ಹಣಕ್ಕಾಗಿ ಕಡಿದುಹೋದ ಅನುಬಂಧ: ಮಾರುತಿ ಗೋಪಿಕುಂಟೆ ಸರಣಿ
ಮಾವನ ಎಲ್ಲಾ ಕೆಲಸಗಳಲ್ಲಿಯೂ ಅಪ್ಪ ಮುಂದಿರುತ್ತಿದ್ದ. ಕೊನೆಗೊಂದು ದಿನ ಮದುವೆಯ ಹೆಣ್ಣು ಗೊತ್ತಾಗಿ ಮದುವೆಯೂ ನಡೆದು ಹೋಯಿತು. ಮದುವೆಯಲ್ಲಿಯಂತೂ ಅಪ್ಪ ನಿರಂತರವಾಗಿ ಓಡಾಡಿದ್ದ. ತನ್ನ ಕೆಲಸಗಳನ್ನೆಲ್ಲ ಬದಿಗೊತ್ತಿ ಮುಂದೆ ನಿಂತು ಮದುವೆ ಮಾಡಿದ್ದ. ನಾವಿನ್ನೂ ಚಿಕ್ಕ ಹುಡುಗರಾದ್ದರಿಂದ ಮದುವೆಯಲ್ಲಿ ನಮ್ಮನ್ನು ಜೊತೆಗಿರಿಸಿಕೊಂಡೆ ಫೋಟೊ ತೆಗಿಸಿಕೊಂಡಿದ್ದ ನಮ್ಮಾವನಿಗೆ ನಮ್ಮ ಮೇಲೆ ಬಹಳ ಅಕ್ಕರೆ ಇದೆ ಎಂದುಕೊಂಡೆವು. ದೊಡ್ಡವರಾದ ಮೇಲೆಯೆ ನಮಗೂ ತಿಳಿದದ್ದು, ನಡತೆಗು ಮನಸ್ಸಿನ ಭಾವನೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆಯೆಂದು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ
