂರಿಸದೆ, ಹಿಂದು ಮುಂದಾಗಿ ಕೂರಿಸಿದ್ದರು. ಪ್ರೊಜೆಕ್ಟರ್ ರೂಮಿನಿಂದ…”
ಓಬಿರಾಯನಕಾಲದ ಕಥಾಸರಣಿಯಲ್ಲಿ ಡಾ. ಜನಾರ್ದನ ಭಟ್ ಬರೆದ ಕಥೆ
“ತೋಟದಲ್ಲಿ ತೆಂಗಿನ ಸೋಗೆಗಳು ಬಿದ್ದಿದ್ದರೆ ಅವುಗಳನ್ನು ಎಳೆದುಕೊಂಡು ಬಂದು ಪಟೇಲರ ಅಂಗಳಕ್ಕೆ ಹಾಕುವುದು, ಹಸಿ ಮಡಲುಗಳನ್ನು ಹೆಣೆದು ಚಪ್ಪರಕ್ಕಾಗುವ ತಡಿಕೆಗಳನ್ನು ತಯಾರಿಸುವುದು, ಒಣಗಿದ ಮಡಲುಗಳನ್ನು ಕಡಿದು ಸೂಟೆಗಳನ್ನು…”
ಆಕಾಶಕ್ಕೆ ಮುಖ ಮಾಡಿದ ಕಥೆಗಳು: ಶ್ರೀದೇವಿ ಕೆರೆಮನೆ ಅಂಕಣ
“ಅಕಾರಣದಿಂದಾಗಿಯೇ ಅವರ ಕಣ್ಣನ್ನು ಹೊಡೆದು ಕೀಳಿಸುವ ಪ್ರಯತ್ನವೂ ನಡೆದಿತ್ತು. ಬಹುಶಃ ಕಥೆಗಾರನ ಕಥಾಶಕ್ತಿಯ ದೈತ್ಯತೆ ಅರಿವಾಗುವುದೇ ಈ ಹಂತದಲ್ಲಿ. ಉಪಕಾರ ಪಡೆದುಕೊಂಡು ರೈತನಾದವನ ಮಕ್ಕಳನ್ನೆ ಕರೆದುಕೊಂಡು ಬಂದಿದ್ದ ಪಟೇಲ ಬುಜಂಗ, ಭಟ್ಟರು ಅತ್ತ ಕಂಪ್ಲೇಂಟನ್ನೂ ಕೊಡಲಾಗದ..”
ಕಾ.ಹು. ಚಾನ್ ಪಾಷ ಅನುವಾದಿಸಿದ ಅನ್ವರ್ ಬರೆದ ತೆಲುಗು ಕಥೆ “ಬಕ್ರಿ”
“ಮೇಕೆಗಳ ಮೇಲೆ, ಜಂತುಗಳ ಮೇಲೆ, ಮನುಷ್ಯರ ಮೇಲೆ ಮೊದಲಿನಿಂದಲೂ ಯಾವುದರ ಮೇಲೂ ಪ್ರೀತಿಯಿಲ್ಲ ಯಾಖುಬ್ ಮಿಯಾನಿಗೆ. ಗಂಡಸೆಂಬ ಒಂದೇ ಒಂದು ಅಹಂ. ಯಾವುದೇ ಬದಲಾವಣೆಯಿಲ್ಲದ ತನ್ನ ವೃತ್ತಿಯ ಹಾಗೆ ಮನೆ ಸಹ ನಡೆಯುತ್ತದೆ ಎಂದುಕೊಳ್ಳುತ್ತಾನೆ ಅವನು..”
ಸುನಂದಾ ಕಡಮೆ ಬರೆದ ಹೊಸ ಕಾದಂಬರಿ “ಹೈವೇ63”ಯ ಒಂದು ಭಾಗ ನಿಮ್ಮ ಓದಿಗೆ
“ಅಷ್ಟೆಲ್ಲ ನಡೆದಿದ್ದರೂ ಇಷ್ಟು ದಿನ ಕಷ್ಟವೋ ಸುಖವೋ ಅವನನ್ನೇ ಮದುವೆಯಾಗೋದು ಅನಿಸುತ್ತಿತ್ತು, ಆದರೆ ಈ ಕ್ಷಣ ಯಾಕೋ ಇನ್ನೊಮ್ಮೆ ನನ್ನೊಳಗನ್ನೇ ನಾನು ಕೆದಕಿಕೊಂಡಾಗ ಏನಿದು ಅರ್ಥವಾಗದ ಮಿಸುಗಾಟ? ನೆನಪುಗಳಿಗೆಲ್ಲ ಯಾಕೆ ಮುಳ್ಳುಗಳೇ ಏಳುತ್ತಿವೆ?”
ಓಬಿರಾಯನಕಾಲದ ಕಥಾರಣಿಯಲ್ಲಿ ಎಸ್. ವೆಂಕಟರಾಜ ಬರೆದ ಕಥೆ
“ಗಂಟೆ ಗಂಟೆ ಉರುಳಿತು. ಇದಿರು ತೂಗು ಹಾಕಿದ ಗಂಟೆಯ ಮೇಲೆ ಕೋಲಿನ ಪೆಟ್ಟು ಬಿದ್ದಂತೆಲ್ಲ ಆ ಹಳ್ಳಿಹಳ್ಳಿಯ ಪುಣ್ಯಾತ್ಮರ ಹೊಟ್ಟೆ ಗುದ್ದಾಡತೊಡಗಿತು. ಆ ಕಡೆ ಈ ಕಡೆ ನೋಡಿ ಒಬ್ಬೊಬ್ಬರೆ ಅತ್ತಿತ್ತ ಸುಳಿದರು. ಸುಳಿದು ಮೆತ್ತನೆ ಗೇಟು ದಾಟಿ ರಸ್ತೆಗೆ ಕಾಲಿಟ್ಟರು. ಅದರ ಇದಿರಿನ ಹೋಟೆಲಿನಲ್ಲೇ ತೂಗಹಾಕಿದ್ದರು…”
ಎಸ್.ದಿವಾಕರ್ ಬರೆದ ಅಡಿಗರ ಕುರಿತ ಪುಸ್ತಕದ ಒಂದು ಲೇಖನ
“ಮೊದಮೊದಲು ಅವರದು ಅಂತರ್ಮುಖತೆಯ ಕಾವ್ಯವಾಗಿತ್ತು. ‘ಭಾವತರಂಗ’, ‘ಕಟ್ಟುವೆವು ನಾವು’ ಸಂಕಲನಗಳಲ್ಲಿ ಚರಿತ್ರೆ, ಭೂಗೋಳ, ಪರಂಪರೆ, ಭೂತ, ವರ್ತಮಾನ – ಇವುಗಳನ್ನು ಕುರಿತ ಕವನಗಳಿವೆ. ಈ ಕವನಗಳಲ್ಲಿ ಕಾಣಿಸಿಕೊಳ್ಳುವ ನಾಯಕ ಈ ಇಹಕ್ಕೆ ದೂರವಾದ, ಅವರ್ಣನೀಯವಾದ..”










