Advertisement

Category: ವಾರದ ಕಥೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಹೆಚ್. ಆರ್. ಸುಜಾತಾ ಕತೆ

“ಹೋಗಿ ಬಂದು ಮೂಗಿ ತಕ ಹೋದ” ಅಂತ ಮೊದ್ಲೇ ಗಾದೆ ಮಾತಿಲ್ವಾ? ಹಂಗಾಯ್ತು ಇದೂವೆ. ಇವಳಿಗೆ ಬಾಯಿಲ್ಲ. ಅವನಿಗೆ ನೀತಿನೇಮ ಇಲ್ಲ. ಯಾರ್ಗಾರ ಹೇಳತಳೆ ಅನ್ನೋ ಭಯವಂತೂ ಮೊದ್ಲೇ ಇಲ್ಲ. ಇಬ್ರಗೂ ವಯಸ್ಸಿನ ಚಪಲ. ತೀರಸಕಂಡವರೆ. ಆದ್ರೆ ಆ ನನ್ ಮಗಂಗೇನು ಕಷ್ಟ? ಗಂಡಸು. ಮದ್ವೆ ಮಾಡ್ಕತನೆ ಇಲ್ಲಾಂದ್ರೆ….. ಇನ್ನೊಭ್ಳು ತಕೆ ಹೋಯತನೆ. ಇವಳಿಗೆ ತಾನೆ ಇರದು ಈಗ ಹಬ್ಬ. ಹರುಷದ ಕೂಳಿಗೆ ವರುಷದ ಕೂಳು ಕಳಕಂಡಂಗ ಆಯ್ತಲ್ಲ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಹೆಚ್. ಆರ್. ಸುಜಾತಾ ಕತೆ

Read More

ಲಕ್ಷ್ಮಣ ಶರೆಗಾರ ಬರೆದ ಈ ಭಾನುವಾರದ ಕತೆ

ಆವಾಗಾವಾಗ ರಾತ್ರಿಗಳಲ್ಲಿ ತಾವಿಬ್ಬರೂ ಮೈಗೆ ಮೈ ಬೆಸೆದುಕೊಂಡು ತಾನು ಎಡದಿಂದ ಅವಳು ಬಲದಿಂದ ಎಷ್ಟೊತ್ತಿನವರೆಗೆ ಚುಕ್ಕೆಗಳೆಣಿಸಿದರೂ ಇಬ್ಬರೂ ಬಂದು ಒಂದುಕಡೆ ಸೇರದ ಆಟಕ್ಕೆ ಈಗ ಬೇರೆಯದೇ ಅರ್ಥ ಕಾಣಿಸಿ ಇದೆಲ್ಲ ಎಲ್ಲಿಹೋಗಿ ಮುಟ್ಟುವುದೋ ಎಂದು ಅಯೋಮಯಗೊಳ್ಳುವನು. ಹೀಗೆ ಇಲ್ಲಸಲ್ಲದ ಯೋಚನೆಗೀಡಾದವನು ದಾರಿತಪ್ಪಿದವನಂತೆ ಎಡವುತ್ತ ಮತ್ತೊಂದು ರಾತ್ರಿಯನ್ನು ತುಳಿಯುತ್ತ ತಳ್ಳುವನು. ಬಗ್ಗಡದ ಬದುಕು ಟಿಸಿಲೊಡೆವ ಸೂಚನೆ ಕಂಡು ಮಲಗಿದಲ್ಲೇ ಬಿರುಕು ಬಿಡುವನು.
ಲಕ್ಷ್ಮಣ ಶರೆಗಾರ ಕಥಾ ಸಂಕಲನ “ತಿದಿಯ ತುದಿಗೆ ಬೆಂಕಿಯ ಉಗುಳು” ಕೃತಿಯ “ಉಧೋ ಉಧೋ” ಕತೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸ್ವಾಮಿ ಪೊನ್ನಾಚಿ ಕತೆ

“ಆ ಧೂಪದ ಹೈಕಳನ್ನು ಯಾರೂ ಹತ್ತಿಸಿಕೊಂಡು ಹೊಬ್ಗ್ಯಾಡ್ರಿ” ಎಂದು ಹೇಳಿದರೆ; ಎರಡು ದಿನ ಹೈಕಳು ಇಸ್ಕೂಲಿಗೆ ಬಂದರೆ ಮೂರನೆ ದಿನಕ್ಕೆ ಮತ್ತೆ ಅದೇ ರಾಗ ಅದೇ ಹಾಡು. ರೋಸಿ ಹೋದ ಮೇಷ್ಟ್ರು ಒಮ್ಮೆ ಬೆಟ್ಟದ ಇನ್ಸಪೆಕ್ಟ್ರು ಊರಿಗೆ ಬಂದಾಗ “ಯಾರಿಗೂ ಹೆದರದ ಇವರು ಪೋಲಿಸ್ನೋರ‍್ಗೆ ಖರೇ ಹೆದ್ರೂದು” ಎಂದು ಸ್ವಾಲಿಗ್ರ ಕೇರಿಗೆ, ಹೊಲೇರಕೇರಿಗೆ ಕರ್ಕೊಂಡೋಗಿ “ಮಕ್ಕಳನ್ನ ತಾಳುಬೆಟ್ಟಕ್ಕೆ ಧೂಪ ಮಾರುವುದಕ್ಕೆ ಕಳುಹಿಸಿದರೆ ಜೇಲಿಗೆ ಹಾಕಿಸ್ತೀನಿ ಎಂದು ರೋಪ್ ಹೊಡೆಸಿದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸ್ವಾಮಿ ಪೊನ್ನಾಚಿ ಕತೆ “ಧೂಪದ ಮಕ್ಕಳು”

Read More

ಶ್ರೀಲೋಲ ಸೋಮಯಾಜಿ ಬರೆದ ಈ ಭಾನುವಾರದ ಕತೆ

ಕುಟುಂಬಕ್ಕೆ ಆಗಮಿಸಿದ ಹೊಸ ಸದಸ್ಯೆಯ ಆಗಮನದ ಸಂತೋಷ ಬರಿಯ ಹದಿನೈದು ದಿನಗಳಲ್ಲಿ ಕಮರಿಹೋಯಿತು. ಆಸ್ಪತ್ರೆಯಿಂದ ಹೊರಬರುವ ಮೊದಲೇ ಮೊದಲ ಬಾರಿಗೆ ದಪ್ಪ ಸೂಜಿಯಿಂದ ಚುಚ್ಚಿಸಿಕೊಂಡು ರಕ್ತವನ್ನು ದೇಹದ ಒಳಗೆ ದಾಟಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಅಳುತ್ತಿದ್ದ ಮಗುವನ್ನು ನೋಡಲಾಗದ ರಮ್ಯಾ ಕೋಣೆಯಿಂದ ಹೊರಗೆ ಓಡಿಬಂದು ಬಿಕ್ಕಿಬಿಕ್ಕಿ ಅಳತೊಡಗಿದಳು.
ಶ್ರೀಲೋಲ ಸೋಮಯಾಜಿ ಬರೆದ “ಮೊನಾಲಿಸಾಳ ನಗು” ಕತೆ ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೆ.ಪಿ.ಸುರೇಶ ಕತೆ

ಒಂದು ದಿನ ಕ್ಯಾಂಪಸ್ಸಿಗೆ ಬಂದ ಚಂದ್ರಮೌಳಿ ಸಂಜೆ ಸುಧಾಳೊಂದಿಗೆ ಟೀ ಕುಡಿಯುತ್ತಾ “ನೋಡು, ನಾನು ಕಲ್ಕತ್ತಾಗೆ ಹೋಗ್ತಿದ್ದೀನಿ. ಈ ಹೋರಾಟ ಎಲ್ಲ ಶಕ್ತಿಗುಂದುತ್ತಾ ಇದೆ. ಇದ್ರಿಂದೆಲ್ಲ ಏನಾದ್ರೂ ಆಗುತ್ತೆ ಅನ್ನೋ ನಂಬಿಕೆನೂ ನನಗಿಲ್ಲ. ಒಂದು ಅಮೆರಿಕನ್ ಕಂಪೆನಿಯಿಂದ ಒಳ್ಳೆ ಆಫರ್ ಇದೆ. ಎರಡು ವರ್ಷದ ಮೇಲೆ ಸ್ಟೇಟ್ಸ್‌ಗೆ ಹೋಗೋ ಛಾನ್ಸೂ ಇದೆ. ನಿಂಗೆ ಇದು ದ್ರೋಹದ ಥರ ಕಾಣಿಸಬಹುದು, ಪರ್ಸನಲ್ ಲೆವೆಲ್‌ನಲ್ಲೂ…
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೆ.ಪಿ.ಸುರೇಶ ಕತೆ “ಯಾರಲ್ಲಿ, ಕಳೆದಿರುಳು….” ನಿಮ್ಮ ಈ ಭಾನುವಾರದ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ