Advertisement

Month: May 2024

ಅಜೀತ ಪಾತ್ರೋಟ ಬರೆದ ಈ ದಿನದ ಕವಿತೆ

“ಉಸಿರ ಬಿಸಿ ಬಸೆದು ತಂಪಾಗಿದ್ದಾಳೆ
ಧರೆಗೆ ಧಾರೆಯಾಗಿ ಜಿನುಗಲು
ಭೂವಿಗೆ ಹಸಿರಾಗೊಡೆಯಲೂ
ಕಲರವಾಗಿ ತಣಿಸಲು
ಮುಂದಾಗಿದ್ದಾಳೆ
ಅವಳೇ ನನ್ನೊಳಗಿನವಳು
ನನ್ನ ಬೆಳಗಿನವಳು”- ಅಜೀತ ಪಾತ್ರೋಟ ಬರೆದ ಈ ದಿನದ ಕವಿತೆ

Read More

ದೇಸಾಯ್ತಿಯ ಸೀರೆ

ಆಡಳಿತ ನಿರ್ವಹಣೆಯಲ್ಲಿ ತೊಡಗಿದ್ದ ಪುರುಷರು ಮನಸ್ಸು ಇಲ್ಲದ ಮಾರ್ಗದಂತೆ ದೇಸಾಯ್ತಿಯ ಕಾರ್ಯ ನಿರ್ವಹಿಸತೊಡಗಿದರು. 25 ಗ್ರಾಮಗಳ ಕಂದಾಯ ವಸೂಲಿ ಮಾಡುವಲ್ಲಿ ಸಮಸ್ಯೆಯಾಯಿತು. ಈ ಗ್ರಾಮಗಳಲ್ಲಿನ ದೇಶಗತಿಯ ವತನಿ ಭೂಮಿಯೆ 16 ಸಾವಿರ ಎಕರೆಗಳಷ್ಟಿತ್ತು! ಉತ್ತರಾಧಿಕಾರದ ಬಯಕೆಯಿಂದಾಗಿ ದಾಯಾದಿಗಳು ಕೂಡ ಅತೃಪ್ತರಾಗಿದ್ದರು. ಆದರೆ ಕಾಶೀಬಾಯಿ ಎದೆಗುಂದದೆ ಎಲ್ಲ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತದಲ್ಲಿ ಯಶಸ್ಸು ಸಾಧಿಸಿದರು. ರಂಜಾನ್ ದರ್ಗಾ ಬರೆಯುವ “ನೆನಪಾದಾಗಲೆಲ್ಲ” ಸರಣಿಯ ಮೂವತ್ತನೆಯ ಕಂತು

Read More

ಅಕ್ಷರಗಳು ಅನಾವರಣಗೊಳಿಸುವ ಸತ್ಯ

ಸಮಾಜದ ಶ್ರೇಣಿಯಲ್ಲಿ ಮೇಲಿನ ಸ್ಥರದಲ್ಲಿ ನಿಂತ ನಮಗೆ ಕೆಳಗೆ ಕಣ್ಣುಹಾಯಿಸಿದಾಗ ಕಂಡುದಷ್ಟೇ ಸತ್ಯ ಎಂಬ ನಮ್ಮ ಭ್ರಮೆಯನ್ನು ಇಲ್ಲಿನ ಪ್ರತಿಯೊಂದು ಸಾಲುಗಳೂ ‘ಚಿತ್’ ಮಾಡುತ್ತಲೇ ಹೋಗುತ್ತವೆ. ನಮ್ಮ ಭ್ರಮಾಲೋಕ ಕಳಚಿದೊಡನೆ ‘ವಾಸ್ತವದ ಕಹಿಸತ್ಯ’ವನ್ನು ಒಂದಿನಿತೂ ಉತ್ಪ್ರೇಕ್ಷೆಯಿಲ್ಲದೆ ನಮ್ಮೆದುರು ತೆರೆದಿಡುತ್ತದೆ. ‘ಇದು ಸತ್ಯ, ಇದು ವಾಸ್ತವ. ನೀನು ಗ್ರಹಿಸಬೇಕಾದುದು ಹೀಗೆ. ಈ ಗ್ರಹಿಕೆಯೊಂದೇ ಸಮಾನತೆಯೆಡೆಗೆ ನಿನ್ನನ್ನೂ, ನನ್ನನ್ನೂ ಕರೆದೊಯ್ಯಬಲ್ಲುದು. ಸಾಧ್ಯವೇನು ನಿನಗೆ?’ ಎಂಬಂತೆ ತಣ್ಣಗೆ ಪ್ರಶ್ನಿಸುತ್ತವೆ.
ದೇವನೂರ ಮಹಾದೇವ ಬರೆದ “ಎದೆಗೆ ಬಿದ್ದ ಅಕ್ಷರ” ಕೃತಿಯ ಕುರಿತು ಸುಧಾ ಆಡುಕಳ ಬರಹ

Read More

ಭಾರತಿ ಬಿ.ವಿ. ಅನುವಾದಿಸಿದ ಮಾಂಟೋನ ಕತೆ “ದಾದಾ ಮಮ್ಮದ್”

ಬಾಗಿಲು ತೆರೆಯಿತು. ಒಬ್ಬ ಸಣಕಲು ಮನುಷ್ಯ ಒಳ ಬಂದ. ಮೊದಲ ನೋಟದಲ್ಲೇ ಅವನ ಮೀಸೆ ನನ್ನ ಗಮನ ಸೆಳೆಯಿತು. ನಿಜಕ್ಕೂ ಹೇಳಬೇಕೆಂದರೆ ಅವನ ಮೀಸೆಯಿಂದಲೇ ಅವನು ಎದ್ದು ಕಾಣುತ್ತಿದ್ದ, ಅದಿಲ್ಲದಿದ್ದರೆ ಯಾರೂ ಅವನ ಕಡೆಗೆ ಗಮನ ನೀಡದಂತಿದ್ದ ಆ ವ್ಯಕ್ತಿ. ಅವನು ತನ್ನ ಕೈಸರ್ ವಿಲ್ಹೆಮ್‌ ಮೀಸೆಯನ್ನು ಬೆರಳಿನಿಂದ ತೀಡಿಕೊಳ್ಳುತ್ತ ನನ್ನ ಮಂಚದ ಬಳಿ ಬಂದ. ಅವನ ಹಿಂದೆಯೇ ಒಂದಿಷ್ಟು ಜನರು ಒಳಬಂದರು. ಸಾದತ್‌ ಹಸನ್ ಮಾಂಟೋನ ಕತೆಗಳನ್ನು ಭಾರತಿ ಬಿ.ವಿ. “ಯಕ್..” ಎನ್ನುವ ಸಂಕಲನದ ಶೀರ್ಷಿಕೆಯಡಿ ಕನ್ನಡಕ್ಕೆ ತಂದಿದ್ದು, ಈ ಸಂಕಲನದ ಒಂದು ಕತೆ ನಿಮ್ಮ ಓದಿಗೆ

Read More

ಸಿಸಿಲಿಯ ಹಾಳು ಹಂಪೆ ಈ ಸಿರಕುಸಾ

ಇಲ್ಲೊಂದು ಕ್ಯಾಥೆಡ್ರೆಲ್ ಇದೆ. ಇದರ ಮೂಲ ಗ್ರೀಕ್ ದೇವಾಲಯ. ಕ್ರಿ.ಪೂ. ಐದನೇ ಶತಮಾದಲ್ಲಿ ಕಟ್ಟಿದ ಈ ದೇವಾಲಯದ ಕಂಬಗಳು ಈಗಲೂ ಹಾಗೆಯೇ ಇವೆ. ರೋಮನ್ ಆಳ್ವಿಕೆಯಲ್ಲಿ ರೋಮನ್ ದೇವಾಲಯವಾಗಿತ್ತು. ನಂತರ ಕ್ರೈಸ್ತ ಧರ್ಮ ಬಂದ ನಂತರ ಇದನ್ನು ಚರ್ಚ್ ಆಗಿ ಮಾರ್ಪಾಡು ಮಾಡಲಾಯಿತು. ಆಮೇಲೆ ಅರಬ್ಬರ ಆಳ್ವಿಕೆಯಲ್ಲಿ ಮಸೀದಿ ಮಾಡಲಾಯಿತು. ನಂತರ ಮತ್ತೆ ಇಟಾಲಿಯನ್ ಆಳ್ವಿಕೆ ಬಂದ ನಂತರ ಇದನ್ನು ಪುನಃ ಚರ್ಚ್ ಮಾಡಲಾಯಿತು. ನನಗೆ ತಿಳಿದ ಮಟ್ಟಿಗೆ ಗ್ರೀಕ್ ದೇವಾಲಯದಿಂದ ಹಿಡಿದು ರೋಮನ್ ದೇವಾಲಯವಾಗಿ, ನಂತರ ಚರ್ಚ್ ಆಗಿ, ತದನಂತರ ಮಸೀದಿಯಾಗಿ ಮತ್ತೆ ಚರ್ಚ್ ಆದ ಇತಿಹಾಸವಿರುವ ಸ್ಥಳ ಇದೊಂದೇ! ದೂರದ ಹಸಿರು ಸರಣಿಯಲ್ಲಿ ಗುರುದತ್ ಅಮೃತಾಪುರ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ