Advertisement

Category: ಪುಸ್ತಕ ಸಂಪಿಗೆ

ದಟ್ಟ ಅನುಭವಗಳ ಬೆನ್ನ ಹಿಡಿದು 

ಇಡೀ ಸಂಕಲನ ಜನಪ್ರಿಯತೆಯ ಮಾರ್ಗ ಹಾಗೂ ಮಹತ್ವಾಕಾಂಕ್ಷಿ ರಚನಾ ಸೆಳೆತ.. ನಡುವೆ ತುಯ್ಯುತ್ತಿದೆ. ‘ಮಾರ್ಗೀ ಅಂಗಿ’ ‘ಕರ್ಮಣ್ಯೇವಾಧಿಕಾರಸ್ಥೆ..’ ‘ಅವ್ವ ಮತ್ತು ರೊಟ್ಟಿ’ ಹಾಗೂ ‘ದ್ಯಾಮಿ’ ಈ ನಾಲ್ಕು ಮಹತ್ವಾಕಾಂಕ್ಷಿ ಕತೆಗಳು ಸಂಕಲನದ ತೂಕ ಹೆಚ್ಚಿಸಿವೆ. ಎಲ್ಲರಿಗೂ ಬೇಕಾದ ಮನುಷ್ಯನಾದರೂ ಸಹ ಅಲ್ಪಸಂಖ್ಯಾತ ಸಿಂಪಿಗನೊಬ್ಬ ಹೇಗೆ ಗ್ರಾಮ ರಾಜಕಾರಣಕ್ಕೆ ಈಡಾಗಿ ಬೇಡವಾಗುತ್ತಾನೆ ಎಂಬುದನ್ನು ಮಾರ್ಗೀ ಅಂಗಿ-ಕತೆ ಮನೋಜ್ಞವಾಗಿ ನಿರೂಪಿಸುತ್ತದೆ. ವೈದ್ಯಲೋಕದ ವೈರುಧ್ಯಗಳ ಚಿತ್ರಣದ ‘ಕರ್ಮಣ್ಯೆ ವಾಧಿಕಾರಸ್ಥೆ’ ಕತೆ ಮಾನವೀಯ ಸೂಕ್ಷ್ಮ ಎಳೆಯೊಂದರ ಮೂಲಕ ನಮ್ಮೆದೆಯನ್ನು ತಟ್ಟುತ್ತದೆ.
ಲಿಂಗರಾಜ ಸೊಟ್ಟಪ್ಪನವರ ಚೊಚ್ಚಲ ಕಥಾ ಸಂಕಲನ “ಮಾರ್ಗಿ”ಗೆ ಡಾ. ಪ್ರಹ್ಲಾದ ಅಗಸನಕಟ್ಟೆ‌ ಬರೆದ ಮುನ್ನುಡಿಇಡೀ ಸಂಕಲನ ಜನಪ್ರಿಯತೆಯ ಮಾರ್ಗ ಹಾಗೂ ಮಹತ್ವಾಕಾಂಕ್ಷಿ ರಚನಾ ಸೆಳೆತ.. ನಡುವೆ ತುಯ್ಯುತ್ತಿದೆ. ‘ಮಾರ್ಗೀ ಅಂಗಿ’ ‘ಕರ್ಮಣ್ಯೆ ವಾಧಿಕಾರಸ್ಥೆ..’ ‘ಅವ್ವ ಮತ್ತು ರೊಟ್ಟಿ’ ಹಾಗೂ ‘ದ್ಯಾಮಿ’ ಈ ನಾಲ್ಕು ಮಹತ್ವಾಕಾಂಕ್ಷಿ ಕತೆಗಳು ಸಂಕಲನದ ತೂಕ ಹೆಚ್ಚಿಸಿವೆ. ಎಲ್ಲರಿಗೂ ಬೇಕಾದ ಮನುಷ್ಯನಾದರೂ ಸಹ ಅಲ್ಪಸಂಖ್ಯಾತ ಸಿಂಪಿಗನೊಬ್ಬ ಹೇಗೆ ಗ್ರಾಮ ರಾಜಕಾರಣಕ್ಕೆ ಈಡಾಗಿ ಬೇಡವಾಗುತ್ತಾನೆ ಎಂಬುದನ್ನು ಮಾರ್ಗೀ ಅಂಗಿ-ಕತೆ ಮನೋಜ್ಞವಾಗಿ ನಿರೂಪಿಸುತ್ತದೆ. ವೈದ್ಯಲೋಕದ ವೈರುಧ್ಯಗಳ ಚಿತ್ರಣದ ‘ಕರ್ಮಣ್ಯೆ ವಾಧಿಕಾರಸ್ಥೆ’ ಕತೆ ಮಾನವೀಯ ಸೂಕ್ಷ್ಮ ಎಳೆಯೊಂದರ ಮೂಲಕ ನಮ್ಮೆದೆಯನ್ನು ತಟ್ಟುತ್ತದೆ.
ಲಿಂಗರಾಜ ಸೊಟ್ಟಪ್ಪನವರ ಚೊಚ್ಚಲ ಕಥಾ ಸಂಕಲನ “ಮಾರ್ಗಿ”ಗೆ ಡಾ. ಪ್ರಹ್ಲಾದ ಅಗಸನಕಟ್ಟೆ‌ ಬರೆದ ಮುನ್ನುಡಿ

Read More

ಮೊಣಕಾಲುಂಗರ, ತುತ್ತಿಗೆ ಸುತ್ತಿಗೆ

ಅಲ್ಲಿಂದ ಮುಂದೆ ದನದ ‘ಫ್ಯಾಕ್ಟರಿ’ ನೋಡುವ ಕಾರ್ಯಕ್ರಮ. ಅಂದರೆ ದನಗಳನ್ನು ಸಿದ್ಧಪಡಿಸುವ ಫ್ಯಾಕ್ಟರಿ. ನಮ್ಮ ಸಿನಿಮಾ ಮಂದಿರಗಳ ಟಿಕೆಟ್‌ ಕೌಂಟರ್‌ಗಳ ಎದುರು ಕ್ಯೂ ನಿಲ್ಲಲು ಎರಡೂ ಕಡೆ ಅಡ್ಡಗಟ್ಟೆ ಕಟ್ಟಿದ ಹಾಗೆ, ಅಮೆರಿಕದ ದನಗಳ ಫ್ಯಾಕ್ಟರಿಯ ಎದುರು ಆಳೆತ್ತರದ ಒಂದರ್ಧ ಕಿ.ಮೀ. ಉದ್ದದ ಬೇಲಿಯಂಥ ಕಟ್ಟೆ ಕಟ್ಟಿರುತ್ತಾರೆ. ಹುಟ್ಟಿ ಎರಡು ತಿಂಗಳುಗಳಷ್ಟೇ ಆದ ಮುದ್ದು ಎಳೆಗರುಗಳನ್ನು ಎಲ್ಲಿಂದಲೋ ಸಾವಿರ ಸಂಖ್ಯೆಯಲ್ಲಿ ಖರೀದಿಸಿ ತಂದು ಇಲ್ಲಿನ ಕಟ್ಟೆಗಳ ಮಧ್ಯೆ ಸಾಲಾಗಿ ಸಾಗಿಸುತ್ತಾರೆ.
ನಾಗೇಶ್ ಹೆಗಡೆ ಅವರು ಬರೆದ ಗಗನ ಸಖಿಯರ ಸೆರಗ ಹಿಡಿದು ಕೃತಿಯ ಮತ್ತೊಂದು ಅಧ್ಯಾಯ ಇಂದಿನ ಓದಿಗೆ.

Read More

ಕರಣಂ ಪವನ್‌ ಪ್ರಸಾದ್‌ ಹೊಸ ಕಾದಂಬರಿಯ ಪುಟಗಳು

ನಾನು ಇಲ್ಲಿ ಕುಳಿತು ಮಾತಾಡುತ್ತಿರುವ ನನ್ನ ‘ಈಗ’, ನೀವು ಕೇಳುತ್ತಿರುವ ನಿಮ್ಮ ‘ಈಗ’ ಒಂದೇ ಅಲ್ಲ. ಇಡೀ ಬ್ರಹ್ಮಾಂಡದ ಹೋಲಿಕೆಯಲ್ಲಿ ನಾವು ಸಣ್ಣವರಾದ್ದರಿಂದ ಈ ವಿಪರ್ಯಾಸ ಗೋಚರ ಆಗುತ್ತಿಲ್ಲ. ಹಾಟ್ ಬಲೂನಿನ ಮೇಲೆ ಇರುವ ಇರುವೆಗೆ ತನ್ನ ಜಾಗ ಮಟ್ಟಸ ಎಂದೇ ತೋರುತ್ತದೆ. ಮನುಷ್ಯನಿಗೆ ನಿಂತ ಜಾಗ ಮಟ್ಟಸ ಅನ್ನಿಸುವುದೂ ಹೀಗೆಯೇ. ನಾವು ಭೂಮಿಯ ಗಾತ್ರಕ್ಕೆ ಹೋಲಿಸಿ, ತುಂಬಾ ಗಾತ್ರ ಇದ್ದಿದ್ದರೆ ಅದು ದುಂಡು ಎಂದು ಕಣ್ಣಿಗೇ ಕಾಣಿಸುತ್ತಿತ್ತು. ಕರಣಂ ಪವನ್‌ ಪ್ರಸಾದ್‌ ಬರೆದ ‘ಸತ್ತು’  ಎಂಬ ಹೊಸ  ಕಾದಂಬರಿಯಿಂದ ಕೆಲವು ಪುಟಗಳು ನಿಮ್ಮ ಓದಿಗೆ

Read More

ಆನೆಗಳಿಗಾಗಿ ಕಾಡಿನಲ್ಲಿ ಮೇವು ಬೆಳೆದರೇ..

ವಲಯ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಹೇಳಿದೆ. `ಬೀಜ ರೆಡಿಯಾಗಿದೆ. ಯಾವಾಗ ಬರುತ್ತೀರಿ?’ ಅವರೂ ಉತ್ಸುಕತೆಯಲ್ಲಿದ್ದರು. `ನಾಳೆಯೇ ಬರುತ್ತೇವೆ’ ಎಂದರು. ಹೇಳಿದ ಮಾತಿನಂತೆ ಅವರು ಮರುದಿನ ಹತ್ತು ಗಂಟೆಗೆ ಸರಿಯಾಗಿ ಉಪವಲಯ ಅರಣ್ಯಾಧಿಕಾರಿ ಅಲ್ಲದೆ ಇತರ ಆರು ಮಂದಿ ಸಿಬ್ಬಂದಿಯವರೊಂದಿಗೆ ಮನೆಗೆ ಬಂದರು. ನಾನು ಎಲ್ಲರಿಗೂ ಟೀ ಮತ್ತು ಬಿಸಿಬಿಸಿ ಗೆಣಸಿನ ಪೋಡಿ ಮಾಡಿ ಕೊಟ್ಟೆ. ಕಾಡಿನಲ್ಲಿ ಬಾಯಾರಿಕೆಯಾದರೆ ಎಂದು 5 ಲೀಟರ್ ಕ್ಯಾನ್‌ನಲ್ಲಿ ಮಜ್ಜಿಗೆ ತುಂಬಿಸಿಕೊಂಡೆ. ನಂತರ ನಾವೆಲ್ಲರೂ ನಮ್ಮ ಮನೆಯಿಂದ ಮೇಲೆ ಇರುವ ರಕ್ಷಿತಾರಣ್ಯಕ್ಕೆ ಕತ್ತಿ, ಕೋಲು, ಬೀಜ ಹಿಡಿದು ಪ್ರವೇಶಿಸಿದೆವು.
ಸಹನಾ ಕಾಂತಬೈಲು ಅವರ ‘ಆನೆ ಸಾಕಲು ಹೊರಟವಳು’ ಪುಸ್ತಕದ ಮತ್ತೊಂದು ಬರಹ ಇಲ್ಲಿದೆ.

Read More

ಬದುಕಿನ ವಿನ್ಯಾಸಗಳ ಬಗ್ಗೆ ಓದುಗರನ್ನು ಒಪ್ಪಿಸುವ ಕತೆಗಳು

ಹೊಸ ತಲೆಮಾರಿನವರೇ ಇನ್ನೂ ಗೊಂದಲದಲ್ಲಿರುವಾಗ ಹಿಂದಿನ ತಲೆಮಾರಿನವರೇ ಈ ರೀತಿಯ ಮನೋಧರ್ಮ ತೋರುವುದು, ಹಾಗೆ ತೋರುವ ಮುನ್ನ ಮನುಷ್ಯ ಸಹಜವಾದ ಎಲ್ಲ ಗೊಂದಲ, ಹಿಂಜರಿಕೆಗಳನ್ನು ಅನುಭವಿಸುವುದನ್ನು ಕೂಡ ಕತೆ ತೆರೆದು ತೋರಿಸುತ್ತದೆ. ಈ ಗೊಂದಲ, ಹಿಂಜರಿಕೆಗಳನ್ನು ಹೇಳದೆ ಹೋಗಿದ್ದರೆ ಕತೆ ಕೇವಲ ಆಶಯಪ್ರಧಾನವಾಗಿರುತಿತ್ತು. ಯಾರದೋ, ಯಾವುದೋ ಕತೆಯೆಂದು ಪ್ರಾರಂಭವಾಗಿ, ಇನ್ಯಾವುದೋ, ಯಾರದೋ ಕತೆಯಾಗುವುದು. ಕೊನೆಗೆ ಎಲ್ಲರ ಕತೆಯೂ ಒಂದೇ ಆಗಿರುವುದು- ಈ ಮಾದರಿಯನ್ನು ಮತ್ತೆ ಮತ್ತೆ ಆನಂದ್ ಎಲ್ಲ ಕತೆಗಳಲ್ಲೂ ಬಳಸುತ್ತಾರೆ.
ಆನಂದ್‌ ಗೋಪಾಲ್‌ ಹೊಸ ಕಥಾಸಂಕಲನ “ಆಟಗಾಯಿ”ಗೆ ಕೆ. ಸತ್ಯನಾರಾಯಣ ಬರೆದ ಮುನ್ನುಡಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ