Advertisement

Month: May 2024

ಒಂದು ಬಾಗಿಲನ್ನು ಹೊಕ್ಕು ಹೊರಬಂದ ಮೇಲೆ…: ಆಶಾ ಜಗದೀಶ್ ಅಂಕಣ

“ಶಾಂತಿಯವರು ವಸ್ತುವಿನ ಆಯ್ಕೆಯಲ್ಲಿ ತೋರಿಸುವ ಕಾಳಜಿ ಬಹಳ ಮುಖ್ಯ. ಅವರ ಕಥೆಗಳಲ್ಲಿ ವಸ್ತು ವೈವಿಧ್ಯತೆಯನ್ನು ಕಾಣಬಹುದು. ಶಾಂತಿಯವರು ಕಥೆಯ ವಿಚಿತ್ರ ತಿರುವುಗಳು ಮತ್ತು ಕುತೂಹಲವನ್ನು ಕೊನೆಯವರೆಗೂ ಕಾಯ್ದುಕೊಂಡು ಹೋಗುವ ಆಕರ್ಷಕ ರೀತಿಯಿಂದಾಗಿ ಓದುಗರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡುತ್ತಾರೆ. ಜಯರಾಮ ಹುಚ್ಚನಾದ ಕಥೆ ಅದಕ್ಕೊಂದು ಉತ್ತಮ ನಿದರ್ಶನ. ಜಯರಾಮ ಹುಚ್ಚ ಯಾಕಾದ ಎನ್ನುವುದನ್ನು ತಿಳಿಯಲಿಕ್ಕೆ ನಾವು ಪೂರಾ ಕಥೆಯನ್ನು ಓದಲೇಬೇಕು.”

Read More

ಕೀಳರಿಮೆಯ ರೋಗಕ್ಕೆ ಶಿಕ್ಷಣದ ಮದ್ದರೆದು…: ಶ್ರೀಹರ್ಷ ಸಾಲಿಮಠ ಬರೆಯುವ ಹೊಸ ಅಂಕಣ

“ಒಮ್ಮೆ ಸೈಕಲ್ ಕೊಳ್ಳಲು ಹೋಗಿದ್ದಾಗ ನಾನು ಒಂದು ಸೈಕಲ್ಲನ್ನು ತೊರಿಸಿ “ಇದು ಎಷ್ಟು” ಅಂತ ಕೇಳಿದೆ. ಸೇಲ್ಸ್ ಮನ್ ಬಿಳಿಯ. ಆತ ಬೆಲೆ ಎಷ್ಟು ಅಂತ ಹೇಳದೆ “ಅದು ದುಬಾರಿ” ಎಂದಷ್ಟೇ ಹೇಳಿದ. ನೀನು ಕಂದುಬಣ್ಣದವನು ನಿನಗೆ ಅದನ್ನು ಕೊಳ್ಳುವ ಯೋಗ್ಯತೆಯಿಲ್ಲ ಎಂದು ಆತ ಪರೋಕ್ಷವಾಗಿ ಹೇಳಿದ್ದ. ಅಸಲಿಯತ್ತೆಂದರೆ ನಾನು ಕಟ್ಟುವ ತೆರಿಗೆಯೇ ಆತನ ಆದಾಯಕ್ಕಿಂತ ಹೆಚ್ಚಿತ್ತು!”

Read More

ಆರ್. ದಿಲೀಪ್ ಕುಮಾರ್ ಬರೆದ ಎರಡು ಕವಿತೆಗಳು

“ಇಲ್ಲಿ ನಿಂತ ಅಲ್ಲಮನ ಭಂಗಿ
ಪಾಣಿನಿಯ ಭಾಷೆಯ ಲಯಕಾಗಿ ಕೊಟ್ಟ ಪೆಟ್ಟು
ಕನ್ನಡಿಸಿದೆ ಇಂದಿಗೂ ಪುಟ್ಟ ಪುಟ್ಟ ಪದಗಳಲೆ
ನಿಂತು ನಗುತಿದೆ ಅಲ್ಲಮನ ಕಣ್ಣಲ್ಲಿ”- ಆರ್. ದಿಲೀಪ್ ಕುಮಾರ್ ಬರೆದ ಎರಡು ಕವಿತೆಗಳು

Read More

ಕನಕಗಿರಿಯ ಲಕ್ಷ್ಮೀನರಸಿಂಹ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಹಂಪೆಯಲ್ಲಿ ಸುತ್ತಾಡಿ ಬಳಲಿದವನಿಗೆ ಕಾಲಿನ ಬೆಲೆ ಸಂಜೆಯ ಹೊತ್ತಿಗಾದರೂ ತಿಳಿದೇ ತಿಳಿಯುತ್ತದೆ. ಇನ್ನು ಕಣ್ಣಿದ್ದು ಕನಕಗಿರಿ ನೋಡಬೇಕಲ್ಲ! ಆ ಸ್ಥಳ ಎಲ್ಲಿದೆ ಎಂದು ವಿಚಾರಿಸುವಾಗ ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿ ಎಂಬ ಉತ್ತರ ದೊರಕಿತು. ಕನಕನೆಂಬ ಮುನಿ ದೀರ್ಘತಪಸ್ಸು ಮಾಡಿದ ಸ್ಥಳವಾದುದರಿಂದ ಕನಕಗಿರಿ ಎಂಬ ಹೆಸರು ಬಂದಿತಂತೆ. ಕ್ರಿ.ಶ. ಹತ್ತನೆಯ ಶತಮಾನದ ವೇಳೆಗೇ ಪುಣ್ಯಕ್ಷೇತ್ರವೆಂಬ ಕೀರ್ತಿಗೆ ಪಾತ್ರವಾಗಿದ್ದ ಈ ಪ್ರಾಂತ್ಯದಲ್ಲಿ ಈಗಲೂ ಅನೇಕ ಗುಡಿಗಳೂ ಕೊಳಗಳೂ ಇದ್ದು ಪುರಾತನ ವೈಭವವನ್ನು ನೆನಪಿಸುವಂತಿವೆ. ಇವೆಲ್ಲ ಗುಡಿಗಳಲ್ಲಿ ಲಕ್ಷ್ಮೀನರಸಿಂಹ ದೇವಾಲಯ ಪ್ರಮುಖ ಸ್ಥಾನ ಪಡೆಯುತ್ತದೆ.”
ಟಿ.ಎಸ್.ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಹತ್ತೊಂಭತ್ತನೆಯ ಕಂತು

Read More

ಫಕೀರ ಕಾವ್ಯ ಸಂಕಲನಕ್ಕೆ ಡಾ. ಮಲರ್ ವಿಳಿ ಬರೆದ ಮುನ್ನುಡಿ

“‘ಸಾವೆಂಬುದು ನಿರಾಳ ಮೌನ’ ಕವಿತೆಯಲ್ಲಿ ಒಬ್ಬ ವ್ಯಕ್ತಿಯ ಸಾವಿನ ನಂತರದ ನೆನಪುಗಳು ಹೇಗೆಲ್ಲ ನಮ್ಮನ್ನು ಕಾಡುತ್ತವೆ, ಇಲ್ಲಿಯ ತದ್ರೂಪ ಚಿತ್ರಣಗಳು ನಮ್ಮ ಮನಸ್ಸನ್ನು ತಟ್ಟುತ್ತವೆ, ಎಚ್ಚರಿಸುತ್ತವೆ. ತಾತ್ತ್ವಿಕತೆಯನ್ನು ಬೋಧಿಸುತ್ತವೆ, ನಶ್ವರತೆಯ ಸಂದೇಶವನ್ನು ಸಾರುತ್ತಾ ನೆನಪೊಂದೇ ಉಳಿಯುವುದು ಎಂಬ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ಶ್ರೀಧರರು ರಚಿಸಿದ್ದಾರೆ. `ನಗುವಿನ ಬೀಜಗಳು ಮಾರಾಟಕ್ಕಿವೆ’-ಇತ್ತೀಚೆಗೆ ನಗು…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ