Advertisement

Month: May 2024

ವಿಭಿನ್ನ ಲೋಕಗಳಲ್ಲಿ ಸಂಚರಿಸುವ ಕವಿತೆಗಳು: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ಸೂಮೆತ್ಸ್‌ರ ಅಡಕಮಾತಿನ, ನಿಖರವಾದ ಕವನ ರಚಿಸುವ ವಿಧಾನವನ್ನು ಗಮನಿಸಿ, ತ್ರೀನ್ ಸೂಮೆತ್ಸ್‌ರು ಒಂದು ತರಹದ ಕರಾಳವಾದ ‘ಸೈಕೊಗ್ರಾಫಿಕ್’ (psychographic) ಬರವಣಿಗೆ ಶೈಲಿಯನ್ನು ಹೊಂದಿದ್ದಾರೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಅವರದ್ದು ಮಿತಭಾಷೆಯ ಕಾವ್ಯವಾದ್ದರಿಂದ ಅವರ ಕಾವ್ಯವನ್ನು ಸಾಂಕೇತಿಕ ಭಾಷೆಯಿಂದ ಸಾಮಾನ್ಯ ಭಾಷೆಗೆ ತಂದು ಓದಬೇಕಾಗುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಎಸ್ಟೋನಿಯಾ ದೇಶದ ಕವಿ ತ್ರೀನ್ ಸೂಮೆತ್ಸ್ (Triin Soomets) ಅವರ ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ

Read More

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

2042 ಏಪ್ರಿಲ್ ಏಳನೇ ತಾರೀಕು. ಅಮ್ಮನನ್ನು ಕಳಿಸಿ ಒಂದು ವಾರವಾಗಿತ್ತು. ಹಳೆಯ ದೃಶ್ಯದ ಪುನರಾವರ್ತನೆ ಆಯಿತು. ಒಂದು ಬದಲಾವಣೆ ಎಂದರೆ ಅಮ್ಮ ಮನೆಯಲ್ಲಿ ಇರಲಿಲ್ಲ. ಬಂದವರು ಫಾರ್ಮಾಲಿಟಿ ಮುಗಿಸಿ ಚೆಕ್ ಹಾಗೂ ಸೂಟ್ಕೇಸ್‌ನೊಂದಿಗೆ ಅವನಿಯನ್ನು ಕರೆದುಕೊಂಡು ವಾಹನದಲ್ಲಿ ಹೊರಟರು. ಹೊರಡುವ ಮುನ್ನ ಅವನಿ ಕೇಳಿದಳು “ಅಮ್ಮನನ್ನು ಕಳಿಸುವೆ ಎಂದಲ್ಲವೇ ನನ್ನ ಸಹಿ ಪಡೆದದ್ದು… ಈ ಮಸಲತ್ತು ತಿಳಿದಿರಲಿಲ್ಲ, ಅದಕ್ಕೇನಾ ಎರಡು ಪೇಪರ್‌ಗೆ ಸಹಿ ಹಾಕಿಸಿಕೊಂಡದ್ದು… ಸರಿ, ದೇವರು ನಿಮಗೆ ಒಳ್ಳೆಯದು ಮಾಡಲಿ. ಗುಡ್ ಬೈ.” ಎಂದು ಹೊರಟು ಹೋದಳು.
ವಸಂತಕುಮಾರ್‌ ಕಲ್ಯಾಣಿ ಬರೆದ ಕತೆ “ಹಳೆ ಪಾತ್ರೆ… ಹಳೆ ಕಬ್ಬಿಣ…” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಶಿವಶಿವ ಎಂದರೆ ಭಯವಿಲ್ಲ..: ಕೆ.ಎನ್.‌ ಲಾವಣ್ಯ ಪ್ರಭಾ ಬರಹ

ನೂತನ ಅವರ ಸುಂದರ ರೋಮಾಂಚನದ ಅನುಭವಗಳ ನಡುವೆಯೇ ಚಾರ್ ಧಾಮ್ ಪ್ರವಾಸದ ಗಿರಿಶಿಖರ ಆಳ ಕಣಿವೆಗಳ ಪ್ರಪಾತದ ರೌದ್ರತೆಯನ್ನೂ ಕಾಣಿಸುತ್ತಾರೆ. ಅವರ ಕನಸುಗಳೊಂದಿಗೆ ಮುಂದೆ ಸಂಭವಿಸಬಹುದಾದ ಘೋರ ಅನುಭವಗಳು ಬೆಸೆದುಕೊಳ್ಳುತ್ತವೆ. ಲಕ್ಷಾಂತರ ಪ್ರವಾಸಿಗರ ಕಾರಣದಿಂದ ಸ್ಥಳದ ನೈರ್ಮಲ್ಯ ಕಾಪಾಡುವ ಜರೂರತ್ತನ್ನು ಮನಗಾಣಿಸುತ್ತಾರೆ. ಅಲ್ಲಿನವರ ಬದುಕು ಅತ್ಯಂತ ದುರ್ಭರವಾದರೂ ಬಹು ಸರಳ. ಆದರೆ ಪ್ರವಾಸಿಗರ ದಟ್ಟಣೆಯಿಂದಾಗಿ ಉಂಟಾಗುವ ಮಾಲಿನ್ಯತೆ ಸ್ಥಳೀಯ ಪರಿಸರದ ಹಾನಿಗೆ ಮಾರಕವಾಗಬಹುದು.
ನೂತನ ದೋಶೆಟ್ಟಿ ಪ್ರವಾಸ ಕಥನ “ಸ್ವರ್ಗದೊಂದಿಗೆ ಅನುಸಂಧಾನ”ದ ಕುರಿತು ಕೆ.ಎನ್.‌ ಲಾವಣ್ಯ ಪ್ರಭಾ ಬರಹ

Read More

ರಾಜು ಹೆಗಡೆ ಬರೆದ ಈ ದಿನದ ಕವಿತೆ

“ಈ ಮಳೆಗಾಲ ಮಜಾ ಇದೆ
ಮೋಡ ಕವಿದು ಇನ್ನೇನು
ದಿನವಿಡಿ ಭರಭರ ಹೊಯ್ಯುತ್ತದೆ
ಎಂದುಕೊಂಡರೆ
ಛಕ್ಕನೆ ಮಾಯವಾಗಿ
ಬಿಸಿಲು
ಗಿಡಮರಗಳು ಉಸಿರಾಡತೊಡಗಿದಾಗ
ಮತ್ತೆ ಮೋಡ.

ನನ್ನ ಕವಿತೆಗೂ ಅದಕ್ಕೂ
ಯಾವ ಸಂಬಂಧವಿಲ್ಲ, ಬಿಡಿ!”- ರಾಜು ಹೆಗಡೆ ಬರೆದ ಈ ದಿನದ ಕವಿತೆ

Read More

ಮಳೆರಾಯ ಬಂದ ಮಲ್ಲೆಹೂವು ತಂದ: ಚಂದ್ರಮತಿ ಸೋಂದಾ ಸರಣಿ

ಚೌತಿಹಬ್ಬ ಮುಗಿಯಿತು ಎಂದರೆ ಮಳೆಗೆ ತುಸು ಬಿಡುಗಟ್ಟು. ಎಲ್ಲಕಡೆ ಬಣ್ಣಬಣ್ಣದ ಚಿಟ್ಟೆಗಳ ಮೇಳ. ನಮ್ಮೊಳಗೆ ಅವುಗಳನ್ನು ಹಿಡಿಯುವ ಸ್ಪರ್ಧೆ. ಇನ್ನೇನು ಕೈಗೆ ಸಿಕ್ಕೇಬಿಟ್ಟಿತು ಎನ್ನುವಷ್ಟರಲ್ಲಿ ಮಾಯ. ಆಗ ಮರಳಿ ಯತ್ನವ ಮಾಡು. ಅವು ಅಷ್ಟು ಸುಲಭವಾಗಿ ನಮ್ಮ ಕೈಗೆ ಸಿಗುತ್ತಿರಲಿಲ್ಲ. ಇನ್ನೊಂದು ಬಗೆಯ ಚಿಟ್ಟೆಗಳು ಹಾರಾಡುತ್ತಿದ್ದವು. ಅವು ನಮಗೆ ಆಕರ್ಷಕವಾಗಿ ಕಾಣಿಸುತ್ತಿರಲಿಲ್ಲ. ನಾವು ಅವನ್ನು ಕರೆಯುತ್ತಿದ್ದದು ವಿಮಾನ ಎಂದು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಐದನೆಯ ಕಂತಿನಲ್ಲಿ ಆಗಿನ ಮಳೆ ದಿನಗಳ ಕುರಿತ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ