Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

ದೇವರೇ.. ಬಡವರಿಗೆ ಸಾವ ಕೊಡಬ್ಯಾಡ: ಡಾ. ಲಕ್ಷ್ಮಣ ವಿ.ಎ ಅಂಕಣ

“ಮುನ್ಷಿ ಪ್ರೇಮಚಂದ ಮೇಲಿನ ಕತೆ ಬರೆದು ಸುಮಾರು ಐವತ್ತು ವರ್ಷ ಕಳೆದಿರಬಹುದು. ಟಾಟಾಗಳು ಬಂದರು, ಬಿರ್ಲಾಗಳು ಬಂದರು, ನೆಹರೂವಿನಿಂದ ಹಿಡಿದು ಇಂದಿನ ಮೋದಿಯವರೆಗೆ ಎಷ್ಟು ಗದ್ದುಗೆಗಳು ಏರಿದವು, ಎಷ್ಟು ಗದ್ದುಗೆಗಳಿದವು? ಈ ದೇಶದಲ್ಲಿ ಉಳ್ಳವರ ಆಸ್ಪತ್ರೆಗಳೆಂದರೆ ಖಾಸಗೀ ಆಸ್ಪತ್ರೆಗಳು. ಕೆಲವೊಂದು ಬಾರಿ ಅಲ್ಲಿಯ ಬಿಲ್ಲು ಕಟ್ಟಲಾಗದೇ ಮನೆಗೆ ಶವ ಕೂಡ ತರಲಾರದ ನತದೃಷ್ಟರಿದ್ದಾರೆ.”

Read More

ಕವಿತೆಯೊಂದರ ಸಾಲಿನಿಂದ ಕಳಚಿಕೊಂಡ ಅಕ್ಷರ: ಡಾ. ಲಕ್ಷ್ಮಣ ವಿ.ಎ ಅಂಕಣ

“ಇವರ ವೈಯಕ್ತಿಕ ಪರಿಚಯ ಈಗಷ್ಟೇ, ಇತ್ತೀಚೆಗೆ ಆದದ್ದು. ನೀನಾಸಮ್ ನ ಶಿಬಿರವೊಂದರಲ್ಲಿ ಮೊಟ್ಟ ಮೊದಲಬಾರಿಗೆ ಮುಖತಃ ಭೇಟಿಯಾಗಿದ್ದು. ಅಲ್ಲಿ ಅವರು ಬಂದಿದ್ದು ಒಬ್ಬ ಕಿರಿಯ ಲೇಖಕರನ್ನು ಮಾತನಾಡಿಸಿಕೊಂಡು ಹೋಗಲು. ಅಷ್ಟೊಂದು ಸಾಹಿತ್ಯ ಕಲೆ ಕವಿತೆಯ ಮೇಲೆ ಪ್ರೀತಿಯಿರುವ ಮನುಷ್ಯನೊಬ್ಬ ಮಾತ್ರ ತನಗಿಂತ ಕಿರಿಯರನ್ನು ಹೀಗೆ ಹುಡುಕಿಕೊಂಡು ಬರಲು ಸಾಧ್ಯ.”

Read More

ಯುವ ವಿಜ್ಞಾನಿಗಳ ಕತೆಗಳು: ಡಾ.ಲಕ್ಷ್ಮಣ ವಿ.ಎ ಅಂಕಣ

“ಆ ವರ್ಷ ತಡವಾಗಿ ಬಂದ ಮಳೆ, ತದನಂತರದ ಬಂದ ನೆರೆ ಈ ಮಲವಾಯಿ ಎಂಬ ನತದೃಷ್ಟ ಊರನ್ನು ಅಕ್ಷರಶಃ ಬೆಂಕಿಯಲ್ಲಿ ಬೇಯಿಸುತ್ತದೆ. ಒಂದು ಹಿಡಿ ಕಾಳಿಗಾಗಿ ಕೊಲೆಗಳಾಗುತ್ತಿವೆ. ಕಣ್ಣೀರ ಬಾವಿಗಳೂ ಬತ್ತಿ ಹೋಗಿವೆ. ಬಾವಿಯ ಅಳಿದುಳಿದ ನೀರು ಎಳೆಯಲು ದೇಹದಲ್ಲಿ ಕಸುವಿಲ್ಲ. ಆದರೆ ವಿಲಿಯಮ್ ಸುಮ್ಮನಿರಬೇಕಲ್ಲ. ತಾನು ಶಾಲೆಯಲ್ಲಿ ಕಲಿತ ಅಲ್ಪ ಸ್ವಲ್ಪ ಜ್ಞಾನದಲ್ಲೇ ಒಂದು ವಿಂಡ್ ಮಿಲ್ ತಯಾರಿಸಿ ಅದರಿಂದ ಉತ್ಪನ್ನವಾದ ವಿದ್ಯುತ್ ಬಳಸಿ…”

Read More

ಅಗ್ನಿಯಿಂದ ಎದ್ದು ಬಂದ ಬೆಳಕುಗಳು: ಡಾ.ಲಕ್ಷ್ಮಣ ವಿ.ಎ. ಅಂಕಣ

“ಈಗಿರುವ ಮೆಡಿಕಲ್ ಕಾಲೇಜಿಗೆ ಕೊಡುವ ಬಜೆಟ್ಟಿನಲ್ಲೇ ನಾವು ಲಕ್ಷಾಂತರ ತಜ್ಞ ಪರಿಣಿತ ವೈದ್ಯರನ್ನು ತಯಾರಿ ಮಾಡಬಹುದು. ಅದಕ್ಕೊಂದು ಸಿದ್ಧ ಸೂತ್ರವೂ ಅವರ ಬಳಿ ಇದೆ. ಹಳ್ಳಿಯಿಂದ ಬಂದ ಪ್ರತಿ ಮೆಡಿಕಲ್ ವಿಧ್ಯಾರ್ಥಿಯ ಎದೆಯಲ್ಲೊಂದು ಕಿಚ್ಚು ಇರುತ್ತದೆ. ಅವರ ಹೊಟ್ಟೆಯ ಹಸಿವು ದಿನದ ಇಪ್ಪತ್ನಾಲ್ಕು ಗಂಟೆ ದುಡಿಯುವ ಉತ್ಸಾಹ ಪ್ರಚೋದನೆ ನೀಡುತ್ತಿರುತ್ತದೆ.. ಅವಕಾಶ ವಂಚಿತ ಇಂತಹ ಗ್ರಾಮೀಣ ಬಡ ಭಾರತದ ಹುಡುಗ ಹುಡುಗಿಯರಿಗೆ ಬೇಕಿರುವುದು ಒಂದು ಸಣ್ಣ ಸಹಾಯ ಮಾತ್ರ.”

Read More

ಜನಪ್ರಿಯತೆಯ ಕೂಪದಲ್ಲಿ ಹಾಡುಹಕ್ಕಿ: ಡಾ. ಲಕ್ಷ್ಮಣ ವಿ.ಎ.ಅಂಕಣ

“ಭಾರತೀಯ ಮನಸು ಯಾವಾಗಲೂ ಪವಾಡಗಳನ್ನು ಅಪಾರವಾಗಿ ನಂಬುತ್ತದೆ. ಅಷ್ಟೇ ಪ್ರತಿಭೆಯನ್ನೂ ಕೂಡ ಪೋಷಿಸುತ್ತದೆ. ಹೀಗಾಗಿ ಇಲ್ಲಿಯ ಅತಿರಂಜಿತ ಸಿನೇಮಾಗಳು ಹಿಟ್ ಆಗುತ್ತವೆ. ಈ ಸಿನೇಮಾ ಸೃಷ್ಟಿಸುವ ಮಿಥ್ ಗಳು ಬದುಕಿನಲ್ಲಿಯೂ ಒಂದಿಲ್ಲೊಂದು ದಿನ ನಿಜವಾಗುತ್ತದೆ ಎಂದು ಬದುಕುವವರು ಇಲ್ಲಿ ಅಂತಲ್ಲ ಎಲ್ಲೆಲ್ಲಿಯೂ ಇದ್ದಾರೆ. ಹೀಗಾಗಿ ಸಿನೇಮಾದಿಂದ ಪ್ರಭಾವಿತವಾಗಿಯೇ ಎಷ್ಟೊಂದು ಪ್ರೇಮಿಗಳು ಹುಟ್ಟಿಕೊಂಡಿರುತ್ತಾರೆ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ