Advertisement

Category: ದಿನದ ಪುಸ್ತಕ

ದಾರಕ್ಕೆ ಹಲವು ಸುತ್ತುಗಳು; ಆದರೆ ಗಂಟು ಮಾತ್ರ ಒಂದೇ

ವಿಜಯ ಮತ್ತು ಮಂಗಳಾ ಪದ್ಮಿನಿ ಮತ್ತು ಪ್ರಕಾಶರನ್ನು ಕಾಡುತ್ತಿರುವಂತೆ ಆಕೆಯ ತಾಯಿ ತನ್ನ ಇಳಿ ವಯಸ್ಸಿನಲ್ಲಿ ವಿಧುರ ಅಶೋಕನನ್ನು ಸೇರಿ ಇಬ್ಬರೂ ವಿದೇಶಕ್ಕೆ ಹಾರುವದು ಸಲಿಸಾಗಿ ನಡೆಯುತ್ತದೆ. ಜೀವನದಲ್ಲಿ ಗುರಿ ಇರದೇ ಇದ್ದಾಗಲೂ ಕೆಲವೊಮ್ಮೆ ಅವಕಾಶಗಳು ಹಾದುಹೋಗುತ್ತವೆ. ಅದನ್ನು ತಮ್ಮ ತಮ್ಮ ಅನುಕೂಲತೆಯನ್ನಾಗಿ ಬಳಸಿ ಬದುಕನ್ನು ಹಸನುಗೊಳಿಸಬಹುದೆನ್ನುವದನ್ನು ಅಪರವಯಸ್ಕರ ಕಹಾನಿ ತಿಳಿಸುತ್ತದೆ. ವಿಷಾದವೆನ್ನುವದು ತೀವ್ರವಾದಾಗ ಗುರುವಿನ ಮಾರ್ಗದರ್ಶನವಿದ್ದರೆ ಅದರಿಂದ ಹೊರಬರುವದು ಸಾಧ್ಯವೆನ್ನುವದು ಪದ್ಮಿನಿ ಕಂಡುಕೊಂಡಿದ್ದು ಮತ್ತೋರ್ವ ಗುರು ಪುರುಷೋತ್ತಮನಲ್ಲಿ.
ಕುಸುಮಾ ಆಯರಹಳ್ಳಿ ಕಾದಂಬರಿ “ದಾರಿ”ಯ ಕುರಿತು ನಾರಾಯಣ ಯಾಜಿ ವಿಶ್ಲೇಷಣೆ

Read More

ಕನ್ನಡ ಪ್ರಬಂಧಲೋಕದ ಹೊಸ ಕಿಟಕಿ

ಪ್ರಬಂಧಕಾರರಾಗಿ ಯೋಗಿಂದ್ರರ ಅಲೆದಾಟಕ್ಕೆ ವೈಚಾರಿಕತೆಯ ನೆಲೆಗಟ್ಟು ಇರುವಂತೆ ಭಾವುಕತೆಯ ಸ್ಪರ್ಶವೂ ಇದೆ. ‘ಬೆಳಕಿನ ಹಬ್ಬಕ್ಕೆ ಊರಿಗೆ ಹೋದದ್ದು’ ಪ್ರಬಂಧ, ಏಕಕಾಲಕ್ಕೆ ಬ್ರಿಟನ್ನು ಮತ್ತು ಮರವಂತೆಯ ನಡುವೆ ಮನೋವ್ಯಾಪಾರ ಸಾಧ್ಯವಾಗಿರುವ ವಿಶಿಷ್ಟ ರಚನೆಯಿದು. ಲೇಖಕ ಊರಿನಲ್ಲಿ ಹೆಜ್ಜೆಯಿಟ್ಟಾಗ ಮುತ್ತಿಕೊಳ್ಳುವ ದೀಪಾವಳಿಯ ಸಹಸ್ರ ಸಹಸ್ರ ದೀಪಗಳಂಥ ನೆನಪುಗಳು ಪ್ರಬಂಧದಲ್ಲಿ ಬೆಳಗಿವೆ. ‘ನಮ್ಮೂರು ಕಟ್ಟುತ್ತಿರುವ ಬೆಳಕಿನ ಮನೆಯೊಳಗೆ ನಾನೂ ಅಲೆದಾಡುತ್ತಿದ್ದೇನೆ’ ಎನ್ನುವ ಪ್ರಬಂಧಕಾರರ ಅನಿಸಿಕೆ ಓದುಗನದೂ ಆಗುತ್ತದೆ.
ಯೋಗೀಂದ್ರ ಮರವಂತೆ ಪ್ರಬಂಧಗಳ ಸಂಕಲನ “ನನ್ನ ಕಿಟಕಿ”ಗೆ ರಘುನಾಥ ಚ.ಹ. ಬರೆದ ಮುನ್ನುಡಿ

Read More

ಸಕೀನಾಳ ಮುತ್ತು: ರಮ್ಯತೆಯ ಹಿಂದಿನ ಅಸಂಗತತೆ

ಮನುಷ್ಯ ಭೂತ ಮತ್ತು ಭವಿಷ್ಯದ ಸಂಗತಿಗಳ ನಡುವೆ ಪಕ್ವವಾಗುವ ವರ್ತಮಾನದ ಹಾದಿಯಲ್ಲಿ ಸಾಗಬೇಕಾಗಿರುವುದು. ಕಾಲದ ಸಮಗ್ರತೆಯಲ್ಲಿ ಮನುಷ್ಯನ ಅರ್ಥವಾಗಿಯೂ ಅರ್ಥವಾಗದ ಸ್ವಭಾವಗಳು, ಕ್ಲೀಷೆಯೆನಿಸುವ ವ್ಯಕ್ತಿತ್ವಗಳನ್ನು ಅರ್ಥೈಸಿಕೊಳ್ಳುವುದು ಕೆಲವೊಮ್ಮೆ ಸುಲಭ, ಇನ್ನು ಕೆಲವೊಮ್ಮೆ ಅಷ್ಟೇ ಕಷ್ಟಕರವೂ ಆಗಿ ಪರಿಣಮಿಸುತ್ತದೆ. ಘಟಿಸಿಹೋದ ಸಂಗತಿಗಳಿಂದ ಕಲಿತ ಚಿಕ್ಕ ಪುಟ್ಟ ಅನುಭವಗಳು, ವಿಚಾರಗಳು ನಮ್ಮ ಭವಿಷ್ಯದ ನೆಲೆಯಲ್ಲಿ ವರ್ತಮಾನದ ವರ್ತನೆಗಳನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದು ಅಷ್ಟೇ ಗಮನಾರ್ಹ.
ವಿವೇಕ ಶಾನಭಾಗ ಬರೆದ “ಸಕೀನಾಳ ಮುತ್ತು” ಕಾದಂಬರಿಯ ಕುರಿತು ನಾಗರೇಖಾ ಗಾಂವಕರ ಬರಹ

Read More

‘ಮಕ್ಕಳೇನು ಸಣ್ಣವರಲ್ಲ’: ಹಾಸ್ಯದ ಒರತೆಯ ಕೃತಿ

ಸಂಕಲನದ ಮೊದಲ ಕಥೆ ‘ಎಗ್ ರೈಸ್ ಮಂತ್ರಿ’ ಹಾಸ್ಯದ ಜೊತೆಗೆ ಎಚ್ಚರವನ್ನೂ ಮೂಡಿಸುತ್ತದೆ. ಶಾಲಾ ಸಂಸತ್ತಿಗೆ ನಡೆಯುವ ಚುನಾವಣೆಯಲ್ಲಿ ವಿದ್ಯಾರ್ಥಿಯೊಬ್ಬ ಮಂತ್ರಿಯಾಗುವ ಆತುರದಲ್ಲಿ ಪೊಳ್ಳು ಭರವಸೆ ನೀಡಿ, ಗೆದ್ದಮೇಲೆ ಎಗ್ ರೈಸ್ ಕೊಡಿಸಲಾಗದೇ ಇರುವ ಸ್ಥಿತಿ, ಅದನ್ನು ಪಡೆಯಲು ಪ್ರಯತ್ನಿಸುವ ಅವನ ಗೆಳೆಯರು ಮಾಡುವ ಸತತ ಪ್ರಯತ್ನ ಹಾಸ್ಯವನ್ನುಕ್ಕಿಸುತ್ತದೆ. ಇದರಲ್ಲಿ ಸತ್ಯಾಂಶವೂ ಇದೆ. ಆದರೆ ನಾಗ ‘ನನಗೆ ಅಷ್ಟು ದುಡ್ಡು ಎಲ್ಲಿಂದ ಬರತೈತಿ, ಆಗಲ್ಲ ಬೇಕಾದ್ರ ಶಾಲಿಗೆ ಒಳ್ಳೆ ಕೆಲ್ಸ ಮಾಡ್ತೇನಿ’ ಅಂತ ಹೇಳಿದ್ದು ಅವನ ಪ್ರಾಮಾಣಿಕತೆಯಾದರೆ, ಆಸೆಗೆ ಬಲಿಯಾಗಬೇಡಿ ಎಂಬುದನ್ನೂ ಕಥೆ ಸೂಚ್ಯವಾಗಿ ಹೇಳುತ್ತದೆ.
ಗುಂಡುರಾವ್ ದೇಸಾಯಿ ಬರೆದ “ಮಕ್ಕಳೇನು ಸಣ್ಣವರಲ್ಲ” ಮಕ್ಕಳ ಕಥಾ ಸಂಕನದ ಕುರಿತು ನಾಗರಾಜ ಎಂ ಹುಡೇದ ಬರಹ

Read More

ಪರಿಸರ ಕಾಳಜಿಯ ಸಾಮಾಜಿಕ ಕಾದಂಬರಿ

ಹಿರೇಕಲ್ಲುಗುಡ್ಡ ಅನೇಕ ವಿಷಯಗಳನ್ನು ಸಾಕ್ಷೀಕರಿಸುವ ಸಾಕ್ಷಾತ್ ಸಾಕ್ಷಿಕಲ್ಲೆಂದರೂ ಆದೀತು. ದೇವಸ್ಥಾನ, ಜೀವವೈವಿಧ್ಯತೆ, ಪಾಳುಬಂಗಲೆ, ಸನ್ಯಾಸಿಗಳ ಆಶ್ರಮತಾಣ, ಮುಕುಂದೂರುಸ್ವಾಮಿಗಳು ಬಂದು ಹೋಗುವ ಸ್ಥಳ, ಹಣದ ವ್ಯಾಮೋಹಕ್ಕೆ ಬಿದ್ದು, ಯಾವುದರ ಬೆಲೆಯನ್ನೂ ಅರಿಯದೆ ಚಿಪ್ಪುಹಂದಿ, ಹಾವುಗಳು ಇನ್ನಿತರ ಪ್ರಾಣಿಗಳನ್ನು ಹಿಡಿದು ಕಳ್ಳಸಾಗಣೆ ಮಾಡುವ ಪೆದ್ದು ಮುಖವಾಡದ ನಿರ್ದಯೀ ಪ್ರವೃತ್ತಿಯ ಕೆಂಚಪ್ಪನ ಕಾರಸ್ಥಾನ…. ಹೀಗೆ ಹಿರೇಕಲ್ಲುಗುಡ್ಡ ಕೆಟ್ಟ ರಾಜಕೀಯ, ಅಧ್ಯಾತ್ಮ, ಐತಿಹ್ಯ, ದುರಾಸೆಗಳ ಪ್ರತೀಕವಾಗಿ ನಿಲ್ಲುತ್ತದೆ.
ಶಶಿಧರ ಹಾಲಾಡಿ ಕಾದಂಬರಿ “ಅಬ್ಬೆ” ಕುರಿತು ಬಿ.ಕೆ. ಮೀನಾಕ್ಷಿ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ