‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಡಾ. ಪಾರ್ವತಿ ಜಿ.ಐತಾಳ್ ಕತೆ
ನೀನು ಪುಟ್ಟ ಮಗುವಿದ್ದಾಗ ಎಂಥ ರಚ್ಚೆ ಹಿಡಿದು ಅಳುತ್ತಿದ್ದರೂ ಮನೆಯ ಮುಂದಿನ ಕೈತೋಟದಲ್ಲಿ ಪರ‍್ರೆಂದು ಹಾರುತ್ತ ಚೀಂವ್ ಚೀಂವ್ ಎನ್ನುತ್ತಿದ್ದ ಪುಟ್ಟ ಗುಬ್ಬಚ್ಚಿಗಳನ್ನು ನೋಡುತ್ತಲೇ ಅಳು ನಿಲ್ಲಿಸಿ ಜೋರಾಗಿ ನಗುತ್ತಿದ್ದೆ. ಈಗಲೂ ಕಿಟಕಿಯ ಹೊರಗೆ ಅವೇ ಸುಂದರ ಗುಬ್ಬಚ್ಚಿಗಳು ಚಿಲಿಪಿಲಿಗುಟ್ಟುತ್ತ ನಿನ್ನ ನೆನಪನ್ನು ಉಕ್ಕೇರಿಸುತ್ತಿವೆ. ನೀನು ನನ್ನ ತೋಳಲ್ಲೆ ಇದ್ದೀಯೇನೋ ಎಂಬ ಭ್ರಮೆಯನ್ನು ಹುಟ್ಟಿಸುತ್ತಿವೆ. ತೋಟದಲ್ಲಿ ಅರಳಿರುವ ಬಣ್ಣ ಬಣ್ಣದ ಹೂಗಳು ಕಣ್ಣುಗಳು ಹೋದಲ್ಲೆಲ್ಲ ನನ್ನನ್ನೇ ನಿಟ್ಟಿಸುತ್ತಿವೆ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಡಾ. ಪಾರ್ವತಿ ಜಿ.ಐತಾಳ್ ಕತೆ “ಬಲಿಪಶುಗಳು”