Advertisement

Category: ಅಂಕಣ

ಆಸ್ಟ್ರೇಲಿಯಾದಲ್ಲಿ ಪರಿಸರ ಹೋರಾಟ ಮತ್ತೂ…: ಡಾ. ವಿನತೆ ಶರ್ಮ ಅಂಕಣ

ಅವರ ಈ ಎಲ್ಲಾ ನಡೆಗಳಿಂದ ನಾಶವಾಗಿದ್ದು ಆಸ್ಟ್ರೇಲಿಯಾದ ಮೂಲನಿವಾಸಿಗಳಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿಗಳ ಜನಪಂಗಡಗಳಲ್ಲಿ ಇದ್ದ ಬಹುಭಾಷೆಗಳು, ಬಹುಸಂಸ್ಕೃತಿಗಳು ಮತ್ತು ಬಹುತ್ವವನ್ನು ಅಪ್ಪಿಕೊಂಡಿದ್ದ ನೆಲ-ನಾಡುಗಳ ಸಂಬಂಧಗಳು, ಅಸ್ಮಿತೆ, ಪ್ರಾಪಂಚಿಕ ದೃಷ್ಟಿಕೋನಗಳು. ಅದೃಷ್ಟಕ್ಕೆ, ಅವು ಸಂಪೂರ್ಣವಾಗಿ ನಿರ್ನಾಮವಾಗದೆ, ನಿಧಾನವಾಗಿ ಮೂಲವಾಸಿಗಳು ಸುಧಾರಿಸಿಕೊಂಡರು. ನ್ಯಾಯಕ್ಕಾಗಿ, ತಮ್ಮ ನೆಲಕ್ಕಾಗಿ, ಅಸ್ತಿತ್ವಕ್ಕೆ, ಅಸ್ಮಿತೆಗೆ ಹೋರಾಡಿದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಕನ್ನಡ ವಿಜ್ಞಾನ ಸಂವಹನಕ್ಕೆ ಡಾ. ಕೆ. ಶಿವರಾಮ ಕಾರಂತರ ಕೊಡುಗೆ: ಎಲ್. ಜಿ. ಮೀರಾ ಅಂಕಣ

ಇಂತಹ ವಿಚಾರ ಮನಸ್ಸಿಗೆ ಬಂದ ಮೇಲೆ ಕಾರಂತರು ಸುಮ್ಮನೆ ಕೂರುವ ಜಾಯಮಾನದವರಲ್ಲ. ಮಕ್ಕಳಿಗೆ ತಮ್ಮ ಜಿಲ್ಲೆಯಾದ ದಕ್ಷಿಣಕನ್ನಡದ ಪರಿಚಯವನ್ನು ಸ್ವಾರಸ್ಯಕರವಾಗಿ ಮತ್ತು ಚಿತ್ರಸಹಿತವಾಗಿ ಮಾಡಿಕೊಡುವ `ಚಿತ್ರಮಯ ದಕ್ಷಿಣಕನ್ನಡ’ ಕೃತಿಯನ್ನು ರಚಿಸಿಯೇಬಿಟ್ಟರು. ಇದಕ್ಕಾಗಿ ಜಿಲ್ಲೆಯ ತುಂಬ ಓಡಾಡಿ ಅನೇಕ ಛಾಯಾಚಿತ್ರಗಳನ್ನು ತೆಗೆದರು, ಚಿತ್ರಗಳನ್ನು ಸ್ವತಃ ಬರೆದರು! ಮುಂದೆ ಮಕ್ಕಳಿಗಾಗಿ ಮತ್ತು ಆಸಕ್ತ ದೊಡ್ಡವರಿಗಾಗಿ `ದಕ್ಷಿಣ ಹಿಂದೂಸ್ಥಾನ’ ಕೃತಿಯನ್ನು ಹಾಗೂ `ಬಾಲಪ್ರಪಂಚ’, `ವಿಜ್ಞಾನ ಪ್ರಪಂಚ’ ಎಂಬ ವಿಶ್ವಕೋಶಗಳನ್ನು ರಚಿಸಿದರು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಲವತ್ತೈದನೆಯ ಬರಹ

Read More

ಮನೆಯೊಳಗಿನ-ಈಕೆ  ಮತ್ತು  ಹೊರಗಿನ-ಆಕೆ!: ಸುಕನ್ಯಾ ಕನಾರಳ್ಳಿ ಅಂಕಣ

ಮನೆಯೊಳಗಿನ ಈಕೆ ಮನೆಯಿಂದ ಆಚೆ ಹೋಗಿ ದುಡಿದರೂ ಸಹ ಮನೆಯನ್ನು ನಿಭಾಯಿಸುವುದು ಕೊನೆಗೂ ಈಕೆಯ ಹೊಣೆಯಾಗಿ ಉಳಿದುಕೊಂಡಿದೆ ಎನ್ನುವುದೂ ಸಹ ನಿಜ. ಅಲ್ಲೋ ಇಲ್ಲೋ ಗಂಡ ಮಕ್ಕಳಿಂದ ಸಹಾಯ ಸಿಗಬಹುದೇನೋ. ಅದು ಕೇವಲ ಸಹಾಯ ಅಷ್ಟೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತೊಂದನೆಯ ಬರಹ

Read More

ಪದವಿರಲಿ ಎದೆಯಲ್ಲಿ, ಪ್ರೀತಿ ಹರಿದೀತು!: ಸುಕನ್ಯಾ ಕನಾರಳ್ಳಿ ಅಂಕಣ

ಬದುಕಿನ ಸಂಕಷ್ಟಗಳ ಸಮಯದಲ್ಲಿ ಹೈಸ್ಕೂಲಿನಲ್ಲಿ ಕಲಿತ ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು’ ಎಂಬ ಬಿ ಎಂ ಶ್ರೀ ಅವರ ಅನುವಾದಿತ ಇಂಗ್ಲಿಷ್ ಕವಿತೆಯನ್ನು ಆರ್ತತೆಯಿಂದ ನೆನಪಿಸಿಕೊಂಡಿದ್ದೇನೆ. ಕೆ. ಎಸ್. ನರಸಿಂಹಸ್ವಾಮಿಯವರ ‘ದೀಪವೂ ನಿನ್ನದೇ, ಗಾಳಿಯೂ ನಿನ್ನದೇ, ಆರದಿರಲಿ ಬೆಳಕು’ ಎಂದು ಬೇಡಿಕೊಂಡಿದ್ದೇನೆ. ಊರಿನಲ್ಲಿ ಗಣಪತಿ ಕೂರಿಸುತ್ತಿದ್ದ ಒಂದು ತಿಂಗಳಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ಪಿ. ಕಾಳಿಂಗರಾಯರ ‘ಬಾರಯ್ಯ ಬೆಳದಿಂಗಳೇ…’ ಕೇಳುತ್ತಾ ಸುತ್ತಮುತ್ತಲ ಹಳ್ಳಿಗಳಿಂದ ಗಾಡಿ ಹೂಡಿಕೊಂಡು ಬರುತ್ತಿದ್ದ ಮಂದಿ ಬೀದಿಯಲ್ಲಿ ಕಿಕ್ಕಿರಿದು ನಿಂತು ಬೆಳದಿಂಗಳಲ್ಲಿ ತೊಯ್ದಂತೆ ತನ್ಮಯರಾಗಿ ನಿಂತಿದ್ದನ್ನು ಕಂಡಿದ್ದೇನೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ದೇವ್ರು ಶಾಣ್ಯಾ ಅದಾನ್ರೀ… : ವಿನಾಯಕ ಅರಳಸುರಳಿ ಅಂಕಣ

ಹೌದಲ್ಲವೇ? ಎಲ್ಲಾ ಸರಿಯಾಗಿರುವ ಹೊತ್ತಿನಲ್ಲೂ ಯಾವುದೋ ಒಂದು ಕೊರಗು ನಮ್ಮನ್ನು ಕಾಡುತ್ತಲೇ ಇರುತ್ತದೆ. ಮಧ್ಯಾಹ್ನದ ನೆರಳಿನಲ್ಲಿ ಯಾರದೋ ಹುಡುಕಾಟ… ಸಂಜೆಯ ತಂಪಲ್ಲಿ ಯಾವುದೋ ನೆನಪು.. ರಾತ್ರೆಯ ಕನವರಿಕೆಯಲ್ಲಂತೂ ಎಂಥದ್ದೋ ದುಃಖ… ಇವೆಲ್ಲಾ ಏಕೆ? ಕಳೆದ ನೆನ್ನೆಗಳೇ ಅದೇಕೋ ಚಂದ ಎನಿಸುತ್ತವೆ. ಇಂದು ಎನ್ನುವುದು ಯಾವಾಗಲೂ ಕಹಿ ಕಹಿ. ಈ ಕ್ಷಣಕ್ಕೆ ಮೈ ಚಾಚಿ ಮಲಗಿರುವ ಹಂಸತೂಲಿಕಾ ತಲ್ಪದಲ್ಲೂ ಹಿಂದೆಂದೋ ಅರೆನಿದಿರೆ ಹೊತ್ತು ತಂದಿದ್ದ ಗುಡಿಸಲಿನ ಒರಟು ನೆಲದ್ದೇ ಕನವರಿಕೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ