Advertisement

Category: ಅಂಕಣ

ಪುರಂದರದಾಸರು ಕನ್ನಡಮಾತೆಯ ಸುಪುತ್ರರಾಗಬಹುದು, ಕನಕದಾಸರಿಗೆ ಆ ಭಾಗ್ಯವಿಲ್ಲ!: ಸುಕನ್ಯಾ ಕನಾರಳ್ಳಿ ಅಂಕಣ

ಕನ್ನಡ ಸಿನೆಮಾ ಪುರಂದರದಾಸ ಮತ್ತು ಕನಕದಾಸರನ್ನು ಅರಿವಿಗೆ ದಕ್ಕಿಸಿಕೊಂಡ ರೀತಿಯಲ್ಲಿ ವ್ಯತ್ಯಾಸವಿರುವುದನ್ನು ಗಮನಿಸದೇ ಇರುವುದು ಕಷ್ಟ. ಎರಡೂ ಕಥಾನಕಗಳಲ್ಲಿ ಸಾಮಾನ್ಯ ಅಂಶಗಳಿರುವುದೂ ಸರಿಯೆ. ಉದಾಹರಣೆಗೆ ಬ್ರಾಹ್ಮಣ, ಬ್ರಾಹ್ಮಣೀಯತೆ, ಬ್ರಾಹ್ಮಣಿಕೆ ಮುಂತಾದ ಪರಿಕಲ್ಪನೆಗಳು ಎರಡರಲ್ಲೂ ಸಾಕಷ್ಟು ಲೇವಡಿಗೆ ಒಳಗಾಗುತ್ತವೆ. ಹಾಗೆ ನೋಡಿದರೆ ಕನ್ನಡದ ಹೆಚ್ಚಿನಂಶ ಎಲ್ಲ ಸಂತಚರಿತೆಗಳಲ್ಲಿ ಅದು ಸಾಮಾನ್ಯವೇ. ಕನಕ ಒಬ್ಬ ಅಬ್ರಾಹ್ಮಣ. ಕ್ಷತ್ರಿಯನೊ ಕುರುಬನೋ ಆಗಿದ್ದಿರಬೇಕು. ಚಿತ್ರದ ಹೆಚ್ಚಿನಂಶ ಅವನು ಬ್ರಾಹ್ಮಣ ವಿರೋಧವನ್ನು ನಿಭಾಯಿಸುವುದಕ್ಕೇ ಮೀಸಲಾಗುತ್ತದೆ. ಅವರಿಗಿಂತ ಅವನು ಹೇಗೆ ‘ಹೆಚ್ಚು’ ಬುದ್ಧಿವಂತ, ವಿವೇಕಿ, ಮತ್ತು ಅವನೂ ಸಹ ತನ್ನ ಪರಮಭಕ್ತಿಯ ಕಾರಣದಿಂದ ಮೋಕ್ಷಕ್ಕೆ ಅರ್ಹ ಎನ್ನುವುದನ್ನು ಸಾಬೀತುಪಡಿಸಲು ಚಿತ್ರ ಉದ್ದಕ್ಕೂ ಹೆಣಗುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ

Read More

ಕುದಿಯದ ಕಡಲು: ವಿನಾಯಕ ಅರಳಸುರಳಿ ಅಂಕಣ

ಇಂದಿಗೂ ನನ್ನನ್ನು ಇದೊಂದು ಪ್ರಶ್ನೆ ಕಾಡುತ್ತಲೇ ಇದೆ: ನಾವು ಓದಿಕೊಳ್ಳುವ ಸಾಹಿತ್ಯ, ಕೇಳಿಸಿಕೊಳ್ಳುವ ಕಿವಿ ಮಾತು, ಪ್ರತಿ ದಿನ ನೋಡುವ ಯಾರದ್ದೋ ಬದುಕಿನ ನಿದರ್ಶನಗಳು, ತತ್ವ, ಸಿದ್ಧಾಂತ, ಆದರ್ಶ, ಭಾಷಣಗಳು… ವೈಯಕ್ತಿಕ ಬದುಕಿನ ತಿರುವುಗಳಿಗೆ ಇವು ಹೇಗೆ ಅನ್ವಯವಾಗುತ್ತವೆ? ಯಾರದೋ ವಿಷಯದಲ್ಲಿ ಎಷ್ಟೆಲ್ಲ ಪ್ರಬುದ್ಧವಾಗಿ ದಾರಿ ಹೇಳುವ ನಾವು ನಮ್ಮ ಪ್ರಯಾಣದಲ್ಲಿ ಮಾತ್ರ ಏಕೆ ಓಲಾಡುತ್ತ ನಡೆಯುತ್ತೇವೆ?
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

ಪ್ರಾಣಿ ಒಡನಾಟದಲ್ಲಿನ ಮನುಷ್ಯರ ಸಂಕಟ: ಡಾ. ವಿನತೆ ಶರ್ಮ ಬರೆಯುವ ಅಂಕಣ

ಕಾಡಿನ ರಸ್ತೆಯಲ್ಲಿ ಹೋಗುವಾಗ ವಾಹನ ನಿಲ್ಲಿಸಬೇಡಿ, ಪ್ರಾಣಿಗಳಿಗೆ ಆಹಾರ ಕೊಡಬಾರದು ಎಂದು ದಪ್ಪ ಅಕ್ಷರಗಳಲ್ಲಿ ಬರೆದಿದ್ದರೂ ಅಲ್ಲಲ್ಲಿ ಜನ ವಾಹನಗಳನ್ನು ನಿಲ್ಲಿಸಿದ್ದರು. ಪ್ರಾಣಿಗಳು ಕಾಣಿಸುತ್ತಿವೆ ಎಂದು ಖುಷಿ. ಹತ್ತಿರ ಬರುವ ಮಂಗಗಳಿಗೆ ಹಣ್ಣು, ಸ್ನ್ಯಾಕ್ಸ್ ಕೊಡುವುದು ಮಾಡುತ್ತಿದ್ದರು. ಸ್ವಲ್ಪ ದೂರದಲ್ಲಿ ಇದ್ದ, ಮಂಗಗಳನ್ನೇ ನೋಡುತ್ತಿದ್ದ ಜಿಂಕೆಗಳನ್ನು ಕರೆಯುವುದು ನಡೆದಿತ್ತು. ಇಷ್ಟಾದ ನಂತರ ಹೀಗೆಯೆ ಹಣ್ಣು ತೋರಿಸಿ ಕರೆದರೆ ಆನೆ, ಕಾಡೆಮ್ಮೆ ಕೂಡ ಬರಬಹುದು ಎನ್ನಿಸಿತು. ಅವುಗಳ ಸ್ವಾಭಾವಿಕ ಆಹಾರ ಪ್ರದೇಶಗಳನ್ನು ಈಗ ಲಂಟಾನಾ ಪೊದೆಗಳು ಆಕ್ರಮಿಸಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಕನಕ ದಾಸರಲ್ಲಿನ ಜೀವನ ವಿವೇಕ ವ್ಯಾಪ್ತಿ; ಕನ್ನಡಿಗರ ಪ್ರಾಪ್ತಿ: ಎಲ್. ಜಿ. ಮೀರಾ ಅಂಕಣ

ಇವತ್ತಿಗೆ ಕನಕದಾಸರು ಹೇಗೆ ಪ್ರಸ್ತುತ ಎಂದು ನಾವು ನೋಡುವುದಾದರೆ, ಜಾತಿ ಕುಲ ಆಚಾರವನ್ನು ಮೀರಿದ ವಿವೇಕ ಮನುಷ್ಯನಿಗೆ ಮುಖ್ಯ ಎಂದು ಅವರು ಹೇಳಿದ ಮಾತು ಎಲ್ಲ ಕಾಲಕ್ಕೂ ಯೋಗ್ಯ. ನಂದಾದೀಪದಂತಹ ಮಾತು ಅದು. ಇಂದಿನ ಸಾವಯವ ಆಹಾರದ ಕಸರತ್ತು ಅವರು ಎಂದೋ ಹೇಳಿದ `ರಾಮಧಾನ್ಯಚರಿತ್ರೆ’ಯನ್ನು ನೆನಪಿಸುವುದಿಲ್ಲವೇ? ಚೆಲುವ ಕನ್ನಡ ನುಡಿಯ ಲಯಗಾರಿಕೆಯನ್ನು ಅರಿತು ಅವರು ಬಳಸಿದ ಪದಗಳು, ಹಾಡಿದ ಪದ್ಯಗಳು ಇಂದು ಗಾದೆ ಮಾತುಗಳಂತೆ ಬಳಕೆಯಾಗುತ್ತಿವೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಬದುಕಿನ ಬಣ್ಣಗಳು: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಆದರೆ ಈ ಸಮುದ್ರವನ್ನು ಬೊಗಸೆಯಲ್ಲಿ ತುಂಬಿಕೊಳ್ಳಲು ಸಾಧ್ಯವಿಲ್ಲ ಅನ್ನುವ ಅರಿವು ನನಗೆ ಯಾವತ್ತೋ ಆಗಬೇಕಿತ್ತು. ಸುಮ್ಮನೆ ದಡದಲ್ಲಿ ಕಾಯುತ್ತಾ ಕುಳಿತೆ. ಅವಳಿಗೆ ಕನಸಿತ್ತು ಸ್ಪಷ್ಟವಾದ ಗುರಿಯಿತ್ತು. ತನ್ನ ಸುತ್ತ ಇರುವ ಮಿತಿಗಳನ್ನು ಮೀರುವ ತುಡಿತವಿತ್ತು. ಅವಳ ಪಾತ್ರ ವಿಶಾಲವಿತ್ತು. ನಾನು ಒಡ್ಡಿದ ಬೊಗಸೆಗೆ ಹೆಚ್ಚು ಹೊತ್ತು ನಿಲ್ಲಲಾರಲು ಅನ್ನುವುದು ಗೊತ್ತಾಗಬೇಕಿತ್ತು.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಎಂಟನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ