Advertisement

Category: ಪುಸ್ತಕ ಸಂಪಿಗೆ

ಅಸ್ತಿತ್ವ ಪ್ರಜ್ಞೆಯ ಆತ್ಮಾವಲೋಕನ-ಮಿಚೆಲ್ ಒಬಾಮ ಅವರ “ಬಿಕಮಿಂಗ್”: ದೇವಿಕಾ ನಾಗೇಶ್‌ ಬರಹ

ಒಮ್ಮೆ ಸ್ಪರ್ಧೆಗೆ ನಿಂತಮೇಲೆ ಒಬಾಮ ದಂಪತಿಗಳು ಗೆಲ್ಲುವ ಪ್ರಕ್ರಿಯೆಗೆ ಬೇಕಾದ ಸಿದ್ಧತೆಯಲ್ಲಿ ಚುನಾವಣೆಯ ಪ್ರಸಾರದಲ್ಲಿ ಸಂಪೂರ್ಣ ಮುಳುಗಿದರು. ಚುನಾವಣೆಯಲ್ಲಿ ಗೆಲ್ಲುವುದು ನಂತರದ ಆಗು ಹೋಗುಗಳಿಗೆ ತಲೆಯೊಡ್ಡುವುದು ಅಂದರೆ ಅದು ಒಂದು ಜವಾಬ್ದಾರಿ ಎನ್ನುವ ಸ್ಪಷ್ಟತೆ ಇದ್ದ ಒಬಾಮ ದಂಪತಿಗಳಿಗೆ ಅಮೇರಿಕಾ ಕರಿಯನೊಬ್ಬನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಲು ತಯಾರಾಗಿದೆಯೇ ಎನ್ನುವ ಸಂದೇಹ ಚುನಾವಣ ಪ್ರಕ್ರಿಯೆಯ ಉದ್ದ ಇದ್ದೇ ಇತ್ತು. ಒಬಾಮ ಅಮೇರಿಕಾ ಅಧ್ಯಕ್ಷನಾಗುವ ಕನಸು, ಒಬಾಮ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಮಾತುಕತೆ ಆಗುತ್ತಿರುವಾಗ ಶ್ವೇತ ಭವನದ ಹಿತ್ತಲಿನಲ್ಲಿ ಸಾವಯವ ತರಕಾರಿ ಬೆಳೆಸುವ ಮಿಚೆಲ್ ಕನಸು ಈ ಎಲ್ಲವೂ ಅಮೇರಿಕಾದ ಸೆನೆಟರ್ ಆಗಿ ಒಬಾಮ ಆಯ್ಕೆಯಾದ ನಂತರ ಕಟ್ಟಿದವು!
ಮಿಚೆಲ್ ಒಬಾಮ ಆತ್ಮಕಥನ “ಬಿಕಮಿಂಗ್” ಕುರಿತು ದೇವಿಕಾ ನಾಗೇಶ್‌ ಬರಹ

Read More

ನಂಜುಂಡ ನೆಲದ “ಕಾಡು ಅಂಜೂರದ ಹುಡುಗಿ”: ದೇವರಾಜ್‌ ಹುಣಸಿಕಟ್ಟಿ ಬರಹ

ಪ್ರತಿ ಕವಿತೆ ಓದಿದಾಗಲೂ ಭಾವದ ಹೃದಯವನ್ನೇ ಅದ್ದಿ ತೆಗೆದಂತೆ ಬರೆದಿರುವ ಕಮಲಮ್ಮ… ಮನೆಯೆಂದರೆ ಎನ್ನುತ್ತಾ ಹಾಕುವ ಪ್ರತಿ ಅಚ್ಚು ಪಂಜರ, ವಸ್ತು ಸಂಗ್ರಹಾಲಯ, ಸ್ಮಾರಕ, ಜಗತ್ತು ಎನ್ನುವಾಗ ನಿಮಗೆ ಹೌದಲ್ವಾ ಅನ್ನಿಸದೆ ಇರದು.. ಆದ್ರೆ ಅಷ್ಟೇ ಆಗಿದ್ರೆ ಕವಿತೆಯ ಆರದ್ರತೆ ನಮ್ಮನ್ನು ತಾಗುತ್ತಿರಲಿಲ್ಲವೇನೋ, ಆದರೆ ಅವರು ಕೊನೆಗೆ ಎಸೆಯುವ ಪ್ರಶ್ನೆ ಇದೆಯಲ್ಲ ಅದು… ಉಳ್ಳವರ ಮತ್ತೂ ಇರದಿರುವವರ ಕಂದಕಕ್ಕೆ ಕೈ ಹಾಕಿ ನಿಮ್ಮ ಎದೆ ಕಲುಕುತ್ತೆ….
ಎಂ.ಆರ್. ಕಮಲ ಅವರ “ಕಾಡು ಅಂಜೂರದ ಹುಡುಗಿ” ಕವನ ಸಂಕಲನದ ಕುರಿತು ದೇವರಾಜ್‌ ಹುಣಸಿಕಟ್ಟಿ ಬರಹ

Read More

 ಕಿಟಕಿ ಪಕ್ಕ ನಿಂತ ಹುಡುಗಿ: ಸುಧಾ ಆಡುಕಳ ಕೃತಿಗೆ ಐಕೆ ಬೊಳುವಾರು ಬರೆದ ಮುನ್ನುಡಿ

ಮಕ್ಕಳ ರಂಗಭೂಮಿಯ ಬಗ್ಗೆ ಆಸಕ್ತಿ ಇರುವ ಯಾವುದೇ ಶಾಲಾ ವಿದ್ಯಾರ್ಥಿಗಳೂ ಅಭಿನಯಿಸಬಹುದಾದ ಸರಳ ವಿನ್ಯಾಸದ – ಸಂಕೀರ್ಣ ವಿವರಗಳುಳ್ಳ ಉತ್ತಮ ನಾಟಕಗಳು ಇವು. ಅಂದ ಚಂದದ ಸಂಭಾಷಣೆ, ಕುತೂಹಲಕಾರಿಯಾಗಿ ಮುಂದುವರಿಯುವ ವಿಧಾನ. ಹೊಸ ವಿಚಾರಗಳನ್ನು ಹೇಳಬೇಕೆನ್ನುವ ತವಕ ಈ ಎಲ್ಲ ನಾಟಕಗಳಲ್ಲಿಯೂ ಇದೆ. ಪಂಚತಂತ್ರ – ಟಾಲ್ ಸ್ಟಾಯ್ – ರವೀಂದ್ರನಾಥ ಟಾಗೋರ್ ಮುಂತಾದವರು ನೀಡಿರುವ ಕಥಾನಕಗಳನ್ನು ಆಧರಿಸಿ ಪುನಃ ನಿರೂಪಿಸಿರುವ ಮಕ್ಕಳಿಗಾಗಿಯೇ ರಚಿತವಾದ ವಿಶಿಷ್ಟ ಕೃತಿಗಳು ಇವು.
ಸುಧಾ ಆಡುಕಳ ಅವರ “ಕಿಟಕಿ ಪಕ್ಕ ನಿಂತ ಹುಡುಗಿ ಮತ್ತು ಇತರ ನಾಟಕಗಳು” ಕೃತಿಗೆ ಐಕೆ ಬೊಳುವಾರು ಬರೆದ ಮುನ್ನುಡಿ

Read More

ಹೆಣ್ಣಕಣ್ಣೋಟದ ಉತ್ತರ ಮಹಾಭಾರತ: ಡಾ. ಚಂದ್ರಮತಿ ಸೋಂದಾ ಬರಹ

ಈ ಕೃತಿಯಲ್ಲಿ ಎಲ್ಲರನ್ನೂ ಒಳಗೊಂಡು ಮುನ್ನಡೆಯುವ ಅಗಾಧವಾದ ತಾಳ್ಮೆ ಮತ್ತು ಇವೆಲ್ಲ ನೋವಿಗೆ ಕಾರಣವಾಗಿರುವ ತನ್ನಿನಿಯರನ್ನು ದೂರವೇ ಇಡುವ ಸಶಕ್ತ ಹೆಣ್ಣಾಗಿ ಕಾಣಿಸುತ್ತಾಳೆ. ನೂರು ಮಕ್ಕಳನ್ನು ಕಳೆದುಕೊಂಡ ಗಾಂಧಾರಿ, ಮಗನ ಸಾವಿನಿಂದ ನೊಂದ ಸುಭದ್ರೆ, ಯುದ್ಧದಿಂದ ದೂರವಿದ್ದರೂ ಪಂಚಪಾಂಡವರನ್ನು ನುಂಗಿದ ಯುದ್ಧದ ಭೀಕರತೆಗೆ ಸ್ವತಃ ಬಲಿಯಾದ ದ್ರೌಪದಿ, ಕುಂತಿ, ಭಾನುಮತಿ ಎಲ್ಲರೂ ಯುದ್ಧದಿಂದ ನೊಂದವರೇ. ಅವರನ್ನೆಲ್ಲ ಒಂದೆಡೆ ಇರುವಂತೆ ಮಾಡಿದ ದ್ರೌಪದಿ ಇಲ್ಲಿ ಮಾತಿಗಿಂತ ಕ್ರಿಯಶೀಲತೆಗೆ ಹೆಚ್ಚು ಆದ್ಯತೆ ನೀಡಿದ ಪಾತ್ರವಾಗಿ ಮೂಡಿದ್ದಾಳೆ. ಅವಳ ಕರ್ತೃತ್ವಶಕ್ತಿ ಅಸಾಧಾರಣವಾದುದು ಎನ್ನುವ ಭಾವ ನಮ್ಮನ್ನು ತಟ್ಟುತ್ತದೆ.
ಎಂ.ಎಸ್‌. ವೇದಾ ಕಾದಂಬರಿ ‘ಉತ್ತರ ಮಹಾಭಾರತ’ ಕೃತಿಯ ಕುರಿತು ಡಾ. ಚಂದ್ರಮತಿ ಸೋಂದಾ ಬರಹ

Read More

ಹೆಣದ ಹಣ: ಜಿಮ್ ರವಿ ಜೀವನ ಚರಿತ್ರೆಯ ಅಧ್ಯಾಯ

ಮಣ್ಣು ಮುಚ್ಚಿದ್ದ ನಾಲ್ಕಾಣೆಯನ್ನು ಯಾರಿಗೂ ಕಾಣದಂತೆ ಅತಿ ವೇಗವಾಗಿ ತೆಗೆದುಕೊಳ್ಳುವಾಗ ಕೈ ತುಂಬಾ ಮಣ್ಣಿನ ಸಮೇತ ಜೇಬಿಗೆ ಹಾಕಿಕೊಂಡಿದ್ದರ ಪರಿವೆ ಅವನಿಗಿರಲಿಲ್ಲ. ತಕ್ಷಣವೇ ಎಚ್ಚೆತ್ತುಕೊಂಡು `ಏನಿಲ್ಲ ಕಣಣ್ಣೋ ಅಲ್ಲಿ ಬಿದ್‌ಬಿಟ್ಟೆ ನಿಕ್ಕರ್ ಮಣ್ಣಾಯ್ತು ಅಷ್ಟೆ’ ಅಂದ. ಆದ್ರೆ ಆ ಆಸಾಮಿ `ಲೇ ಕಳ್ ನನ್ಮಗ್ನೆ ಬಿದ್ರೆ ಬರೀ ಜೇಬ್ ಮಾತ್ರಾ ಮಣ್ಣಾಗುತೇನ್ಲಾ ಏನೋ ಕಳ್ಗರ ಬಿಟ್ಟಿಂಗೆ ಕಾಣುತ್ತೆ. ನಿಮ್ಮವ್ವ ಸಿಗ್ಲಿ ಹೇಳ್ತೀನಿ ತಡಿ’ ಅಂದು ಹೋದ.
ಡಾ. ಮಂಜುನಾಥ್‌ ಮಾಗೋದಿ ಜಿಮ್ ರವಿ ಅವರ ಜೀವನ ಚರಿತ್ರೆ ‘ರವಿ ನೀನು ಆಗಸದಲ್ಲಿ’ ಕೃತಿಯ ಒಂದು ಅಧ್ಯಾಯ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ