ಹೊಸ ಹಾದಿಯಲ್ಲಿ ನಡಿಗೆಯ ಸವಾಲುಗಳು..: ಎಸ್ ನಾಗಶ್ರೀ ಅಜಯ್ ಅಂಕಣ
ಕೇಳಿದವರಿಗೆ ಏನು ಮಹಾ ಎನ್ನಿಸುವ ಸಣ್ಣಪುಟ್ಟ ವಿಚಾರಗಳು ಹೊಸ ವಾತಾವರಣದಲ್ಲಿ ಚಪ್ಪಲಿಯೊಳಗೆ ಸೇರಿದ ಮರಳಿನ ಕಣದಂತೆ ಒತ್ತುತ್ತಿರುತ್ತವೆ. ಒಂದೇ ಜಾತಿ, ಉಪಜಾತಿ, ಪಂಗಡದಲ್ಲೇ ಮದುವೆಯಾದರೂ ಮನೆಯ ಪದ್ಧತಿ, ಸಂಪ್ರದಾಯ, ಇಷ್ಟಾನಿಷ್ಟಗಳಲ್ಲಿ ಹಲವು ವ್ಯತ್ಯಾಸಗಳು. ಬೆರಳು ಚುರಕ್ಕೆನ್ನುವಷ್ಟು ಸುಡುವ, ಹಬೆಯಾಡುವ ಊಟ ಇಷ್ಟಪಡುವ ಮನೆಯಿಂದ, ತಣ್ಣಗೆ ಆರಿ ಅಕ್ಷತೆಯಾದ ಅನ್ನ, ಉಗುರುಬೆಚ್ಚಗಿನ ಸಾರು ತಿನ್ನುವ ಮನೆಗೆ ಬಂದರೆ ತುತ್ತು ಗಂಟಲಿನಿಂದ ಕೆಳಗಿಳಿಯಲ್ಲ.
ಎಸ್ ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ
ತಿಜೋರಿಯಿಂದ ತಪ್ಪಿಸಿಕೊಂಡ ಘಳಿಗೆಗಳೆಷ್ಟೋ…: ಆಶಾ ಜಗದೀಶ್ ಅಂಕಣ
ಸುಮ್ಮನೇ ತಟ್ಟೆಯ ಮುಂದೆ ಕುಳಿತು ಸಮಯ ಉರುಳದಂತೆ, ಈ ತುತ್ತು ಮತ್ತಾರದೋ ಚೀಲ ಸೇರಲಿ ಎಂದಷ್ಟೇ ಪ್ರಾರ್ಥಿಸುತ್ತಾ… ಇಷ್ಟೇ ಅಲ್ಲವಾ ಈ ಬದುಕು ಎನ್ನುವ ಅಂತಿಮ ಸತ್ಯದ ದರ್ಶನವಾದಾಗ ಯಾವುದೆಲ್ಲವನ್ನು ಬೇಕು ಎಂದುಕೊಳ್ಳುತ್ತಿದ್ದೇವೋ ಅದಾವುದೂ ನಮ್ಮ ಆತ್ಯಂತಿಕ ಜರೂರತ್ತಿನ ಪಟ್ಟಿಯಲ್ಲಿ ಇರಲೇ ಇಲ್ಲ ಎನ್ನುವುದನ್ನು ಪ್ರಯಾಸದಿಂದ ಮನಗಾಣುತ್ತಾ… ಯಾವುದೂ ಪೂರ್ಣವಲ್ಲ ಇಲ್ಲಿ… ಈ ರೈಲು ಬಂಡಿ, ನಾವು ಹತ್ತುವ ಮುಂಚೆಯೇ ಪಯಣ ಆರಂಭಿಸಿತ್ತು ಮತ್ತು ನಾವು ಇಳಿದ ನಂತರವೂ ಪಯಣಿಸುತ್ತಲೇ ಇರುತ್ತದೆ..
ಆಶಾ ಜಗದೀಶ್ ಅಂಕಣ “ಆಶಾ ಲಹರಿ”
ಕಾಲಕ್ಕೆ ಶರಣು ಎನ್ನೋಣ: ವಿನತೆ ಶರ್ಮ ಅಂಕಣ
ವಾರಾಂತ್ಯಗಳಲ್ಲಿ ದೇಶದ ರಾಜಧಾನಿ ನಗರಗಳಲ್ಲಿ ನಡೆಸುವ ಸಾರ್ವಜನಿಕ ಪ್ರದರ್ಶನಗಳು, ಬಹುಸಂಸ್ಕೃತಿಗಳವರ ಕಾರ್ಯಕ್ರಮಗಳು ಹೆಚ್ಚಾಗಿವೆ. ೨೦೨೩ ರ ಕೊನೆಯಲ್ಲಿ ನಾವು ಮೂರು, ನಾಲ್ಕು ಬಾರಿ ಇಸ್ರೇಲ್, ಪ್ಯಾಲೆಸ್ಟೈನ್-ಗಾಝಾ, ಯೂಕ್ರೇನ್ ಮೂಲಗಳ ಜನರು ನಡೆಸುತ್ತಿದ್ದ ಪ್ರದರ್ಶನಗಳ ಪರಿಣಾಮಕ್ಕೆ ಸಿಲುಕಿದ್ದೆವು. ಅದೇನೂ ದೊಡ್ಡ ವಿಷಯವಲ್ಲ ಬಿಡಿ. ಪ್ರದರ್ಶನದಲ್ಲಿ ಭಾಗವಹಿಸಿದ್ದ ಪ್ರತಿರೋಧಿಗಳು ಘೋಷಣೆಗಳನ್ನು ಕೂಗುತ್ತಾ ರಸ್ತೆಗಿಳಿದಾಗ ಪೊಲೀಸರು ರಸ್ತೆ ಬಂದ್ ಮಾಡಿದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಸುಧಾ ಆಡುಕಳ ಹೊಸ ಅಂಕಣ “ಹೊಳೆಸಾಲು” ಇಂದಿನಿಂದ ಆರಂಭ
ಪ್ರಯಾಣದ ಕನಸಿನಿಂದ ಥಟ್ಟನೆ ವಾಸ್ತವಕ್ಕಿಳಿದ ನೀಲಿ ನೀರಿನಾಳದಲ್ಲಿ ಹೊಳೆಯುತ್ತಿರುವ ನಾಣ್ಯಗಳನ್ನು ನೋಡುತ್ತಾ ನಡುಹೊಳೆಯಲ್ಲಿ ನಿಂತುಬಿಟ್ಟಳು. ಅವಳಿಗೀಗ ಇರುವುದು ಎರಡೇ ಅವಕಾಶಗಳು. ಒಂದೋ ದುಡ್ಡನ್ನು ಹೊಳೆಯಲ್ಲಿಯೇ ಬಿಟ್ಟು ಶಾಲೆಗೆ ಹೋಗುವುದು, ಇಲ್ಲವೆಂದರೆ ಅಂಗಿ ಒದ್ದೆಯಾಗುವ ಪರಿವೆಯಿಲ್ಲದೇ ಹೊಳೆಯೊಳಗೆ ಒಮ್ಮೆ ಮುಳುಗಿ ದುಡ್ಡನ್ನು ಹೆಕ್ಕಿಕೊಳ್ಳುವುದು. ಒದ್ದೆಯಾದ ಅಂಗಿಯನ್ನು ಬದಲಿಸಿ ಬರಲು ಮನೆಗೆ ಹೋಗುವಷ್ಟು ಸಮಯವಿಲ್ಲ.
ಸುಧಾ ಆಡುಕಳ ಹೊಸ ಅಂಕಣ “ಹೊಳೆಸಾಲು” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ
ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹೊಸ ಅಂಕಣ “ಹೊಸ ಓದು” ಆರಂಭ
ಶತಮಾನಗಳ ಹಿಂದಿನ ಕಥೆಗಳ ಆಶಯಕ್ಕೆ ಈ ಕಾಲಘಟ್ಟದ ಉತ್ತರಗಳ ಮಾದರಿಯ ಕಥೆಗಳನ್ನು ಬಯಲು ಮತ್ತು ಬೆಳಕು ಎಂಬರ್ಥದಲ್ಲಿ ಕತೆಗಾರ ನಿರೂಪಣೆಯ ಕ್ಯೂರೆಟರ್ ಮತ್ತು ದೃಷ್ಟಿಕೋನದ ಗ್ರಾಫರ್ ಆಗಿರಬೇಕೆನ್ನುವ ಪೊನ್ನಾಚಿ ಅವರ ಕಥೆಗಳು ಪ್ರತಿಪಾದಿತ ಮತ್ತು ಸಾಧಿತ ಕಥೆಗಳು ಪ್ರತಿನಿಧಿಸುವ ವಸ್ತು ಹಳೆಯದಾದರೂ ಕಥೆಗಳ ಅಂತ್ಯ ಪ್ರಗತಿಪರತೆಯನ್ನು ಎತ್ತಿ ಹಿಡಿದಿವೆ.
ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಬರೆಯುವ ಹೊಸ ಕೃತಿಗಳ ಪರಿಚಯಿಸುವ ಹೊಸ ಅಂಕಣ
ದಕ್ಕಿದ್ದಕ್ಕೆ ಕೃತಜ್ಞತೆ ಇರಲಿ : ಎಸ್ ನಾಗಶ್ರೀ ಅಜಯ್ ಅಂಕಣ
ತಮಗೆ ಬೇಕಾದ ಕೋರ್ಸಿಗೆ ಪ್ರವೇಶ ದೊರೆಯಲಿಲ್ಲ, ಅಂದುಕೊಂಡಷ್ಟು ಅಂಕ ಬರಲಿಲ್ಲ, ಪ್ರೀತಿಸಿದ ಹುಡುಗಿ ಕರೆ ಸ್ವೀಕರಿಸಲಿಲ್ಲ, ಮದುವೆಗೆ ಮನೆಯಲ್ಲಿ ಒಪ್ಪಿಗೆಯಿಲ್ಲ, ವರ್ಷದೊಳಗೆ ಮಕ್ಕಳಾಗಲಿಲ್ಲ ಎಂಬ ‘ಇಲ್ಲ’ಗಳಿಗೆ ಜೀವತೆರುವ, ಬದುಕಿದ್ದರೂ ಉತ್ಸಾಹ, ಆಶಾವಾದವನ್ನೇ ಕಳೆದುಕೊಳ್ಳುವವರಿದ್ದಾರೆ. ಮುಂದೇನು? ಮುಂದೇನು?
ಎಸ್ ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣದ ಬರಹ ನಿಮ್ಮ ಓದಿಗೆ
ಆಶಾ ಜಗದೀಶ್ ಹೊಸ ಅಂಕಣ “ಆಶಾ ಲಹರಿ” ಇಂದಿನಿಂದ…
ಪ್ರೀತಿ ಮಾತ್ರ ಪೂರ್ಣ ಸತ್ಯ. ಮೋಸ ಎಂಬುದು ಅರ್ಧ ಸತ್ಯ. ನಾವು ಯಾರನ್ನೂ ಮೋಸಗೊಳಿಸಲು ಸಾಧ್ಯವಿಲ್ಲ. ನಮ್ಮಿಂದ ನಾವೇ ಪದೇ ಪದೇ ಮೋಸಹೋಗುತ್ತೇವೆ. ಅದೂ ಹೃದಯವಿದ್ರಾವಕವಾಗಿ. ನಮ್ಮನ್ನು ನಾವೇ ನೋಯಿಸಿಕೊಂಡು ಇತರರನ್ನು ದೂರುತ್ತೇವೆ… ನಿನ್ನನ್ನು ಪ್ರೀತಿಸದಿರಲು ಸಾಧ್ಯವಾಗುವುದಾ…
ಆಶಾ ಜಗದೀಶ್ ಬರೆಯುವ ಬದುಕೆಂಬ ಭಾವಗೀತೆಯ ಕುರಿತ ಹೊಸ ಅಂಕಣ “ಆಶಾ ಲಹರಿ” ಇಂದಿನಿಂದ ಮಂಗಳವಾರಗಳಂದು ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ
ಬೇಸಿಗೆ ರಜೆಯೆಂದರೆ …: ವಿನತೆ ಶರ್ಮ ಅಂಕಣ
ಆಸ್ಟ್ರೇಲಿಯಾದ ಬೇಸಿಗೆಯ ಕಡುಬಿಸಿಯನ್ನು ತಪ್ಪಿಸಿಕೊಳ್ಳಲು ಕೆಲವರು ತಂಪು ಪ್ರದೇಶಗಳನ್ನು ಆಯ್ದುಕೊಳ್ಳುತ್ತಾರೆ. ಆದರೆ ಮುಂಚಿತವಾಗಿಯೇ ಬೇಸಿಗೆಯ ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡೇ ಅನೇಕ ಆಸ್ಟ್ರೇಲಿಯನ್ ಸಂಸ್ಥೆಗಳು, ಸರಕಾರದ ಪ್ರವಾಸೀ ಇಲಾಖೆಗಳು ದೇಶದ ಉದ್ದಗಲಕ್ಕೂ ಹಾಸಿ ಹರಡಿರುವ ನೂರಾರು ಪ್ರವಾಸಸ್ಥಳಗಳ ಬಗ್ಗೆ ಆಕರ್ಷಕ ಜಾಹಿರಾತುಗಳನ್ನು ಕೊಡುತ್ತಾ, ಹಲವಾರು ತರಹದ ರಿಯಾಯ್ತಿಗಳು, ಸೌಲಭ್ಯಗಳ ಆಮಿಷವೊಡ್ಡುತ್ತಾರೆ. ಇವು ಮಧ್ಯಮ ವರಮಾನದ ಕುಟುಂಬಗಳನ್ನು ಕೈಬೀಸಿ ಕರೆಯುತ್ತವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಡೌನ್ ಅಂಡರ್ ಕ್ರಿಸ್ಮಸ್ ಕಲಾಪಗಳು: ವಿನತೆ ಶರ್ಮ ಅಂಕಣ
ಪ್ರತಿವರ್ಷ ಅಕ್ಟೋಬರ್ ಕಡೆಗೆ ಅಥವಾ ನವೆಂಬರ್ ಶುರುವಿನಲ್ಲಿ ಆಯಾ ಸ್ಥಳೀಯ ನಗರಪಾಲಿಕೆಗಳು ಸಾರ್ವಜನಿಕ ಉದ್ಯಾನವನಗಳಲ್ಲಿರುವ ನೀರಿನ ಕಾರಂಜಿಗಳು, ಮರಗಳು, ಕಮಾನುಗಳು, ಸೇತುವೆಗಳು, ರಸ್ತೆಗಳ ಕಮಾನುಗಳು ಇತ್ಯಾದಿಗಳಿಗೆ ಈ ರೀತಿ ಅಲಂಕಾರಗಳನ್ನು ತೊಡಿಸುತ್ತಾರೆ. ಹೊಸವರ್ಷದ ಆರಂಭದಲ್ಲಿ ತೆಗೆದು ಪುನಃ ಪೆಟ್ಟಿಗೆಗೆ ಸೇರಿಸಿ ಭದ್ರಪಡಿಸುತ್ತಾರೆ. ಕತ್ತಲಾಗುತ್ತಿರುವಂತೆ ಈ ಚಿತ್ತಾಕರ್ಷಕ ಅಲಂಕಾರಗಳನ್ನು ನೋಡಲು ಜನರು ಹೊರಡುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”









