Advertisement

Month: May 2024

ಎ. ಬಿ. ಪಚ್ಚು ಬರೆದ ಈ ಭಾನುವಾರದ ಕತೆ

ಆ ರಾತ್ರಿ ಯಕ್ಷಗಾನ ಎಲ್ಲಾ ನೋಡಿ ಮುಗಿದು ಬೆಳಿಗ್ಗೆ ಮನೆಗೆ ತಲುಪಿದೆ. ಕಣ್ಣೀರಿನ ಹೊರತು ಆ ದಿನ ಸಮಜಾಯಿಷಿ ಕೊಡಲು ನನ್ನಲ್ಲಿ ಯಾವ ಮಾತುಗಳೂ ಇರಲಿಲ್ಲ. ನಿಜ ನಾನೇನು ತಪ್ಪು ಮಾಡಿರಲಿಲ್ಲ, ಆದರೆ ಯಾಕೋ ನನಗೆ ಅಮ್ಮನನ್ನು ಒಬ್ಬಳನ್ನೇ ಬಿಟ್ಟು ಹೋದ ಆ ತಪ್ಪಿತಸ್ಥ ಭಾವ ಆ ದಿನದಿಂದ ಬಹಳವಾಗಿ ಕಾಡಿತು ಮಹೇಶ. ಆ ನೋವಿನಿಂದಾಗಿ ಆ ದಿನದಿಂದ ನಾನು ಎಂದಿಗೂ ಯಕ್ಷಗಾನದತ್ತ ಕಣ್ಣು ಹಾಯಿಸಲೇ ಇಲ್ಲ.
ಎ.ಬಿ. ಪಚ್ಚು ಬರೆದ ಕತೆ “ಮೈಸಾಸುರ”

Read More

ಸಂಗೀತ ಸಂಜೆಗಳ ಇಬ್ಬಗೆಯ ಸುಧೆ

ಆಸ್ಟ್ರೇಲಿಯಾದ ಎಂದೆಂದಿಗೂ ತಿಳಿಯಾಗಿಲ್ಲದ ಇಬ್ಬಗೆಯೆಂದರೆ ಆಸ್ಟ್ರೇಲಿಯನ್ ಅಬೊರಿಜಿನಲ್ ಜನಜೀವನದ ಮುಖ್ಯಭಾಗವಾದ ಸಂಗೀತ ಮತ್ತು ಆಸ್ಟ್ರೇಲಿಯಕ್ಕೆ ಬರಮಾಡಿಕೊಂಡ ಪಾಶ್ಚಾತ್ಯ ಸಂಗೀತ. ಅಬೊರಿಜಿನಲ್ ಜನರನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ವಸಾಹತುಶಾಹಿಗಳು ಪ್ರಯತ್ನಿಸಿದರೂ ಇಪ್ಪತ್ತನೇ ಶತಮಾನದಲ್ಲಿ ಅಬೊರಿಜಿನಲ್ ಸಂಗೀತ, ನೃತ್ಯ ಮತ್ತು ಚಿತ್ರಕಲೆಗೆ ಗಮನ ಕೊಟ್ಟು, ಅವುಗಳಲ್ಲಿರುವ ವಿಶೇಷಣಗಳನ್ನು ಗುರುತಿಸಿದರು.
ಡಾ. ವಿನತೆ ಶರ್ಮ ಅಂಕಣ

Read More

ನನ್ನ ನೆಲೆಯಾದರೂ ಯಾವುದು?

ಸುಕನ್ಯಾಳಿಗೆ ಅರವಿಂದನ ಇಂಥ ಮಾತುಗಳು, ನಿರ್ಲಿಪ್ತ ಸ್ಥಿತಿ ಕೆಲವೊಮ್ಮೆ ಬಹಳ ರೇಜಿಗೆ ತರಿಸಿಬಿಡುತ್ತಿತ್ತು. ಸಮಸ್ಯೆಗಳು ಬರುವಾಗಲೇ ಪರಿಹಾರವನ್ನೂ ತಮ್ಮ ಜತೆಗೇ ತಂದಿರುತ್ತವೆ ಎಂಬುದು ಅವನ ಯಾವತ್ತಿನ ನಂಬಿಕೆ. ಪರಿಹಾರ ಅನ್ನೋದು ಇಲ್ಲದಿದ್ದರೆ ಅದನ್ನು ಸಮಸ್ಯೆಯೇ ಅಲ್ಲ ಅನ್ನುತ್ತಿದ್ದ, ಆತ. ‘ಅನ್ನ ಮಾಡೊಕೆ ಅಕ್ಕಿ ಇಲ್ಲ ಅಂದರೆ ಅಂಗಡೀಗೆ ಹೋಗಿ ಅಕ್ಕಿ ತರಬೇಕು. ಅಕ್ಕಿಯೇ ಸಿಗದೇ ಇರೋ ಸಂದರ್ಭ ಬಂದಲ್ಲಿ ಅನ್ನ ಮಾಡುವ ಯೋಚನೆಯನ್ನೇ ಬಿಟ್ಟುಬಿಡಬೇಕು. ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”ನ ನಾಲ್ಕನೆಯ ಕಂತು ನಿಮ್ಮ ಓದಿಗಾಗಿ

Read More

ಕಾವಿಧಾರಿಗಳೊಂದಿಗೆ ಕಳೆದ ಕಾಲದ ಮೆಲುಕುಗಳು…

ಜಿಪ್ಸಿಯಂತಿದ್ದ ಆತ ಎಲ್ಲರೊಡನೆ ಚಕ್ಕಲ್ಮಟ್ಟ್ಕೆ ಹಾಕಿಕೊಂಡು ಊಟ ಮಾಡುತ್ತಿದ್ದರು. ನನ್ನ ಕ್ಯಾಮೆರ ಲೆನ್ಸ್ ಆತನನ್ನು ನೋಡುತ್ತಿದ್ದದ್ದು ಗಮನಕ್ಕೆ ಬಂದೊಡನೆ ಒಂದು ನಗು ಒಂದು ಜ್ಞಾನ ಮುದ್ರೆಯನ್ನು ನನ್ನೆಡೆಗೆ ಬಿಸ್ಹಾಕಿದರು. ಈ ಮೇಳದ ಜಾಗದಲ್ಲಿ ಸ್ವಲ್ಪ ಹಳೇ ಹುಲಿಯಂತೆಯೇ ಕಂಡರವರು. ಕ್ಯಾಮೆರ ಮತ್ತು ಮೀಡಿಯಾವನ್ನು ಆಕರ್ಷಿಸಲು ಬೇಕಾದ ಹಾವಭಾವ ಅವರಲ್ಲಿತ್ತು ಅನ್ನಿಸಿತು.. ಮಾತು ಬೆಳೀತಾ ಬೆಳೀತಾ ಗೊತ್ತಾಯ್ತು ಆತ ಅಮೆರಿಕೆಯ ಅಲೆಮಾರಿ ಅಂತ. ಹಾಡು ನಟನೆ ಪ್ಯಾಷನ್. ಅದರಲ್ಲೇ ಜೀವನ ಕಂಡುಕೊಳ್ಳಲು ಸಾಕಷ್ಟು ಪರಿಶ್ರಮ ಹಾಕಿದರೂ ಉಹುಂ, ಯಶಸ್ಸು ಒಲ್ಲೆ ಅಂತ ಹಠ ಹಿಡಿದಿತ್ತು. ಅಂಜಲಿ ರಾಮಣ್ಣ ಬರಹ

Read More

ಕಣ್ಣೊರಿಸಿಕೊಂಡ ಪುಟ್ಟ ದೇವರು…

ತರಗತಿಯಿಂದ ತರಗತಿಗೆ ಹಾರಿ ಅದೇ ಶಾಲೆಯಲ್ಲಿ ಕೂತವರಿಗೆ ಒಂದು ರೂಮಿನ ಬದಲಾವಣೆ ಅಷ್ಟೇ.. ತರಗತಿಯಿಂದ ಉಸಿರು ಬಿಗಿ ಹಿಡಿದು ಹಾರಿ ಜಿಗಿದು ಮತ್ತೆಲ್ಲೊ ಮತ್ಯಾವ ಶಾಲೆ, ಕಾಲೇಜಿನ ರೂಮಿನಲ್ಲೊ ಇಲ್ಲಿ ಕಿತ್ತುಕೊಂಡು ಬಂದ ಓದಿನ ಗಿಡವನ್ನು ಅಲ್ಲಿ ನೆಟ್ಟು ಪೋಷಿಸಬೇಕು. ಕಿತ್ತು ನಡೆಯುವ ಹೊತ್ತಲ್ಲಿ ಗಂಟಲಿಗೆ ಬಂದು ಆತು ಕೂತುಕೊಳ್ಳುತ್ತಲ್ಲಾ ಆ ದುಃಖ ಮತ್ತು ಅದನ್ನು ನುಂಗಿ ಸಾಯಿಸಿ ಸಾಯಿಸಿ ನಗಬೇಕಲ್ಲ ಆ ಸಂಕಟ, ಮತ್ತು ಪಿಳಿಪಿಳಿ ಕಣ್ಣುಗಳಿಂದ ಬಂದೇ ಬಿಡುತ್ತಲ್ಲ ಆ ಪವಿತ್ರ ಕಣ್ಣೀರು.. ಓ ಎಂತ ಪಾಪಿಷ್ಟ ಗಳಿಗೆ ಅದು.
ಸದಾಶಿವ ಸೊರಟೂರು ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ