Advertisement

Category: ಪುಸ್ತಕ ಸಂಪಿಗೆ

ಮತ್ತೆಂದೂ ಅವಳು ಬರೆಯುವ ಸಾಹಸಕ್ಕೆ ಇಳಿಯಲಿಲ್ಲ

ನನ್ನ ಮದುವೆಯಾಗಿ ಕೆಲವು ವರ್ಷಗಳ ನಂತರ ದೊಡ್ಡ ಜಮೀನ್ದಾರನೊಂದಿಗೆ ಅವಳ ಮದುವೆಯಾಯ್ತು. ಅವಳ ಗಂಡನಿಗೆ ಅವಳು ಹೊರಗೆ ಹೋಗಿ ಹಾಡುವುದು ಇಷ್ಟವಿರಲಿಲ್ಲ. `ನೀನು ನಮ್ಮ ಮಕ್ಕಳಿಗೆ ಹಾಡು ಕಲಿಸಿದರೆ ಬೇಕಾದಷ್ಟಾಯಿತು. ಸಾರ್ವಜನಿಕ ಪ್ರದರ್ಶನ ಬೇಡ. ಹೊರಗೆ ಹೋದರೆ ತೋಟದ ಉಸ್ತುವಾರಿ, ಮನೆ ವಾರ್ತೆ ನೋಡಿಕೊಳ್ಳುವವರು ಯಾರು? ಊರ ಜನರಿಗೆ ಸಂಗೀತ ಹೇಳಲಿಕ್ಕೆ ಅಲ್ಲ ನಾನು ನಿನ್ನನ್ನು ಮದುವೆಯಾದದ್ದು’ ಎಂದಿದ್ದ. ಹಾಡುಹಕ್ಕಿಯ ರೆಕ್ಕೆ ಅಲ್ಲಿಗೆ ಮುರಿಯಿತು ಎಂದು ಬೇರೆ ಹೇಳಬೇಕಾಗಿಲ್ಲ ತಾನೆ?
ಸಹನಾ ಕಾಂತಬೈಲು ಅವರ ‘ಆನೆ ಸಾಕಲು ಹೊರಟವಳು’ ಪುಸ್ತಕದ ಇನ್ನೊಂದು ಪ್ರಬಂಧ ಇಲ್ಲಿದೆ.

Read More

ನಾನೂ ವಿದ್ಯುತ್ ತಯಾರಿಸಿದೆ!

ನನಗಿಂತ ದೊಡ್ಡದಾದ ರುಬ್ಬುವ ಕಲ್ಲಿನ ಮುಂದೆ ಕುಳಿತು ಬೆಳಗಿನ ಉಪಾಹಾರಕ್ಕೆ, ಮಧ್ಯಾಹ್ನದ ಭೋಜನಕ್ಕೆ ಮತ್ತೆ ರಾತ್ರಿಯ ಊಟಕ್ಕೆ ರುಬ್ಬುವ ಕೆಲಸ.  ಏಳು-ಎಂಟು ಕೂಲಿಯಾಳುಗಳು ದಿನಾ ಊಟಕ್ಕೆ. ಅಷ್ಟು ಮಾತ್ರವಲ್ಲ ನನ್ನ ತವರಿನ ಕಡೆಯಿಂದ ಬಂದ ಇಬ್ಬರು ಕೆಲಸಗಾರರು ಮನೆಯಲ್ಲೇ ಇರುತ್ತಿದ್ದರು. ಅವರಿಗೆ ರಾತ್ರಿಯೂ ಬೇಯಿಸಿ ಹಾಕುವ ಕೆಲಸ ನನ್ನದಾಗಿತ್ತು. ನೆಂಟರು ಬಂದರೆ ಕೇಳುವುದೇ ಬೇಡ. ಒಟ್ಟಿನಲ್ಲಿ ನನ್ನ ಬದುಕೇ ರುಬ್ಬುವುದರಲ್ಲಿ ಕಳೆದುಹೋಗುತ್ತಿತ್ತು. `ಇದರಿಂದ ನನಗೆ ಬಿಡುಗಡೆ ಯಾವಾಗ? ಎಂದು ಯೋಚಿಸುವಾಗ ವಿದ್ಯುತ್ ತಯಾರಿಸುವ ಯೋಚನೆ ಮನಸ್ಸಿಗೆ ಬಂತು. ಸಹನಾ ಕಾಂತಬೈಲು ಅವರ ‘ಆನೆ ಸಾಕಲು ಹೊರಟವಳು’ ಪುಸ್ತಕದ ಪ್ರಬಂಧ  ಇಲ್ಲಿದೆ. 

Read More

ಅಕ್ಷರಗಳು ಅನಾವರಣಗೊಳಿಸುವ ಸತ್ಯ

ಸಮಾಜದ ಶ್ರೇಣಿಯಲ್ಲಿ ಮೇಲಿನ ಸ್ಥರದಲ್ಲಿ ನಿಂತ ನಮಗೆ ಕೆಳಗೆ ಕಣ್ಣುಹಾಯಿಸಿದಾಗ ಕಂಡುದಷ್ಟೇ ಸತ್ಯ ಎಂಬ ನಮ್ಮ ಭ್ರಮೆಯನ್ನು ಇಲ್ಲಿನ ಪ್ರತಿಯೊಂದು ಸಾಲುಗಳೂ ‘ಚಿತ್’ ಮಾಡುತ್ತಲೇ ಹೋಗುತ್ತವೆ. ನಮ್ಮ ಭ್ರಮಾಲೋಕ ಕಳಚಿದೊಡನೆ ‘ವಾಸ್ತವದ ಕಹಿಸತ್ಯ’ವನ್ನು ಒಂದಿನಿತೂ ಉತ್ಪ್ರೇಕ್ಷೆಯಿಲ್ಲದೆ ನಮ್ಮೆದುರು ತೆರೆದಿಡುತ್ತದೆ. ‘ಇದು ಸತ್ಯ, ಇದು ವಾಸ್ತವ. ನೀನು ಗ್ರಹಿಸಬೇಕಾದುದು ಹೀಗೆ. ಈ ಗ್ರಹಿಕೆಯೊಂದೇ ಸಮಾನತೆಯೆಡೆಗೆ ನಿನ್ನನ್ನೂ, ನನ್ನನ್ನೂ ಕರೆದೊಯ್ಯಬಲ್ಲುದು. ಸಾಧ್ಯವೇನು ನಿನಗೆ?’ ಎಂಬಂತೆ ತಣ್ಣಗೆ ಪ್ರಶ್ನಿಸುತ್ತವೆ.
ದೇವನೂರ ಮಹಾದೇವ ಬರೆದ “ಎದೆಗೆ ಬಿದ್ದ ಅಕ್ಷರ” ಕೃತಿಯ ಕುರಿತು ಸುಧಾ ಆಡುಕಳ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ