Advertisement

Category: ದಿನದ ಪುಸ್ತಕ

ಒಡಲ ನಂಟಿಗೆ ಗಂಟು ಬಿದ್ದಾಗ: ರಾಮಲಿಂಗ ಮಾಡಗಿರಿ ಕೃತಿಯ ಕುರಿತು ಶಿವಕುಮಾರ ಕರನಂದಿ ಬರಹ

ಕವಿತೆ ಅನುಕರಿಸಿದೆ, ನಕಲಿಸದೆ, ತನ್ನ ಸುತ್ತಮುತ್ತಲಿನ ಘಟನೆಗಳ ಮೇಲೆ ಕೇಂದ್ರಿಕರಿಸಿ, ತನ್ನೊಳಗಿನ ಭಾವನೆಗಳ ಮೂಲಕ ಕವಿತೆ ಕಟ್ಟಬೇಕಿದೆ. ರೂಪಕ, ಪ್ರತಿಮೆ, ಹೋಲಿಕೆಗಳೊಂದಿಗೆ ಕಾವ್ಯವನ್ನು ರಚಿಸಬೇಕಿದೆ. ಅಂದಾಗ ಮಾತ್ರ ಆ ಮನುಷ್ಯ ಚಿಂತನಾಶೀಲ ಕವಿಯಾಗಲು ಸಾಧ್ಯ. ಹೀಗೆ ಬರೆಯುತ್ತಾ ಸಾಗಿದಾಗ ನಾಳೆಯ ಚಿಂತಕನಾಗಲು ಸಾಧ್ಯ. ಈ ಒಂದು ದಿಸೆಯಲ್ಲಿ ಗೆಳೆಯ ರಾಮಲಿಂಗ ಮಾಡಗಿರಿ ತನ್ನ ಮೊದಲ ಸಂಕಲನದಿಂದ ಪ್ರವರ್ಧಮಾನಕ್ಕೆ ಕಾಲಿಡುತ್ತಿದ್ದಾರೆ. ಇವರು ಸ್ನಾತಕೋತ್ತರ ಪದವೀಧರರಾಗಿದ್ದು ಗಿಡಮರಗಳ ನಾಡಿಮಿಡಿತ ಅರಿತ ಇವರು ಕವಿತೆಯ ಸಾರವನ್ನು ಹೆಕ್ಕಲು ಬಂದಿದ್ದಾರೆ.
ರಾಮಲಿಂಗ ಮಾಡಗಿರಿ ಕವನ ಸಂಕಲನ “”ಒಡಲಿಗಂಟಿದ ನಂಟು” ಕುರಿತು ಶಿವಕುಮಾರ ಮೋಹನ ಕರನಂದಿ ಬರಹ

Read More

ಇದು ವಾತ್ಸಲ್ಯದ ಒಸಗೆ: ಡಾ. ರಾಜಲಕ್ಷ್ಮಿ ಕೃತಿಯ ಕುರಿತು ಸುಧಾ ಆಡುಕಳ ಬರಹ

ಬೆರಳ ತುದಿಯಲ್ಲಿ ನೂರಾರು ಅರಿವಿನ ಹರಹುಗಳು ಹರಡಿಕೊಳ್ಳುವ ಕಾಲದಲ್ಲಿ ಇಂತಹ ಮಾಹಿತಿಗಳು ನಮಗೆ ಬೇಕೆ? ಎಂದು ಪ್ರಶ್ನಿಸಿಕೊಂಡರೆ ಎಂದಿಗಿಂತಲೂ ಇಂದು ಈ ರೀತಿಯ ಪುಸ್ತಕಗಳು ಹೆಚ್ಚು ಅವಶ್ಯಕ ಎನಿಸುವುದು. ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಎಲ್ಲರೂ ಸ್ವಯಂ ವೈದ್ಯರಂತೆ ವರ್ತಿಸುತ್ತಿದ್ದಾರೆ. ಅಂತರ್ಜಾಲವೆಂಬ ಆಕಾಶದಲ್ಲಿ ತುಂಬಿರುವ ಮಾಹಿತಿಗಳಲ್ಲಿ ಸತ್ಯಕ್ಕಿಂತಲೂ ಸುಳ್ಳಿನ ವೈಭವೀಕರಣವೇ ಹೆಚ್ಚು ತುಂಬಿದೆ. ಅವುಗಳ ಮೊರೆಹೋಗಿ ತಪ್ಪು ಜಾಲಗಳಲ್ಲಿ ಇಂದಿನ ಕಿಶೋರಿಯರು ಸಿಲುಕಿರುವ ಎಷ್ಟೋ ಉದಾಹರಣೆಗಳು ನಮ್ಮ ಎದುರಿಗಿವೆ. ತಿಳಿದವರು, ತಿಳಿಯದವರಿಗೆ, ತಿಳಿಯುವಂತೆ ತಿಳಿಸಿದರೆ ಮಾತ್ರ ಅದು ‘ತಿಳುವಳಿಕೆ’ ಅನಿಸಿಕೊಳ್ಳುತ್ತದೆ.
ಡಾ. ರಾಜಲಕ್ಷ್ಮಿ ಬರೆದ “ವಾತ್ಸಲ್ಯದ ಒಸಗೆ” ಕೃತಿಯ ಕುರಿತು ಸುಧಾ ಆಡುಕಳ ಬರಹ

Read More

 ಕಾಯಗುಡ್ಡ ಬರೀ ಕಥೆಯಲ್ಲ; ಇದೊಂದು ಚಲನಶೀಲ ಬದುಕಿನ ಪ್ರತಿಬಿಂಬ: ನಾಗಣ್ಣ ಕಿಲಾರಿ ಕಾದಂಬರಿಗೆ ಕಪಿಲ ಪಿ. ಹುಮನಾಬಾದೆ ಮುನ್ನುಡಿ

ಕಾಯಗುಡ್ಡ ಎಂದರೆ ಕಾಯುವ ಗುಡ್ಡ. ಕುರಿ ಮತ್ತು ಆಡು ಕಾಯುವ ಗುಡ್ಡ ಅಷ್ಟೇ ಅಲ್ಲ. ಬದುಕನ್ನು ನಳನಳಿಸುವ, ಹೊಸತನದ ಗಾಳಿ ಬೀಸುವ, ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಹಕ್ಕಿಯಂತಹ ಎಲ್ಲ ಬಂಧಗಳಿಂದ ಬಿಡುಗಡೆಗೊಳಿಸುವ, ಸಹಜತನ ಮತ್ತು ಕೂತೂಹಲ ಹೃದಯಲ್ಲಿ ಸೃಷ್ಟಿಸುವ ಗುಡ್ಡವೆ ಕಾಯಗುಡ್ಡ. ಬಯಲಿನಂತಹ ಊರಿಂದ ಶುರುವಾಗುವ ಕಥೆ ಕುರಿ-ಆಡುಗಳೊಟ್ಟಿಗೆ ಗುಡ್ಡ ಹತ್ತಿಳಿಸಿ, ಅಲ್ಲಲ್ಲಿ ನಗಿಸಿ, ಬಾವಿಗಳ ಆಳದಿಂದ ಏನನ್ನೋ ಹೊಮ್ಮಿಸಿ, ದವಾಖಾನಿಗಳ ನೋವಿನಲ್ಲೂ ಬಿಸ್ಕತ್‌ ನೆನಪಿಸಿ, ಕತ್ತಲು ಮತ್ತು ಹಲವು ಹಾದಿಗಳ ಮಾತುಗಳು ಕೇಳಿಸಿ, ಓದುಗರಿಗೆ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಕರೆದುಕೊಂಡು ಹೋಗುತ್ತದೆ ಕಾಯಗುಡ್ಡ.
ನಾಗಣ್ಣ ಕಿಲಾರಿ ಕಾದಂಬರಿ “ಕಾಯಗುಡ್ಡ” ಕೃತಿಗೆ ಕಪಿಲ ಪಿ. ಹುಮನಾಬಾದೆ ಬರೆದ ಮುನ್ನುಡಿ

Read More

ಶತಮಾನ ಕಂಡ ವಿಸ್ಮಯ; ಅನ್ನಪೂರ್ಣಾ ದೇವಿ: ದೇವಿಕಾ ನಾಗೇಶ್‌ ಬರಹ

“ಯಾವುದೇ ಜ್ಞಾನಾರ್ಥಿ ನಿನ್ನನ್ನು ಹುಡುಕಿ ಬಂದರೆ ನೀನು ಎರಡನೆಯ ಯೋಚನೆ ಮಾಡದೆ ನಿನ್ನಲ್ಲಿರುವ ಜ್ಞಾನವನ್ನು ಹಂಚಬೇಕು. ತನ್ನ ಕುಟುಂಬದ ಸದಸ್ಯರಲ್ಲದವರಿಗೆ ಸಂಗೀತ ಹೇಳಿಕೊಡಲು ಹಿಂಜರಿಯುವ ಉಸ್ತಾದರನ್ನು ನಾನು ನನ್ನ ಬದುಕಿನಲ್ಲಿ ಕಂಡಿದ್ದೇನೆ. ಬೇರೆ ಬೇರೆ ಗುರುಗಳಿಂದ ಕಲಿಯುವಾಗ ನಾನು ಅನುಭವಿಸಿದ ತೊಂದರೆ, ನೋವು ಮತ್ತು ಕಷ್ಟ ನಿನ್ನಿಂದ ಊಹಿಸಲು ಸಾಧ್ಯವಿಲ್ಲ. ಎಲ್ಲ ಕಷ್ಟಗಳ ನಡುವೆಯೂ ನನ್ನ ಭಿಕ್ಷಾ ಪಾತ್ರೆಯಲ್ಲಿ ಏನನ್ನು ಸಂಗ್ರಹಿಸಲು ಸಾಧ್ಯವಾಯಿತು ಅದನ್ನು ನಾನು ಧಾರಾಳವಾಗಿ ಹಂಚಿದ್ದೇನೆ.”
ಅಪೂರ್ವ ಸಂಗೀತಗಾರ್ತಿ ಅನ್ನಪೂರ್ಣಾ ದೇವಿಯವರ ಕುರಿತು ಅತುಲ್‌ ಮರ್ಚಂಟ್‌ ಜಟಾಯು ಬರೆದ “ಅನ್ನಪೂರ್ಣಾ ದೇವಿ” ಕೃತಿಯನ್ನು ಎನ್‌. ಸಂಧ್ಯಾರಾಣಿ ಕನ್ನಡಕ್ಕೆ ತಂದಿದ್ದು, ಈ ಕೃತಿಯ ಕುರಿತ ದೇವಿಕಾ ನಾಗೇಶ್‌ ಬರಹ ಇಲ್ಲಿದೆ.

Read More

ಭಿನ್ನ ನೋಟದ ಪ್ರವಾಸ ಕಥನ: ಡಾ. ಪ್ರೇಮಲತ ಕೃತಿಗೆ ಎಸ್‌. ದಿವಾಕರ್‌ ಬರೆದ ಮುನ್ನುಡಿ

ನಮ್ಮ ಲೇಖಕರಲ್ಲಿ ವಿ.ಕೃ. ಗೋಕಾಕರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದಿ ಫಸ್ಟ್ ರ್ಯಾಂಕ್ ಗಳಿಸಿದರಷ್ಟೆ. ಯು.ಆರ್. ಅನಂತಮೂರ್ತಿಯವರೂ ಕವಿ ರಾಮಚಂದ್ರ ಶರ್ಮರೂ ಕೆಲವು ವರ್ಷ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡಿದ್ದುಂಟು. ತರುಣ ಲೇಖಕರಲ್ಲಿ ಮುಖ್ಯವಾಗಿ ವಿವೇಕ ಶಾನಭಾಗರು ಉದ್ಯೋಗನಿಮಿತ್ತ ನಾಲ್ಕಾರು ವರ್ಷ ಲಂಡನ್ನಿನಲ್ಲಿದ್ದರು. ಇವರು ಯಾರೂ ಅಪ್ಪಿತಪ್ಪಿ ಕೂಡ ಯುನೈಟೆಡ್ ಕಿಂಗ್ಡಮ್ಮನ್ನು ಭಾರತದೊಡನೆ ತುಲನೆ ಮಾಡಲಿಲ್ಲವೆನ್ನುವುದು ಗಮನಾರ್ಹ. ಆದರೂ ಹಾಗೆ ತುಲನೆ ಮಾಡಿ ಬರೆಯುವುದರಿಂದ ಕೆಲವರು ಓದುಗರಾದರೂ ನಮ್ಮ ದೇಶದ ಹೀನಾಯ ಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಯೋಚಿಸಬಹುದು. ಅವರಲ್ಲಿ ಇದಕ್ಕೇನು ಪರಿಹಾರವಿದ್ದೀತು ಎಂಬೊಂದು ಜಿಜ್ಞಾಸೆಯೇ ಉಂಟಾಗಬಹುದು. ಒಟ್ಟಿನಲ್ಲಿ ಅದೊಂದು ಒಳ್ಳೆಯ ಆಶಯವೇ.
ಡಾ. ಪ್ರೇಮಲತ ಬಿ. ಬರೆದ “ವಿದೇಶ ಪ್ರಯಾಣ… ಕೈತುಂಬ ಕಾಂಚಾಣ” ಕೃತಿಗೆ ಎಸ್‌. ದಿವಾಕರ್‌ ಬರೆದ ಮುನ್ನುಡಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ