Advertisement

Category: ಸರಣಿ

ಆ ದಿನಗಳ ನೆನಪಿದೆಯಾ ನಿಮಗೆ?: ಸುಮಾವೀಣಾ ಸರಣಿ

ಅದೆಷ್ಟು ದಿನ ಚಂಡಿ ಬಟ್ಟೆಯಲ್ಲಿಯೇ ತರಗತಿಗಳನ್ನ ಕೇಳಿದೆವು ನಾವು? ಚಳಿ ಹೆಚ್ಚಾಗಿ ಬಾಟನಿ ಲ್ಯಾಬ್ ಹತ್ತಿರ ಹಾಕುತ್ತಿದ್ದ ಅಗ್ಗಿಸ್ಟಿಕೆ ಬಿಸಿಗೆ ಹೋಗಿ ನಿಲ್ಲುತ್ತಿದ್ದ ದಿನಗಳು ನೆನಪಾಗುತ್ತವೆ. ಆ ಲ್ಯಾಬಿನ ಬಳಿ ಇರುತ್ತಿದ್ದ ಸಿರಿಬಾಯಿ ಅಂಕಲ್ ನಮ್ಮನ್ನು ನೋಡಿದ ಕೂಡಲೆ ಬನ್ನಿ ಬನ್ನಿ ಎಂದು ಕರೆದು ಇನ್ನಷ್ಟು ಇದ್ದಿಲನ್ನು ಹಾಕಿ ಕೆಂಡ ಮಾಡುತ್ತಿದ್ದದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯಲ್ಲಿ ಸ್ನೇಹಿತರ ದಿನಕ್ಕೆ ಬರೆದ ಪತ್ರ ಇಲ್ಲಿದೆ

Read More

ಕಾಡುವ ಕಷ್ಟದ ಆ ದಿನಗಳು: ಮಾರುತಿ ಗೋಪಿಕುಂಟೆ ಸರಣಿ

ಅಂದು ಪೋಲೀಸರು ಹೋದ ಮೇಲೂ ಅಮ್ಮ ಅಳುತ್ತಲೆ ಇದ್ದಳು. ಬಡವರ ಪಾಲಿಗೆ ಕಣ್ಣೀರೇ ಅಲ್ಲವೆ ಸಾಂತ್ವನದ ಸೆಲೆಗಳು ಆಗಾಗಿ ಧಾರಾಕಾರವಾಗಿ ಹರಿಯುತ್ತಲೆ ಇತ್ತು. ಊರಿನಲ್ಲಿ ಯಾರ್ಯಾರೊ ಸಹಾಯವನ್ನು ಮಾಡಿದರು. ಅಮ್ಮನ ಒಳ್ಳೆಯ ಗುಣವೇ ಅದಕ್ಕೆ ಕಾರಣವಾಗಿತ್ತು. ಇದೆಲ್ಲ ನೋಡುತ್ತಿದ್ದಾಗ ದೇವರ ಮೇಲೆ ಕೋಪವು ಬರುತ್ತಿತ್ತು. ನನ್ನ ಓರಗೆಯವರೆಲ್ಲ ನಿಮ್ಮ ಮನೆಯ ಸಾಮಾನುಗಳನ್ನು ಪೋಲಿಸ್ನೋರು ತಗೊಂಡ್ಹೋದ್ರು ಅನ್ನುತ್ತಿದ್ದರು. ಆಗ ಇಡೀ ವ್ಯವಸ್ಥೆಯ ಮೇಲೆ ರೋಷವೇನೊ ಬರುತ್ತಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ಥಿಯೇಟರ್‌ನಲ್ಲಿ ಕನ್ನಡ ಢಿಂಢಿಮ….: ಎಚ್.ಗೋಪಾಲಕೃಷ್ಣ ಸರಣಿ

ಅರವತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಮೊದಲು ಐದು ಜಾವಾ ಮೋಟಾರ್ ಸೈಕಲ್ ಇತ್ತು. ನಂತರ ನಿಧಾನಕ್ಕೆ tvs ಅದರ ಅಣ್ಣ ತಮ್ಮ ಬಂದವು. ಲಾಂಬ್ರೆಟ್ಟಾ ಗಾಡಿ ವಿದೇಶದಲ್ಲಿ ಹೆಂಗಸರು ಓಡಿಸುವ ಗಾಡಿ ಅಂತ ಕೆಲವರು ಲೇವಡಿ ಮಾಡುತ್ತಿದ್ದರು. ಎನ್ ಫೀಲ್ಡ್ ಸುಮಾರು ಇದೇ ಸಮಯ ಪ್ರವೇಶ. ಎಂಬತ್ತರ ದಶಕದ ನಡುವಿನಲ್ಲಿ ಚೇತಕ್ ಗಾಡಿ ಹೆಸರು ಓಡುತ್ತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿಮೂರನೆಯ ಕಂತು ನಿಮ್ಮ ಓದಿಗೆ

Read More

ಮನೆ ಮತ್ತು ಮನದ ಕವಿತೆಗಳು: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ಇಲ್ಲಿ ಕನ್ನಡಕ್ಕೆ ಅನುವಾದಿಸಿರುವ ದಿತಿ ರೋನೆನ್‌ರ ಕವನಗಳಲ್ಲಿ ಅವರ ಎಲ್ಲಾ ಆಸ್ಥೆಗಳ, ನಂಬಿಕೆಗಳ, ಕಾಳಜಿಗಳ ಉದಾಹರಣೆಗಳನ್ನು ಕಾಣಬಹುದು. ಹಿಟ್ಲರ್‌ನ ಕಾಲದ ಜರ್ಮನಿ ಯಹೂದಿಗಳ ವಿರುದ್ಧ ನಡೆಸಿದ ಹತ್ಯಾಕಾಂಡದ ನೆನಪುಗಳು ಗಾಯಗಳು ಎಂದೂ ಮರೆಯಾಗಲ್ಲ. ಈ ಹತ್ಯಾಕಾಂಡದಿಂದ ಬದುಕುಳಿದವರ ಮಗಳಾಗಿ ದಿತಿ ರೋನೆನ್‌ ಅವರು ಇದರ ಬಗ್ಗೆ ಬಹು ಮಾರ್ಮಿಕವಾಗಿ ಬರೆಯುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಕೊಡಗಿನ ಮೊಟ್ಟೆಯೂ… ಮದ್ದು ಪಾಯಸವೂ: ಸುಮಾವೀಣಾ ಸರಣಿಸ

ಕೊಡವರಲ್ಲಿ ಕಕ್ಕಡ ಪದಿನೆಟ್ಟು, ಆಟಿಪದಿನೆಟ್ಟು, ಅತ್ಯಂತ ಮಹತ್ವವನ್ನು ಪಡೆದುಕೊಂಡಿರುವ ಈ ಜಾನಪದೀಯ ಪರ್ವ ಕೃಷಿಕರ ಪಾಲಿಗೆ ಮಹಾಪರ್ವವೆಂದೇ ಹೇಳಬಹುದು. ಆದರೆ ಮದುವೆ ಮುಂತಾದ ಶುಭ ಕಾರ್ಯಗಳಿಗೆ ಈ ಮಾಸ ನಿಷಿದ್ಧ. ಜೊತೆಗೆ ಗ್ರಾಮೀಣ ಭಾಗದ ದೇವಾಲಯಗಳಲ್ಲೂ ನಿತ್ಯ ಪೂಜೆಯನ್ನು ಸ್ಥಗಿತಗೊಳಿಸುವುದು ವಾಡಿಕೆ. ಈ ವರ್ಷ ಆಗಸ್ಟ್ 3 ನೆ ತಾರೀಖು ಈ ಆಚರಣೆ ಇದೆ. ಸರಿ ಸುಮಾರು ಮುಂಗಾರಿನ ಭತ್ತದ ನಾಟಿ ಮಾಡಿ ಮುಗಿಯುವ ಕಾಲಕ್ಕೆ ಈ ಆಟಿ ಹದಿನೆಂಟರ ಆಚರಣೆ ಇರುತ್ತದೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ