Advertisement

Month: May 2024

ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

“ಆಗೀಗ ಮಾತುಗಳ ಆಡಿದ್ದೂ ಉಂಟು
ನೋಡುಗರಿಗೆ ಕೇಳುವ ಹಾಗೆ
ಶಬ್ದಗಳ ಮಿಡಿತಗಳಲಿ ಭೇಟಿಯ
ನವಿರು ಸವೆಯದ ರೀತಿ
ಮನಕೆ
ಕಾಲದಮಿತಿಯ ಹರವನು ಹಿಗ್ಗಿಸುವ ಛಾತಿ”- ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

Read More

ಹುಟ್ಟು ಕೆಟ್ಟೇ?: ಓಬೀರಾಯನ ಕಾಲದ ಕಥಾ ಸರಣಿಯಲ್ಲಿ ಭಾರತೀಬಾಯಿ ಪಣಿಯಾಡಿ ಬರೆದ ಕತೆ

“ಹೊಲೆಯ ತಿಮ್ಮು ಒಂದು ದಿನ ನಮ್ಮಲ್ಲಿಗೆ ಉಪ್ಪಿನಕಾಯಿ ಬೇಡುವುದಕ್ಕೆ ಬಂದಿದ್ದ. ನಮ್ಮ ತಾಯಿ ಹುಳುವಾದ ಸ್ವಲ್ಪ ಉಪ್ಪಿನಕಾಯಿಯನ್ನು ಕುದಿಸಿ ಒಂದು ಎಲೆಯಲ್ಲಿ ಹಾಕಿ ಅಂಗಳದ ಮೂಲೆಯಲ್ಲಿಟ್ಟು ತೆಗೆದುಕೊಂಡು ಹೋಗೆಂದಳು. ನಾನು ಅವನ ಎದುರಿನಲ್ಲಿಯೇ “ಹುಳುವಾದ ಉಪ್ಪಿನಕಾಯಿ ಏಕೆ ಕೊಟ್ಟೆ” ಎಂದು ಕೇಳಿಬಿಟ್ಟೆ. ತಾಯಿಯು ಸಿಟ್ಟುಗೊಂಡು ನನಗೆ ಹೊಡೆಯಬಂದರು. ನಾನು ನಗುತ್ತಾ ತೋಟಕ್ಕೆ ಓಡಿದೆ.”

Read More

ಕವಿತೆಯೊಂದರ ಸಾಲಿನಿಂದ ಕಳಚಿಕೊಂಡ ಅಕ್ಷರ: ಡಾ. ಲಕ್ಷ್ಮಣ ವಿ.ಎ ಅಂಕಣ

“ಇವರ ವೈಯಕ್ತಿಕ ಪರಿಚಯ ಈಗಷ್ಟೇ, ಇತ್ತೀಚೆಗೆ ಆದದ್ದು. ನೀನಾಸಮ್ ನ ಶಿಬಿರವೊಂದರಲ್ಲಿ ಮೊಟ್ಟ ಮೊದಲಬಾರಿಗೆ ಮುಖತಃ ಭೇಟಿಯಾಗಿದ್ದು. ಅಲ್ಲಿ ಅವರು ಬಂದಿದ್ದು ಒಬ್ಬ ಕಿರಿಯ ಲೇಖಕರನ್ನು ಮಾತನಾಡಿಸಿಕೊಂಡು ಹೋಗಲು. ಅಷ್ಟೊಂದು ಸಾಹಿತ್ಯ ಕಲೆ ಕವಿತೆಯ ಮೇಲೆ ಪ್ರೀತಿಯಿರುವ ಮನುಷ್ಯನೊಬ್ಬ ಮಾತ್ರ ತನಗಿಂತ ಕಿರಿಯರನ್ನು ಹೀಗೆ ಹುಡುಕಿಕೊಂಡು ಬರಲು ಸಾಧ್ಯ.”

Read More

ಕೇಶವಿನ್ಯಾಸ: ಕೆ. ವಿ. ತಿರುಮಲೇಶ್ ಬರಹ

“ಆಗ ನಮ್ಮೂರಿನಲ್ಲಿ ಕ್ಷೌರದ ಅಂಗಡಿ ಇರಲಿಲ್ಲ. ಕ್ಷೌರಿಕರಿದ್ದರು. ಕ್ಷೌರ ಮಾಡಿಸಿಕೊಳ್ಳಬೇಕಾದವರು ಒಂದೋ ಕ್ಷೌರಿಕರ ‘ಕೊಟ್ಟಿಗೆ’ಗೆ ಹೋಗಬೇಕಾಗಿತ್ತು, ಇಲ್ಲವೇ ಅವರಿಗೆ ಹೇಳಿಕಳಿಸಬೇಕಾಗಿತ್ತು. ಹಳ್ಳಿಗಳಲ್ಲಿ ಕ್ಷೌರಿಕರಿಗೆ ಪಾರಂಪರ್ಯವಾಗಿ ನಿಗದಿಯಾದ ಗಡಿಗಳಿದ್ದುವು; ಆ ಗಡಿಯೊಳಗೇ ಅವರು ತಂತಮ್ಮ ಕಾರ್ಯ ನಿರ್ವಹಿಸುತ್ತಿದ್ದುದು. ಅವರು ಕೇವಲ ವೃತ್ತಿಯಿಂದಲೇ ಜೀವನ ಸಾಗಿಸುತ್ತಿದ್ದವರೂ ಅಲ್ಲ; ಅವರಿಗೆ ಅಲ್ಪ ಸ್ವಲ್ಪ ಹೊಲ ಮನೆಗಳೂ ಇದ್ದುವು. ಕ್ಷೌರಿಕರು ಹೆಚ್ಚಾಗಿ ಹಳ್ಳಿಯಲ್ಲಿ ತಮ್ಮ ಸಲಕರಣೆ ಚೀಲಗಳನ್ನು ಕಂಕುಳಲ್ಲಿರಿಸಿಕೊಂಡು ರೌಂಡ್ ಸುತ್ತುತ್ತಿದ್ದರು.”

Read More

ಗಗನ್ ಬೂಸ್ನೂರ್ ತೆಗೆದ ಈ ದಿನದ ಚಿತ್ರ

ಈ ದಿನದ ಚಿತ್ರ ತೆಗೆದವರು ಗಗನ್ ಬೂಸ್ನೂರ್. ದಾವಣಗೆರೆಯ ಗಗನ್ ಬಿ.ಕಾಂ ವಿದ್ಯಾರ್ಥಿ. ಹಕ್ಕಿ ಮತ್ತು ಪರಿಸರ ಛಾಯಾಗ್ರಹಣ ಇವರ ಆಸಕ್ತಿಯ ವಿಷಯಗಳು. ಸಾಹಿತ್ಯದ ಓದು ಇವರ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ