Advertisement

Month: May 2024

ಅಂಬಾಭವಾನಿಯ ಆರಾಧನೆಯ ದಿನಗಳು

ಪ್ರತಿ ಶುಕ್ರವಾರ ಜನ ಕಿಕ್ಕಿರಿದು ತುಂಬತೊಡಗಿದರು. ನನಗೋ ಶುಕ್ರವಾರ ಬಂದರೆ ಬೇಸರ ಶುರುವಾಗತೊಡಗಿತು. ನನ್ನ ಮತ್ತು ಅಂಬಾಭವಾನಿಯ ಮಧ್ಯದ ಏಕಾಗ್ರತೆಗೆ ಈ ಶಾಂತಿಭಂಗ ಬಹಳ ಕಿರಿಕಿರಿ ಎನಿಸುತ್ತಿತ್ತು. ಎಲ್ಲರೂ ಪ್ರಶ್ನೆ ಕೇಳುತ್ತಿದ್ದಿಲ್ಲ. ಆ ಮುಗ್ಧ ಮಹಿಳೆಯರು ಕುತೂಹಲದಿಂದ ಬರುತ್ತಿದ್ದರೂ ನನ್ನ ಪೂಜೆ ಧ್ಯಾನ ಮುಗಿಯುವ ವರೆಗೂ ತುಟಿಪಿಟಕ್ಕೆನ್ನದೆ ಕುಳಿತುಕೊಳ್ಳುತ್ತಿದ್ದರು. ಆದರೆ ಅವರೆಲ್ಲ ಬಂದು ಕೂಡುವುದೇ ನನಗೆ ಕಿರಿಕಿರಿ ಎನಿಸುತ್ತಿತ್ತು.
ರಂಜಾನ್ ದರ್ಗಾ ಬರೆಯುವ ಸರಣಿ

Read More

ಶ್ರೀ ತಲಗೇರಿ ಬರೆದ ಈ ದಿನದ ಕವಿತೆ

“ಅಲ್ಲೊಂದು ಹಳೇ ಕಪಾಟಿನಲ್ಲಿ
ಹಿಂದೆ ಎಂದೋ ಅರ್ಧ ಓದಿದ್ದ
ಸಣ್ಣ ಪುಸ್ತಕವುಂಟು ನೋಡು
ಗೆದ್ದಲು ತಿನ್ನದೇ ಉಳಿದ,
ಪುಟಗಳ ನಡುವೆ ಹಾದುಹೋದ
ಸಾಲುಗಳ ನಡುವಿನ
ಖಾಲಿ ಜಾಗದಲಿ ನಿನ್ನ ದೇಹದ
ಗಂಧ ಟಂಕಿಸಬೇಕು, ಬಾ ಇಲ್ಲಿ”- ಶ್ರೀ ತಲಗೇರಿ ಬರೆದ ಈ ದಿನದ ಕವಿತೆ

Read More

ಬದುಕಿನ ವಿನ್ಯಾಸಗಳ ಬಗ್ಗೆ ಓದುಗರನ್ನು ಒಪ್ಪಿಸುವ ಕತೆಗಳು

ಹೊಸ ತಲೆಮಾರಿನವರೇ ಇನ್ನೂ ಗೊಂದಲದಲ್ಲಿರುವಾಗ ಹಿಂದಿನ ತಲೆಮಾರಿನವರೇ ಈ ರೀತಿಯ ಮನೋಧರ್ಮ ತೋರುವುದು, ಹಾಗೆ ತೋರುವ ಮುನ್ನ ಮನುಷ್ಯ ಸಹಜವಾದ ಎಲ್ಲ ಗೊಂದಲ, ಹಿಂಜರಿಕೆಗಳನ್ನು ಅನುಭವಿಸುವುದನ್ನು ಕೂಡ ಕತೆ ತೆರೆದು ತೋರಿಸುತ್ತದೆ. ಈ ಗೊಂದಲ, ಹಿಂಜರಿಕೆಗಳನ್ನು ಹೇಳದೆ ಹೋಗಿದ್ದರೆ ಕತೆ ಕೇವಲ ಆಶಯಪ್ರಧಾನವಾಗಿರುತಿತ್ತು. ಯಾರದೋ, ಯಾವುದೋ ಕತೆಯೆಂದು ಪ್ರಾರಂಭವಾಗಿ, ಇನ್ಯಾವುದೋ, ಯಾರದೋ ಕತೆಯಾಗುವುದು. ಕೊನೆಗೆ ಎಲ್ಲರ ಕತೆಯೂ ಒಂದೇ ಆಗಿರುವುದು- ಈ ಮಾದರಿಯನ್ನು ಮತ್ತೆ ಮತ್ತೆ ಆನಂದ್ ಎಲ್ಲ ಕತೆಗಳಲ್ಲೂ ಬಳಸುತ್ತಾರೆ.
ಆನಂದ್‌ ಗೋಪಾಲ್‌ ಹೊಸ ಕಥಾಸಂಕಲನ “ಆಟಗಾಯಿ”ಗೆ ಕೆ. ಸತ್ಯನಾರಾಯಣ ಬರೆದ ಮುನ್ನುಡಿ

Read More

ಸಚೇತನ ಭಟ್‌ ಅನುವಾದಿಸಿದ ಯಿ ಯುನ್ ಲಿ ಕತೆ “ಗಾಯ”

ಅವಳ ತಲೆಯಲ್ಲಿ ಯಾವತ್ತೋ ಓದಿದ್ದ “ವುಮನ್ ಇನ್ ಲವ್” ಪುಸ್ತಕದ ಸಾಲುಗಳು ಅಚ್ಚಳಿಯದಂತೆ ಕೂತಿದ್ದವು. ಪುಸ್ತಕದಲ್ಲಿ ಹುಡುಗಿಯೊಬ್ಬಳು ಯುದ್ಧಕ್ಕೆ ಹೊರಟಿರುವ ತನ್ನ ಪ್ರಿಯಕರನ ಜೊತೆಗೆ ಮಲಗುವದನ್ನು ನಿರಾಕರಿಸುತ್ತಾಳೆ. ಮುಂದೆ ಯುದ್ಧದಲ್ಲಿ ಅವನು ಸಾವನ್ನು ಪ್ರತಿ ದಿನ ಎದುರು ನೋಡುತ್ತಿರವಾಗ ಹಳೆಯ ನೆನಪಿನಿಂದಾಗಿ ದೇಹದ ಹಸಿವೆಯನ್ನು ತೀರಿಸಿಕೊಳ್ಳುವದು ಮಾತ್ರ ಅವನ ಗುರಿಯಾಗಿಬಿಟ್ಟರೆ ಎನ್ನುವ ಭಯ ಅವಳನ್ನು ಕಾಡಿತ್ತು.
ಸಚೇತನ ಭಟ್‌ ಅನುವಾದಿಸಿದ ಚೈನಾ ಮೂಲದ ಕಥೆಗಾರ್ತಿ ಯಿ ಯುನ್ ಲಿ ಕತೆ “ಗಾಯ”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ