Advertisement

Category: ಸಂಪಿಗೆ ಸ್ಪೆಷಲ್

ಮಕ್ಕಳನ್ನು ಪೊರೆವ ಮಾತೃಭಾಷೆ ಕಲಿಸಿ: ಸದಾಶಿವ ಸೊರಟೂರು ಬರಹ

ಆರಂಭದಲ್ಲಿ ಮಗುವಿನ ಭಾಷೆಯಲ್ಲದೆ ಬೇರೆ ಭಾಷೆಯಲ್ಲಿ ಕಲಿಸುವ ವಿಚಾರಗಳು ಮಗುವಿಗೆ ಆಪ್ತವಾಗುವುದಿಲ್ಲ. ಬೇರೆ ಭಾಷೆಯಿಂದ ತಿಳುವಳಿಕೆ ಸಿಗಬಹುದು, ಒಳ್ಳೆಯ ನೌಕರಿ ಸಿಗಬಹುದು; ಬದುಕಿನ ರುಚಿ ಸಿಗುವುದಿಲ್ಲ. ನೆನಪಿರಲಿ ಮಗು ಕನ್ನಡ ಕಲಿತಿದೆ ಅಂದರೆ ಬರೀ ಭಾಷೆ ಕಲಿಯುತ್ತಿದೆ ಎಂದರ್ಥವಲ್ಲ; ಕನ್ನಡದ ಸಂಸ್ಕೃತಿಯನ್ನು ಕಲಿಯುತ್ತಿದೆ ಎಂದರ್ಥ.
ಕನ್ನಡ ರಾಜ್ಯೋತ್ಸವದ ನಿಮಿತ್ತ ಯಾವುದೇ ಕಲಿಕೆಗೂ ಮಾತೃಭಾಷೆ ಮಕ್ಕಳಿಗೆ ಎಷ್ಟು ಮುಖ್ಯ ಎಂಬುದರ ಕುರಿತು ಸದಾಶಿವ ಸೊರಟೂರು ಬರಹ ನಿಮ್ಮ ಓದಿಗೆ

Read More

ಮರ್ಯಾದೆ ಉಳಿಸಿದ ಒಂದು ರೂಪಾಯಿ!: ಬಸವನಗೌಡ ಹೆಬ್ಬಳಗೆರೆ ಬರಹ

ಈಗಿನಂತೆ ಆಗ ಮಕ್ಕಳಿಗೆ ನೋಟ್ ಬುಕ್ಕಿನ ರಾಶಿ ಇರುತ್ತಿರಲಿಲ್ಲ. ಆರು ಪುಸ್ತಕವಿದ್ದರೆ ಆರು ನೋಟ್ಸ್, ಒಂದು ಆಲ್ ರಫ್ ಅಷ್ಟೇ. ಸಮಾಜ ನೋಟ್ಸ್‌ನಲ್ಲಿ ಇರುವ ಪಾಠಕ್ಕನುಗುಣವಾಗಿ ಪೌರನೀತಿ, ಭೂಗೋಳ, ಇತಿಹಾಸ ಎಂದು ಭಾಗ ಮಾಡಿ ಬಳಸಿಕೊಳ್ಳುತ್ತಿದ್ದೆವು. ಆಗ ಫೇಮಸ್ ಆಗಿದ್ದ ರೇನಾಲ್ಡ್ಸ್ ಪೆನ್ನನ್ನು ಪರೀಕ್ಷೆ ಬರೆಯಲು ಮಾತ್ರ ತೆಗೆದುಕೊಳ್ಳುತ್ತಿದ್ದೆನು. ಒಂದೊಮ್ಮೆ ಅದರ ಇಂಕ್ ಮುಗಿದು ಹೋದರೆ ಅದರ ಕಡ್ಡಿಯನ್ನು‌ ಎಸೆಯುತ್ತಿರಲಿಲ್ಲ.
ಬಸವನಗೌಡ ಹೆಬ್ಬಳಗೆರೆ ಬರಹ ನಿಮ್ಮ ಓದಿಗೆ

Read More

ವಿಶ್ವಕಪ್ ಹೋರಾಟಕ್ಕೆ ಅಣಿಯಾದ ಬಲಾಢ್ಯರು: ವೆಂಕಟೇಶ ಬಿ.ಎಂ. ಬರಹ

ಕೆಲವು ವರ್ಷಗಳ ಹಿಂದೆ ಭಾರತ ಪಾಕಿಸ್ತಾನ ಪಂದ್ಯವೆಂದರೆ ಥೇಟ್ ಯುದ್ಧದ ರೀತಿ ಇರುತ್ತಿತ್ತು. ಅಂದಿನ ಆಟಗಾರರು ಪಾಕಿಸ್ತಾನದ ವಿರುದ್ಧ ಆಡುವಾಗ ಆವೇಶಭರಿತರಾಗಿ ಎದುರಾಳಿಗಳನ್ನು ಹುರಿದು ಮುಕ್ಕುವ ರೀತಿ ಆಡುತ್ತಿದ್ದರು. ಆದರೆ ಈಗಿನ ಆಟಗಾರರು ಪಾಕಿಸ್ತಾನದ ವಿರುದ್ಧ ಆಡುತ್ತಿದ್ದೇವೆ ಎನ್ನುವ ಪರಿವೆಯೇ ಇಲ್ಲದೆ ನಗಾಡಿಕೊಂಡು ಚಡ್ಡಿದೋಸ್ತಿಗಳ ಜೊತೆ ಆಡುವಂತೆ ವರ್ತಿಸುತ್ತಾರೆ ಎಂದು ಗೆಳೆಯ ಹೇಳಿದ.
ಕ್ರಿಕೆಟ್‌ ವಿಶ್ವಕಪ್‌ ಕುರಿತ ವೆಂಕಟೇಶ್‌ ಬಿ.ಎಂ. ಬರಹ ನಿಮ್ಮ ಓದಿಗೆ

Read More

ಹೇಗೆ ಮಾತಾಡಲಿ ನಿನ್ನೊಂದಿಗೆ?: ಮಹಾಲಕ್ಷ್ಮೀ ಕೆ. ಎನ್. ಬರಹ

ಮತ್ತೊಂದು ದಿನ ಕಾಲೇಜಿನ ಎದುರಿಗಿರುವ ಜೆರಾಕ್ಸ್ ಅಂಗಡಿ ಮುಂದೆ ಹೋಗ್ತಿದ್ದ. ಅರೇ,… ಅವನೇ ಅಲ್ವಾ… ಹೀಗೆ ಒಂದೆರಡು ಸಲ ಕಾಲೇಜಿನಲ್ಲಿ ನೋಡಿದ್ದೆ. ಒಂದು ಶನಿವಾರ ಕಾಲೇಜಿನಲ್ಲಿ ರೆಫರೆನ್ಸ್ ರೂಂ ಗೆ ಹೋಗಿ ಕೂತೆ. ನಾನು ಯಾರನ್ನೂ ಗಮನಿಸಿರಲಿಲ್ಲ, ಅಲ್ಲಿ ಯಾರೂ ಇರಲಿಲ್ಲ ಕೂಡ, ಸುಮ್ಮನೆ ಪಕ್ಕಕ್ಕೆ ತಿರುಗಿದೆ. ಅರೇ… ಮತ್ತೆ ಅವನೇ ಅಲ್ವಾ… ಇದ್ದವರಿಬ್ಬರಲ್ಲಿ ನಾನು ಮತ್ತೆ ಆ ಕಡೆ ತುದಿಯಲ್ಲಿ ಅವನು. ನ್ಯೂಸ್ ಪೇಪರ್, ವಿದ್ಯಾರ್ಥಿ ಮಿತ್ರ ಓದ್ತಿದ್ದಿರಬಹುದು. ಅವನನ್ನ ಮಾತನಾಡಿಸುವ ಮನಸ್ಸಿದೆ. ಆದರೆ ಹೇಗೆ ಮಾತು ಪ್ರಾರಂಭಿಸಲಿ? ಗೊತ್ತಾಗ್ತಿಲ್ಲ.
ಮಹಾಲಕ್ಷ್ಮೀ ಕೆ. ಎನ್. ಬರಹ ನಿಮ್ಮ ಓದಿಗೆ

Read More

ವೇಷ ಕಳಚಿ ನಡೆಯಬೇಕು…: ಆಶಾ ಜಗದೀಶ್ ಬರಹ

ನಿಜ ಏನೆಂದರೆ, ನಾವು ಸತ್ಯವನ್ನು ಎದುರಿಸುವ ಶಕ್ತಿಯನ್ನು ಪಡೆಯಬೇಕಿದೆ. ನಾವು ಒಳಗೆ ಹೇಗಿದ್ದೇವೋ ಹೊರಗೂ ಅದೇ ಆಗಿ ತೋರಿಸಿಕೊಳ್ಳುವ ಧಾರ್ಷ್ಟ್ಯವನ್ನು ಬೆಳೆಸಿಕೊಳ್ಳಬೇಕಿದೆ. ಇಲ್ಲವಾದರೆ ವೇಷ ಕಳಚುವುದು ಎಷ್ಟು ಹೊತ್ತಿನ ಕೆಲಸ! ನಾವು ಯಾವುದು ಅಲ್ಲವೋ ಅದಾಗಿ ನಮ್ಮನ್ನು ನಾವು ತೋರಿಸಿಕೊಳ್ಳಲಿಕ್ಕೆ ನಮಗೆ ಹೆಚ್ಚು ಪ್ರಯತ್ನ ಬೇಕಾಗಬಹುದು. ಆದರೆ ನಾವು ನಾವಾಗಿರುವುದಕ್ಕೆ ಅಷ್ಟೊಂದು ಪ್ರಯತ್ನ ಬೇಕಿರುವುದಿಲ್ಲ. ನಾವು ನಾವಾಗಲ್ಲದೆ ನಾವು ಬಯಸಿದ ನಾವಲ್ಲದ ಪಾತ್ರವಾಗಿ ಜಗತ್ತನ್ನು ನಂಬಿಸಲು ಸದಾ ಎಚ್ಚರದಿಂದ ಇರಬೇಕಾಗಿರುತ್ತದೆ.
ಆಶಾ ಜಗದೀಶ್‌ ಬರಹ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ