ಸಣ್ಣಕತೆಯ ಹಾದಿಯಲ್ಲಿ: ಎಸ್ ದಿವಾಕರ್ ಕಥಾ ಸಂಕಲನಕ್ಕೆ ಅವರು ಬರೆದ ಮಾತುಗಳು
ಈಚೀಚೆಗೆ ನಮ್ಮ ವಿಮರ್ಶಕರು ಕೆಲವರು ಕತೆಗಳಲ್ಲಿರಬಹುದಾದ ಪಾದೇಶಿಕ ಭಾಷೆಯ ಬಗ್ಗೆ, ಒಂದು ಪ್ರದೇಶದ ಸೊಗಡುಳ್ಳ ಭಾಷೆಯ ಬಗ್ಗೆ ಮಾತಾಡುವುದನ್ನು, ಬರೆಯುವುದನ್ನು ನೋಡಿದ್ದೇನೆ. ಇನ್ನು ಕೆಲವರು ಇನ್ನೂ ಮುಂದೆ ಹೋಗಿ ಕೆಲವು ಕತೆಗಳ ‘ಜವಾರಿ ಭಾಷೆ’ಯನ್ನಷ್ಟೆ ಎತ್ತಿ ಹೇಳುತ್ತಾರೆ. ಕತೆಗಳಲ್ಲಿ ಜವಾರಿ ಭಾಷೆಯೆನ್ನುವುದೊಂದು ಇದೆಯೆ? ಒಂದು ಕತೆಯ ಭಾಷೆಯನ್ನು ತೆಗೆದು ಪಕ್ಕಕ್ಕಿಟ್ಟುಬಿಡಿ. ಆಗ ಅಲ್ಲಿ ಪಾತ್ರಗಳಿರುವುದಿಲ್ಲ, ಪಾತ್ರಗಳ ಘರ್ಷಣೆಯಿರುವುದಿಲ್ಲ, ಕ್ರಿಯಾಕ್ಷೇತ್ರವಿರುವುದಿಲ್ಲ, ಜೀವನವನ್ನು ಕುರಿತ ಜಿಜ್ಞಾಸೆಯೋ ದರ್ಶನವೋ ಇರುವುದಿಲ್ಲ, ಅಷ್ಟೇಕೆ ಕತೆಯೇ ಇರುವುದಿಲ್ಲ. ಅಂದರೆ ಭಾಷೆಯಿಲ್ಲದಿದ್ದರೆ ಕತೆಯೇ ಇಲ್ಲ.
ಎಸ್. ದಿವಾಕರ್ ಹೊಸ ಕಥಾ ಸಂಕಲನ “ಸಂಕ್ಷಿಪ್ತ ಕನ್ನಡ ನಿಘಂಟು ಮತ್ತು ಇತರೆ ಕತೆಗಳು” ಕೃತಿಗೆ ಬರೆದ ಅವರ ಮಾತುಗಳು ನಿಮ್ಮ ಓದಿಗೆ

