Advertisement

Month: May 2024

‘ಶುದ್ಧಕತ್ತಲಿಲ್ಲ, ಶುದ್ಧಬೆಳಕೂ ಇಲ್ಲ’

ಡೋಗ್ರಿ ನವೋದಯ ಚಳವಳಿಯ ಪ್ರಮುಖರಾದ ಪ್ರೊ. ನೀಲಾಂಬರ್ ದೇವ್ ಶರ್ಮಾ ಅವರದು ಪ್ರಶಾಂತ ವ್ಯಕ್ತಿತ್ವ. ಸುಂದರವಾದ ನಿಲುವು. ಸ್ವತಃ ಬರಹಗಾರರಾಗಿ ಗುರುತಿಸಿಕೊಂಡದ್ದಲ್ಲದೆ ಡೋಗ್ರಿ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಸಲು ಇತರರಿಗೆ ಪ್ರೋತ್ಸಾಹ ನೀಡಿದವರು. ಡೋಗ್ರಿ ಜನಪದ ಸಾಹಿತ್ಯದ ದಾಖಲೀಕರಣ ಯೋಜನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ವ್ಯಕ್ತಿಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.

Read More

ಆಂಗ್ಲ ಸಾಹಿತ್ಯ ವಿಹಾರಿ ಹಟ್ಟಿಯಂಗಡಿ ನಾರಾಯಣ ರಾವ್

ಹ. ನಾ. ರಾ. ಅವರ ಅನುವಾದದ ಮಹತ್ವವನ್ನು ಆ ಕಾಲದಲ್ಲಿ ಅಷ್ಟಾಗಿ ಗುರುತಿಸಲಿಲ್ಲವೆಂದೇ ಅನಿಸುತ್ತದೆ. ಅದಕ್ಕೆ ಕಾರಣ ಮುಖ್ಯವಾಗಿ ಬೆಂಗಳೂರು- ಮೈಸೂರು ಕೇಂದ್ರದ ಸಾಹಿತಿಗಳಿಗೆ ಅವರ ಅನುವಾದಗಳು ಅಲಭ್ಯವಾಗಿದ್ದವು ಎಂದು ಊಹಿಸಬಹುದು. ದಕ್ಷಿಣ ಕನ್ನಡದವರು ಅವರನ್ನು ಮುಖ್ಯ ಕವಿ-ಚಿಂತಕ ಎಂದು ಪರಿಗಣಿಸಿದ್ದರು. ಪಂಜೆಯವರು ‘ವಾಗ್ಭೂಷಣ’ದ ಸಂಚಿಕೆಯಲ್ಲಿ ಬಂದ ‘ಶೇಕ್ಸ್‌ಪಿಯರಿನ ಸುಭಾಷಿತ ಕಲಾಪಗಳ’ ಚೌಪದಿಗಳನ್ನು ಪಠ್ಯ ಪುಸ್ತಕಗಳಲ್ಲಿ ಬಳಸಿಕೊಂಡಿದ್ದರು. ‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ಹಟ್ಟಿಯಂಗಡಿ ನಾರಾಯಣ ರಾವ್ ಕುರಿತು ಬರೆದಿದ್ದಾರೆ ಡಾ.ಬಿ. ಜನಾರ್ದನ ಭಟ್.

Read More

‘ಆನೆಗೆ ಬಂದ ಮಾನ’ ಶೇಷಾದ್ರಿ ಗಂಜೂರು ಹೊಸ ಸರಣಿ ಆರಂಭ

ಕೇರಳದ ಕೊಚ್ಚಿಯಿಂದ ವ್ಯಾಟಿಕನ್ ಸಿಟಿಯವರೆಗೆ ಪ್ರಯಾಣ ಮಾಡಿದ ಆನೆ, ‘ಹ್ಯಾನೋ’ ಪಾಲಿಗೆ ರಾಜಕೀಯ ಮನ್ನಣೆ, ಪ್ರತಿಷ್ಠೆ-ಗೌರವಗಳ ಸುರಿಮಳೆಯೇ ಆಯಿತು. ಸ್ವತಃ ಪೋಪ್ ಅವನ ಕಾಳಜಿ ಮಾಡುತ್ತಿದ್ದರು. ಆದರೆ ಅವನು ಒಂಟಿಯಾಗಿ ಬಾಳಿ ತೀರಿಕೊಂಡ. ಆನೆಗಳ ಜೀವನ ವಿಧಾನ, ಅವುಗಳ ಯೋಚನೆ, ಆಕಾಂಕ್ಷೆಗಳು ಬಹಳ ಕುತೂಹಲಕಾರಿಯಾದವು.  ಈ ಕುರಿತು ಶೇಷಾದ್ರಿ ಗಂಜೂರು ‘ಆನೆಗೆ ಬಂದ ಮಾನ’  ಎಂಬ ಹೊಸ ಸರಣಿ ಬರೆಯಲಿದ್ದಾರೆ. ಅವರ ಮೊದಲ ಬರಹ ಇಲ್ಲಿದೆ.

Read More

ಸಜ್ಜನಿಕೆಗೆ ಮತ್ತೊಂದು ಹೆಸರು ಪ್ರೊ.ಜೆ. ಲಕ್ಕಪ್ಪ ಗೌಡ

೨೦ನೇ ಶತಮಾನದ ಉತ್ತರಾರ್ಧದಲ್ಲಿ ನಡೆದ ಶೈಕ್ಷಣಿಕ ವಲಯಗಳ ಕನ್ನಡದ ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗಿ ಕೆಲಸ ನಿರ್ವಹಿಸಿದ ಪ್ರೊ. ಎಚ್.ಜೆ. ಲಕ್ಕಪ್ಪ ಗೌಡರು ಸೋಮವಾರ ಸಂಜೆ ನಮ್ಮನ್ನು ಅಗಲಿದ್ದಾರೆ. ಭಾರತದ ಇತರ ಪ್ರದೇಶಗಳಿಗೆ ಹೋಲಿಸಿದರೆ ಕರ್ನಾಟಕ ಜಾನಪದ ಅಧ್ಯಯನವು ಸಾಕಷ್ಟು ವಿಸ್ತೃತವೂ ಗಂಭೀರವೂ ಆಗಿರುವುದಕ್ಕೆ  ಕಾರಣಕರ್ತರಾದವರಲ್ಲಿ ಲಕ್ಕಪ್ಪ ಗೌಡರಿಗೆ ಪ್ರಮುಖ ಸ್ಥಾನವಿದೆ. ಅವರ ಸಾಧನೆಯ ಹಾದಿಯನ್ನು ಮೆಲುಕು ಹಾಕಿದ್ದಾರೆ ವಿದ್ವಾಂಸ ಪ್ರೊ. ಪುರುಷೋತ್ತಮ ಬಿಳಿಮಲೆ. 

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ