Advertisement

Category: ದಿನದ ಪುಸ್ತಕ

ಭುವನೇಶ್ವರದ ಭವ್ಯ ಲಿಂಗರಾಜ ದೇವಾಲಯ: ಡಾ. ಜೆ. ಬಾಲಕೃಷ್ಣ ಬರಹ

ಭುವನೇಶ್ವರದಲ್ಲಿ 500ಕ್ಕೂ ಹೆಚ್ಚು ದೇವಾಲಯಗಳಿದ್ದರೂ ಸಹ ಅವುಗಳಲ್ಲಿ ಲಿಂಗರಾಜ ದೇವಾಲಯ ವಾಸ್ತುಶೈಲಿಯ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿದೆ. ಒರಿಸ್ಸಾದಲ್ಲಿ ನಿರ್ಮಿತವಾಗಿರುವ ಮೊಟ್ಟಮೊದಲ ಅತಿ ದೊಡ್ಡ ದೇವಾಲಯವಾಗಿರುವುದಲ್ಲದೆ, ಒರಿಸ್ಸಾದ ಶೈವ ದೇವಾಲಯಗಳಲ್ಲಿಯೇ ದೊಡ್ಡ ದೇವಾಲಯವಾಗಿರುವ ಲಿಂಗರಾಜ ದೇವಾಲಯ `ಕಳಿಂಗ ವಾಸ್ತುಶೈಲಿ’ಯ ಅತಿ ಸುಂದರ ಉದಾಹರಣೆಯಾಗಿದೆ. ಕ್ರಿ.ಶ. 6-7ನೇ ಶತಮಾನದಲ್ಲಿ ಆರಂಭವಾದ ಒರಿಸ್ಸಾ ದೇವಾಲಯಗಳ ವಾಸ್ತು ಶಿಲ್ಪ ನಿರ್ಮಾಣ 11ನೇ ಶತಮಾನದಲ್ಲಿ ಲಿಂಗರಾಜ ದೇವಾಲಯದ ನಿರ್ಮಾಣದ ಹೊತ್ತಿಗೆ ಉತ್ತುಂಗಕ್ಕೇರಿತ್ತು. ಆ ವಾಸ್ತು ನಿರ್ಮಾಣ 13ನೇ ಶತಮಾನದ ನಂತರ ಕ್ರಮೇಣ ಕಡಿಮೆಯಾಯಿತು.
ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಮತ್ತೊಂದು ಬರಹ ನಿಮ್ಮ ಓದಿಗೆ

Read More

‘ಮೋಹಿತ’ನ ಮೋಹಕ ಕವಿತೆಗಳು: ಅಬ್ದುಲ್‌ ರಶೀದ್‌ ಕವನ ಸಂಕಲನಕ್ಕೆ ಎಸ್‌. ಮಂಜುನಾಥ್‌ ಮುನ್ನುಡಿ

ಕರಗಿ-ಹರಿಯುವ- ಈ ಶಬ್ದಗಳನ್ನು ಬಳಸಬೇಕಾಗುವುದರಿಂದ ರಶೀದರದ್ದು ಒಂದು ‘ದ್ರವ ಪ್ರತಿಭೆ’! ತನ್ನನ್ನು ಪೂರಾ ಬಿಟ್ಟುಕೊಟ್ಟೇ ಹರಿದುಹೋಗುವಂತಿರುವುದು ನದಿಯ ಜೀವಂತಿಕೆ ತಾನೇ? ಇಷ್ಟು ಹೇಳಿದರೆ ರಶೀದರ ಕವಿತೆಯ ಗುಣವನ್ನು ಪೂರ್ತಿ ಹೇಳಿದಂತಾಗುವುದಿಲ್ಲ. ಅಷ್ಟು ವೈಚಿತ್ರ್ಯಗಳನ್ನು ಒಳಗೊಂಡುದು ಅದು. ಮಾತಿನಲ್ಲಿ ಪ್ರತಿಮೆಯಲ್ಲಿ ಚಿಂತನೆಯಲ್ಲಿ ಭಾವನೆಯಲ್ಲಿ ಹಾಗೆ ವಿಚಿತ್ರವಾದುದು. ಒಂದು ಕಾರಣ: ಇದು ಕವಿತೆಗೆ ಸೇರುವುದು. ಇದು ಸೇರಲಾರದ್ದು ಎಂಬ ಭೇದವಿರದೆ ಏನೆಲ್ಲವನ್ನು ಬೇಕಾದರೂ ಒಳಗೊಳ್ಳುವಂಥದು. ಹಾಗಿದ್ದೂ ಅಂತಿಮವಾಗಿ ಸಹಜತೆಯೇ ಹೆಗ್ಗುರುತಾದ್ದು.
ಅಬ್ದುಲ್‌ ರಶೀದ್‌ ಕವನ ಸಂಕಲನ “ನರಕದ ಕೆನ್ನಾಲಿಗೆಯಂಥ ನಿನ್ನ ಬೆನ್ನ ಹುರಿ”ಗೆ ಎಸ್‌. ಮಂಜುನಾಥ್‌ ಬರೆದ ಮುನ್ನುಡಿ

Read More

ಒರಿಸ್ಸಾ ವಾಸ್ತುಕಲೆ: ಡಾ. ಜೆ. ಬಾಲಕೃಷ್ಣ ಬರಹ…..

ಒರಿಸ್ಸಾದ ವಾಸ್ತು ಶಿಲ್ಪಿಗಳು ದೇಗುಲಗಳನ್ನು ದೇವರ ಅಥವಾ ಮಾನವನ ದೇಹಕ್ಕೆ ಹೋಲಿಸಿದ್ದರು. ಆದುದರಿಂದಲೇ ದೇಗುಲದ ವಿವಿಧ ಭಾಗಗಳಿಗೆ ದೇಹದ ಅಂಗಗಳ ಹೆಸರುಗಳನ್ನೇ ನೀಡಿದ್ದಾರೆ: ಪಾಭಗ (ಪಾದ), ಜಂಘ (ಮೊಣಕಾಲು), ಗಂಡಿ, ಮಸ್ತಕ ಮುಂತಾದವು. ಮುಖ್ಯ ಶಿಖರವುಳ್ಳ ದೇಗುಲವನ್ನು ಗಂಡು ಅಥವಾ ಮದುಮಗನೆಂದೂ ಹಾಗೂ ಜಗಮೋಹನ ದೇಗುಲವನ್ನು ಹೆಣ್ಣು ಅಥವಾ ಮದುಮಗಳೆಂದೂ ಭಾವಿಸಲಾಗುತ್ತಿತ್ತು. ಒರಿಸ್ಸಾದ ದೇಗುಲಗಳಲ್ಲಿ ವಾಸ್ತು ಕಲೆ ಹಾಗೂ ಶಿಲ್ಪಕಲೆಯನ್ನು ಪ್ರತ್ಯೇಕವಾಗಿ ನೋಡುವುದು ಸಾಧ್ಯವೇ ಇಲ್ಲ. ಆದುದರಿಂದಲೇ ಕಲಾ ಸಂಶೋಧಕಿ ಡಾ.ಸ್ಟೆಲ್ಲಾ ಕ್ರಮರೀಷ್ `ಒರಿಸ್ಸಾದ ವಾಸ್ತುಕಲೆ ದೈತ್ಯಾಕಾರದ ಶಿಲ್ಪಕಲೆ’ ಎಂದಿದ್ದಾರೆ.
ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಮತ್ತೊಂದು ಬರಹ ನಿಮ್ಮ ಓದಿಗೆ

Read More

ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ: ಸಂಗೀತ ರವಿರಾಜ್ ಬರಹ

ಇಲ್ಲಿನ ಕವಿತೆಗಳಲ್ಲಿ ಅತಿರಂಜಿತ ಕಲ್ಪನೆಗಳಿಗಿಂತ ತನ್ನ ನಡುವಿನ ಬದುಕನ್ನೇ ಭಿನ್ನವಾಗಿ ಅವಲೋಕಿಸುತ್ತ, ಆ ಮೂಲಕವೇ ತನ್ನ ಭಾವನೆಗಳನ್ನು ಮಿಳಿತಗೊಳಿಸಿ ಕವಿತೆಯಲ್ಲಿ ಸ್ಪುರಿಸುತ್ತಾರೆ. ಕಾವ್ಯದಿಂದಲೇ ಏನನ್ನೋ ಗೆಲ್ಲಬಯಸುತ್ತೇನೆ ಎಂಬ ಸಣ್ಣ ಆಸೆಯಿಂದ, ಜೊತೆಗೆ ಆಸ್ಥೆಯಿಂದ ಹೇಳುವಂಥದನ್ನು ಹೇಳಿಕೊಂಡಿದ್ದಾರೆ. ಮಾತಿಗಿಂತ ಕಾವ್ಯವೇ ತನ್ನ ಅಭಿವ್ಯಕ್ತಿ ಮಾಧ್ಯಮ ಎನಿಸುವಂತಹ ಜೀವಂತಿಕೆಯ ಸಾಲುಗಳು ಕವಿತೆಗಳಲ್ಲಿವೆ.
ಜಗದೀಶ್‌ ಜೋಡುಬೀಟಿ ಕವನ ಸಂಕಲನ “ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ” ಕುರಿತು ಸಂಗೀತ ರವಿರಾಜ್‌, ಚೆಂಬು ಬರಹ

Read More

ಅಚ್ಚಿಯ ಮದುವೆ….: ಚಂದ್ರಮತಿ ಸೋಂದಾ ಕಾದಂಬರಿಯ ಪುಟಗಳು

ಊರಲ್ಲಿ ಗೌಡ್ರ ಮನೆ ಅಂತ ಇದ್ದಿದ್ದೆ ಎರಡು. ಗಂಡುಹುಡುಗ್ರು ಶಾಲಿಗೆ ಬಂದ್ರೂ ಅವ್ರ ಹೆಣ್ಮಕ್ಳನ್ನ ಕಳುಸ್ತಿರ್ಲೆ. ಬ್ರಾಹ್ಮಣ ಹೆಣ್ಮಕ್ಳಷ್ಟೆ ಶಾಲಿಗೆ ಹೋಗ್ತಿದ್ದ. ಅಚ್ಚಿ ಕಲಿಯದ್ರಲ್ಲಿ ಹುಷಾರಿತ್ತು. ಗೊತ್ತಾಗದಿದ್ನ ಕೇಳಕ್ಕೆ ಅಣ್ಣ ಹ್ಯಾಂಗೂ ಮನೇಲಿದ್ದ. ಎರಡನೇ ತರಗತಿ ಮುಗದಾಗ ಕೂಸು ದೊಡ್ಡಾತು ಅಂತ ಸೀರೆ ಉಡಸಕ್ಕೆ ಶುರುಮಾಡಿದ್ದ. ಇಲ್ಲಿವರಿಗೆ ಅಕ್ಕಯ್ಯದಿಕ್ಳು ಹಾಕಿಬಿಟ್ಟ ಅಂಗಿನ ಅಮ್ಮ ಸರಿಮಾಡಿಕೊಡ್ತಿತ್ತು, ಅದ್ನೇ ಅಚ್ಚಿ ಮನೇಲಿ ತೊಟ್ಗಳ್ತಿತ್ತು. ಶಾಲಿಗೆ ಹೋಪ್ಲೆ ಅಂತ ತಂದಿದ್ದ ಎರಡೂ ಅಂಗಿ ಹರದುಹೋಗಿತ್ತು. ಅಂಟವಾಳಕಾಯಿ ಹಾಕಿ ಬಟ್ಟೆ ತೊಳದ್ರೂ ಚೊಕ್ಕ ಆಗದು ಅಷ್ಟರಲ್ಲೇ ಇತ್ತು.
ಡಾ. ಚಂದ್ರಮತಿ ಸೋಂದಾ ಹೊಸ ಕಾದಂಬರಿ “ದುಪಡಿ”ಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ