Advertisement

Category: ಸರಣಿ

ನಾಟಕ ರೂಪದ ವರದಿ ವಾಚನದ ಮಜಾ… ಬಸವನಗೌಡ ಹೆಬ್ಬಳಗೆರೆ ಸರಣಿ

ತಮಾಷೆಯ ಸಂಗತಿ ಅಂದರೆ ಇನ್ಸಲ್ಟ್ ಆಗಿದ್ದ ದಯಾನಿಗೆ ಹೊರಗೆ ಹೋದ ಕೂಡಲೇ ಅವನು ಮದುವೆಯಾಗಬೇಕೆಂದುಕೊಂಡಿದ್ದ ಅವನ ಮನದರಸಿ ಕರೆ ಮಾಡಿದ್ದಾಳೆ. ಅವಳ ಕರೆಯಲ್ಲಿ ಅವನು ತಲ್ಲೀನನಾಗಿಬಿಟ್ಟಿದ್ದಾನೆ. ನಾಟಕವನ್ನು‌ ಮರೆತುಬಿಟ್ಟಿದ್ದಾನೆ ಅನಿಸುತ್ತೆ. ತಕ್ಷಣ ನಾನೇ ಹೊರ ಹೋಗಿ ಅವನನ್ನು ಒಪ್ಪಿಸಿ ವಾಪಸ್ಸು ಕರೆ ತಂದಿದ್ದಾಯ್ತು, ನಂತರ ಕಾಳಿದಾಸ ಫಿಲಂ ನಲ್ಲಿನ ‘ಕಮಲೇ ಕಮಲೋತ್ಪತ್ತಿಃ’ ಪದದ ಬದಲು ಪ್ರೇರಣಾ ತರಬೇತಿಯಾದ್ದರಿಂದ ‘ಪ್ರೇರಣೇ ಪ್ರೇರಣೋತ್ಪತ್ತಿಃ’ ಎಂದು ಹೇಳುತ್ತಾ ಬಂದು ಪ್ರಶ್ನೆ ಕೇಳಿಸಿ ನಮ್ಮ ವರದಿ ವಾಚನದ ನಾಟಕವು ಮೂಡಿಬಂತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಓಹೋ ಗ್ರಾಮವಂತೆ, ಆಹಾ ಸಮುದಾಯವಂತೆ: ಕೆ. ಸತ್ಯನಾರಾಯಣ ಕಥಾ ಸರಣಿ

ನಿಮ್ಮ ಸೋದರತ್ತೆ ಒಬ್ಬಳು ಕ್ಷಯದಿಂದ ಬೇಗ ತೀರಿ ಹೋದಳು. ಅವಳಿಗೆ ಮುಂಚೆ ಅವಳ ಗಂಡ ಕೂಡ ಕ್ಷಯದಿಂದಲೇ ತೀರಿ ಹೋಗಿದ್ದ. ಸೋದರತ್ತೆ ಮಗನಿಗೆ ಸರಿಯಾಗಿ ವಿದ್ಯೆ ಹತ್ತಲಿಲ್ಲ. ಅವನಿಗೊಂದು ಮನೆ ಕಟ್ಟಬೇಕು ಅಂತ ನಿಮ್ಮಜ್ಜಿ ಹೊರಟಾಗ, ನೆರವಾಗ್ತೀನಿ ಅಂತ ಮೊದಲು ಗೋಪಿನಾಥರಾಯ, ನಂತರ ಅಚ್ಯುತರಾಯ, ಆಮೇಲೆ ರಂಗಶೆಟ್ಟಿ ಎಲ್ಲರೂ ಮುಂದೆ ಬಂದರು. ಅವನು ಕಳ್ಳ ಅಂತ ಇವನು, ಇವನು ಕಳ್ಳ ಅಂತ ಅವನು. ಒಬ್ಬರ ಮೇಲೆ ಒಬ್ಬರು ಚಾಡಿ ಹೇಳಿ, ಒಟ್ಟಾರೆ ನಿಮ್ಮಜ್ಜಿಗೆ ಟೋಪಿ ಹಾಕುತ್ತಿದ್ದರು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

Read More

ಕಾಫಿಪ್ರಿಯ ಕೃಷ್ಣನ ಕತೆ…: ಎಚ್. ಗೋಪಾಲಕೃಷ್ಣ ಸರಣಿ

ಬೆಳಿಗ್ಗೆ ಏಳರ ಸುಮಾರಿಗೆ ಅಮ್ಮ ಮನೆಯ ಮುಂದಿನ ಅಂಗಳಕ್ಕೆ ಬಂದು ಅಲ್ಲಿನ ಸೀಮೆಂಟ್ ನೆಲದ ಮೇಲೆ ಚಾಪೆ ಹಾಕುತ್ತಿದ್ದಳು. ನಂತರ ಒಳನಡೆದು ಅವತ್ತಿನ ಎರಡು ಕನ್ನಡ ಪತ್ರಿಕೆ ಆಚೆ ತಂದು ಚಾಪೆಯ ಮೇಲೆ ಕೂಡುತ್ತಿದ್ದಳು. ಕಣ್ಣಿಗೆ ಕನ್ನಡಕ ಏರಿಸಿ ಅವಳು ಮೊದಲ ಪುಟದ ಹೆಡ್ಡಿಂಗ್ ನೋಡುವಷ್ಟರಲ್ಲಿ ಹಿರಿಯ ಸೊಸೆ ಒಂದು ಒಂದೂವರೆ ಸೇರು ಹಿಡಿಯುವ ಹಿತ್ತಾಳೆ ಚೊಂಬು, ಎರಡು ಹಿತ್ತಾಳೆ ಲೋಟ ತಂದು ಚಾಪೆಯ ತುದಿಯಲ್ಲಿ ಇಡುತ್ತಿದ್ದಳು. ಚೊಂಬಿನ ತುಂಬಾ ಹಬೆಯಾಡುತ್ತಿದ್ದ ಕುದಿಯುವ ಕಾಫಿ, ಅದರ ಗಮ ಗಮ ಇಡೀ ರಸ್ತೆಗೆ ಹಬ್ಬುವುದಾ?
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೩ನೇ ಬರಹ ನಿಮ್ಮ ಓದಿಗೆ

Read More

ಚೊಟ್ಟೆ ರಮ್ಮು ಮತ್ತು ದೇವಿ ಪಾತ್ರಧಾರಿ: ಎಸ್. ಗಂಗಾಧರಯ್ಯ ಅನುಭವ ಕಥನ

ತಿರುಗಿ ಮೇಳದ ಜಾಗಕ್ಕೆ ಬರುವ ಹೊತ್ತಿಗೆ ದೇವಿಗೂ ರಕ್ತ ಬೀಜಾಸುರನಿಗೂ ಯುದ್ಧ ಶುರುವಾಗಿತ್ತು. ದೇವಿ ಕೈಯ್ಯಲ್ಲಿರುವ ಕತ್ತಿಗಳನ್ನು ಜಳಪಿಸುತ್ತಾ ಹಲ್ಲು ಕಡಿಯುತ್ತಾ ನೆಗೆನೆಗೆದು ಕುಣಿಯುತ್ತಿದ್ದಾಳೆ. ರಕ್ತಬಿಜಾಸುರನೂ ಅಷ್ಟೇ ಗತ್ತಿನಲ್ಲಿ ಹೆಗಲ ಮೇಲಿದ್ದ ದಪ್ಪನೆಯ ಗದೆಯನ್ನು ಆಗಾಗ ಮೇಲೆತ್ತಿ ತಿರುವುತ್ತಾ ಲಯ ಬದ್ಧವಾಗಿ ಹೆಜ್ಜೆಗಳನ್ನು ಹಾಕುತ್ತಾ ದೇವಿಯನ್ನು ಯುದ್ಧಕ್ಕೆ ಆಹ್ವಾನಿಸುತ್ತಿದ್ದಾನೆ. ಸ್ಟೇಜಿನಿಂದ ದೂರದಲ್ಲಿ ಯಾರೋ ಹಾಸಿದ್ದ ಚಾಪೆಯಲ್ಲಿ ಕೂರುವ ಹೊತ್ತಿಗೆ ಹೊಟ್ಟೆಯ ಜೊತೆಗೆ ತಲೆಯೂ ಸುತ್ತಿ ಬಂದಂತೆ ಆಗ ತೊಡಗಿತು.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹದಿನಾಲ್ಕನೆಯ ಕಂತು

Read More

ಇರಲಿರಲಿ ಇಲಿಗಳು  ಇಳೆಯಲಿ: ಸುಮಾವೀಣಾ ಅಂಕಣ

ಇಲಿಗಳು ಮನುಷ್ಯನನ್ನು ಬುದ್ಧಿಮತ್ತೆಯಲ್ಲಿ ಹೋಲುತ್ತವೆ ಎನ್ನುತ್ತಿದ್ದಂತೆ ಸಾಮಾಜಿಕ ಮತ್ತು ಹಾಸ್ಯ ಭರಿತ ಕುವೆಂಪುರವರ ಕೃತಿ ಮಕ್ಕಳ ನಾಟಕ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ನೆನಪಾಗುತ್ತದೆ. ಕಿಂದರಿ ಬಾರಿಸುವುದರ ಮೂಲಕ ನೂರಾರು ಇಲಿಗಳನ್ನು ಒಟ್ಟುಗೂಡಿಸಿ ಧಾನ್ಯಗಳ ಕಣಜಗಳನ್ನು ನಾಶಮಾಡಿಸುತ್ತಾನೆ. ಅವುಗಳ ಉಪದ್ರ ತಾಳಲಾರದೆ ‘ಅವುಗಳನ್ನು ಹಿಂದಕ್ಕೆ ಕರೆಸಿಕೊಂಡರೆ ಸಾವಿರಹೊನ್ನು ಕೊಡುತ್ತೇವೆ’ ಎಂದ ಗ್ರಾಮಸ್ಥರು ಅವುಗಳನ್ನು ಕಿಂದರಿಜೋಗಿ ಹಿಂದಕ್ಕೆ ಕರೆಸಿಕೊಂಡ ನಂತರ ಮಾತಿಗೆ ತಪ್ಪುತ್ತಾರೆ ಮೋಸ ಹೋದ ಕಿಂದರಿ ಜೋಗಿ ಕಿಂದರಿ ಬಾರಿಸಿ ಇಲಿಗಳನ್ನು ಮಕ್ಕಳೆದುರು ಪುನಃ ಕರೆಸಿ ಗ್ರಾಮಸ್ಥರ ವಂಚನೆಯ ಸ್ವಭಾವವನ್ನು ಬಯಲಿಗೆಳೆಯುತ್ತಾನೆ.
ಸುಮಾವೀಣಾ ಹೊಸ ಅಂಕಣ “ನುಡಿನಲಿವು”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ