Advertisement

Category: ಪುಸ್ತಕ ಸಂಪಿಗೆ

ಪೌರಾಣಿಕ ಚೌಕಟ್ಟಿನಲ್ಲಿ ವರ್ತಮಾನದ ಕರ್ಣನನ್ನು ದರ್ಶಿಸಿದ ಕಾದಂಬರಿ ‘ಕವಚ’: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ

‘ಕವಚ’ ಕಾದಂಬರಿಯು ಸಮಕಾಲೀನ ಬದುಕಿಗೆ ಅನ್ವಯವಾಗಬಲ್ಲ ಅನೇಕ ಸಂಗತಿಗಳನ್ನು ಪ್ರಸ್ತಾಪಿಸಿದೆ. ಗುರು ಪರಶುರಾಮರು ಅಸ್ತ್ರಗಳ ಪ್ರಯೋಗಕ್ಕೆ ಸಂಬಂಧಪಟ್ಟಂತೆ ಬೋಧನೆಯನ್ನು ನೀಡುವ ಸಂದರ್ಭದಲ್ಲಿ, ಆಕ್ರಮಣಗಳು ಸ್ವ-ರಕ್ಷಣೆಗಾಗಿಯೇ ಹೊರತು ಆಕ್ರಮಣಕ್ಕಲ್ಲ. ದುರ್ಗುಣಗಳಿಗೆ ಈಡಾದರೆ ಸಿದ್ಧಿಯಾದ ಮಂತ್ರಾಸ್ತ್ರಗಳೂ ಪ್ರಯೋಜನಕ್ಕೆ ಬರುವುದಿಲ್ಲ ಮೊದಲಾದ ವಿಚಾರಗಳನ್ನು ತಿಳಿಸಿಕೊಡುತ್ತಾರೆ. ಅರ್ಜುನನ ಚಾಪವಿದ್ಯಾ ಚಾತುರ್ಯದ ಸಮಯದಲ್ಲಿ ಕರ್ಣ ಅರ್ಜುನನ ವಿರುದ್ಧ ಹೋರಾಡಲು ನಿರ್ಧರಿಸಿದಾಗ ಜನರಿಗೆ ಅವನ ಬೆಂಬಲ ದೊರಕುತ್ತದೆ.
ರಾಧಾಕೃಷ್ಣ ಕಲ್ಚಾರ್ ಬರೆದ “ಕವಚ” ಕಾದಂಬರಿಯ ಕುರಿತು ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರಹ

Read More

ಜರ್ಮನಿಯಿಂದ ಕನ್ನಡಕ್ಕೆ ಬಂದ ‘ಈಡಾ’

ಕ್ಷಣ ಮೌನ. ಉರ್ಸುಲಾಳ ಜೊತೆ ಮಾತನಾಡದೆಯೇ ಹಾಯಾಗಿ ಕುಳಿತಿರಬಹುದು. ಅವಳು ಪೆದ್ದುಪೆದ್ದಾಗಿ ಏನೇನೋ ಪ್ರಶ್ನೆಗಳನ್ನು ಕೇಳುವುದಿಲ್ಲ. ತನ್ನ ಮೇಲೆ ಹುಡುಗನೊಬ್ಬ ಬಂದೆರಗಿದ ಘನವಾದ ವಿಷಯವನ್ನು ಹಂಚಿಕೊಳ್ಳಲು ಮಾತ್ರ ಬಾಯಿ ತೆರೆಯುವಳು. ಕೆಲವೊಮ್ಮೆ ನಾವಿಬ್ಬರೂ ಒಂದೇ ಬೆಂಚಿನ ಮೇಲೆ ಪಕ್ಕಪಕ್ಕದಲ್ಲೇ ಸುಮಾರು ಹೊತ್ತು ಕುಳಿತು ಒಂದೇ ಒಂದು ಶಬ್ದವನ್ನೂ ಉಸುರದೆ ಹೋದಂತಹ ದಿನಗಳಿವೆ. ನೀರಿನಿಂದ ಹೊರಬಂದು ಕಣ್ಣುಗಳನ್ನು ಮುಚ್ಚಿಕೊಂಡು ಬಿಸಿಲಿನ ಶಾಖಕ್ಕೆ ಮೌನವಾಗಿ ಮೈಯೊಡ್ಡಿ ಕುಳಿತಂತಹ ದಿನಗಳಿವೆ.
ಜರ್ಮನಿಯ ಕಾರೊಲೀನ ವಾಲ್‌ ಬರೆದ ‘22 ಬಾನೆನ್‌ʼ ಕಾದಂಬರಿಯನ್ನು ಹರ್ಷ ರಘುರಾಮ್‌ ಜರ್ಮನ್‌ ಭಾಷೆಯಿಂದ ನೇರವಾಗಿ ಕನ್ನಡಕ್ಕೆ ಅನುವಾದಿಸಿದ್ದು, ಈ ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಕುಂಬಳೆಯೆಂಬ ನಿಲ್ದಾಣದಲ್ಲಿ ತಿರುಮಲೇಶರು: ಸುಮಾವೀಣಾ ಬರಹ

‘ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ಡದೇನಲ್ಲ’ ಎನ್ನುವ ಮೂಲಕ ಕಾಲ ನಿರಂತತೆಯಿಂದ ಕೂಡಿರುತ್ತದೆ. ಆದರೆ ಕಾಲದ ತೆಕ್ಕೆಯಲ್ಲಿ ಜೀವಿಸುವ ಜೀವಿ ನಿರಂತರವಾಗಿ ಇರಲು ಸಾಧ್ಯವಿಲ್ಲ. ಆತ ಅಲ್ಪ ಎನ್ನುತ್ತಾರೆ. ‘ಕಾಲ’ ಎನ್ನುವುದೇ ನಿಲ್ದಾಣವಾದರೆ ಅಲ್ಲಿ ಚರಿತ್ರೆ, ಸಂಸ್ಕೃತಿ, ನಾಗರಿಕತೆ ಇತ್ಯಾದಿಗಳು ಬಂದು ಹೋಗುತ್ತಿರುತ್ತವೆ. ಹೇಗೆ ಕುಂಬಳೆಯ ರೈಲು ನಿಲ್ದಾಣದಲ್ಲಿ ಮದರಾಸು ಮೇಲ್, ಜನತಾ, ಜಯಂತಿ ಮೊದಲಾದ ವೇಗಧೂತ ರೈಲುಗಳು ನಿಲ್ಲುವುದಿಲ್ಲವೋ ಹಾಗೆ ಅನುಸರಿಸಲಾಗದ, ಹೊಂದಿಕೊಳ್ಳಲಾರದವು ಸರ್ರನೆ ಸರಿದು ಹೋಗುತ್ತವೆ.
ಇಂದು ಕೆ.ವಿ. ತಿರುಮಲೇಶರ ಹುಟ್ಟುಹಬ್ಬ. ಕಳೆದ ವರ್ಷ ತೀರಿಹೋದ ಅವರ ನೆನಪಿಗೆ ಅವರ ‘ಅವಧ’ ಕವನ ಸಂಕಲನದ ಕುರಿತ ಸುಮಾವೀಣಾ ಬರಹ ಇಲ್ಲಿದೆ

Read More

ಚಕ್ರವ್ಯೂಹದೊಳಗಿನ ಮಾಯಾಲೋಕ…: ಗೊರೂರು ಶಿವೇಶ್‌ ಬರಹ

ಕಾದಂಬರಿಯ ಕೊನೆಯಲ್ಲಿ ಆ ಕಡತ ಮುಸುಕುಧಾರಿಗಳ ಕೈಗೆಸಿಕ್ಕು ಅದರ ಮಹತ್ವ ತಿಳಿಯದ ಅವರು ನದಿನೀರಿಗೆ ಎಸೆದು ಅದು ಬಿಡಿಬಿಡಿಯಾಗಿ ಬಿದ್ದು ನೀರುಪಾಲಾಗುತ್ತದೆ. ಇದ್ದ ಒಂದು ಪ್ರತಿಯೂ ಮಾಯವಾದರೂ ಎಲ್ಲಿಯಾದರೂ ಮತ್ತೊಂದು ಪ್ರತಿಯನ್ನು ಹುಡುಕಿಯೆ ತೀರುತ್ತೇನೆ ಮತ್ತು ಅದರ ಸಹಾಯದಿಂದ ರತ್ನಮಾಲಾ ವಜ್ರವನ್ನು ಪಡೆದೆ ತೀರಬೇಕೆಂದು, ಮುಂದೆ ಅದನ್ನು ಹಂಚಿಕೊಳ್ಳಬಹುದೆಂದು ರಾಜಪ್ಪ ತಿಳಿಸಿ, ಅದಕ್ಕೆ ಮೂವರು ಒಪ್ಪಿ ಜುಗಾರಿಕ್ರಾಸ್‍ನ ಬಸ್ ಹತ್ತುವುದರೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.
ನೆನ್ನೆ ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನ, ಅದರ ನಿಮಿತ್ತ ತೇಜಸ್ವಿಯವರ “ಜುಗಾರಿ ಕ್ರಾಸ್” ಕೃತಿಯ ಕುರಿತು ಗೊರೂರು ಶಿವೇಶ್‌ ಬರಹ

Read More

ಶಾಪ ವಿಮೋಚನೆಯ ಹಂಬಲದ ಮಹತ್ವಾಕಾಂಕ್ಷಿ ಕಥನಗಳು: ಗೋವಿಂದರಾಜು ಕಥಾಸಂಕಲನದ ಮುನ್ನುಡಿ

‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಸಂಕಲನದ ಕಥೆಗಳು ತಮ್ಮ ಆಶಯ ಮತ್ತು ಭಿನ್ನ ದೇಹದ ಮೂಲಕ ಗಮನಸೆಳೆಯುತ್ತವೆ ಹಾಗೂ ಕಥೆಗಾರನ ಪ್ರಯೋಗಶೀಲತೆಯ ಬಗ್ಗೆ ಮೆಚ್ಚುಗೆ ಹುಟ್ಟಿಸುತ್ತವೆ. ಭಾವಾವೇಶಕ್ಕೆ ಒಳಗಾಗದೆ ಒಡಲ ಸಂಕಟವನ್ನು ಕಲೆಯಾಗಿಸುವುದು ಸಾಧ್ಯವಾಗಿರುವುದರಿಂದಲೇ, ಈ ಕಥೆಗಳು ಓದುಗರೊಳಗೆ ತಮ್ಮ ಕಂಪನಗಳನ್ನು ವಿಸ್ತರಿಸಿಕೊಳ್ಳುವ ಕಸುವು ಹೊಂದಿವೆ.
ಗೋವಿಂದರಾಜು ಎಂ ಕಲ್ಲೂರು ಕಥಾ ಸಂಕಲನ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ಕ್ಕೆ ರಘುನಾಥ ಚ.ಹ. ಬರೆದ ಮುನ್ನುಡಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ