ನಾವು ತಿನ್ನುವ ಆಹಾರದ ಮೂಲ ಯಾವುದು?
ನಾವು ತಿನ್ನುವ ಆಹಾರದ ಬಗ್ಗೆ ಬೆಳೆದ ಪ್ರಜ್ಞೆಯಿಂದ ಒಂದಷ್ಟು ಕಂಪೆನಿಗಳು ಹೊಸ ರೀತಿಯಲ್ಲಿ ಲಾಭಮಾಡಿಕೊಳ್ಳಲಾರಂಭಿಸಿದ್ದು ಒಂದೆಡೆಯಾದರೆ, ಮತ್ತೊಂದಷ್ಟು ಜನ ತೀರಾ ಮತ್ತೊಂದು ಹಾದಿಯಲ್ಲಿ ಯೋಚಿಸಲಾರಂಭಿಸಿದ್ದರು. ನಾವು ತಿನ್ನುವ ತರಕಾರಿಗಳನ್ನು ನಾವೇ ಬೆಳೆದುಕೊಂಡರೆ ಹೇಗೆ? ಹೀಗಂದುಕೊಂಡ ಬಹುತೇಕ ಜನರು ಇದ್ದದ್ದು ಬೆಂಗಳೂರಿನಂಥ ಮಹಾನಗರಗಳಲ್ಲಿ. ಮನೆ ಕಟ್ಟಲಿಕ್ಕೆ ಒಂದು ಸೈಟಿಗೆ ಸಾಕಷ್ಟು ಒದ್ದಾಡಬೇಕಾದಾಗ ಇನ್ನು ತರಕಾರಿಗಳನ್ನು ಬೆಳೆದುಕೊಳ್ಳುವುದು ಹೇಗೆ ಅನ್ನುವ ಜಿಜ್ಞಾಸೆಯ ಸಮಯದಲ್ಲೇ ಕೆಲವೊಂದಷ್ಟು ಜಾಣರು ಟೆರೆಸ್ ಗಾರ್ಡನಿಂಗ್ ಆರಂಭಿಸಿಯೇ ಬಿಟ್ಟರು. ರೂಪಶ್ರೀ ಕಲ್ಲಿಗನೂರ್ ಬರಹ
ಗಂಟಿನೊಳಗಿದ್ದ ಹೆಬ್ಬಾವು ಮಾಯವಾಗಿದೆಯೆಂದರೆ..
ಮರವನ್ನು ಸುತ್ತಿದ್ದ ಹೆಬ್ಬಾವು ಪೊಟರೆಯೊಳಕ್ಕೆ ಬಾಯಿಡಲು ಹವಣಿಸುತ್ತಿದೆ. ಒಂದೆಡೆ ಅಳಿವಿನಂಚಿನ ಜೀವಿಯ ಭವಿಷ್ಯದ ಆಶಾಕಿರಣವಾದ ಮೂರು ಮರಿಹಕ್ಕಿಗಳು. ಮತ್ತೊಂದೆಡೆ ಪ್ರಕೃತಿ ಸಹಜವಾಗಿ ಹಸಿದ ಹಾವು. ಏನೂ ಮಾಡದೇ ಹಾವು ಆ ಹಕ್ಕಿ ಮರಿಗಳನ್ನು ನುಂಗಲು ಬಿಡಲೇ ಅಥವಾ ಮಧ್ಯ ಪ್ರವೇಶಿಸಿ ಅದರ ಊಟವನ್ನು ಕಸಿದುಕೊಳ್ಳಲೇ? ವಿಚಿತ್ರ ಸಂದಿಗ್ಧ ಪರಿಸ್ಥಿತಿ. ಅದು ಅಳಿವಿನಂಚಿನ ಹಕ್ಕಿಯೆಂದು ಹೆಬ್ಬಾವಿಗೇನು ಗೊತ್ತು ಪಾಪ.
ಹಕ್ಕಿ ಮತ್ತು ಹಾವುಗಳ ಒಡನಾಟದಲ್ಲಿ ಪುಟಿದ ಜಿಜ್ಞಾಸೆಗಳಿಗೆ ಅಕ್ಷರ ರೂಪ ನೀಡಿದ್ದಾರೆ ಪ್ರಸನ್ನ ಆಡುವಳ್ಳಿ.
ಸುರಿವ ಮಳೆಯಲ್ಲಿ ಅಪ್ಪ ಮತ್ತು ನಾನು
ಈ ಯೂರಿಯಾ ಹಾಕುವ ದಿನಗಳಲ್ಲಿ ಗದ್ದೆಗಳನ್ನು ಬಹಳ ಜಾಗುರೂಕತೆಯಿಂದ ಕಾವಲು ಕಾಯಬೇಕಾಗುತ್ತದೆ. ಆ ದಿನ ಮಳೆ ಬಂದರೆ ಎಲ್ಲವೂ ಹರಿದು ಹೋಗುವ ಭಯ ಒಂದು ಕಡೆಯಾದರೆ ಇನ್ನೊಂದು ಭಯವೂ ಇದೆ. ಸಂಜೆಯ ವೇಳೆಗೆ ಯೂರಿಯಾ ಹಾಕಿ ಹಾಗೆಯೇ ಹೋದರೆ ಮರುದಿನ ಬೆಳಗ್ಗೆ ಅದು ಬೇರೆ ಗದ್ದೆಯ ಪಾಲಾಗುವುದು ಹೆಚ್ಚು. ಕೆಳಗಿನ ಗದ್ದೆಗಳಿಗೆ ನೀರಿಲ್ಲ ಅಂತ ನೆಪ ಮಾಡಿ ನಮ್ಮ ಗದ್ದೆಯಿಂದ ಅವರ ಗದ್ದೆಗಳಿಗೆ ನೀರು ಹಾಯಿಸುವ ನೆಪದಲ್ಲಿ ಗದ್ದೆಯ ಬದು ಸ್ವಲ್ಪ ಸರಿಸಿದರೆ ಯೂರಿಯವೆಲ್ಲಾ ಆ ಗದ್ದೆಯ ಪಾಲು. ಉಳುಮೆಯ ಸುಖದುಃಖಗಳ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಲೇಖನ ಇಲ್ಲಿದೆ.
ಸೃಜನಶೀಲತೆಯ ಬೆಳಕಿನಲ್ಲಿ ವಿಜ್ಞಾನವೂ ಸಿದ್ಧಾಂತವೂ
ತನ್ನ ಬಾಲ್ಯದ ಧಾರ್ಮಿಕತೆಯ ತತ್ತ್ವವು ವಸ್ತುನಿಷ್ಠವಾಗಿ ಸಂಶೋಧನೆ ನಡೆಸಬೇಕಾದ ವಿಜ್ಞಾನಿಯ ದೃಷ್ಟಿಯನ್ನು ಪ್ರಭಾವಿಸುತ್ತದೆಯೆ? ಅದರಿಂದಾಗಿ ಕೆಲವೊಮ್ಮೆ ಧನಾತ್ಮಕ, ಇನ್ನು ಕೆಲವೊಮ್ಮೆ ಋಣಾತ್ಮಕ ಫಲಿತಾಂಶಗಳಿಗೆ, ವಾಸ್ತವದಿಂದ ದೂರವಾದ ಸಿದ್ಧಾಂತಗಳಿಗೆ ಅದು ಎಡೆಮಾಡಿಕೊಡಬಹುದೆ ಎಂಬ ಪ್ರಶ್ನೆಗಳನ್ನು ಪದರ ಪದರವಾಗಿ ಬಿಡಿಸಿಡುವ ನಾಟಕವಿದು. ನಿರ್ದೇಶನ ಅತ್ಯಂತ ಪರಿಣಾಮಕಾರಿಯಾದುದು. ದೇಹಭಾಷೆ ಮತ್ತು ಧ್ವನಿಯ ಏರಿಳಿತಗಳ ಮೂಲಕ ಸಲಾಂ ಅವರ ಹತಾಶೆ, ನೋವುಗಳನ್ನು ಅಭಿವ್ಯಕ್ತಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ‘ಅಬ್ದುಸ್ ಸಲಾಮ್ ಅವರ ವಿಚಾರಣೆ’ ನಾಟಕದ ಕುರಿತು ಡಾ. ಸುದರ್ಶನ ಪಾಟೀಲಕುಲಕರ್ಣಿ ಬರಹ
ಕರುಣಾಳು ಬಾ ಇರುಳೇ
ಈಗ ಹಗಲಿನಲ್ಲಿ ಮತ್ತು ರಾತ್ರಿ ಕೂಡಾ ಜನನಿಬಿಡ ಪೇಟೆಯ ಮಧ್ಯೆ, ಝಗಮಗಿಸುವ ಕಾಂಕ್ರೀಟ್ ರಂಗಸ್ಥಳದಲ್ಲಿ ನಡೆಯುವ ಆಟಗಳು ಅಂಥಾ ತೀವ್ರ ಅನುಭವದಿಂದ ರೈಸುವುದೇ ಇಲ್ಲ. ಕತ್ತಲು ಮತ್ತು ಕಾಡುಮೇಡುಗಳ ಹಿನ್ನೆಲೆಯೇ ಯಕ್ಷಗಾನ, ಭೂತಕೋಲ, ನಾಗಮಂಡಲ ಮುಂತಾದವುಗಳಿಗೆ ಸೊಬಗಿನ ಮುಖವೊಂದನ್ನು ಒದಗಿಸುತ್ತದೆ. ಯಕ್ಷಗಾನಕ್ಕೆ ಹೋಗುವ ಮಾರ್ಗದಲ್ಲಿ ಕಾಡಿನ ದಾರಿಯಲ್ಲಿ ಸೂಡಿ ಬೀಸುತ್ತಾ, ಸುತ್ತಲೂ ಇರಬಹುದಾದ ಹಲವು ಜೀವಾದಿಗಳಿಗೆ ಹೆದರಿಸುವಂತೆ (ಅಥವಾ ತಾವೇ ಹೆದರಿ) ಗಟ್ಟಿ ಗಂಟಲಲ್ಲಿ ಹರಟುತ್ತಾ ಹಳ್ಳಿಗರು ನಡೆದುಹೋಗುವ ಹೊತ್ತು ರಸಗಳಿಗೆ. ವಿಜಯಶ್ರೀ ಹಾಲಾಡಿ ಬರಹ
ಮಳೆ ದೇವರು ಬರೆದ ಕವಿತೆ..
ಮಳೆಯು ಮಳೆಗಾಲವನು ತೊರೆದಿದೆ. ಈಗ ಎಲ್ಲಾ ತಿಂಗಳಲ್ಲಿ ಆತ ಒಮ್ಮೆಯಾದರೂ ಇಣುಕುವ ಅತಿಥಿ. ಅಲ್ಲೆಲ್ಲೊ ಸಮುದ್ರದ ಮೇಲೆ ಆಗಾಗ್ಗೆ ನೂರೆಂಟು ಭಾರಗಳು. ಮಳೆಗೆ ಅಲ್ಲಲ್ಲಿ ಎಕ್ಸ್ಟ್ರಾ ಡ್ಯೂಟಿ. ತರಗತಿಯಲ್ಲಿ ನೋಡಿ ಮಕ್ಕಳೇ ಕಾಲಗಳು ಮೂರು, ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಅಂದೆ. ಒಬ್ಬ ಪೋರ ಕಿಕೀಕ್ ಅಂತ ನಕ್ಕು ಹೇಳಿದ “ಬಿಸಿಲು ಇದ್ದಾಗ ಬರುತ್ತೆ ಚಳಿ ಇದ್ದಾಗಲೂ ಬರುತ್ತಲ್ಲ” ಅಂತ. “ಹೌದು ಮಳೆಗೆ ಈಗ ವಿಶೇಷ ಸೀಸನ್ ಪಾಸ್ ಸಿಕ್ಕಿದೆ” ಎಂದೆ. ಹೇಳು ಮಳೆಯೆ ಮಕ್ಕಳ ಮುಂದೆ ಹೀಗೆ ನೀನು ಅವಮಾನಿಸುವುದು ಸರಿಯೇ..?
ಸದಾಶಿವ್ ಸೊರಟೂರು ಬರಹ
ಕಥೆಕೂಟ ಎಂಬ ಕಥಾ ವ್ಯಾಮೋಹಿಗಳ ಜಗತ್ತು
ಕಥೆಕೂಟವೆಂಬ ವಾಟ್ಸ್ ಆಪ್ ಗ್ರೂಪ್ ಆರು ವರ್ಷಗಳಿಂದ ಸದ್ದು ಮಾಡುತ್ತಿದೆ. ಹೊಸತಲೆಮಾರಿನ ಕತೆಗಾರರು , ಹಿರಿಯ ಬರಹಗಾರರು ಸೇರಿಕೊಂಡು ಸಾಹಿತ್ಯದ ನೆಪದಲ್ಲಿ ಬದುಕಿನ ಅನೇಕ ವಿಚಾರಗಳನ್ನು, ಸಿದ್ಧಾಂತಗಳನ್ನು ಚರ್ಚಿಸುತ್ತಾರೆ. ಅನುಭವಲೋಕದ ಜಿಜ್ಞಾಸೆಗಳೊಂದಿಗೆ ಆ ಮಾತಿನ ಮಂಟಪ ರಂಗೇರುತ್ತದೆ. ಜೂನ್ 25 ಮತ್ತು 26ರಂದು ಆರನೇ ವರ್ಷದ ಸಮಾವೇಶ ನೆಲಮಂಗಲದ ಬಳಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಥೆಕೂಟದ ಕತೆಗಾರ್ತಿ ಪ್ರಿಯಾ ಕೆರ್ವಾಶೆ ಡಿಜಿಟಲ್ ಲೋಕದ ತಮ್ಮ ಅನುಭವಗಾಥೆಯನ್ನು ಇಲ್ಲಿ ಮಂಡಿಸಿದ್ದಾರೆ.
ಗುಬ್ಬಕ್ಕ ಸಿಕ್ಕಳು ಸುಮ್-ಸುಮ್ನೆ ನಕ್ಕಳು!
ಕೈ ಬೊಗಸೆಯಲ್ಲಿ ನೀರು ಹಿಡಿದು ಬಂದಾಗ ನನ್ನ ಕೈ ಮೇಲೆ ಎಗರಿ ಬಂದು ಕುಳಿತು, ನೀರನ್ನು ಗುಟುಕು ಗುಟುಕಾಗಿ ಕುಡಿದು ನನ್ನ ಮುಖ ನೋಡಿದ ಗುಬ್ಬಕ್ಕ “ನಮ್ಮ ಪೂರ್ವಜರು, ನಿಮ್ಮ ತರಹ ಸಹಾಯ ಮಾಡಿದವನ್ನೆಲ್ಲ ಹುಡುಕಿ ನಮ್ಮೆಲ್ಲರ ಪರವಾಗಿ ಕೃತಜ್ಞತೆ ಹೇಳಲು ಆಜ್ಞೆ ಮಾಡಿದ್ದರು. ನಿಮ್ಮ ಪೂರ್ವಜರಿಗೆಲ್ಲರಿಗೂ, ನಿನ್ನ ಮೂಲಕ ನಮ್ಮೆಲ್ಲರ ನಮಸ್ಕಾರಗಳು. ಈ ಸಣ್ಣ ಪ್ರಯತ್ನದಿಂದ ನಮ್ಮೆಲ್ಲ ಬಂಧುಗಳಿಗೆ ಶಾಂತಿ ದೊರೆಯುತ್ತದೆ.
ಬೆಂಗಳೂರಿನಂಥ ಮಹಾನಗರಗಳನ್ನು ತೊರೆದುಹೋದ ಗುಬ್ಬಚ್ಚಿಗಳ ಕುರಿತು ಬರೆದಿದ್ದಾರೆ ವಾಸುದೇ ಕೃಷ್ಣಮೂರ್ತಿ
ಔದಾರ್ಯದ ಉರುಳಲ್ಲಿ ಚಿಕ್ಕೋಳೂ ಹಿರಿದಿಮ್ಮಿ
ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆಂಬುದು ನಿಜವಾದರೂ, ಔದಾರ್ಯವು, ನೀಡುವವನ ಬದುಕನ್ನೆ ಕಸಿದುಕೊಳ್ಳುವಷ್ಟು ಅತಿಯಾಗಿ ಇರಬಾರದೇನೋ. ಜನಪದ ಕಥನ ಕಾವ್ಯವಾದ ‘ಚಿಕ್ಕೋಳು ಹಿರಿದಿಮ್ಮಿ’ಯಲ್ಲಿ ಮನುಷ್ಯರ ಔದಾರ್ಯ, ಪ್ರಾಣಿಗಳ ಪ್ರಾಮಾಣಿಕತೆಯ ಉತ್ತುಂಗದ ಪರಿಚಯವಾದಂತೆಯೇ, ಮನುಷ್ಯರು ಮೃಗಕ್ಕಿಂತಲೂ ಕೀಳಾಗಿ ವರ್ತಿಸುವ ಮತ್ತೊಂದು ಪಾತ್ರದ ಪರಿಚಯವೂ ಆಗುತ್ತದೆ. ಈ ಖಂಡ ಕಾವ್ಯದ ಕತೆಯನ್ನು ಹೇಳಿದ್ದಾರೆ ಲೇಖಕಿ ಸುಮಾವೀಣಾ.










