ವಸಂತಸೇನೆ ಎಂಬ ನನ್ನ ಮುತ್ತಜ್ಜಿಯ ಕಥೆ: ಸತೀಶ್ ತಿಪಟೂರು ಬರಹ
ನಮ್ಮ ಅಜ್ಜಿಯರಿಂದ ಬಳುವಳಿಯಾಗಿ ಬಂದ ನಿವೇಶನದಲ್ಲಿ ಅರವತ್ತು ವರ್ಷಗಳ ಹಿಂದೆ ನಮ್ಮ ತಂದೆಯವರು ಕಟ್ಟಿದ್ದ ಈ ಮನೆಯಲ್ಲಿ ಇವರೆಲ್ಲರ ವೈವಿಧ್ಯಮಯ ಸ್ಮೃತಿ ಕಥನಗಳು ನೆಲೆಗೊಂಡಿವೆ. ಇಷ್ಟಲ್ಲದೇ ಈ ಮನೆಯೇ ಕೇಂದ್ರವಾಗಿ ಇಷ್ಟು ವರ್ಷಗಳಲ್ಲಿ ನಡೆಯುತ್ತಿರುವ ನೃತ್ಯಶಾಲೆ, ಸಂಗೀತ ಶಾಲೆ, ನಾಟಕ ಶಾಲೆಯ ನೂರಾರು ಹುಡುಗ ಹುಡುಗಿಯರು ಈ ಮನೆಯ ಒಡನಾಟದಲ್ಲಿ ಬೆಳೆದಿದ್ದಾರೆ. ಮತ್ತು ಹೋರಾಟ, ಚಳುವಳಿ, ಕ್ರಾಂತಿ ಎನ್ನುವ ಕಾಮ್ರೇಡ್‌ಗಳು, ಕವಿಗಳೂ, ಲೇಖಕರು, ಪತ್ರಕರ್ತರು, ಪ್ರಗತಿಪರ ರಾಜಕೀಯ ನೇತಾರರೂ ಅಟ್ಟದ ಮೇಲಿನ ಸಭೆಗಳಿಂದಾಗಿ ಈ ಮನೆಯ ಭಾಗವಾಗಿದ್ದಾರೆ. ಅಂದಿನ ದಿನಗಳ ಈ ಮನೆಯನ್ನು ಕೆಲವು ಸ್ನೇಹಿತರು ಜಾತ್ಯಾತೀತ ಮಠವೆಂದೂ; ಅಲ್ಲಿ ನಿತ್ಯ ದಾಸೋಹವೆಂದು ನೆನಪಿಸಿಕೊಂಡು ಮಾತನಾಡುತ್ತಿದ್ದುದುಂಟು.
ಸತೀಶ್ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಅಧ್ಯಾಯ ನಿಮ್ಮ ಓದಿಗೆ