ಸುಜಾತಾ ಲಕ್ಷ್ಮೀಪುರ ಬರೆದ ಈ ದಿನದ ಕವಿತೆ: ಪಾದಗಳು..
“ಅಡಿಗೆ ಮನೆ, ಮಲಗುವ ಕೋಣೆ
ಬಚ್ಚಲು ಕೊಟ್ಟಿಗೆ ಹಿತ್ತಲು
ಸದಾ ಒಂದಿಲ್ಲೊಂದು ತರಾತುರಿ
ದಾಪುಗಾಲ್ಹಾಕಿ ಮನೆಯಿಡಿ ತಿರುತಿರುಗಿ ನೆಲ ಸವೆದು
ಹಿಮ್ಮಡಿ ಬಿರಿದು ಕಾಲ ಕಾಲುವೆಯಲ್ಲಿ
ಕೆಂಪುಕಪ್ಪು ಮಿಶ್ರಿತ ಹೊಳೆ ಹರಿದು
ಒಲೆಮುಂದೆ ಬೆಚ್ಚಗಾಗುತ್ತದೆ ಅವಳ ಪಾದ.”- ಸುಜಾತಾ ಲಕ್ಷ್ಮೀಪುರ ಬರೆದ ಈ ದಿನದ ಕವಿತೆ

