Advertisement

Category: ಪುಸ್ತಕ ಸಂಪಿಗೆ

ಇಷ್ಟುಕಾಲ ಒಟ್ಟಿಗಿದ್ದು….

ಅವಳು ಚಿಕ್ಕವಳಿದ್ದಾಗ ಎರಡು ಮೂರು ಸಲ ಈ ಕಥೆಯನ್ನು ಕೇಳಿದ್ದಳು. ಅವಳ ಅಜ್ಜನ ಅಜ್ಜನ ಅಜ್ಜನ ಅಜ್ಜನ ಮನೆಯಲ್ಲಿ ತಂದೆತಾಯಿ ಇಲ್ಲದ, ಸಂಬಂಧಿಕರ ಒಂದು ಹೆಣ್ಣು ಮಗಳಿದ್ದಳಂತೆ. ಆಶ್ರಯವಿಲ್ಲದೆ ಇವರ ಮನೆ ಸೇರಿದ್ದ ಹುಡುಗಿ ಅವಳು. ಆಗಿನ ಸಂಪ್ರದಾಯದಂತೆ ಮೈನೆರೆಯುವ ಮೊದಲು ಹೆಣ್ಣುಮಕ್ಕಳ ಮದುವೆ ಮಾಡಿಬಿಡಬೇಕು. ಹಾಗೊಂದು ವೇಳೆ ಮದುವೆಗೆ ಮೊದಲೇ ಹೆಣ್ಣು ಮಗು ನೆರೆದರೆ, ಮನೆತನಕ್ಕೆ ಕೆಟ್ಟದ್ದು ಎಂದು ಅವಳನ್ನು ಊರಾಚೆ, ಕಾಡಿನಲ್ಲಿ ಬಿಟ್ಟು ಬಂದುಬಿಡುತ್ತಿದ್ದರಂತೆ. ಆದರೆ ಅಷ್ಟು ಸುಲಭವೆ ಹೊಟ್ಟೆಯ ಕೂಸನ್ನು ಕಾಡಿನಲ್ಲಿ ಬಿಡುವುದು?
ಎನ್. ಸಂಧ್ಯಾ‌ ರಾಣಿ ಹೊಸ ಕಾದಂಬರಿ “ಇಷ್ಟುಕಾಲ ಒಟ್ಟಿಗಿದ್ದು” ಯಿಂದ ಆಯ್ದ ಭಾಗ ನಿಮ್ಮ ಓದಿಗೆ

Read More

ಒಂದೊಂದು ಕತೆಯೂ ಮತ್ತೊಂದರ ಕೊಂಡಿಯೋ ಎಂಬಂಥ ಸೂಕ್ಷ್ಮ ನೇಯ್ಗೆ

ಪೂರ್ಣಿಮಾ ತನ್ನ ಹುಟ್ಟೂರಿನ ನೆಲದ ಮನುಷ್ಯರನ್ನು ಕತೆಯೊಳಗೆ ತಂದಿದ್ದಾರೆ. ಬರಿಯ ಪಾತ್ರಗಳನ್ನಷ್ಟೇ ಅವರು ತಂದಿಲ್ಲ, ಅವರ ಬದುಕಿನ ಎಳೆಗಳನ್ನು ತಂದಿದ್ದಾರೆ. ಕತೆಗಾರ್ತಿ ಮಾಡಬೇಕಾದ ಕೆಲಸವಿದು. ಕತೆಯ ಮೂಲಕ ಬದುಕನ್ನು, ಭ್ರಮೆಗಳನ್ನು, ನಂಬಿಕೆಗಳನ್ನು, ಅವತಾರಗಳನ್ನು, ಆಕಸ್ಮಿಕಗಳನ್ನು, ಅರ್ಥವಂತಿಕೆಯನ್ನು ವಿವರಿಸುತ್ತಾ ಹೋಗುವುದು, ಇಷ್ಟನ್ನೂ ಪೂರ್ಣಿಮಾ ಸರಳವಾಗಿ ಮಾಡಿದ್ದಾರೆ. ಹಾಗಾಗಿ ಈ ಕತೆಗಳು ನಮ್ಮನ್ನು ಸೆಳೆಯುತ್ತವೆ.
ಪೂರ್ಣಿಮಾ ಮಾಳಗಿಮನಿ ಬರೆದ “ಡೂಡಲ್‌ ಕಥೆಗಳು” ಕೃತಿಗೆ ಗೋಪಾಲ ಕೃಷ್ಣ ಕುಂಟಿನಿ ಬರೆದ ಮುನ್ನುಡಿ

Read More

ಬೇರು ಮತ್ತು ಬಿಳಲು…

ಒಮ್ಮೆ ದೊಡ್ಡಮ್ಮನಿಗೆ ಅಪರಾತ್ರಿಯಲ್ಲಿ ಎಚ್ಚರ ತಪ್ಪಿಬಿಟ್ಟಿತ್ತು. ಮನೆಯಿಡೀ ಗದ್ದಲ… ದೊಡ್ಡಪ್ಪನ ಜೋರು ಅಳು… ಮನೆಮಂದಿಯೂ ಚಡಪಡಿಸುತ್ತಿದ್ದಾರೆ. ಐದಾರು ವರ್ಷದ ನನಗೆ ಏನು ಮಾಡಲೂ ತಿಳಿಯುತ್ತಿಲ್ಲ. ಕಾಲುಗಳು ನಡುಗುತ್ತಿವೆ. ಹೊಟ್ಟೆ ಚುಳ್ ಎನ್ನುತ್ತಿದೆ. ಅಳು ಗಂಟಲಲ್ಲೆ ಸಿಕ್ಕಿ ಹಾಕಿಕೊಂಡಂಥ ಅನುಭವ. ವಿಪರೀತ ಭಯದಿಂದ ಒಳಕ್ಕೆ ಹೊರಕ್ಕೆ ಕುಣಿಯುತ್ತಾ ಕೊನೆಗೆ ಗಣಿಗೆಯ ಸಂದಿಯಲ್ಲಿ ಹೋಗಿ ನಿಂತಿದ್ದೆ. ಎಷ್ಟು ಹೊತ್ತು ನಿಂತಿದ್ದೆನೋ.. ಮುಂದೆ ಏನಾಯಿತೋ.. ಒಂದೂ ನೆನಪಿಲ್ಲ. ಅಂದು ಕೆಂಪು ಫ್ರಾಕ್ ತೊಟ್ಟಿದ್ದೆ. ಎಲ್ಲ ಅಸ್ಪಷ್ಟ ನೆನಪುಗಳು.
ಇತ್ತೀಚೆಗೆ ಬಿಡುಗಡೆಯಾದ ಆಶಾ ಜಗದೀಶ್‌ ಅವರ “ಕಾಣೆಯಾದವರು” ಲಲಿತ ಪ್ರಬಂಧಗಳ ಸಂಕಲನದ ಒಂದು ಪ್ರಬಂಧ ನಿಮ್ಮ ಓದಿಗೆ

Read More

ಕಾಣ್ಕೆ ನೀಡುವ ಕವಿತೆಗಳು…

ಮಗುವಿನ ಮುಗ್ಧತೆಯ ಸಂಪಾದಿಸುವವರೆಗೂ ಈ ಸಾಧನೆಯ ಯಾನ ನಿರಂತರವಾಗಿ ಮುಂದುವರಿಯುತ್ತಿರಬೇಕು. ಲೋಕದ ಉಪಾಧಿಗಳ ಅಂಟಿನಿಂದ ಬಿಡುಗಡೆಯಾಗುವ ಹಾದಿಯಲ್ಲಿ ಈ ಕವಿ ದಿಟ್ಟ ಹೆಜ್ಜೆ ಇರಿಸಿದ್ದಾನೆ ಎಂಬುದು ಖುಷಿಯ ಸಂಗತಿ. ಅಲ್ಲಲ್ಲಿ ಹಳಹಳಿಕೆಯ ಧ್ವನಿಯೂ, ತಿರಸ್ಕಾರ ಭಾವವೂ, ಆಕ್ರೋಶವೂ ವ್ಯಕ್ತವಾಗಿದೆಯಾದರೂ ಅವರ ತಾತ್ವಿಕ ಹಾದಿಗೆ ಅವು ತೊಡಕಾಗಿ ಉಳಿದಿಲ್ಲ. ನಿರ್ವಾಣನಾಗುವುದರಲ್ಲಿ ಅದಮ್ಯ ಸುಖವಿದೆ ಎಂದು ಸಾರುವ ಅವರ ಕವಿತೆಗಳು ಈ ಸಂಕಲನಕ್ಕೆ ಇಟ್ಟ ಹೆಸರಿಗೆ ಅನ್ವರ್ಥವಾಗಿವೆ.
ಜಿ.ಆರ್. ರೇವಣಸಿದ್ದಪ್ಪನವರ ‘ಬಾಳನೌಕೆಗೆ ಬೆಳಕಿನ ದೀಪ’ ಕವನ ಸಂಕಲನಕ್ಕೆ ಡಾ.ಲೋಕೇಶ್ ಅಗಸನಕಟ್ಟೆ ಬರೆದ ಮುನ್ನುಡಿ

Read More

ಸಿನೆಮಾ ಜಗತ್ತಿನ ಒಳಹೊರಗು…

ಗಾಸಿಪ್ ಗ್ಲಾಮರಗಳ ಹೊರತಾಗಿಯೂ ಆ ಕಲಾವಿದರೂ ಮನುಷ್ಯರು, ನಮ್ಮಂತಹುದೇ ಅಂತಃಕರಣ ಉಳ್ಳವರು ಎಂಬ ಕನಿಷ್ಠ ಪ್ರಜ್ಞೆಯಿಲ್ಲದೇ ಜನರು ಪ್ರತಿಕ್ರಿಯಿಸುತ್ತಾರೆ. ಸಿನೆಮಾದವರೆಂದರೆ ಕೇವಲ ಪರದೆಯ ಮೇಲಿನ ಪಾತ್ರಗಳು ಮಾತ್ರ ಎಂದು ಗ್ರಹಿಸುವ ಮನಸ್ಸುಗಳಿಂದ ಬೇರೆನನ್ನು ನಿರೀಕ್ಷಿಸಲು ಸಾಧ್ಯ? ಎಂಬುದನ್ನು “ಬ್ರೇಕಿಂಗ್ ನ್ಯೂಸ್‍ಗಿಂತ ಬದುಕು ದೊಡ್ಡದು” ಎಂಬ ಪ್ರಬಂಧದಲ್ಲಿ ಹೆಸರಾಂತ ಕಲಾವಿದರೇ ಅನುಭವಿಸಿದ ನೋವಿನ ಪ್ರಸಂಗಗಳನ್ನು ಕಟ್ಟಿಕೊಡುತ್ತಾರೆ ಲೇಖಕರು.
ಎನ್.ಎಸ್. ಶ್ರೀಧರ ಮೂರ್ತಿಯವರ ಪ್ರಬಂಧಗಳ ಸಂಕಲನ “ಅಂದದ ಹೆಣ್ಣಿನ ನಾಚಿಕೆ”ಯ ಕುರಿತು ನಾಗರೇಖಾ ಗಾಂವಕರ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ