Advertisement

Category: ಸರಣಿ

ರಂಗದ ನಂಟು ಅಂಟಿದ ಬಗೆ: ಚಿತ್ರಾ ವೆಂಕಟರಾಜು ಸರಣಿ

ನಾಟಕೋತ್ಸವ ಮುಗಿದು ಅವರೆಲ್ಲ ಹೊರಟುಹೋದ ಮೇಲೆ ಮತ್ತೆ ನಮ್ಮ ದಿನಚರಿಗೆ ಹೊಂದಿಕೊಳ್ಳುವುದಕ್ಕೆ ಬಹಳ ಸಂಕಟವಾಗುತ್ತಿತ್ತು. ಕಿಂದರಿಜೋಗಿಯ ಕುಂಟನಂತೆ ‘ಅಯ್ಯೋ ಹೋಯಿತೆ ಆ ನಾಕ, ಅಯ್ಯೋ ಬಂದಿತೆ ಈ ಲೋಕʼ ಎನ್ನುವ ಭಾವನೆ ಬರುತ್ತಿತ್ತು. ಈಗಿನಷ್ಟು ನಾಟಕ ಪ್ರಯೋಗಗಳು ನೋಡಲು ಸಿಗುತ್ತಿರಲಿಲ್ಲವಾದ್ದರಿಂದ ನೀನಾಸಮ್‌ ತಿರುಗಾಟವನ್ನು ನಾವು ಕರೆಸಿದಷ್ಟು ವರ್ಷಗಳೂ ನಾಟಕ ಮಾಡಬೇಕು ಅನ್ನೋ ಆಸೆ ಹೆಚ್ಚಾಗುತ್ತಿತ್ತು.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ಕ್ವಾಲಿಫಿಕೇಷನ್ ಇದ್ದ ಮಾತ್ರಕ್ಕೆ ವ್ಯಕ್ತಿ ಶ್ರೇಷ್ಠವೆಂದು ಅಲ್ಲ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಹೆಚ್ಚೆಚ್ಚು ಓದಿದಂತೆ ಶಿಕ್ಷಣವು ನಮ್ಮಲ್ಲಿ ಉದಾರತೆಯನ್ನು ಬೆಳೆಸಬೇಕಿತ್ತು. ಹೃದಯ ವೈಶಾಲ್ಯತೆಯನ್ನು ಬೆಳೆಸಬೇಕಿತ್ತು. ಎಲ್ಲರೊಡನೆ ಹೊಂದಿಕೊಂಡು ಹೋಗುವ ಗುಣವನ್ನು ಬೆಳೆಸಬೇಕಿತ್ತು. ಆದರೆ ಕ್ವಾಲಿಫಿಕೇಶನ್ ಅನ್ನುವುದು ನಮ್ಮಲ್ಲಿ ಅಹಂಕಾರವನ್ನು ಬೆಳೆಸುತ್ತಿದೆ. ನಮ್ಮಲ್ಲಿ ಸಂಕುಚಿತತೆಯನ್ನು ಮೂಡಿಸುತ್ತಿದೆ. ಹೊಂದಾಣಿಕೆಯ ಕೊರತೆಯನ್ನು ಮೂಡಿಸುತ್ತಿದೆ. ಕೆಲವರು ಈ ಮನೋಭಾವ ತೋರುವುದಿಲ್ಲವಾದರೂ ಬಹುತೇಕರು ಇದೇ ರೀತಿಯ ಮನೋಭಾವ ತೋರುತ್ತಾರೆಂಬುದು ನನ್ನ ಅನುಭವಕ್ಕೆ ಬಂದಿದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ಮೂರನೆಯ ಕಂತು ನಿಮ್ಮ ಓದಿಗೆ

Read More

ಕತೆಗಳ ಬೆನ್ನತ್ತಿ….: ಎಚ್.‌ ಗೋಪಾಲಕೃಷ್ಣ ಸರಣಿ

ಕವನಗಳು ನನ್ನ ಮನೆ ಅಡ್ರೆಸಿಗೆ ಬಂದು ಸೇರುವ ಹಾಗೆ ಯೋಜಿಸಿದ್ದೆವು. ಕವನಗಳ ಮಹಾಪೂರ ಹೇಗೆ ಬಂದವು ಅಂದರೆ ಪ್ರಪಂಚದಲ್ಲಿ ಪ್ರತಿ ಮೂರನೇ ಮನುಷ್ಯ ಒಂದು ಕವಿ ಅನಿಸುವ ಮಟ್ಟಿಗೆ! ಅದರ ಆಯ್ಕೆ, ಅವುಗಳಲ್ಲಿ ಯಾವುದಕ್ಕೆ ಬಹುಮಾನ ಮೊದಲಾದವುಗಳನ್ನು ನಾವು ನಾವೇ ನಿರ್ಧಾರ ಮಾಡುತ್ತಿದ್ದೆವು. ಕವನ ಸಂಕಲನದ ಹಸ್ತಪ್ರತಿ ಹಿಡಿದು ಬೆಂಗಳೂರಿನ ಅರಳೆ ಪೇಟೆಯ ಹಲವು ಮುದ್ರಣಾಲಯ ಮತ್ತು ಪೇಪರ್ ಮಾರಾಟದ ಅಂಗಡಿಗಳ ಸರ್ವೇ ಮಾಡಿದೆವು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಸುಂದರ ಕಾಡಿನ ರೋಚಕ ಕಥೆಗಳು-5: ರೂಪಾ ರವೀಂದ್ರ ಜೋಶಿ ಸರಣಿ

ನಮ್ಮಲ್ಲಿ ತಂಪು ಜಾಸ್ತಿಯಾದ್ದರಿಂದ ಹಾವುಗಳು ಹೆಚ್ಚಾಗಿ ಇರಲಿಲ್ಲವೆನ್ನಿಸುತ್ತದೆ. ಒಂದು ನಿರುಪದ್ರವಿ ಹಾವಿನ ಬಗ್ಗೆ ಹೇಳಬೇಕು ಅದೆಂದರೆ ಹಸಿರು ಹಾವು. ಹಸಿರು ದಂಟಿಗೆ ಸುತ್ತಿಕೊಂಡು, ಸಪೂರ ಕೋಲಿನಂತೇ ಡೊಂಕಾಗಿ ನಿಂತು ಹುಳ ಹುಪ್ಪಡಿ ಹಿಡಿಯುವ ಈ ಹಾವನ್ನು ಗುರುತಿಸುವುದೇ ಕಷ್ಟ. ನಾವೇ ಅದೆಷ್ಟೋ ಸಲ, ಮುಳ್ಳಣ್ಣು ಕೊಯಿದು ಕೊಳ್ಳುವಾಗಲೋ, ಜಾಜಿ ಹೂ ಕೊಯ್ಯುವಾಗಲೋ ಟೊಂಗೆಯ ಜೊತೆಗೇ ಎಳೆದು ಬಿಡುತ್ತಿದ್ದೆವು. ಆಗ ಅದು ಗಾಬರಿಬಿದ್ದು, ಸರಕ್ಕನೆ ಕೆಳಗಿಳಿದು ಓಡುತ್ತಿತ್ತು. ಅದು ಹೋಗಿ ಎಷ್ಟು ಹೊತ್ತಿನ ತನಕ, ನಾವು ಜೀವ ಬಾಯಿಗೆ ಬಂದವರಂತೇ ಭಯದಿಂದ ಇಷ್ಟಗಲ ಕಣ್ಣುಮಾಡಿ ಮಾತು ಮರೆತು ನಿಂತಿರುತ್ತಿದ್ದೆವು!!
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

Read More

ಸುವರ್ಣ ಚೆಳ್ಳೂರು ಹೊಸ ಸರಣಿ “ಆಕಿ” ಇಂದಿನಿಂದ

ಆ ಕತಿ ಮತ್ತೆ ಆ ಬಾಯೊಳಗೆ ಮುರಿದ ಕಾಲಿಟ್ಟ ಚಿತ್ರ ನನ್ನೊಳಾಗ ಒಂದಷ್ಟು ಪ್ರಶ್ನೆಗಳನ್ನ ಹುಟ್ಟಿಸಿತು. ಅದನ್ನೆ ಯೋಚಿಸ್ತಿರುವಾಗ ಊರೊಳಾಗ ದೇವಿ ಮೆರವಣಿಗೆ ಬಂದಿತ್ತು, ನೋಡೊಕಂತ ಹೋದಾಗ ಹಳೆ ಗೆಳತ್ಯಾರೆಲ್ಲ ಸಿಕ್ಕಿದ್ದು, ಮನಿಯೊಳಾಗ ಕೆಲಸ ಮಾಡಿ ಅಲ್ಲೆ ಇರ್ತಿದ್ದ ಹೆಣ್ಮಕ್ಕಳು ಜಾತ್ರಿ ನೆಪದಾಗ ಹೊರಾಗ ಬಂದು ಒಬ್ರನ್ನೊಬ್ರು ಖುಷಿಯಿಂದ ಮಾತಾಡಿಸ್ತಾ ನಿಂತಿದ್ದು, ಊರಿನ ಹಾದಿಯೊಳಾಗ ಜಾತಿ ಜನಾಂಗ ಎಲ್ಲಾ ಮರತು ಎಲ್ಲಾರೂ ಒಟ್ಟಾಗಿ ಸೇರಿ ಒಂದೆ ಮನ್ಯಾರೇನೊ ಅನ್ನುವಂಗ ಜಾತ್ರಿ ಕೆಲಸಾನ ಎಲ್ಲಾರೂ ಸೇರಿ ಹಂಚಿಗ್ಯಂಡು ಮಾಡಿದ್ದು ನೋಡಿ, ಎಲ್ಲಾರೂ ಒಟ್ಟಿಗೆ ಸೇರಾಕ ನಾವೆಲ್ಲಾರೂ ಒಂದSS ಅನ್ನೊದು ಮನದಟ್ಟು ಮಾಡಿಕ್ಯಳಾಕ ಜಾತ್ರಿ ಒಂದು ನೆಪ… ಅದ್ರಲ್ಲಿರೊ ಆಕಿ ಕೂಡ!
ಸುವರ್ಣ ಚೆಳ್ಳೂರು ಹೊಸ ಸರಣಿ “ಆಕಿ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ