Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

‘ಅಪ್ಪನ ಅಂಗಿ’ಗೆ ಬರೆದ ನನ್ನ ಮಾತುಗಳು: ಲಕ್ಷ್ಮಣ ವಿ ಎ ಅಂಕಣ

“ಬೆಳಕು ಹರಿಯುವಷ್ಟರಲ್ಲಿ ಬೆಂಗಳೂರು ತಲುಪಿದೆ. ಅವರಿವರ ವಿಚಾರಿಸಿ ಅಗ್ರಿ ಕಾಲೇಜಿನ ಬಸ್ಸು ಹತ್ತಿ ಪ್ರವೇಶ ಪರೀಕ್ಷೆಯನ್ನೂ ಬರೆದೆ. ಇನ್ನೇನು ಸಂಜೆಯಾಯಿತು ವಾಪಸು ಧಾರವಾಡಕ್ಕೆ ಬಸ್ಸಿರುವುದು ರಾತ್ರಿ ಒಂಬತ್ತೂವರೆಗೆ ಅಲ್ಲಿಯವರೆಗೂ ಏನು ಮಾಡುವುದು? ಸಿನೇಮಾ ನೋಡಲು ಮನಸಿರಲಿಲ್ಲ. ಏಕೆಂದರೆ ಕರೀಶ್ಮಾ ಕಪೂರಳ ಆ ಚೆಲುವು, ಕಾರಿನ ಹೆಡ್ ಲೈಟಿನಂತಹ ಅವಳ ಎರಡು ಕಣ್ಣುಗಳು…”

Read More

ಗೋಕುಲ ನಿರ್ಗಮನದ ಪುತಿನ ಮತ್ತು ಎಚ್ ಎಸ್ ವಿ: ಲಕ್ಷ್ಮಣ ವಿ.ಎ. ಅಂಕಣ

“ಹಿರಣ್ಯಕಶಪುವಿಗೆ ಕಂಬ ಮಾತ್ರ ಕಂಡಿತು; ಪ್ರಹ್ಲಾದನಿಗೆ ಕಂಬದ ಒಳಗೆ ಅಡಗಿರುವ ನರಸಿಂಹ ಕಂಡ! ಕಾಣಲಿಕ್ಕೆ ದೃಷ್ಟಿಯಷ್ಟೇ ಸಾಲದು…. ಅದೃಷ್ಟವೂ ಇರಬೇಕು. ಅದಕ್ಕೆ ಮಹಾಕವಿಗಳು ಹೇಳಿದ್ದು ಕಂಡ ಕಂಡವರಿಗೆಲ್ಲಾ ಕಾಣುವುದಿಲ್ಲ…. ಕಂಡವರಿಗಷ್ಟೇ ಕಾಣಬೇಕಾದ್ದು ಕಾಣುವುದು ಎಂದು! ಅದನ್ನೇ ನಾವು ದರ್ಶನ ಎನ್ನುವುದು. ಇಂತಹ ದರ್ಶನದಿಂದ ತುಂಬಿರುವುದರಿಂದಲೇ ಪುಟ್ಟಪ್ಪನವರು ತಮ್ಮ ಕಾವ್ಯಕ್ಕೆ ರಾಮಾಯಣ ದರ್ಶನನಂ ಎಂದು ಹೆಸರಿಟ್ಟರು.”

Read More

ದಾರು ಸಿದರಾಮ ಮತ್ತು ಸಾಸಿವೆ ಡಬ್ಬ: ಡಾ. ಲಕ್ಷ್ಮಣ ವಿ.ಎ. ಅಂಕಣ

“ಕೇರಿಗೊಂದು ದಾರಿಯಿರುವಂತೆ ಊರಿಗೊಬ್ಬ ಸಿದರಾಮನಿದ್ದ. ಹೆಂಡತಿ, ಮಕ್ಕಳು, ಹಿಂದೆ, ಮುಂದೆ, ಎಡಕೆ, ಬಲಕೆ ಯಾರೂ ಇಲ್ಲದ ಅನಾಥ. ಹಾಗಂತ ಅವನು ಯಾರ ಹತ್ತಿರಾನೂ ಅನುಕಂಪ ನಿರೀಕ್ಷಿಸುವವನೂ ಅಲ್ಲ. ಬೆಳಗಾದರೆ ಸೈಕಲ್ ಬೆನ್ನಿಗೆ ಐಸ್ ಡಬ್ಬಾ ಕಟ್ಕೊಂಡು ‘ಗಾರೇಗಾರ’ ಮಾರುವುದು. ರಾತ್ರಿಯಾಗುತ್ತಿದ್ದಂತೆ ಊರಾಚೆಗಿನ ಗೂಡಂಗಡೀಲಿ ದಾರು ಮಾರುತ್ತಿದ್ದ. ಹೀಗಾಗಿ ಊರಲ್ಲಿ ಅವನನ್ನ ಕರೆಯೋದೆ ದಾರು ಸಿದರಾಮ ಅಂತ. ದಾರೂ ಮಾರಿದರೂ ಒಂದು ದಿನವೂ ಸಾರಾಯಿ ಕುಡಿದಿದ್ದನ್ನ ಯಾರೂ ಕೇಳಿರಲಿಲ್ಲ ಕಂಡಿರಲಿಲ್ಲ.”

Read More

ಸರ್ವೇಜನ ಸುಖೀನೋ ಭವಂತು….: ಲಕ್ಷ್ಮಣ ವಿ.ಎ. ಅಂಕಣ

“ಈ ದೇಶದ ಶ್ರಮಿಕವರ್ಗವಿದೆಯಲ್ಲ ಇವರ್ಯಾರೂ ಧರ್ಮ ಪಂಥ ಪಂಗಡಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡವರಲ್ಲ. ದೇವರನ್ನು ಮನೆಯ ಜಗುಲಿಗಳಿಗೇ ಕಟ್ಟಿ ಹಾಕಿ ರೊಟ್ಟಿ ಬುತ್ತಿ ಅಂಬಲಿಯನ್ನು ಸಾಬರು ಮಾಲಗಾರರು ಲಿಂಗಾಯತರೆನ್ನದೇ ಜೋಳದ ಹೊಲದಲ್ಲಿ ಕುಳಿತು ಬುತ್ತಿಯ ಬಿಚ್ಚಿ ಹಂಚಿ ತಿಂದು ಬದುಕುವವರು. ಹೀಗೆ ಮಾಡುವುದು ಇದೊಂದು ಅವರಿಗೆ ಆದರ್ಶವೆನ್ನುವ ಅಹಂ…”

Read More

ಕನ್ನಡಿಗರ ಕಣ್ಮಣಿಯಾಗಲಿ ಕನ್ನಡ: ಡಾ. ಲಕ್ಷ್ಮಣ ವಿ.ಎ. ಅಂಕಣ

“ಮೊನ್ನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಅಂಚೆಕಚೇರಿಗೆ ತ್ವರಿತ ಅಂಚೆ ಸೇವೆಗೆ ಪೋಸ್ಟ್ ಮಾಡಲು ಹೋದಾಗ, ಕೌಂಟರಿನಲ್ಲಿರುವ ಟೈಪಿಸ್ಟ್ ವಿಳಾಸವನ್ನು ಇಂಗ್ಲಿಷ್ ನಲ್ಲಿ ಬರೆಯಲು ತಿಳಿಸಿದರು. ಏಕೆಂದರೆ ಅವರಿಗೆ ಕನ್ನಡ ಓದಲು ಟೈಪಿಸಲು ಬರುತ್ತಿರಲಿಲ್ಲ. ನಾನು ಇಂಗ್ಲಿಷ್ ನಲ್ಲಿ ಬರೆಯಲು ಸ್ಪಷ್ಟವಾಗಿ ನಿರಾಕರಿಸಿದೆ. ಏಕೆಂದರೆ ತಲುಪಬೇಕಾದ ವಿಳಾಸ ಕೂಡ ಕರ್ನಾಟಕದಲ್ಲಿ ಇತ್ತು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ