Advertisement

Category: ಪುಸ್ತಕ ಸಂಪಿಗೆ

‘ಆದಿಮ’ದ ಸನ್ನಿಧಿಯಲ್ಲಿ: ಸತೀಶ್‌ ತಿಪಟೂರು ಬರಹ

ನಾಟಕದ ಪ್ರಕ್ರಿಯೆಯಲ್ಲಿ ನಾಟಕಕಾರ, ನಿರ್ದೇಶಕ ಮುಂತಾದವರು ನಾಟಕವನ್ನು ಅವರವರ ದೃಷ್ಠಿಕೋನಗಳಲ್ಲಿ ಮಕ್ಕಳ ಮೂಲಕ ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದರೆ, ಒಮ್ಮೊಮ್ಮೆ ಮಕ್ಕಳು ಅದನ್ನು ಮತ್ತೊಂದು ನೆಲೆಯಲ್ಲಿ ಕಾಣಿಸಿಬಿಡುತ್ತಾರೆ. ನಾಟಕವು ಮಕ್ಕಳನ್ನು ಒಳಗೊಳ್ಳುವ ಪ್ರಕ್ರಿಯೆಯು ಅವರ ಮನಸುಗಳಲ್ಲಿ ಕತೆಗಳ ಬೀಜಗಳನ್ನು ಬಿತ್ತಿ ಅವರ ಕಲ್ಪನೆಗಳ ಕಾವಿನಲ್ಲಿ ಮೊಳೆಸಿ, ಬೆಳೆಸುತ್ತಾ ನಾಟಕವು ಅವರ ದೇಹ – ಧ್ವನಿಗಳನ್ನು ವ್ಯಾಪಿಸಿ ಆಕಾರ ಪಡೆದು ಅರಳಿಕೊಂಡತೆ ಆಗಬೇಕು.
ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಮತ್ತೊಂದು ಅಧ್ಯಾಯ ನಿಮ್ಮ ಓದಿಗೆ

Read More

ಮೈಮನಗಳ ತಾಕಲಾಟದಲ್ಲಿ ಮೂಡಿದ ಜೀವನ ಶೋಧ: ಸುಧಾಕರ ದೇವಾಡಿಗ ಬಿ ಬರಹ

ಸುಮನ ತನ್ನ ಉದ್ಯೋಗದಲ್ಲಿ ಎದುರಿಸುವ ಮತ್ತೊಂದು ಸೂಕ್ಷ್ಮ ಇಕ್ಕಟ್ಟೆಂದರೆ, ತಾಯಿಯ ಮೊಲೆಯನ್ನು ಕಚ್ಚಿಕೊಂಡಿರುವ ಮರಿಗಳನ್ನು ತಾಯಿ ಇಲಿಯಿಂದ ಬೇರ್ಪಡಿಸುವ ಕ್ರಿಯೆ. ಇದು ಅವಳಿಗೆ ಹಿಂಸೆಯನ್ನುಂಟು ಮಾಡುತ್ತದೆ. ಆ ಟ್ರಾನ್ಸ್‌ಜೆನಿಕ್‌ ಇಲಿಗಳ ಸ್ಥಿತಿಯು ತನ್ನ ಸ್ಥಿತಿಗಿಂತ ಭಿನ್ನವೇನಲ್ಲ ಎಂದು ಭಾಸವಾಗುತ್ತದೆ. ಆ ಇಲಿಗಳಿಗೆ ಅನಸ್ತೇಶಿಯಾ ನೀಡಿ ಪ್ರಜ್ಞೆಯನ್ನು ತಪ್ಪಿಸುವುದು. ನಂತರ ಅದರ ದೇಹದ ಒಂದೊಂದು ಭಾಗವನ್ನು ಬೇರ್ಪಡಿಸುವ ಕ್ರಿಯೆ ಇದು ತನ್ನಿಂದ ಸಾಧ್ಯವಿಲ್ಲ ಎಂದು ಕೈ ಚೆಲ್ಲುತ್ತಾಳೆ.
ಚೀಮನಹಳ್ಳಿ ರಮೇಶ್‌ಬಾಬು ಕಾದಂಬರಿ “ಮಂಪರು” ಕುರಿತು ಸುಧಾಕರ ದೇವಾಡಿಗ ಬಿ ಬರಹ

Read More

ಕಲ್ಲಹಳ್ಳದ ಕಾಡುತೋಟ: ಸತೀಶ್‌ ತಿಪಟೂರು ಬರಹ

ನಾವು ತೋಟದ ಒಂದು ಅಂಚಿನಿಂದ ಇನ್ನೊಂದು ಅಂಚಿಗೆ ಬಿರಬಿರನೆ ಹೆಜ್ಜೆ ಹಾಕುತ್ತಿದ್ದೆವು. ಮರಗಿಡಗಳ ನಡುವಿನ ಕಾಲು ಹಾದಿಯಲ್ಲಿ ಸ್ವಲ್ಪ ದೂರ ನಡೆದು ಪಂಪ್ ಹೌಸ್ ಬಳಿ ಅವರು ನಿಂತರು. ಮರಗಿಡಗಳ ನಡುವೆ ಏನೋ ಕಂಡಂತಾಗಿ ನಾನು ನಿಂತೆ. ನಿಧಾನವಾಗಿ ಹೆಜ್ಜೆಯಿಟ್ಟು ಮುಂದೆ ಸರಿದು ನೋಡಿದರೆ ಪ್ರಪಾತದಂತೆ ಆಳ, ಅಗಲ, ವಿಸ್ತಾರವಾದ ತುಂಗಾ ನದಿ. ಅಬ್ಬಾ! ರೋಮಾಂಚನವಾಯಿತು. ನಾವು ನದಿಯ ತಟದಲ್ಲಿ ನಿಂತಿದ್ದೆವು.
ರಂಗಕರ್ಮಿ ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಕೆಲವು ಅಧ್ಯಾಯಗಳು ಪ್ರತಿ ಶನಿವಾರ ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟಗೊಳ್ಳಲಿವೆ

Read More

ನೀಲಿ ಮತ್ತು ಸೇಬು: ಸುಧಾ ಆಡುಕಳ ಕಥಾಸಂಕಲನಕ್ಕೆ ಎಚ್. ಎಸ್. ಸತ್ಯನಾರಾಯಣ ಮುನ್ನುಡಿ

‘ಹೆಣ್ಣು’ ಇವರ ಕಥೆಗಳ ಕೇಂದ್ರವಾದರೂ ಆಕೆಯ ಸುತ್ತಲಿರುವ ಗಂಡಿನ ಮನೋಧರ್ಮವನ್ನೂ ಇವರು ಅಲಕ್ಷಿಸಿಲ್ಲ. ಮನುಷ್ಯಪ್ರಜ್ಞೆ ಕಾಲದಿಂದ ಕಾಲಕ್ಕೆ ಜಿಗಿಯುವಲ್ಲಿ, ವಿಕಸಿಸುವಲ್ಲಿ, ಅರ್ಥಪೂರ್ಣತೆಯತ್ತ ತುಡಿಯುವಲ್ಲಿ ಎದುರಿಸಿ ನಿಲ್ಲಬೇಕಾದ ಬಿಕ್ಕಟ್ಟುಗಳನ್ನು ತಮ್ಮ ಕಥೆಗಳ ಮೂಲಕ ಶೋಧಿಸುವ ಸುಧಾ ಅವರ ಲೇಖನಿ ಬದುಕಿನ ಸಕಾರಾತ್ಮಕ ಗುಣಗಳತ್ತಲೇ ಹೆಚ್ಚಾಗಿ ವಾಲುವುದರಿಂದ ಇವರ ಪಾತ್ರಗಳು ಸಂಕಟಗಳ ನಡುವೆಯೂ ಜೀವನೋತ್ಸಾಹವನ್ನು ಉಳಿಸಿಕೊಂಡು ಪುಟಿಯುತ್ತವೆ.
ಸುಧಾ ಆಡುಕಳ ಅವರ “ನೀಲಿ ಮತ್ತು ಸೇಬು” ಕಥಾ ಸಂಕಲನಕ್ಕೆ ಡಾ. ಎಚ್. ಎಸ್. ಸತ್ಯನಾರಾಯಣ ಬರೆದ ಮುನ್ನುಡಿ

Read More

‘ಹೂವಿನ ಕೊಲ್ಲಿʼ ಅನ್ನುವ ದ್ವೀಪ: ಅಬ್ದುಲ್ ರಶೀದ್ ಕಾದಂಬರಿಗೆ ಬಿ.ವಿ.ರಾಮಪ್ರಸಾದ್ ಪ್ರಸ್ತಾವನೆ

“ಈ ಕಾದಂಬರಿಯ ನಿರೂಪಣೆಯ ವೈಶಿಷ್ಠ್ಯ ಇರುವುದು ಎಲ್ಲಿಯೂ ಪಾತ್ರಗಳ ಮೇಲೆ, ಅವುಗಳ ನಡೆಗಳ ಮೇಲೆ, ನಂಬಿಕೆಗಳ ಮೇಲೆ ‘ನೈತಿಕʼ ಅಥವಾ ‘ವೈಚಾರಿಕʼ ಟಿಪ್ಪಣಿಯನ್ನು ಮಾಡದೇ ಇರುವುದು. ‘ಇವರೆಲ್ಲಾ ಎಂತಾ ಮೂಢನಂಬಿಕೆ ಜನಾರಿʼ ಎಂದೆಲ್ಲಾ ಹೇಳದೇ ಇರುವುದು. ಇಲ್ಲಿ ನಿರೂಪಕ ಇದ್ದು ಕೂಡ ಇಲ್ಲ ಅನ್ನುವ ಹಾಗೆ ಪಾತ್ರಗಳು ತಮ್ಮ ಪಾಡಿಗೆ ತಾವಿದ್ದಾವೆ ಅನಿಸುತ್ತದೆ”
ಕನ್ನಡದ ಕಥೆಗಾರ ಅಬ್ದುಲ್ ರಶೀದ್ ದಶಕಗಳ ಹಿಂದೆ ಬರೆದಿದ್ದ, ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದ್ದ ‘ಹೂವಿನಕೊಲ್ಲಿ’ ಕಾದಂಬರಿ ಈಗ ಪರಿಷ್ಕೃತಗೊಂಡು ಮರುಮುದ್ರಣಗೊಳ್ಳುತ್ತಿದೆ. ಪರಿಷ್ಕೃತ ಕಾದಂಬರಿಯಲ್ಲಿ ಪ್ರಕಟವಾಗಿರುವ ಡಾ. ಬಿ.ವಿ.ರಾಮಪ್ರಸಾದ್ ಅವರ ಪ್ರಸ್ತಾವನೆ ಇಲ್ಲಿದೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ