ಸಮುದಾಯ ಸಂಘಟನೆ
ಶಿರಹಟ್ಟಿ ತಾಲೂಕು ಬಾಲೆಹೊಸೂರಲ್ಲಿ ಸವರ್ಣೀಯರ ಗಲಬೆಯಲ್ಲಿ ಮಹಾಂತಪ್ಪ ಹನುಮಂತಪ್ಪ ಗುಡಗೇರಿ ಎನ್ನುವವರು ಕೊಲೆಯಾದರು. ಈ ಘಟನೆಯು ಇಡೀ ಗಂಟಿಚೋರ್ ಸಮುದಾಯವನ್ನು ಎಚ್ಚರಿಸಿತು. ನಾವು ಮೌನವಾಗಿದ್ದರೆ ಮೇಲುಜಾತಿಗಳ ದಬ್ಬಾಳಿಕೆ ಮತ್ತೆ ಮತ್ತೆ ನಡೆಯುತ್ತದೆ ಎಂದು ಎಲ್ಲರೂ ಒಟ್ಟಾದರು. ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿರುವ ಎಲ್ಲಾ ಗಂಟಿಚೋರರು ಒಂದಾದರು. ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯಲ್ಲಿ ಹೊಸ ಬರಹ
ಮೀನಿನ ರುಚಿ ಹಿಡಿದು ಅಲೆದಾಡಿದವರು
ಒಂದು ಪ್ರವಾಸ ಕಥನ ಹೇಗಿರಬೇಕು ಅನ್ನೋದಕ್ಕೆ ಬೆಂಚ್ಮಾರ್ಕ್ ಆಗಿ ನಿಲ್ಲುತ್ತದೆ ಈ ಪುಸ್ತಕ. ಆದರೆ ಇದನ್ನು ಪ್ರವಾಸ ಕಥನವೆನ್ನಲು ಸಾಧ್ಯವೇ ಅಥವಾ ಬೇರೆ ಏನಾದರೂ ಹೆಸರು ಕೊಡಬೇಕೆ ಅನ್ನುವುದು ನನಗೆ ತಿಳಿದಿಲ್ಲ. ಯಾಕೆಂದರೆ ಮೀನಿನ ಖಾದ್ಯಗಳ ಸವಿಯುವ ನೆಪದಲ್ಲಿ ಭಾರತದ ಪ್ರತಿ ರಾಜ್ಯಗಳ ಕರಾವಳಿ ಪ್ರದೇಶಗಳಿಗೂ ಭೇಟಿಕೊಟ್ಟು, ಆಯಾ ರಾಜ್ಯಗಳಲ್ಲಿ ಮೀನು ಅಲ್ಲಿನ ಸಂಸ್ಕೃತಿಯಲ್ಲಿ ವಹಿಸಿದ ಪಾತ್ರದ ಬಗ್ಗೆ ಲೇಖಕರು ಬಹಳ ಆಳವಾಗಿ ವಿಶ್ಲೇಷಣೆ ಮಾಡುತ್ತಾ ಸಾಗುತ್ತಾರೆ. ‘ಓದುವ ಸುಖ’ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ
ಲಂಡನ್ನನ್ನು ಪ್ರಧಾನ ಪಾತ್ರವಾಗಿಸಿದ ಕಾದಂಬರಿಕಾರ
ಕಿರಿಯ ಓದುಗರಿಂದ ಹಿಡಿದು ಹಿರಿಯ ಪುಸ್ತಕಪ್ರಿಯರ ತನಕ ಜನಪ್ರಿಯವಾದ “ಆಲಿವರ್ ಟ್ವಿಸ್ಟ್” ಹುಟ್ಟಿದ್ದು ಲಂಡನ್ ನ ಬೀದಿಗಳಿಂದಲೇ. ಲಂಡನ್ ನ ಬಡತನ ಕ್ರೌರ್ಯ ಅಪರಾಧಗಳೇ ಪ್ರಧಾನ ಭೂಮಿಕೆಯಲ್ಲಿರುವ ಕಥೆ. ಸಾಲವನ್ನು ತೀರಿಸಲಾಗದೇ ತಂದೆ ಜೈಲಿನಲ್ಲಿ ದಿನಕಳೆಯುವುದನ್ನು, ನಿರಾಶ್ರಿತ ವಸತಿಗಳಲ್ಲಿ ಅನಾಥ ಮಕ್ಕಳ ಹತಾಶೆಯನ್ನು ಬಾಲ್ಯದಲ್ಲಿ ಡಿಕನ್ಸ್ ಕಂಡವನು. ಖ್ಯಾತ ಕಾದಂಬರಿಕಾರ ಡಿಕನ್ಸ್ನ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ
ನೆತ್ತರ ಒಗಟುಗಳ ಬಿಡಿಸುವುದು ಕಷ್ಟ
ಆ ಹಂದಿಗಳಿಗೆ ತಿಂಗಳಿಗಾಗುವಷ್ಟು ಆಹಾರವನ್ನು ಅಪ್ಪ ಹಿತ್ತಿಲ ಸೌದೆ ಮನೆಯಲ್ಲಿ ತರಿಸಿಇಟ್ಟಿರುತ್ತಿದ್ದ. ಅಷ್ಟೇ ಅವನ ಕೆಲಸ. ಆಗಾಗ ನಾನೇ ಅವುಗಳ ಎಲ್ಲ ಕೆಲಸ ಮಾಡುತ್ತಿದ್ದುದು. ಅಪ್ಪ ಬಂದು ನೋಡಿದ ಕೂಡಲೆ ಗಕ್ಕನೆ ಎದ್ದು ಮೂಲೆ ಸೇರಿ ಭಯದಿಂದ ನೋಡುತ್ತಿದ್ದವು. ಯಾಕೆ ಇವು ನನ್ನಂತೆಯೇ ಬೆದರಿ ನನ್ನ ಬಳಿ ಬಂದು ಗಾಬರಿಯಾಗುತ್ತವಲ್ಲಾ… ಹೇಗೆ ಗೊತ್ತಾಯಿತು ಈ ಹಂದಿಗಳಿಗೆ ಅಪ್ಪನ ಅವತಾರಗಳು ಎಂದು ಅಚ್ಚರಿಯಾಗುತ್ತಿತ್ತು. ಮೊಗಳ್ಳಿ ಗಣೇಶ್ ಬರೆಯುವ ನನ್ನ ಅನಂತ ಅಸ್ಪೃಶ್ಯ ಆಕಾಶ ಸರಣಿಯ ಹೊಸ ಕಂತು ನಿಮ್ಮ ಓದಿಗಾಗಿ.
‘ಯಕ್ಷಗಾನೀಯವಲ್ಲದ್ದು ಔಚಿತ್ಯವೂ ಅಲ್ಲ’
ಯಕ್ಷಗಾನದ ಆವರಣದಲ್ಲೇ ಹುಟ್ಟಿ ಬೆಳೆದ ಜಿ ಎಸ್ ಭಟ್ಟರು, ಗುಂಡುಬಾಳದ ಆಟ ನೋಡುತ್ತಲೇ ಬೆಳೆದವರು. ಅವರ ಯೌವನ ಕಾಲದಲ್ಲಿ ನಾಟಕದ ಬಗ್ಗೆಯು ಆಸಕ್ತಿ ವಹಿಸಿದ್ದರು. ಗುಂಡುಬಾಳದ ಹರಕೆ ಆಟವು ಯಕ್ಷಗಾನ ಕಲಾ ಪ್ರಕಾರದಲ್ಲೇ ವಿಶಿಷ್ಟವಾದ ಮಾದರಿ. ಅಲ್ಲಿ ದೇವರೇ ಪ್ರೇಕ್ಷಕರು. ಹಾಗಾದ್ದರಿಂದಲೇ ಅದು ಹೊಸ ನಡೆಯ ಪ್ರಯೋಗಗಳಿಗೆ…
“ಯಕ್ಷಾರ್ಥ ಚಿಂತಾಮಣಿ”ಯಲ್ಲಿ ಜಿ ಎಸ್ ಭಟ್ಟರ ಜೊತೆಗೆ ತಾವು ನಡೆಸಿದ ಸಂದರ್ಶನವನ್ನು ಬರೆದಿದ್ದಾರೆ ಕೃತಿ ಆರ್ ಪುರಪ್ಪೇಮನೆ
ಗಣಿತವೊಂದು ಭಾಷೆಯೆಂಬ ಹೊಸ ದೃಷ್ಟಿ
ನಾವು ಬಳಸುವ ಸಂಖ್ಯೆಗಳು, ವಿಜ್ಞಾನದಲ್ಲಿ ಬರುವ ಅಳತೆಯ ಮಾನಗಳು, ಇತಿಹಾಸದ ಇಸವಿಗಳು, ಸಮಯ, ಕಾಲಗಣನೆ ಮೊದಲಾದ ಯಾವುದೇ ಸಂದರ್ಭವನ್ನು ತೆಗೆದುಕೊಳ್ಳಿ. ಅಲ್ಲಿ ಗಣಿತ ಎಂಬ ಭಾಷೆಯನ್ನು ಬಳಸದೇ ಇದ್ದರೆ ಸಂದರ್ಭವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಗಣಿತ ಎಂಬ ಭಾಷೆಗೆ ಅಂಕೆಗಳೇ ಅಕ್ಷರಗಳು. ಕೂಡುವುದು, ಕಳೆಯುವುದು, ಗುಣಿಸುವುದು, ಭಾಗಿಸುವುದು ಅದರ ವ್ಯಾಕರಣ ಎಂದು ಒಮ್ಮೆ ಯೋಚಿಸಿ ನೋಡು ಆಗ ನೀನು ಗಣಿತ ವಿಷಯವನ್ನು ನೋಡುವ ದಿಕ್ಕೇ ಬದಲಾಗುತ್ತದೆ.
‘ಗಣಿತ ಮೇಷ್ಟರ ಶಾಲಾ ಡೈರಿ’ಯಲ್ಲಿ ಅರವಿಂದ ಕುಡ್ಲ ಇಂದಿನ ಬರಹ
ಸಾಮಾಜಿಕ ಸಂಘರ್ಷ ಮತ್ತು ಕೊಡುಕೊಳ್ಳುವಿಕೆ
ಕೆರೆ ಒತ್ತುವರಿಯ ಕಾರಣಕ್ಕೆ ಮಳೆನೀರು ಗಂಟಿಚೋರರ ಓಣಿಗೆ ನುಗ್ಗಿತು. ನೀರುನಿಂತು ಆಡು ಕುರಿಗಳು ಸಾವನ್ನಪ್ಪಿದವು. ಮೇವಿನ ಬಣವೆಗಳು ನೀರಲ್ಲಿ ತೇಲಿದವು. ಹೀಗಾಗಿ ಗಂಟಿಚೋರರು ಇದರ ವಿರುದ್ಧ ಕೋರ್ಟಿಗೆ ಹೋದರು. ಕೋರ್ಟು ಕೆರೆಯನ್ನು ಪುನಶ್ಚೇತನ ಮಾಡಲು ಆದೇಶಿಸಿತು. ಈ ಆದೇಶ ಪಾಲನೆಯಾಗಲಿಲ್ಲ. ನಂತರ ನ್ಯಾಯಾಂಗ ನಿಂದನೆ ದಾವೆ ಹೂಡಿದರು.
‘ಗಂಟಿಚೋರರ ಕಥನಗಳು ‘ಸರಣಿಯಲ್ಲಿ ಡಾ. ಅರುಣ್ ಜೋಳದ ಕೂಡ್ಲಿಗಿ ಸಾಮಾಜಿಕ ಸವಾಲುಗಳ ಕುರಿತು ಬರೆದಿದ್ದಾರೆ.
ತೊರೆಯಲಾಗದ ಮಾಯೆ ಹಿಯಾ ಯಾಂಗ್ಕೆ
ದೂರವಾಗಿರುವ ತನ್ನ ಸಂಸಾರದ ಸದಸ್ಯರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತನಾದ ಹಾನ್ ದೈನಂದಿನ ನಿರ್ವಹಣೆಗಾಗಿ ಅತಿ ಕಳಪೆ ಮಟ್ಟದ ವಸತಿ ಮತ್ತು ಉದರ ಪೋಷಣೆಯಿಂದ ತೃಪ್ತನಾಗುತ್ತಾನೆ ಮತ್ತು ತನ್ನ ಶೋಧ ಕಾರ್ಯ ಮುಂದುವರಿಸುತ್ತಾನೆ. ಚಿತ್ರದುದ್ದಕ್ಕೂ ಕಟ್ಟಡ ಕೆಡವುತ್ತಿರುವ ಹಾಗೂ ಅದರ ಅವಶೇಷಗಳ ನಡುವೆಯೇ ಹಾನ್ ಸೇರಿದಂತೆ ಕೆಲಸಗಾರರ ಚಲನೆ ಕಾಣುತ್ತಿದ್ದು ಅವು ಅವನ ಅಂತರಂಗದ ತುಮುಲ ಮತ್ತು ಕಳವಳಗಳ ರೂಪಕಗಳಾಗುತ್ತವೆ. ಎ.ಎನ್. ಪ್ರಸನ್ನ ಬರೆಯುವ ಸಿನಿಮಾ ವಿಶ್ಲೇಷಣೆ
ನೀಲಿ ಬರೆಗಳ ಮುಟ್ಟಿ ಮುಟ್ಟಿ ನೋಡಿದ
ಅಂತೂ ಚಿಕ್ಕಪ್ಪ ಬಂದಿದ್ದ. ಯಾವತ್ತಿನಂತೆ ಎದ್ದು ನಿಂತು ಕೈ ಮುಗಿದೆ. ಬೀಗ ತೆಗೆದು; ‘ಐದು ನಿಮಿಷ ಇರಿ; ಪಲಾವ್ ತರ್ತೀನಿ’ ಎಂದು ಸೈಕಲೇರಿ ಹೋದ. ಪಲಾವ್ ಎನ್ನುವ ಹೆಸರನ್ನೆ ನಾನಾಗ ಕೇಳಿರಲಿಲ್ಲ. ಕೈಕಾಲು ಮುಖ ತೊಳೆದು ದೇವರಿಗೆ ಕಡ್ಡಿ ಹಚ್ಚು ಎಂದ ತಾತ. ಹಾಗೇ ಮಾಡಿದೆ. ಪಲಾವ್ ತಂದ ಚಿಕ್ಕಪ್ಪ. ಗಮ್ಮೆನ್ನುವ ಪೊಟ್ಟಣ. ತಾತನ ಮೆಲ್ಲಗೆ ‘ಇದೇನಪ್ಪಾ’ ಎಂದು ಕೇಳಿದ. ‘ಗಮುಲ್ದನ್ನ’ ಎಂದ. ಅಹಾ! ಅಂತಹ ಗಮಗಮಿಸುವ ಅನ್ನವ ನಾನೆಂದೂ ಉಂಡಿರಲಿಲ್ಲ. ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಹದಿನೈದನೆಯ ಕಂತು










