Advertisement

Category: ಸಾಹಿತ್ಯ

ಮೋಹದ ಪಥದಲ್ಲಿ ರಿಂಗಣಿಸುವ ಇಹಲೋಕ: ಶ್ರೀದೇವಿ ಕೆರೆಮನೆ ಬರಹ

“ಕೆಲವೊಮ್ಮೆ ಆತ್ಮ ಸಾಕ್ಷಿಯನ್ನು ಕೊಂದುಕೊಂಡು ಪ್ರಭುತ್ವದ ಆಯುಧವಾಗಬೇಕಾಗುತ್ತದೆ. ಹೀಗಾದಾಗ ಸಹಜವಾಗಿಯೇ ಒಂದು ಪ್ರಭುತ್ವದ ಜೊತೆ ಹೊಂದಾಣಿಕೆ ಮಾಡಿಕೊಂಡು ಸುಖದ ಬದುಕಿರಲಿ ಎಂದು ಹೊರಡಬೇಕು ಅಥವಾ ಪ್ರಭುತ್ವವನ್ನು ಎದುರು ಹಾಕಿಕೊಂಡು ಕೊಡುವ ಕಿರುಕುಳವನ್ನು ಸಹಿಸಿಕೊಳ್ಳಬೇಕು. ಪ್ರಾಣಾಂತಕ ಕಿರಿಕಿರಿಯನ್ನು ಅನುಭವಿಸಲಾಗದೇ ಸೋತು ಸುಣ್ಣವಾಗಬೇಕು.”

Read More

ಓಬೀರಾಯನ ಕಾಲದ ಕತೆಗಳು: ಪಂಜೆ ಮಂಗೇಶರಾವ್ ಬರೆದ ಕತೆ “ನನ್ನ ಚಿಕ್ಕ ತಂದೆ”

“ದಾರಿಯಲ್ಲಿ ಬರುತ್ತಿದ್ದಾಗ ನನ್ನ ಮನಸ್ಸಿನಲ್ಲಿದ್ದ ಪೂರ್ವ ಸಂಶಯಗಳೆಲ್ಲಾ ನಿಜವಾಗಿ ಕಂಡುಬಂದುವು. ಅಡಿಗೆಯವನು ಚಿಕ್ಕತಂದೆಯ ಗಂಟಿನ ಆಸೆಗೆ ಒಳಗಾಗಿ, ಊಟ ಉಪಚಾರಗಳಲ್ಲಿ ನಮ್ಮಿಬ್ಬರಿಗೆ ಬರಿದಾದ ಪಾತ್ರೆಗಳನ್ನು ಮಾತ್ರ ನಿಲ್ಲಿಸುವನು ಎಂದು ನನ್ನ ಹೆಂಡತಿಗೂ ಅವನಿಗೂ ದಿನಂಪ್ರತಿ ಕಾಳಗವಾಗುತ್ತಿತ್ತು. ಇವೆಲ್ಲವು ಅಲ್ಪ ಸಂಗತಿಗಳೆಂದು ಬಗೆದು ಅಡಿಗೆಮನೆಯ ಕಲಹವನ್ನು ನನ್ನ ಆಫೀಸ್ ಚಾವಡಿಗೆ ತರಲು ಬಿಡುತ್ತಿರಲಿಲ್ಲ.”

Read More

ನಿರ್ಗಮಿಸಿದ ಗೆಳೆಯನ ನೆನಪಿನಲ್ಲಿ ತಾಳ್ಯ ಮತ್ತು ಮಳಗಿ ಬರೆದ ಮುನ್ನುಡಿ

“ಕಾಲ ನಿಗೂಢ ವಿಸ್ಮಯವಾಗಿರುವಂತೆಯೇ ನಿರ್ದಯವೂ ಆಗಿದೆ. ಅದು ಯಾರನ್ನು, ಯಾವಾಗ ಅಪ್ಪಳಿಸುತ್ತದೊ ಯಾರೂ ಅರಿಯರು. ಅನೇಕ ಸಾಕ್ಷ್ಯಚಿತ್ರಗಳ ರಫ್ ಕಟ್ ಗಳ ರಾಶಿಯನ್ನು ಹೊಂದಿದ್ದ, ತಮ್ಮ ನೋಟ್ ಪುಸ್ತಕದಲ್ಲಿ ಅಸಂಖ್ಯ ಅಪೂರ್ಣ ಕವಿತೆಗಳನ್ನು ಪೂರ್ಣಗೊಳಿಸಬೇಕಿದ್ದ, ತಾವು ಕನಸಿದ್ದ ಗೋಹರ ಜಾನ್ ಳ ಕುರಿತು ಚಲನಚಿತ್ರವನ್ನು ಮಾಡಬೇಕಿದ್ದ ಚಲಂ ಕಳೆದ ವರ್ಷ ಹಠಾತ್ತಾಗಿ ನಿರ್ಗಮಿಸಿಬಿಟ್ಟರು.”

Read More

ಜರಿಲಂಗ ಮತ್ತು ಸಣ್ಣು: ನಾಗರೇಖಾ ಗಾಂವಕರ ಬರೆದ ವಾರದ ಕತೆ

“ಸದ್ದು ಮಾಡದಂತೆ ಕಳ್ಳ ಹೆಜ್ಜೆಯಲ್ಲಿ ತಂತಿ ತೂಗುತ್ತಿದ್ದಲ್ಲಿ ಬಂದವಳಿಗೆ ನಾಲಿಗೆಯ ಪಸೆಯಾರಿತ್ತು. ಪಾಗಾರದ ಈಚೆ ತಲೆಯನ್ನು ಮರೆ ಮಾಡಿಕೊಂಡೇ ಒಮ್ಮೆ ಲಂಗಕ್ಕೆ ಕೊಕ್ಕೆ ಹಾಕಿದಳು. ಒಂದೇ ಎಳೆತಕ್ಕೆ ಲಂಗ ತಂತಿಯಿಂದೆದ್ದು ಬಂದೇಬಿಟ್ಟಿತು. ಯಾರೂ ನೋಡುತ್ತಿಲ್ಲವೆಂದು ಖಾತ್ರಿಯಾದೊಡನೇ ಆಚೀಚೆ ನೋಡದೇ ಲಂಗವನ್ನು ಮುದ್ದೆಯಾಗುವಂತೆ ಮಡಚಿಕೊಂಡು ಕಂಕುಳಲ್ಲಿಟ್ಟುಕೊಂಡಳು.”

Read More

ಸುನೀತಾ ರೈನಾ ಪಂಡಿತ್‌ ಕಾವ್ಯದ ಕುರಿತು ವಿಜಯರಾಘವನ್

ತೀರಾ ಮೊನ್ನೆ ಕಾಶ್ಮೀರಿ ಭಾಷೆಯ ಕವಿತೆಯನ್ನು ಆಕೆ ನನಗಾಗಿ ಓದಿ ಹೇಳಿದರು, ಫೋನಿನಲ್ಲೆ. ಒಟ್ಟಿಗೆ ನಾಲ್ಕು. ಒಂದೊಂದೂ ಚೈತನ್ಯದಿಂದ ಪುಟಿಯುವ ಕುಣಿಸುವ ಲಯದವು. ಆ ಲಯ ಕನ್ನಡಕ್ಕೆ ತರುವುದಾದರೆ ಎಷ್ಟು ಚೆನ್ನ ಎಂಬ ಭಾವನೆ ಮೂಡಿಬಿಟ್ಟಿತು ನನ್ನಲ್ಲಿ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ