Advertisement

Category: ಸರಣಿ

ಸುಂದರ ಕಾಡಿನ ರೋಚಕ ಕಥೆಗಳು-೧೨: ರೂಪಾ ರವೀಂದ್ರ ಜೋಶಿ ಸರಣಿ

ಬೆಳಗಾಗುವುದೊರಳಗೆ, ಸುದ್ದಿ ಕಾಳ್ಗಿಚ್ಚಿನಂತೇ ಎಲ್ಲೆಡೆ ಹರಡಿತ್ತು. ಈಗ ತನಿಖೆ ಶುರುವಾಯಿತು. ತನಿಖೆಯಲ್ಲಿ ಹೊರಬಿದ್ದ ವರದಿ ನಿಜಕ್ಕೂ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಈ ಕೆಲಸ ಮಾಡಿದವನೊಬ್ಬ ದೊಡ್ಡ ರಾಜಕೀಯ ವಶೀಲಿ ಇರುವ ಮನುಷ್ಯ. ಅಲ್ಲಿಯ ತನಕವೂ ಸುತ್ತೂರಿನವರ ಕಣ್ಣಲ್ಲಿ ಆತ ಪ್ರತ್ಯಕ್ಷ ದೇವರಾಗಿದ್ದ. ಬಡವರ ಪಾಲಿನ ಕಾಮಧೇನು ಎಂದೆಲ್ಲ ಹೆಸರು ಗಳಿಸಿದ್ದ ಆತ, ಮಾಡುತ್ತಿದ್ದ ಈ ಕಳ್ಳತನದ ಕೆಲಸ ಜಗಜ್ಜಾಹೀರಾದ ದಿನ ಎಲ್ಲರೂ ಆತನನ್ನು ಮನಸಾರೆ ಶಪಿಸಿದ್ದರು.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

Read More

ಅತ್ತಿ ಲಸಮಮ್ಮನೂ… ಜೂನಿ ಬೀರಮ್ಮನೂ…: ಸುವರ್ಣ ಚೆಳ್ಳೂರು ಸರಣಿ

ಇದನ್ನೆಲ್ಲಾ ಕೇಳಿದಾಗೊಮ್ಮೆ ಬೀರಮ್ಮ ಜೋರಾಗಿ ‘ಅಲಲೊ ಜಿಟ್ಟಿಗುಳ, ಬಿಳಿ ಧೋತ್ರ ಉಟ್ಗಂಡು ಮನ್ಯಾಗ ಹೆಂಡತಿ ಮಾಡಿರೊ ಅಡಿಗಿ ಉಂಡ್ಕಂತ, ಊರ್ ಒಣ ರಾಜಕೀಯ ಮಾಡಿಕ್ಯಂತ, ಅವರಿವರಿಂದ ಸುತ್ತಿಗ್ಯಂತ, ಅಜ್ಜ ಮಾಡಿದ್ದ ಆಸ್ತಿಗೆ ಜೋತಾಡಿಕ್ಯಂತ, ಊರಮಂದಿ ಬಗ್ಗೆ ಮಾತಾಡಿಕ್ಯಂತ ಊರ ಕಟ್ಟಿಮ್ಯಾಗ ಕುಂತಗಂಡು ಪಂಟ್ ಹೋಡಿತಿರಾದು ನೀವು. ನನ್ನಂಗ ದುಡದು ಉಂಡಿರೇನ್ ಯಾವತ್ತರಾ? ಅಜ್ಜ ನೆಟ್ಟಿರಾ ಆಲದ ಮರಕ್ಕ ಜೋತಾಡಾದಲ್ಲ, ನೀವು ದುಡದು ಉಣ್ಣಾದು ಕಲ್ತು ಆವಾಗ ನನ್ನ್ ಮುಂದ ಬಂದ್ ಇಂತಾ ಒಣ ಮಾತಾಡ್ರಿ ಕೇಳ್ತಿನಿ’.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿ

Read More

ಉದ್ದಕೊಕ್ಕಿನ ಸೂರಕ್ಕಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಉದ್ದಕೊಕ್ಕಿನ ಸೂರಕ್ಕಿಗಳು ಉದುರೆಲೆ, ಕುರುಚಲು ಕಾಡು, ಎಸ್ಟೇಟು, ಮನೆಗಳ ಸುತ್ತಮುತ್ತಲು ಬೆಳೆದ ಹೂದೋಟಗಳಲ್ಲಿ ವಾಸ ಮಾಡುತ್ತವೆ. ಉದ್ದಕೊಕ್ಕಿನ ಸೂರಕ್ಕಿಗಳು ನೆಕ್ಟರಿನೈಡೆ ಕುಟುಂಬಕ್ಕೆ ಸೇರಿದ ಇತರ ಸೂರಕ್ಕಿಗಳಂತೆ ಮಕರಂದಪ್ರಿಯ ಹಕ್ಕಿಗಳು. ಕಾಡಿನಲ್ಲಾಗಲೀ, ಎಸ್ಟೇಟು-ಹೂದೋಟವೇ ಆಗಲೀ, ಮರಗಿಡಗಳಲ್ಲಿ ಹೂವರಳಿದರೆ ಸಾಕು, ಮಕರಂದಕ್ಕಾಗಿ ಎಲ್ಲಿದ್ದರೂ ಹಾಜರು! ಮಕರಂದವನ್ನು ಹೀರುವುದಕ್ಕಾಗಿಯೇ ಹೇಳಿಸಿ ಮಾಡಿಸಿದಂತಿರುವ, ಬಾಗಿದ ಉದ್ದವಾದ ಕೊಕ್ಕು ಮತ್ತು ಕೊಳವೆಯಂತಹ ನಾಲಿಗೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಉದ್ದಕೊಕ್ಕಿನ ಸೂರಕ್ಕಿಗಳ ಕುರಿತ ಬರಹ ಇಲ್ಲಿದೆ

Read More

ಕಲೆ ಮತ್ತು ಭ್ರಾಮಕ ವಾಸ್ತವ: ಚಿತ್ರಾ ವೆಂಕಟರಾಜು ಸರಣಿ

ಪ್ರತಿ ಕಲಾಭ್ಯಾಸಿಗೂ ತಾನು ಯಾವಾಗ ರಂಗದ ಮೇಲೆ ಪ್ರದರ್ಶನ ನೀಡುತ್ತೇನೋ ಎನ್ನುವ ಕಾತರ ಇರುತ್ತದೆ. ಇರಬೇಕು ಕೂಡಾ‌. ಒಮ್ಮೆ ನಾವು ರಂಗದಲ್ಲಿ ಪೂರ್ಣಪ್ರಮಾಣದ ಪ್ರದರ್ಶನ ನೀಡಿದೆವೋ ನಮ್ಮೊಳಗಿನ ಆ ಚಡಪಡಿಕೆ ಆ ಕ್ಷಣಕ್ಕೆ ಥಟ್ಟನೆ ಕಡಿಮೆ ಆಗುತ್ತದೆ. ನಮ್ಮೊಳಗೆ ಹುದುಗಿದ್ದ ಅಪಾರವಾದ ಆಸೆ, ಕಾವನ್ನು ಆ ಒಂದು ಪ್ರದರ್ಶನ ತಣಿಸಿರುತ್ತದೆ. ಮತ್ತೆ ನಮ್ಮನ್ನು ನಾವು ಅಭ್ಯಾಸಕ್ಕೆ ನಮ್ಮ ಮನಸ್ಸು ದೇಹವನ್ನು ಹುರಿಗೊಳಿಸಿಕೊಳ್ಳಲು ಕೆಲವು ಸಮಯವೇ ಬೇಕಾಗುತ್ತದೆ. ಹೀಗೆ ಒಂದು ಪ್ರದರ್ಶನ ದ ಹಿಂದೆ ಮತ್ತು ಪ್ರದರ್ಶನ ನಂತರ ಒಬ್ಬ ಕಲಾವಿದನ ಮನಸಿನಲ್ಲಿ ಇಷ್ಟೆಲ್ಲಾ ಕೆಲಸಗಳು ನಡೆದಿರುತ್ತದೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ಸಾಧನೆಯೇ ಮಾತಾಗಬೇಕು!: ಬಸವನಗೌಡ ಹೆಬ್ಬಳಗೆರೆ ಸರಣಿ

ಕೆಲವೊಂದರಲ್ಲಿ ಇಡೀ ಕರ್ನಾಟಕಕ್ಕೆ ನಮ್ಮ ಕಂಪೆನಿಯಲ್ಲಿ ಟಾಪರ್ ಆಗೋವಷ್ಟು ಸೇಲ್ ಮಾಡಿದ್ದೆ. ಆದರೆ ಹಲ್ಲು ನೋವಿಗೆ ಬಳಸುವ ಟೂಥ್ ಪೇಸ್ಟ್ ಒಂದರ ಸೇಲ್‌ನಲ್ಲಿ ತುಂಬಾ ಕಮ್ಮಿ ಸಾಧನೆ ಮಾಡಿದ್ದೆ. ಇದುವರೆಗೂ ಹೊಗಳಿದವರು ಈ ವಿಷಯ ಬಂದಾಗ ನನ್ನನ್ನು ಹಿಗ್ಗಾ ಮುಗ್ಗಾ ಬಯ್ದರು. ನಾನು ತುಂಬಾ ಸೆನ್ಸಿಟೀವ್ ಆಗಿ ಇದ್ದುದ್ದರಿಂದ ಅಂದು ಅವರು ನೀಡಿದ್ದ ಸುಗ್ರಾಸ ಭೋಜನವನ್ನು ಸೇವಿಸಲು ಮನಸ್ಸಾಗಲಿಲ್ಲ… ಆಗ ಬೇರೆ ಮೆಡಿಕಲ್ ರೆಪ್‌ಗಳು ಬಂದು ಇಲ್ಲೆಲ್ಲಾ ಬಯ್ಯೋದು, ಬಯ್ಸಿಕೊಳ್ಳೋದು ಕಾಮನ್. ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದಾಗ ನನಗೆ ಮನಸ್ಸಿಗೆ ಸಮಾಧಾನ ಎನ್ನಿಸಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ