Advertisement

Month: May 2024

ಬೇರು ಮತ್ತು ಬಿಳಲು…

ಒಮ್ಮೆ ದೊಡ್ಡಮ್ಮನಿಗೆ ಅಪರಾತ್ರಿಯಲ್ಲಿ ಎಚ್ಚರ ತಪ್ಪಿಬಿಟ್ಟಿತ್ತು. ಮನೆಯಿಡೀ ಗದ್ದಲ… ದೊಡ್ಡಪ್ಪನ ಜೋರು ಅಳು… ಮನೆಮಂದಿಯೂ ಚಡಪಡಿಸುತ್ತಿದ್ದಾರೆ. ಐದಾರು ವರ್ಷದ ನನಗೆ ಏನು ಮಾಡಲೂ ತಿಳಿಯುತ್ತಿಲ್ಲ. ಕಾಲುಗಳು ನಡುಗುತ್ತಿವೆ. ಹೊಟ್ಟೆ ಚುಳ್ ಎನ್ನುತ್ತಿದೆ. ಅಳು ಗಂಟಲಲ್ಲೆ ಸಿಕ್ಕಿ ಹಾಕಿಕೊಂಡಂಥ ಅನುಭವ. ವಿಪರೀತ ಭಯದಿಂದ ಒಳಕ್ಕೆ ಹೊರಕ್ಕೆ ಕುಣಿಯುತ್ತಾ ಕೊನೆಗೆ ಗಣಿಗೆಯ ಸಂದಿಯಲ್ಲಿ ಹೋಗಿ ನಿಂತಿದ್ದೆ. ಎಷ್ಟು ಹೊತ್ತು ನಿಂತಿದ್ದೆನೋ.. ಮುಂದೆ ಏನಾಯಿತೋ.. ಒಂದೂ ನೆನಪಿಲ್ಲ. ಅಂದು ಕೆಂಪು ಫ್ರಾಕ್ ತೊಟ್ಟಿದ್ದೆ. ಎಲ್ಲ ಅಸ್ಪಷ್ಟ ನೆನಪುಗಳು.
ಇತ್ತೀಚೆಗೆ ಬಿಡುಗಡೆಯಾದ ಆಶಾ ಜಗದೀಶ್‌ ಅವರ “ಕಾಣೆಯಾದವರು” ಲಲಿತ ಪ್ರಬಂಧಗಳ ಸಂಕಲನದ ಒಂದು ಪ್ರಬಂಧ ನಿಮ್ಮ ಓದಿಗೆ

Read More

ಪೂರ್ಣಿಮಾ ಮಾಳಗಿಮನಿ ಬರೆದ ಈ ದಿನದ ಕವಿತೆ

“ವಿಂಡ್ ಶೀಲ್ಡ್ ಮೇಲೆ ಅಂಟಿಕೊಂಡೇ ಇರುವ
ನೆನ್ನೆ ಬಿದ್ದ ಚೆರಿ ಬ್ಲಾಸಮ್ ಹೂವುಗಳ,
ಹೊತ್ತಲ್ಲದ ಹೊತ್ತಲ್ಲಿ ಬಿದ್ದ ಮಳೆ ಹನಿಗಳ
ನಿಷ್ಟೆಯನ್ನು ಬಯಸುವುದಿಲ್ಲ
ಈ ಕಪ್ಪು ರಸ್ತೆಗಳು;”- ಪೂರ್ಣಿಮಾ ಮಾಳಗಿಮನಿ ಬರೆದ ಈ ದಿನದ ಕವಿತೆ

Read More

ಅಣ್ಣನೆಂಬ ಅಕ್ಕರೆಯ ಅಪ್ಪ….

ಈಗಿನಂತೆ ಬೀದಿ ದೀಪಗಳು, ಕೈಯಲ್ಲೊಂದು, ಜೇಬಲ್ಲೊಂದು ಟಾರ್ಚು ಇಲ್ಲದ ದಿನಗಳವು. ಅಣ್ಣ ನನ್ನ ಕೈಯನ್ನು ಹಿಡಿದುಕೊಂಡೆ ಮೆಲ್ಲಗೆ ಸಾಗತೊಡಗಿದ. ನನಗೆ ಇದ್ದ ಅತಿ ಮುಖ್ಯ ಭಯವೆಂದರೆ ಹಾವಿನದ್ದು. ಒಂದೆರಡು ದಿನಗಳ ಹಿಂದೆ ಎಮ್ಮೆ ಕಾಯಲು ಹೋದಾಗ ಹನುಮಪ್ಪನ ನಾಲಿನಲ್ಲಿ ನನ್ನ ಕಾಲಿನ ನಡುವೆ ಸರ ಸರನೆ ಹಾದು ಹೋಗಿ ಹೆಡೆ ಎತ್ತಿ ಆಡಿದ್ದ “ನಾಗರಾಜ”ನನ್ನು ನೆನೆದು ನಾನು ಇನ್ನಷ್ಟು ಭಯಭೀತನಾಗಿದ್ದೆ, ಮತ್ತು ಈಗ ಹೆಚ್ಚೇ ಎನ್ನುವಷ್ಟು ಜೋರಾಗಿ ಅಳತೊಡಗಿದೆ. ನನ್ನನ್ನು ಸುಮ್ಮನಾಗಿಸಲು ಹರ ಸಾಹಸ ಪಟ್ಟ ಅಣ್ಣ, ನನ್ನ ಅಳುವಿಗೆ ನೈಜ ಕಾರಣ ತಿಳಿದುಕೊಂಡ.
ಸಾವನ್ ಕೆ ಸಿಂಧನೂರು ಬರಹ

Read More

ನಮ್ಮಲ್ಲೆ ಅದೆಷ್ಟು ನಂದನದ ತುಣುಕುಗಳು!

ಹಿಮಾಲಯದ ಒಳ ಸುಳಿಗಳಲ್ಲಿ ಇರುವ ದೇವಸರೋವರಗಳದ್ದೇ ಒಂದು ಲೋಕ. ಕೈಲಾಸದ ಮಾನಸಸರೋವರ, ಲೇ ಲಡಾಕ್‌ನ ಪಾಂಗಾಂಗ್‌, ಚಂದ್ರತಾಲ್‌, ನಾಕೋ, ಟ್ರೆಕ್ಕಿಂಗ್‌ ಮಾಡಿ ಮಾತ್ರ ತಲುಪಬಹುದಾದ ಹೆಸರೇ ಇಲ್ಲದ ಇನ್ನೂ ಅನೇಕ ಸರೋವರಗಳಿವೆ. ಮನುಷ್ಯ ಜಗತ್ತು ಕೊನೆಗೊಳ್ಳುತ್ತಾ ಅದು ದೇವಜಗತ್ತಾಗುತ್ತದೆ. ಅದೆಲ್ಲಾ ದೇವಸಂಚಾರಕ್ಕೆ ಮಾಡಿದ ಜಾಗಗಳೇನೋ ಅನಿಸುತ್ತದೆ. ಈ ಸುಂದರ ಸರೋವರಗಳನ್ನು ಆಸ್ವಾದಿಸಲು ಸೂರ್ಯನ ಸಹಕಾರ ಬೇಕು.
‘ದೇವಸನ್ನಿಧಿ’ ಅಂಕಣದಲ್ಲಿ ತಾವು ಕಂಡ ಸರೋವರಗಳ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ

Read More

ಗೋಪಾಲಕೃಷ್ಣ ಅಡಿಗರ ಕವಿತೆ “ಕಟ್ಟುವೆವು ನಾವು” ಕುರಿತು ಡಾ. ಗೀತಾ ವಸಂತ ಮಾತುಗಳು

ಗೋಪಾಲಕೃಷ್ಣ ಅಡಿಗರ ಕವಿತೆ “ಕಟ್ಟುವೆವು ನಾವು” ಕುರಿತು ಡಾ. ಗೀತಾ ವಸಂತ ಮಾತುಗಳು

ಕೃಪೆ: ಡಾ. ಗೀತಾ ವಸಂತ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ