ಮರ್ಥರ್ ಟಿಡ್ ಫಿಲ್ನ ‘ಮನೆ’
ಚಿಕ್ಕಮ್ಮನ ಮನೆ ತಲುಪಿದ ಕೂಡಲೇ ನನಗೊಂದು ಮಹತ್ವದ ಸನ್ನಿವೇಶ ಎದುರಾಯಿತು. ಹತ್ತು ದಿನಗಳ ಹಿಂದಷ್ಟೆ ತೆರೆದ ಹೃದಯ ಚಿಕಿತ್ಸೆ ಮಾಡಿಸಿಕೊಂಡಿದ್ದ ಮೇಘರಾಜ ಚಿಕ್ಕಪ್ಪ ಹೆಚ್ಚಿನ ಪಕ್ಷ ಹಾಸಿಗೆ ಬಿಟ್ಟು ಮೇಲೆದ್ದಿರಲಾರರು ಎಂದು ಎಣಿಸಿಕೊಂಡಿದ್ದೆ. ಆದರೆ, ಮನೆಯ ಮುಂದೆ ನಮ್ಮ ಕಾರು ನಿಂತು ಕಾಲಿಂಗ್ ಬೆಲ್ ಒತ್ತುವ ಮೊದಲು ಅವರು ಬಂದು ಬಾಗಿಲು ತೆರೆದಾಗ ನನ್ನೆಣಿಕೆಯಲ್ಲ ಸುಳ್ಳಾಗಿ ಹೋಯಿತು. ಲವಲವಿಕೆಯಿಂದ ಪುಟಿಯುತ್ತಿದ್ದ ಅವರಿಗೆ ತೆರೆದ ಹೃದಯ ಚಿಕಿತ್ಸೆ ಆಗಿದೆ ಎಂದು ಮೇಲ್ನೋಟಕ್ಕೆ ಹೇಳುವ ಸಾಧ್ಯತೆ ಇರಲಿಲ್ಲ. ಇಂಥ ಅನೇಕ ಅಚ್ಚರಿಗಳು ಒಂದಾದಮೇಲೊಂದರಂತೆ ಎದುರಾಗುತ್ತ, ನನಗೆ ‘ಯುಕೆ’ ಪರಿಚಯವಾಗತೊಡಗಿತು.
ಸತೀಶ್ ಚಪ್ಪರಿಕೆ ಬರೆದ ಥೇಮ್ಸ್ ತಟದ ತವಕ ತಲ್ಲಣ ಕೃತಿಯು ಮರುಮುದ್ರಣಗೊಂಡಿದ್ದು, ಅದರ ಒಂದು ಅಧ್ಯಾಯ ಇಲ್ಲಿದೆ.
