ಪ್ರಯಾಣ-ಪ್ರವಾಸದಲ್ಲಿ ಓದಬೇಕೆ?: ಕೆ. ಸತ್ಯನಾರಾಯಣ ಹೊಸ ಕೃತಿಯ ಒಂದು ಬರಹ
ಪ್ರವಾಸ-ಪ್ರಯಾಣದಲ್ಲಿ ಸಹಪ್ರಯಾಣಿಕರು ನಮ್ಮ ಓದಿನ ರೀತಿಯನ್ನು ಪ್ರಭಾವಿಸುತ್ತಾರೆ. ಅಲ್ಲದೆ, ಪ್ರವಾಸ-ಪ್ರಯಾಣದ ಉದ್ದೇಶ, ಓದುವುದೇನಲ್ಲ. ರೈಲಿನಲ್ಲಾಗಲಿ, ವಿಮಾನದಲ್ಲಾಗಲಿ ನಿಮಗೆ ಊಟಕ್ಕೆ, ನಿದ್ದೆಗೆ, ಶೌಚಕ್ಕೆ ವ್ಯವಸ್ಥೆ, ಅನುಕೂಲ ಮಾಡಿಕೊಡಬಹುದೇ ಹೊರತು ಓದಿಗಲ್ಲ. ನೀವು ಓದುವುದರಿಂದ ಎಷ್ಟೋ ಸಲ ಸಹಪ್ರಯಾಣಿಕರಿಗೆ ತೊಂದರೆಯೂ ಆಗಬಹುದು. ನಿಮ್ಮನ್ನು ಒಬ್ಬ ವಿಚಿತ್ರ ಪ್ರಾಣಿಯೆಂದು ಕೂಡ ಪರಿಗಣಿಸಬಹುದು.
ಕತೆಗಾರ ಕೆ. ಸತ್ಯನಾರಾಯಣ ಬರೆದ “ಓದುವವರೆಲ್ಲ ಓದುಗರೆಲ್ಲ-ಹಾಗಾದರೆ?” ಹೊಸ ಕೃತಿಯ ಒಂದು ಬರಹ ನಿಮ್ಮ ಓದಿಗೆ
