Advertisement

Month: May 2024

ಸಮತಾವಾದಿ ಪ್ರಧಾನಿಯ ವಿಲಾಯತಿ ದಿನಗಳು

ನೆಹರೂರ ಆಗಿನ ಜೀವನದೃಷ್ಟಿ ದ್ವಂದ್ವಗಳಿಂದ ಕೂಡಿತ್ತು. ಓದು, ಸಹವಾಸ, ಉಪನ್ಯಾಸ, ಸಂಪರ್ಕಗಳು ತಾತ್ವಿಕ ಪ್ರಜ್ಞೆಯನ್ನು ಸುಪ್ತವಾಗಿ ಪ್ರಭಾವಿಸಿದಂತೆ ಕಾಣಿಸುತ್ತಿದ್ದರೂ ಹೆಚ್ಚಿನ ಸಮಯ “ಆ ಕ್ಷಣದ ಸುಖ ನೆಮ್ಮದಿಯ” ನವಿರಾದ ಜೀವನ ಹಿತಕರ ಅನುಭವ ಹುಡುಕಾಟದಲ್ಲಿ ಮುಳುಗಿತ್ತು. ಹತ್ತೊಂಭತ್ತನೆಯ ಶತಮಾನದ ಮುಕ್ತಾಯಕ್ಕಿಂತ ಮೊದಲು ಬರೆಯುತ್ತಿದ್ದ ಆಸ್ಕರ್ ವೈಲ್ಡ್, ವಾಟರ್ ಪೇಟರ್ ರಿಂದ ಜನಪ್ರಿಯವಾದ ನವಿರು ಬದುಕಿನ ಹಂಬಲ ಅವರನ್ನು ಸೋಂಕಿತ್ತು. ರಾಷ್ಟ್ರೀಯತೆ, ಸ್ವಾತಂತ್ಯ್ರ ಸಂಗ್ರಾಮದ ಒಲವು ಸೆಳೆತಗಳು ಆರಂಭವಾಗಿದ್ದವು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ದಿವಂಗತ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಕುರಿತ ಮರವಂತೆ ಬರಹ ಇಲ್ಲಿದೆ.

Read More

ಸೋವಿಯತ್ ದೇಶದಲ್ಲಿ ಮಿಂಚಿದ ನಮ್ಮ ಧ್ವಜ

ತಾಷ್ಕೆಂಟ್ ವಿಮಾನ ನಿಲ್ದಾಣದಿಂದ ಹೊರಗೆ ಬಂದ ಕೂಡಲೇ ನನಗೆ ಆಶ್ಚರ್ಯ ಕಾದಿತ್ತು. ಎಲ್ಲೆಂದರಲ್ಲಿ ಭಾರತದ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿದ್ದವು. ಬೀದಿಗಳು ನಮ್ಮ ಧ್ವಜದಿಂದ ಕೂಡಿದ ಪರಪರಿಗಳಿಂದ ಅಲಂಕೃತವಾಗಿದ್ದವು. ಎಲ್ಲೆಂದರಲ್ಲಿ ನಮ್ಮ ರವಿಶಂಕರ್ ಸಿತಾರ್ ಮತ್ತು ಬಿಸ್ಮಿಲ್ಲಾ ಖಾನ್ ಶಹನಾಯಿ ನಾದಮಾಧುರ್ಯಕ್ಕೆ ಕಿವಿಗಳು ತೆರೆದುಕೊಳ್ಳತೊಡಗಿದವು. ನಮ್ಮ ಗೈಡ್ ನಮ್ಮನ್ನು ಪಂಚತಾರಾ “ಹೋಟೆಲ್ ತಾಷ್ಕೆಂಟ್”ಗೆ ಒಯ್ದರು. ಅಲ್ಲಿಯೆ ರಿಷಪ್ಷನಿಸ್ಟ್ “ಇಂಜಿಷ್ಕಿ ದ್ರುಜಿಯೆ” (ಇಂಡಿಯನ್ ಫ್ರೆಂಡ್ಸ್) ಎಂದು ಖುಷಿಯಿಂದ ಬರಮಾಡಿಕೊಂಡರು. ಭಾರತದ ಬಗ್ಗೆ ಸೋವಿಯತ್ ದೇಶದವರಿಗೆ ಇದ್ದ ಅಭಿಮಾನ, ಪ್ರೀತಿ, ಗೌರವ ಕಂಡು ಆಶ್ಚರ್ಯಚಕಿತನಾದೆ.
ರಂಜಾನ್‌ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ 43ನೇ ಕಂತು ಇಲ್ಲಿದೆ.

Read More

ಅಕ್ಷರ ಎಚ್.ಎಚ್.‌ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ಅಕ್ಷರ ಎಚ್.ಎಚ್.‌ ಅಕ್ಷರ ಬೆಂಗಳೂರಿನವರಾಗಿದ್ದು, ಡೆಲ್ಲಿ ಪಬ್ಲಿಕ್‌ ಶಾಲೆಯಲ್ಲಿ ೯ನೇ ತರಗತಿಯಲ್ಲಿ ಓದುತ್ತಿದ್ದಾರೆ. ಓದುವುದು, ಛಾಯಾಗ್ರಹಣ ಹಾಗೂ ಬ್ಯಾಡ್ಮಿಂಟನ್‌ ಇವರ ಹವ್ಯಾಸಗಳು.  ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಲಿಂಗರಾಜ ಸೊಟ್ಟಪ್ಪನವರ ಬರೆದ ಈ ದಿನದ ಕವಿತೆ

“ಹತ್ತು ಸಾಲಿನ ಪ್ರೇಮ ಪತ್ರವೆಂಬ ಗ್ರೀಟಿಂಗು
ಹಿಡಿದು ಅವಳ ಮುಂದೆ ನಿಂತಿದ್ದೆ
ಬಹುಶಃ ಮಂಡೆಯೂರಿದ್ದೆ
ಏನು ಹೇಳಿದೆನೊ ಇಲ್ಲವೋ.. ಸ್ಮೃತಿ ಅಷ್ಟೇ
ಯಾಮಾರಿದ ಮನಸ ತಹಬಂದಿಗೆ ತರಲು
ಹತ್ತೂರ ಗೆಳೆಯರು ಪಟ್ಟ ಹರಸಾಹಸವೊಂದು ಹರಿಕಥೆ”- ಲಿಂಗರಾಜ ಸೊಟ್ಟಪ್ಪನವರ ಬರೆದ ಈ ದಿನದ ಕವಿತೆ

Read More

ತೇರು, ಅಲಾಯಿ ದೇವರು ಮತ್ತು ಚವಂಗಿ ಕಲ್ಲು

ರಂಜಾನ್ ಹಬ್ಬದ ದಿನ ಅಮ್ಮ ನನ್ನನ್ನು ಬೆಳಿಗ್ಗೆಯೇ ಎಬ್ಬಿಸಿ ಗುಡಿಸಲಿನ ನೆರಕೆಯ ಪುಟ್ಟ ಬಚ್ಚಲಲ್ಲಿ ಎಂಟಾಣೆ ಕ್ಲಿನಿಕ್ ಪ್ಲಸ್ ಶಾಂಪೂ ಎಂಬ ಲಕ್ಷುರಿ ಬೆರೆಸಿ ಸ್ನಾನ ಮಾಡಿಸಿ, ಸಕ್ಕರೆ ರೇಟು ಜಾಸ್ತಿ ಎಂದು ಬೆಲ್ಲ ಹಾಕಿದ ಶಾವಿಗೆ ಖೀರು ಮಾಡಿ ಒಂದು ಪುಟ್ಟ ಟಿಫನ್ ಕ್ಯಾರಿಯರಲ್ಲಿ ಇಡೀ ಓಣಿಗೆಲ್ಲಾ ತುಂಬಿಕೊಡುತ್ತಿದ್ದಳು. ಚಿಕನ್ ಕೊಳ್ಳಲು ದುಡ್ಡಿಲ್ಲದೆ ಇದ್ದರೂ ಆಲೂಗಡ್ಡೆ ಸಾರನ್ನೇ ಮಾಡಿ ಅದನ್ನೇ ಚಿಕನ್ ಎಂದು ಅಮ್ಮ ನೂರಿ ನಂಬಿಸಬಲ್ಲವಳಾಗಿದ್ದಳು. ನಮ್ಮ ಓಣಿಯ ಛಲವಾದಿಗಳಾಗಿದ್ದ ರೂಪ, ರೇಖಿ, ಪರುಸ, ಕೆಂಚತ್ತಿ, ಸುಶೀಲತ್ತಿ, ಹಾಲಪ್ಪ ಮಾಮ ಎಲ್ಲರೂ ಶಾವಿಗೆ ಖೀರಿಗಾಗಿ ಕಾಯುತ್ತಿದ್ದರು.
ದಾದಾಪೀರ್‌ ಜೈಮನ್‌ ಬರೆಯುವ ಜಂಕ್ಷನ್‌ ಪಾಯಿಂಟ್‌ ಅಂಕಣ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ