Advertisement

Category: ದಿನದ ಪುಸ್ತಕ

ಪ್ರಸ್ತುತ ಕಾಲಘಟ್ಟ ಮತ್ತು “ಬೆಂಕಿಯ ನೆರಳು”: ಎನ್.ಎಸ್. ಚಿದಂಬರರಾವ್ ಕಾದಂಬರಿಯ ಕುರಿತು ಸಿಂಧೂರಾವ್‌ ಟಿ. ಬರಹ

ಎಲ್ಲಾ ಕಾಲದಲ್ಲೂ ತಮ್ಮ ತಮ್ಮ ಪರಿಸ್ಥಿತಿಗಳಲ್ಲಿ ಸ್ವತಂತ್ರ ಆಲೋಚನೆ ಮತ್ತು ನಡವಳಿಕೆ ತೋರುವುದಕ್ಕೆ ಎಲ್ಲ ಯುವಜನಾಂಗವೂ ಆಶಿಸುತ್ತಲೆ ಇರುತ್ತದೆ. ಅದು ಸಹಜ ಮತ್ತು ಹಾಗೇ ಇರಬೇಕಾದ್ದು. ಕಾಲಕ್ಕೆ ತಕ್ಕಂತೆ ಅವರ ಅಭಿವ್ಯಕ್ತಿಗಳಿಗೆ ನಡವಳಿಕೆಗಳಿಗೆ ಕಡಿವಾಣಗಳು ಬಿಗಿಯಾಗಿ, ಸಡಿಲಾಗಿ, ಉದುರಿಹೋಗಿ ಎಲ್ಲಾ ಆಗಿದೆ. ಈ ಸ್ಥಿತ್ಯಂತರದ ಕಾಲವನ್ನು ಅವರು ಆತ್ಮವಿಶ್ವಾಸ, ಓದು, ಆರ್ಥಿಕ ಸ್ವಾತಂತ್ರ್ಯ ಇದ್ದಾಗ ಹೇಗೆ ನಿಭಾಯಿಸುತ್ತಾರೆ ಎಂಬುದು ಯಶಸ್ಸು ಅಥವಾ ದುರಂತದ ಪರಿಣಾಮವನ್ನು ತಂದಿಡುತ್ತದೆ. ಓದು ಬರಿದೆ ಡಿಗ್ರಿಗಳಾದಾಗ, ಕೆಲಸದ ಪದಕಗಳಾದಾಗ ಏನಾಗುತ್ತದೆ ಎಂಬ ಪರಿಣಾಮವನ್ನು ನೋಡುತ್ತಲೇ ಇದ್ದೇವೆ.
ದಿವಂಗತ ಎನ್.ಎಸ್. ಚಿದಂಬರರಾವ್ ಅವರ “ಬೆಂಕಿಯ ನೆರಳು” ಕಾದಂಬರಿಯನ್ನು ಪುಸ್ತಕ ಮನೆ ಪ್ರಕಾಶನ ಮರುಮುದ್ರಿಸಿದ್ದು, ಈ ಕೃತಿಯ ಕುರಿತು ಸಿಂಧುರಾವ್‌ ಟಿ. ಬರಹ ನಿಮ್ಮ ಓದಿಗೆ

Read More

ಉಪಾಸೊ: ಶ್ರೀಧರ ಬಳಗಾರ ಕಾದಂಬರಿ “ಬಲಿಪಾದ”ದ ಆಯ್ದ ಭಾಗ

ಅತ್ತ ಶಡ್ಡುವಿನ ಪ್ರೇಮ ಭಂಗಪಡಿಸಲು ಮುಂದಾಗಲಾರದೆ ಇತ್ತ ಗಂಡ ಊರಿಗೆ ಬಹಿಷ್ಕಾರ ಹಾಕುವುದನ್ನು ನೋಡಲಾರದ ಸಂಕಟದಲ್ಲಿ ಜಾನಕೆ ನರಳುತ್ತಿದ್ದಳು. ಅವಳ ಸನಿಹ ನಿದ್ದೆ ಸುಳಿಯದು. ಹೊರಳಾಡಿ ಮಗ್ಗಲು ಬದಲಿಸಿದಳು. ನಿಟ್ಟುಸಿರುಬಿಟ್ಟಳು. ಶ್ವಾಸ ಎದೆಯೊಳಗೆ ಸಿಕ್ಕಿದಂತಾಗಿ ಎದ್ದು ಕೂತಳು. ಹೊಸ್ತಿಲ ಪಕ್ಕ ಉರಿಯುತ್ತಿದ್ದ ನಂದಾದೀಪದ ಮಂದ ಬೆಳಕಿನಲ್ಲಿ ಚಾಪೆಯ ಮೇಲೆ ಅಂಗಾತ ಮಲಗಿದ್ದ ಉಪಾಸೊ ಅಂಕಣ ದಿಟ್ಟಿಸುತ್ತಿದ್ದ. ಹಗಲಲ್ಲಿ ಹಗುರಾಗಿ ಕಾಣುತ್ತಿದ್ದ ಹಗರಣಗಳು ರಾತ್ರಿ ಕತ್ತಲಲ್ಲಿ ಕಾಮದಂತೆ ತೀವ್ರವಾಗಿ ಕಾಡುತ್ತಿದ್ದವು. ನಿದ್ದೆಯಿಲ್ಲದ ನಿಶ್ಯಬ್ದ ಏಕಾಂತದಲ್ಲಿ ನೆನಪುಗಳು ಕಿಕ್ಕಿರಿಯುತ್ತಿದ್ದವು.
ಶ್ರೀಧರ ಬಳಗಾರ ಕಾದಂಬರಿ “ಬಲಿಪಾದ”ದ ಆಯ್ದ ಭಾಗ ನಿಮ್ಮ ಓದಿಗೆ

Read More

ಜಯಲಕ್ಷ್ಮೀ ಪಾಟೀಲ್‌ ಆತ್ಮಕಥನ “ತಿಟ್ಹತ್ತಿ ತಿರುಗಿ”ಯ ಆಯ್ದ ಭಾಗ

ಒಂದೆರಡು ದಿನಗಳ ನಂತರ ಅಪ್ಪಾ ದಾಡಿ ಮಾಡಿಟ್ಟುಕೊಂಡ ಟೋಪಾಜ್ ಬ್ಲೇಡನ್ನು ತೆಗೆದುಕೊಂಡು, ಬಲಗಡೆಯ ಮುಂದೆಲೆಯಲ್ಲಿನ ಕಿರುಬೆರಳು ಗಾತ್ರದ ಕೂದಲನ್ನು ಕಣ್ಣೆದುರು ಎಳೆದು ತಂದು ಕರ್ರ್ ಕರ್ರ್ ಎಂದು ಕತ್ತರಿಸಿಕೊಂಡು, ಶಾಂತಾ ಹೇಳಿದಂತೆ, ಅದಕ್ಕೆ ನೀರು ಸೋಕಿಸಿ ಬೆರಳಲ್ಲಿ ಸುರಳಿ ಸುತ್ತಿಹಿಡಿದು ಬಿಟ್ಟೆ. ಅವಳಂತೆ ಗುಂಗುರಾಗದೆ ಕತ್ತರಿಸಿದ ಕೂದಲು ಹಾಗೆಲ್ಲ ಸುಲಭದಲ್ಲಿ ಮಣಿಯಲಾರೆವು ಎಂದು ಸೆಟೆದು ನಿಂತಿದ್ದವು. ಮತ್ತೆ ಮತ್ತೆ ಪ್ರಯತ್ನಿಸುವ ನನ್ನ ಸರ್ಕಸ್ ಅಪ್ಪಾರ ಕಣ್ಣಿಗೆ ಬಿತ್ತು. ಏನದು? ಅಂದರು. ಯಾವುದೇ ಅಳುಕಿಲ್ಲದೇ ನಾನು, ಶಾಂತಾ ಮಾಡಿಕೊಂಡಿದ್ದನ್ನು ನೋಡಿ ನನಗೂ ಆಸೆಯಾಗಿ ಹೀಗೆ ಮಾಡಿಕೊಂಡಿದ್ದೇನೆ ಎಂದೆ.
ಜಯಲಕ್ಷ್ಮೀ ಪಾಟೀಲ್‌ ಆತ್ಮಕಥನ “ತಿಟ್ಹತ್ತಿ ತಿರುಗಿ”ಯ ಆಯ್ದ ಭಾಗ ನಿಮ್ಮ ಓದಿಗೆ

Read More

ನೆಲದ ಕಾವು ಮುಗಿಲ ತಾಕಿ: ರಾಜಕುಮಾರ ಮಡಿವಾಳರ ಕವನ ಸಂಕಲನಕ್ಕೆ ಸತೀಶ ಕುಲಕರ್ಣಿ ಮುನ್ನುಡಿ

ಈ ಕವಿತೆಗಳನ್ನು ಓದಿದಾಗ ಕೆ.ಎಸ್.ಎನ್ ರ ದಾಂಪತ್ಯ ಪ್ರೀತಿ, ಬೇಂದ್ರೆ ಅವರ ಭಾಷಾ ಗತ್ತು, ಕಂಬಾರರ ಜನಪದಿಯ ಕಥಾನಕಗಳು ನೆನಪಾಗದೇ ಇರುವುದಿಲ್ಲ. ಆದರೆ ಇವರನ್ನೆಲ್ಲ ಅದುಮಿ, ತಮ್ಮತನದ ಈಜುಗಾರಿಕೆಯನ್ನು ಮಡಿವಾಳರ ಕಲಿತಿದ್ದಾರೆ. ಕಾವ್ಯ ಪರಂಪರೆ ಪ್ರತಿ ಕವಿಯನ್ನು ಬೆನ್ನಟ್ಟುತ್ತದೆ. ದತ್ತಿ ದೇಣಿಗೆಯನ್ನು ನೀಡುತ್ತಲೇ ಇರುತ್ತದೆ. ಕೊನೆಗೂ ನಮ್ಮ ಹೆಜ್ಜೆ ಗುರುತುಗಳು ಬೇರೆಯವೇ ಆಗಿರಬೇಕು. ಈ ಮಾತಿನಂತೆ ರಾಜಕುಮಾರ ಗೆದ್ದಿದ್ದಾರೆ. ತುಸು ತೆಳು ಛಾಯೆ ಬಿಟ್ಟರೆ ಯಾರ ಹಂಗಿನ ನೆರಳಲ್ಲಿಲ್ಲ. ಬಾನ ಸ್ವತಂತ್ರ ಹಕ್ಕಿಯಂತೆ ಈ ನೆಲದ ಗಾಳಿ ಬೆಳಕು ಸಂವೇದನೆಗಳಲ್ಲಿ ಈಜು ಹೊಡೆದಿದ್ದಾರೆ.
ರಾಜಕುಮಾರ ಮಡಿವಾಳರ “ನೆಲದ ಕಾವು ಮುಗಿಲ ತಾಕಿ” ಕವನ ಸಂಕಲನಕ್ಕೆ ಸತೀಶ ಕುಲಕರ್ಣಿ ಬರೆದ ಮುನ್ನುಡಿ

Read More

ಶಬ್ದ ಸಂವೇದನೆಯ ಒಳ ವಿನ್ಯಾಸ “ಘಾಚರ್ ಘೋಚರ್”: ದೇವಿಕಾ ನಾಗೇಶ್‌ ಬರಹ

“ಘಾಚರ್ ಘೋಚರ್” ಒಂದು ‘ನೀಳ್ಗತೆ ಎಂದು ಕೃತಿಯ ಲೇಖಕ ವಿವೇಕ ಶಾನಭಾಗ ಕರೆದರೂ ಇದು ಎರಡು ತಲೆಮಾರಿನ ಜೀವನಪಯಣದ ಓಟದಲ್ಲಿನ ಏಳುಬೀಳುಗಳನ್ನು ಪಲ್ಲಟವನ್ನೂ ಅಮೂಲಾಗ್ರವಾಗಿ ದಾಖಲಿಸುತ್ತದೆ. ‘ಘಾಚರ್ ಘೋಚರ್ʼ ಈ ಯುಗಳ ಪದ ನಮ್ಮ ಇಡೀ ಬದುಕೆ ಗೋಜಲಾಗಿರುವ ಕ್ರಮಕ್ಕೆ ಭಾವ ಪ್ರತಿನಿಧಿಯಂತೆ ಅನುರಣನಗೊಳ್ಳುತ್ತದೆ’ ಎಸ್. ಆರ್. ವಿಜಯಶಂಕರ್ ಮಾತಿದು. ಆದರೆ ಎಪ್ಪತ್ತು ಪುಟಗಳ ಕಿರು ಕಾದಂಬರಿ ಗಾತ್ರದ ಈ ಕಥೆಯ ಪಾತ್ರಗಳು ಒಂದು ಕುಟುಂಬದ ಭೂಮಿಕೆಯಿಂದ ಹೊರ ಜಗತ್ತಿಗೆ ವಿಸ್ತರಿಸಿಕೊಳ್ಳುತ್ತ ಸಾಗುವ ಚಲನೆ ಮೂಡಿಸುವ ತಲ್ಲಣ ದಂಗು ಬಡಿಸುವಂತಿದೆ.
ವಿವೇಕ ಶಾನಭಾಗ ಕಥಾಸಂಕಲನ “ಘಾಚರ್‌ ಘೋಚರ್”‌ ಕುರಿತು ದೇವಿಕಾ ನಾಗೇಶ್‌ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ