Advertisement

Month: May 2024

ಮತನಿರಪೇಕ್ಷ ಪ್ರಾಜ್ಞ ಸಾಧು ಕರೀಮುದ್ದೀನ್

ತೊಂಬತ್ತು ವರುಷದ ಪ್ರೊ. ಕರಿಮುದ್ದೀನ್ ಅವರು ಅಪಾರ ಜ್ಞಾನ ಭಂಡಾರದ ಮೇರುವಿನಂತೆ ನೆಟ್ಟಗೆ‌ ಕುತೂಹಲದಿಂದ ಕುಳಿತಿದ್ದರು.ಅವರ ಕಣ್ಣುಗಳಲ್ಲಿ ಸಾತ್ವಿಕತೆಯ ಪ್ರಖರತೆಯಿದೆ. ಮಕ್ಕಳಿಗೆ ಮಾನವೀಯತೆಯ ಶಿಕ್ಷಣ ಕೊಡಬೇಕು ಎಂದು ಆಗ್ರಹಿಸುತ್ತಾರೆ ಅವರು. ಮೂಲಭೂತವಾದವನ್ನು ಖಂಡತುಂಡವಾಗಿ ನಿರಾಕರಿಸುವವರು. ಶ್ರೀರಂಗಪಟ್ಟಣದ ಪ್ರಸಿದ್ಧ “ಗಂಜಾಂ”  ಬಡಾವಣೆಯಲ್ಲಿ ತಲೆತಲಾಂತರದ ಒಂದು ಹಳ್ಳಿ ಮನೆಯ ಪುಟ್ಟ ಕೋಣೆಯಲ್ಲಿ, ಅಣ್ಣನ ಮಕ್ಕಳ ನಿಗಾದಲ್ಲಿ ವಾಸ ಮಾಡುತ್ತಿರುವ ಅವರನ್ನು ಕಂಡುಬಂದು ಬರೆದಿದ್ದಾರೆ ಗಿರಿಜಾ ಶಾಸ್ತ್ರಿ

Read More

ಮೂಕ ನಾಯಕನ ದೇಶ ಯಾವುದು

ರಾಘವೇಂದ್ರಾಯ ನಮಃ ಪತ್ರಿಕೆಯಲ್ಲಿ ಬರೆಯಲು ಆರಂಭಿಸಿದ್ದ ನಮಗೆ ಒಂದಿಷ್ಟು ನಯ ವಿನಯ ಪ್ಯಾಂಟಸಿ ರಮ್ಯತೆ ಇತ್ತು. ನಾವಾಗಿ ನಾವು ‘ದಲಿತ’ ರೂಪಿಸಿದಾಗ ಅಗ್ನಿ ಪರ್ವತದಂತೆ ಮನದೊಳಗೆ ಲಾವಾ ಕುದಿಯುತ್ತಿತ್ತು. ಆ ಮಳವಳ್ಳಿ ಪೈಲ್ವಾನನೂ ಬ್ಲೇಡೇಟಿನ ಚಿಕ್ಕಣ್ಣನೂ ನಮ್ಮ ಬೆನ್ನು ತಟ್ಟಿದ್ದರು. ಬೋರ್ಡಿಗೆ ಹಚ್ಚಿದ ಸಾಯಂಕಾಲದ ಒಳಗೆ ತರಾವರಿ ಕೀಳು ಬಯ್ಗಳಗಳು ಅದೇ ದಲಿತ ಪತ್ರಿಕೆಯ ಮೂಲೆಗಳಲ್ಲೆಲ್ಲ ದಾಖಲಾಗುತ್ತಿದ್ದವು. ಅವನ್ನೆಲ್ಲ ಇಲ್ಲಿ ದಾಖಲಿಸಲಾಗದು. ಮೊಗಳ್ಳಿ ಗಣೇಶ್ ಬರೆಯುವ ಸರಣಿ.

Read More

ನೆತ್ತರ ಇತಿಹಾಸ ಕೇಳಿ, ಕೈಬಿಟ್ಟ ಬಳೆಗಳು

ಜಯದ್ವಾರದಿಂದ ಒಳಹೊಕ್ಕು ಲೋಹದ್ವಾರದಿಂದ ಹೊರಬರುವ ವ್ಯವಸ್ಥೆಯಿರುವ ಈ ಕೋಟೆ ಅನ್ನೋ ಮತ್ತೊಂದು ಜಗತ್ತನ್ನು ಅನುಭವಿಸೋದಕ್ಕೆ ಅದೆಷ್ಟು ಪುನರ್ಭೇಟಿಗಳು ಬೇಕೋ ಅಂದುಕೊಳ್ಳುತ್ತಾ, ಇತಿಹಾಸದೊಳಗಿನ ಯಾನದಾನಂದದಿಂದ ಹಗುರವಾಗಿದ್ದ ಮೈಮನಸು ಹೊತ್ತು ಕಲ್ಲು ಹಾಸಿನ ಗುಂಟ ಹೆಜ್ಜೆಯಿಡುತ್ತಾ ಹೊರ ಬರುತ್ತಿದ್ದೆ. ತಕ್ಷಣ ನನ್ನ ಬಲಗೈ ತುದಿಗಣ್ಣಿಗೆ ಕಂಡದ್ದು ಅಚ್ಚಕೆಂಪಿನ ಹದಿನೈದು ಜೊತೆ ಹಸ್ತಗಳ ಗುರುತು ಗೋಡೆಯ ಮೇಲೆ!
‘ಕಂಡಷ್ಟೂ ಪ್ರಪಂಚ’ ಪ್ರವಾಸ ಅಂಕಣದಲ್ಲಿ ಜೋಧ್‌ಪುರ ಪ್ರವಾಸದ ಕುರಿತು ಬರೆದಿದ್ದಾರೆ ಅಂಜಲಿ ರಾಮಣ್ಣ

Read More

ಕನ್ನಡ ಕಾವ್ಯಮಾಲೆಯ ಕುಸುಮ: ‘ಮರವಾಗದವರು’

“ಆದರೂ ನೀವು
ಮರವಾಗಲಿಲ್ಲ ಕುಂತ ಕಡೆಯಲ್ಲಿ
ಸಿಡಿಲಫಲ ಬೇಕೆಂದು
ಶಿಲೆಯಾಗಲಿಲ್ಲ ನಿಂತಕಡೆಯಲ್ಲಿ
ಬಯಲುಮನೆ ಬೇಕೆಂದು
ಸಿಗಿಹಾಕಿಕೊಂಡಿಲ್ಲ ಅಂದ ನುಡಿಯಲ್ಲಿ
ಬರಿ ತಿರುಳು ಬೇಕೆಂದು”- ಕನ್ನಡ ಕಾವ್ಯಮಾಲೆಯ ಕುಸುಮ: ಎಚ್.ಎಸ್.ಶಿವಪ್ರಕಾಶರ ‘ಮರವಾಗದವರು’ ಕವಿತೆ

Read More

ಅಮ್ಮ , ಆಸ್ಪತ್ರೆ ಮತ್ತು ಮೇಟ್ರಾನ್

ಆಸ್ಪತ್ರೆಗೆ ಬಂದ ಕೆಲವು ರೋಗಿಗಳ ಸಂಬಂಧಿಕರು ಮಾತ್ರ ಇಲ್ಲಿ ನಿಂತು ತಮ್ಮ ಕಡೆಯವರು ಬೇಗ ಗುಣಮುಖರಾಗಲೆಂದು ಪ್ರಾರ್ಥನೆ ಸಲ್ಲಿಸುತ್ತಿದ್ದರಾದರೂ ಶಿವ ಮಾತ್ರ ಕಿವುಡನಂತೆ ನಿಮೀಲನೇತ್ರನಾಗಿ ನಿಂತಿರುತ್ತಿದ್ದ. ಶಿವನನ್ನು ಸುತ್ತುವರಿದು ಬೆಳೆದಿದ್ದ ಹಸಿರ ಬಳ್ಳಿಗಳು ಆಗ ಶಿವನ ಹಿನ್ನಲೆಯ ಸೊಬಗನ್ನು ಇಮ್ಮಡಿಸಿದ್ದವು. ಈಗ ಅಲ್ಲಿ ಬಳ್ಳಿಯ ಬದಲು ಗೋಡೆಯ ದೇವಸ್ಥಾನ ತಲೆಯೆತ್ತಿದೆ. ಆಗಿನ ಹಸಿರ ವೈಭವವಿಲ್ಲದ ಶಿವ ಮತ್ತು ಅವನ ತಲೆಯ ಮೇಲಿನ ಗಂಗೆಯರು ಬಳಲಿದವರಂತೆ ಕಾಣುತ್ತಾರೆ. ಯಾರೋ ಕಲಾವಿದ ಶಿವನಿಗೆ ಪೊಲೀಸ್ ಮೀಸೆ ಮಾಡಿದ್ದು ಮಾತ್ರ ಆಗಿನಂತೆ ಈಗಲೂ ತಮಾಷೆಯಾಗಿ ಕಾಣುತ್ತದೆ.
ಡಾ. ಎಚ್.ಎಸ್. ಸತ್ಯನಾರಾಯಣ ಅವರ ಹೊಸ ಪ್ರಬಂಧ ಸಂಕಲನ “ಪನ್ನೇರಳೆ” ಯಿಂದ ಒಂದು ಬರಹ ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ