ಬಾರೆಹಣ್ಣು ಮತ್ತು ಪಟ್ಲುಗೋವಿ ಕಿಟ್ಟಪ್ಪ: ಮಾರುತಿ ಗೋಪಿಕುಂಟೆ ಸರಣಿ
ಕಿಟ್ಟಪ್ಪ ಪಟ್ಲು ಗೋವಿಯನ್ನು ಯಾರಿಗೂ ಕಾಣದೆ ಹಿಡಿದುಕೊಂಡಿದ್ದಾನೆ. ನಾವು ಈತ ಈಗೇನು ಮಾಡಬಹುದೆಂದು ನೋಡುತ್ತಿದ್ದೆವು, ನಿಧಾನವಾಗಿ ಅವನು ಅದನ್ನು ಪ್ರಯೋಗಿಸಿದ್ದ. ಗುಂಪಿನ ಮಧ್ಯೆ ಅದು ಯಾರಿಗೋ ಬಡಿಯಿತು, ಯಾರೋ ಏನೋ ಮಾಡಿದರು ಎಂದು ಎಲ್ಲರೂ ಗಾಬರಿಯಾಗಿ ನೋಡುತ್ತಿದ್ದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ
ಒಂದು ಭಿನ್ನವಾದ ಅನುಭವದ ಕಾವ್ಯವು: ಎಸ್. ಜಯಶ್ರೀನಿವಾಸ ರಾವ್ ಸರಣಿ
ಅವರ ಮೊದಲ ಸಂಕಲನವು ನಗರ ಜೀವನದಲ್ಲಿ ಸುಲಭವಾಗಿ ಕಂಡುಬರದ ನಿರ್ಮಾಲ್ಯದ ಹಂಬಲವನ್ನು ತೋರಿಸುತ್ತದೆ, ಆದರೆ ಕಾವ್ಯದ ಸ್ವರ ಶಾಂತವಾಗಿದೆ, ಬಹುಶಃ ಹೆಚ್ಚು ವಿರಕ್ತಿಯಿಂದ ಕೂಡಿದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ
ವಿದೇಶಗಳಲ್ಲಿ ಸ್ವದೇಶಿ ಭಾವಸಂಚಾರ: ಗುರುಪ್ರಸಾದ ಕುರ್ತಕೋಟಿ ಸರಣಿ
ಒಮಾಹಾದ ಭಾರತೀಯರ ವಿಶೇಷತೆ ಕೂಡ ಅದೇ ಆಗಿದೆ. ಅಲ್ಲಿ ಎಷ್ಟೋ ಸಮಾರಂಭಗಳನ್ನು ಒಟ್ಟಾಗಿ ಮಾಡುತ್ತಾರೆ. ಒಂದೊಂದು ಹಬ್ಬದಲ್ಲಿ ಒಬ್ಬ ಭಾಷಿಕರ ಸಂಘ ನಿರ್ವಹಣೆಯ ಜವಾಬ್ದಾರಿ ಹೊತ್ತಿರುತ್ತದೆ. ಶಿವರಾತ್ರಿ ಬಂತೆಂದರೆ ಅಲ್ಲಿನ ಪ್ರತಿಯೊಂದು ಕೆಲಸಗಳನ್ನು ಕನ್ನಡ ಸಂಘದವರು ನಿಭಾಯಿಸುತ್ತಾರೆ. ಅವತ್ತಿನ ದಿವಸ ಎಷ್ಟೋ ಸಾವಿರ ಭಾರತೀಯರಿಗೆ ಇಡ್ಲಿ ಚಟ್ನಿ, ಸಾಂಬಾರ್, ಬೂಂದಿ ಉಂಡೆ ಹಾಗೆ ತರತರಹದ ಅಡಿಗೆ ಮಾಡಿ ಬಡಿಸುವ ಜವಾಬ್ದಾರಿ ಕನ್ನಡಿಗರದು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ
ಕ್ಲಾಸು ಮಾತ್ರ ಮೂರು; ಕಲಿತ ಪಾಠ ನೂರಾರು!!: ಬಸವನಗೌಡ ಹೆಬ್ಬಳಗೆರೆ ಸರಣಿ
ಶನಿವಾರ ಭಾನುವಾರದಂದು ಹಸಿರು ಜೀರುಂಡೆಯನ್ನು ಒಂದು ಬೆಂಕಿಪೊಟ್ಟಣದಲ್ಲಿ ಇಟ್ಟುಕೊಂಡು ಅದಕ್ಕೆ ಚೆಂಡು ಹೂವಿನ ಎಲೆಗಳನ್ನು ತಿನ್ನಲು ಇಟ್ಟು ಆಗಾಗ್ಗೆ ಅದು ಎಷ್ಟು ತಿಂದಿತು ಎಂದು ನೋಡುತ್ತಿದ್ದೆ. ನಾನು ಅದನ್ನು ಸಾಕುತ್ತಿದ್ದೇನೆ. ಇಲ್ಲ ಅಂದ್ರೆ ಅದು ಬದುಕಲು ಕಷ್ಟ ಇತ್ತು ಎಂಬ ಭಾವದಿಂದ ಅದನ್ನು ಇಟ್ಟುಕೊಂಡಿದ್ದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಏಳನೆಯ ಕಂತು ನಿಮ್ಮ ಓದಿಗೆ
ರಾಜಾ ಶೈಲೇಶಚಂದ್ರ ಗುಪ್ತ- ಕರ್ತವ್ಯನಿಷ್ಠೆಯ ಪ್ರತೀಕ: ರಂಜಾನ್ ದರ್ಗಾ ಸರಣಿ
ತಾವು ಸೇವೆ ಸಲ್ಲಿಸುವ ಪತ್ರಿಕೆ ಮತ್ತು ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಪತ್ರಿಕಾ ಮಾಲೀಕರ ಬಗ್ಗೆ ಅವರಿಗೆ ಅಪಾರವಾದ ಗೌರವ. ಅವರು ಮಾಲೀಕರಿಗೆ “ಖಾವಂದರು” ಎಂದು ಕರೆದಾಗ ನಾಕು ನಕ್ಕಿದ್ದೆ. ಮಾಲೀಕರು ಕೂಡ ಅವರನ್ನು ಗೌರವದಿಂದ ಕಾಣುತ್ತಿದ್ದರು. ಆದರೆ ತಮಗಾದ ಅನ್ಯಾಯದ ಬಗ್ಗೆ ಅವರು ಎಂದೂ ಮಾಲೀಕರ ಮುಂದೆ ಉಸುರಲಿಲ್ಲ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 70ನೇ ಕಂತು ನಿಮ್ಮ ಓದಿಗೆ
ಮುರಿದ ಗಾಜಿನ ಚೂರುಗಳಲ್ಲಿ ಅರಳುವ ಚಂದಿರ: ರಾಮ್ ಪ್ರಕಾಶ್ ರೈ ಕೆ. ಸರಣಿ
‘ಸಣ್ಣ ಜೈಲಿನಿಂದ ದೊಡ್ಡ ಜೈಲಿಗೆ ಹೋಗುತ್ತಿದ್ದೀಯ’ ಎಂಬಂತಹ ಹಲವು ಅರ್ಥಪೂರ್ಣ ಮಾತುಗಳು ಇಲ್ಲಿ ಮನ ಸೆಳೆಯುತ್ತದೆ. ಪುಟ್ಟಿ ಮತ್ತು ಮಗನಿಗೆ ಕಳೆದ ಸಂತಸವ ಮರಳಿ ನೀಡುವಂತೆ ಮಾಡುವ ರೋಲರ್ ಕೋಸ್ಟರ್ ಪಯಣ, ಮನುವಿನ ದೃಷ್ಟಿಗೆ ಬದುಕು ಅನುಭವಿಸುವ ಏಳು ಬೀಳಿನ ಸಂಕೇತದಂತೆ ಕಾಣುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ”ಸಿನಿ ಪನೋರಮಾ” ಸರಣಿಯಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾದ ವಿಶ್ಲೇಷಣೆ
ಶ್ರೀರಾಂಪುರ ಗಲ್ಲಿ ಹಾಗೂ ಓದಿದ ಶಾಲೆಯ ನೆನಪುಗಳು… : ಎಚ್. ಗೋಪಾಲಕೃಷ್ಣ ಸರಣಿ
ನಮ್ಮ ದಲಿತ ಕವಿ ಸಿದ್ದಲಿಂಗಯ್ಯ ಅವರ ಆತ್ಮಕತೆ ಓದಬೇಕಾದರೆ ಈ ಎರಡೂ ಸ್ಥಳಗಳ ನೆನಪು ಮತ್ತೆ ಬರುವ ಹಾಗಾಯಿತು. ಸಿದ್ದಲಿಂಗಯ್ಯ ಓದಿದ್ದು ನಾನು ಓದಿದ ಶಾಲೆ ಮತ್ತು ಅವರು ಗೋಪಾಲಸ್ವಾಮಿ ಅಯ್ಯರ್ ಹಾಸ್ಟೆಲ್‌ನಲ್ಲಿ ಇದ್ದವರು! ಹಾಸ್ಯಬ್ರಹ್ಮ ಮತ್ತು ಕೊರವಂಜಿ ಅಪರಂಜಿ ಟ್ರಸ್ಟ್ ಎರಡೂ ಸೇರಿ ನಡೆಸುತ್ತಿದ್ದ ಹಾಸ್ಯೋತ್ಸವ ಸಮಾರಂಭಕ್ಕೆ ಶ್ರೀ ಸಿದ್ದಲಿಂಗಯ್ಯ ಬಂದಿದ್ದಾಗ ಅವರಿಗೆ ನಾನು ಈ ಶಾಲೆ ನೆನಪಿಸಿ ಅಲ್ಲೇ ನಾನೂ ಓದಿದ್ದು ಅಂತ ಹೇಳಿದೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ನೋವಿನ ರಾಗ ಪಲುಕುವ ಹಂಸದ ನೆರಳು: ಚೈತ್ರಾ ಶಿವಯೋಗಿಮಠ ಸರಣಿ
“ಚಳಿಗಾಲದ ಮರಗಳು” ಪದ್ಯದಲ್ಲಿ ಸಿಲ್ವಿಯಾ, ತನ್ನ ಕಾಲಘಟ್ಟದಲ್ಲಿ ಹೆಣ್ಣನ್ನು ನಡೆಸಿಕೊಂಡ ರೀತಿ, ಹೆಣ್ಣನ್ನು ತಾಯ್ತನ, ಕರ್ತವ್ಯಗಳಲ್ಲಿ ಬಂಧಿಸಲು ನೋಡುತ್ತಿದ್ದ ಸಮಾಜದ ಮನಸ್ಥಿತಿಯ ಚಿತ್ರಣ ಕಂಡರೆ, ಏಕಾಂಗಿಯ ಸ್ವಗತದಲ್ಲಿ ತನ್ನ ಏಕಾಂತ, ಒಂಟಿತನದ ಮಧುರ ಯಾತನೆ, ತನ್ನ ಪ್ರೇಮಿಯ ಹಠಾತ್ ನಿರ್ಗಮನದಿಂದ ಬಲಹೀನಳಾಗುವ ಸಿಲ್ವಿಯಾಳ ತೀವ್ರ ನೋವು ಕಾಣಿಸಿತು.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿ
ಆಕ್ಸಿಡೆಂಟೂ… ಅಜ್ಜಿಯ ಆರೈಕೆಯೂ: ಸುಮಾವೀಣಾ ಸರಣಿ
ಅಲ್ಲೇ ರಸ್ತೇ ಬದಿಯಲ್ಲಿ ಚಿಕ್ಕ ಟವಲ್ ಹಾಕಿ ನನ್ನನ್ನು ಕೂರಿಸಿ ತಾನೂ ಛತ್ರಿ ಬಿಡಿಸಿ ಕುಳಿತುಕೊಂಡು ಬಿಟ್ಟಳು. ನನಗೋ ಕೋಪವೆಂದರೆ ಕೋಪ. “ನಾನು ಪಾಯಸ ಕುಡಿದಿದ್ದೇನೆ’’ ಅಂದರೆ ಕೇಳಲೇ ಇಲ್ಲ. ಗಲ್ಲ ಸವರಿ, ತಲೆ ಸವರಿ “ಊಟ ವೇಸ್ಟ್ ಮಾಡಬಾರದು….!” ಎನ್ನುತ್ತಾ ತಿನ್ನಿಸಲು ಬಂದರೆ ನಾನು ತಿನ್ನುತ್ತೇನೆಯೇ? ಸಾಧ್ಯನಾ? ತುತ್ತನ್ನಷ್ಟೇ ತಿಂದೆ ಕೋಪದಿಂದ. ತನ್ನ ಕೈಯ್ಯಲ್ಲೇ ನನ್ನ ಬಾಯೊರೆಸಿ “ಜಾಗ್ರತೆ ಈಗ್ ಹೋಗು ಸಂಜೆ ಬೇಗ ಸೈಡಲ್ಲಿ ಬಾ” ಎಂದು ಟಾಟಾ ಹೇಳಿಬಿಟ್ಟಳು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ









