ಪಪ್ಪುನಾಯಿ ಮತ್ತು ದೆಯ್ಯದ ಚಪ್ಪಲಿ: ವಿಜಯಶ್ರೀ ಹಾಲಾಡಿ ಪ್ರಬಂಧ
ಮಲೆನಾಡು, ಕರಾವಳಿ ಭಾಗದ ಹಳ್ಳಿಯ ಮನೆ ಮನೆಗಳಲ್ಲಿ ನಾಯಿಗಳಿರುವುದು ಕಡ್ಡಾಯ. ಕಾಡು, ಹಾಡಿ, ಗುಡ್ಡ, ಬಯಲುಗಳ ನಡುವೆ ಫರ್ಲಾಂಗುಗಳ ಅಂತರದಲ್ಲಿ ಅವಿತುಕೊಂಡಿರುವ ಮನೆಗಳ ರಕ್ಷಣೆಗೆ, ಜೀವಂತಿಕೆಗೆ ನಾಯಿಗಳು ಅನಿವಾರ್ಯ. ಕಳ್ಳಕಾಕರು, ಜೀವಾದಿಗಳು, ದೆವ್ವ-ಭೂತ-ಪೀಡೆ-ಕುಲೆಗಳನ್ನು ಕೂಡಾ ನಾಯಿಗಳು ದೂರವಿಡುತ್ತವೆಂಬ ನಂಬಿಕೆಯಿದೆ! ಮನುಷ್ಯರ ಕಣ್ಣಿಗೆ ಕಾಣದ ದೆವ್ವ ಭೂತಗಳು ನಾಯಿಗಳಿಗೆ ಕಾಣುತ್ತವಂತೆ, ಇದರಿಂದಾಗಿಯೇ ಅವು ರಾತ್ರಿಯಿಡೀ ಬೊಗಳುವುದಂತೆ! ನಮ್ಮ ಹಳ್ಳಿಯವರ ಈ ತರದ ಕಲ್ಪನೆಗಳಿಗೆ ಯಾವುದೇ ಆಧಾರವಿಲ್ಲವಾದರೂ ಇಂತವುಗಳನ್ನು ಕೇಳುವುದು ರೋಮಾಂಚನಕಾರಿಯಾಗಿತ್ತು.
ವಿಜಯಶ್ರೀ ಹಾಲಾಡಿ ಹೊಸ ಪ್ರಬಂಧ ಸಂಕಲನ “ಕಣ್ಣ ಕಾಡಿದ ಹಾಡು” ಒಂದು ಪ್ರಬಂಧ ನಿಮ್ಮ ಓದಿಗೆ