Advertisement

Category: ಸರಣಿ

ಕೆಂದಲೆ ಗಿಳಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಗಿಳಿಗಳು ಗೂಡುಗಳನ್ನು ನಿರ್ಮಿಸುವುದಿಲ್ಲ, ಮರದ ಒಣ ಕಾಂಡಗಳಲ್ಲಿ ಅಥವಾ ಹಳೆಯ ಗೋಡೆಗಳಲ್ಲಿ, ಕೊರೆದ ತೂತುಗಳೊಳಗೆ ಗುಂಪಾಗಿ ಗೂಡು ಕಟ್ಟುತ್ತವೆ. ಸಂತಾನೋತ್ಪತ್ತಿ ಮತ್ತು ವಾಸ, ಎರಡನ್ನೂ ಗಿಳಿಗಳು ಮರದ ಪೊಟರೆಯಲ್ಲಿಯೆ ನಡೆಸುತ್ತವೆ. ಈ ಅವಧಿಯಲ್ಲಿ, ಹೆಣ್ಣು ಗಿಳಿಗಳು 2-8 ಅಚ್ಚ ಬಿಳಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗೆ 17-20 ದಿನಗಳ ಕಾಲ, ಕಾವು ಕೊಡುವ ಇಡೀ ಕೆಲಸವನ್ನು ಹೆಣ್ಣು ಹಕ್ಕಿಯೇ ನಿರ್ವಹಿಸುತ್ತದೆ. ಆ ಸಮಯದಲ್ಲಿ ಗಂಡು ತನ್ನ ಸಂಗಾತಿಗೆ ಆಹಾರ ತಂದೊದಗಿಸುವುದು.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕೆಂದಲೆ ಗಿಳಿ ಕುರಿತ ಬರಹ ಇಲ್ಲಿದೆ

Read More

ಆಡೂ ಆಟ ಆಡೂ…: ಬಸವನಗೌಡ ಹೆಬ್ಬಳಗೆರೆ ಸರಣಿ

ಒಳಾಂಗಣ ಆಟವಾಗಿ ಹುಣಸೇ ಬೀಜಗಳನ್ನು ಗೆಲ್ಲುವ ಆಟವಾಡಿ ಬೀಜಗಳನ್ನು ಆಡುತ್ತಿದ್ದೆವು. ಆಗ ಹುಣಸೇಬೀಜಗಳನ್ನು ಕೊಂಡುಕೊಳ್ಳುವವರು ಮನೆ ಮನೆಗೆ ಬರುತ್ತಿದ್ದರಿಂದ ಅವರು ಕೊಡುತ್ತಿದ್ದರಿಂದ ಚಿಲ್ಲರೆ ಕಾಸಿಗೆ ಆಸೆಪಟ್ಟು ಹುಣಸೇಬೀಜಗಳನ್ನು ಗೆಲ್ಲುವುದನ್ನು ಚಾಲೆಂಜ್ ಆಗಿ ಸ್ವೀಕರಿಸುತ್ತಿದ್ದೆವು. ಆದರೆ ಗೋಲಿಯಾಟ ಆಡಿ ಗೋಲಿಗಳನ್ನು ಗೆಲ್ಲುವುದೂ ಸಹ ಪ್ರತಿಷ್ಟೆಯ ವಿಷಯ ಎನಿಸಿಕೊಳ್ಳುತ್ತಿತ್ತಾದರೂ ಗೆದ್ದ ಗೋಲಿಗಳಿಂದ ಒಂದು ರೂಪಾಯಿಯೂ ಲಾಭವಿರಲಿಲ್ಲ. ಚೌಕಾಬಾರ ಆಡಲು ಕವಡೆಗಳನ್ನು ಕೆಲವರು ಬಳಸುತ್ತಿದ್ದರಾದರೂ ನಾವು ಹುಣಸೆಬೀಜಗಳನ್ನು ತೇದುಕೊಂಡೇ ಅವನ್ನೇ ಬಳಸಿಕೊಂಡು ಆಡುತ್ತಿದ್ದೆವು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತೊಂದನೆಯ ಕಂತು ನಿಮ್ಮ ಓದಿಗೆ

Read More

ಹಾಸ್ಯೋತ್ಸವದ ಚಾಲನೆ…: ಎಚ್. ಗೋಪಾಲಕೃಷ್ಣ ಸರಣಿ

ಮಿಡಲ್ ಬರಹಗಾರರ ಗುಂಪು ಒಂದು ಶುರು ಮಾಡುವ ಐಡಿಯಾ ನಮ್ಮಲ್ಲಿ ಬಿತ್ತಿದರು. ಇದು ನಂತರ ಮಿಡಲ್ ಬದಲಿಗೆ ಹಾಸ್ಯಬರಹಗಾರರ ಸಂಘಟನೆ ಆಗಲಿ ಅಂತ ನಿರ್ಧಾರ ಆಯಿತು. ಹಿಂದೆ ಕೈಗಾರಿಕಾ ರಂಗದ ಸಾಹಿತ್ಯ ವೇದಿಕೆ ಆರಂಭಿಸಿದಾಗ ಶ್ರೀ ಆನಂದರಾಮ ಶಾಸ್ತ್ರಿ ಅವರು ನೀತಿ ನಿಯಮ ರೂಪಿಸಿದ್ದರು ಅಂತ ಹೇಳಿದ್ದೆ. ಇದಕ್ಕೂ ಅವರೇ ಆರಂಭಿಕ ಪತ್ರಗಳು ಸಿದ್ಧ ಮಾಡಿದರು. ಇದಕ್ಕೆ ಬೇಕಾದ ನಮ್ಮ ಮೀಟಿಂಗ್‌ಗಳು ಬೆಂಗಳೂರಿನ ಸಂಗಮ್ ಟಾಕೀಸ್ ಮುಂದೆ ಸೇರಿತು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೫ನೇ ಬರಹ ನಿಮ್ಮ ಓದಿಗೆ

Read More

ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು: ಸುವರ್ಣ ಚೆಳ್ಳೂರು ಸರಣಿ

ಆಕಾಶದಾಗಿನ ಸಾಲು ಚುಕ್ಕಿ ನೋಡಿ ನಾನು ನಿದ್ದಿಗೆ ಜಾರಿದೆ.‌ ಮುಂಜೆನೆದ್ದಾಗ ಹೊಲದಾಗ ಮಂಜುಮಂಜಾಗಿತ್ತು, ಬೆಳ್ಳಕ್ಕಿ ಅದಾಗಲೇ ಎದ್ದು ಹೊಲದಾಗ ಹಾರಾಡಿಕ್ಯಂತ ಹೊಲದಿಂದ ಹೊಲಕ್ಕ ಹೊಂಟಿದ್ವು. ನಾನು ಮತ್ತ ಲಕ್ಷ್ಮಮ್ಮತ್ತಿ ಎದ್ದು ಮನಿ ದಾರಿ ಹಿಡದ್ವಿ. ಬೆಳಗಾ ಮುಂಜೇಲೆ ಹೊಲದ ದಾರಿ ಅದೊಂಥರಾ ಯಾವುದೊ ಚಿತ್ರ ಕಂಡಂಗ ಕಾಣತಿತ್ತು, ಆಕಡೆ ಇಕಡೆ ಹಸರು, ಅಲ್ಲಲ್ಲಿ ಹೊಲದಾಗಿದ್ದ ಒಂಟಿಮರ ಅದಕ್ಕಿದ್ದ ಮುಳ್ಳುಗಳು, ಹೊಲದಗುಂಟ ಹರಿತಿದ್ದ ಸಣ್ಣ ಕಾಲುವೆ ಅದರ ದಂಡಿಗಿದ್ದ ಸಮುದ್ರ ಬಾಳೆ ಹೂವು, ಸರ್ಕಾರ್ ಕಳ್ಳಿ ಇವೆಲ್ಲಾ ಆ ಹೊಲದ ಹಾದಿಗೆ ಬಿಡಿಸಿರೊ ಚಿತ್ರಗಳಿದ್ದಂಗ ಇದ್ವು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿ

Read More

ಕಾಡುಕೋಳಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಇನ್ನು ಈ ಕಾಡುಕೋಳಿಗಳನ್ನು ಸಾಕಿ ಬೆಳೆಸುವುದು ಅಸಾಧ್ಯ ಎನ್ನುವುದು ನಿಮಗೆ ತಿಳಿದೇ ಇದೆ. ಹಾಗಿರುವಾಗ ಕೋಳಿಗಳನ್ನು ಸಾಕಿ ಬೆಳೆಸುತ್ತಾರಲ್ಲ ಅದು ಹೇಗೆ ಎಂದು ನೀವು ಕೇಳಬಹುದು. ಗೂಡಿನಲ್ಲಿ ಸಾಕಿ ಬೆಳೆಸುವ ಕೋಳಿಗಳು, ಕೆಂಪು ಕಾಡುಕೋಳಿ ಎಂಬ ಮತ್ತೊಂದು ಪ್ರಭೇದದ ಪಕ್ಷಿ. ಕೆಂಪು ಕಾಡುಕೋಳಿಗಳು ಭಾರತದ ಉತ್ತರ ಮತ್ತು ಪೂರ್ವ ಭಾಗದಲ್ಲಿರುವ ರಾಜ್ಯಗಳ ಹಾಗೂ ಪೂರ್ವ ಏಶಿಯಾ ದೇಶಗಳ ಕಾಡುಗಳಲ್ಲಿ ಮಾತ್ರ ಕಂಡುಬರುವ ಹಕ್ಕಿಗಳು. ಸುಮಾರು 8-10 ಸಾವಿರ ವರ್ಷಗಳಿಂದಲೂ, ಪ್ರಪಂಚದ ನೂರಾರು ದೇಶಗಳಲ್ಲಿ, ಮೊಟ್ಟೆ ಹಾಗೂ ಮಾಂಸಕ್ಕಾಗಿ ಸಾಕುತ್ತಿರುವುದು ಇದೇ ಕೆಂಪು ಕಾಡುಕೋಳಿಗಳನ್ನು ಎಂದರೆ ನಿಮಗೆ ಆಶ್ಚರ್ಯವಾಗಬಹುದು!
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ