Advertisement

Category: ಸರಣಿ

ಕುಸಿದ ನೆಲದ ಕೆಳಗಿದ್ದ ಅದೃಷ್ಟ: ಎಚ್. ಗೋಪಾಲಕೃಷ್ಣ ಸರಣಿ

ಇಂದಿನವರೆಗೆ ಸುತ್ತ ಪರಿಸರ ಹೀಗಿರಬೇಕಾದರೆ ಚಾವಣಿಯ ಮೇಲೆ ಜಗ್ಗದೆಯೇ ಕುಗ್ಗದೆಯೇ ಹಿಗ್ಗಿ ಹಿಗ್ಗಿ ನಡೆ ಮುಂದೆ ಮಾಡುತ್ತಿದ್ದ ನಾನು ಎಲ್ಲೋ ಕಾಲು ಇಟ್ಟಿದ್ದೆ ಅಂತ ಕಾಣುತ್ತದೆ. ಏಕ್ ದಂ ಡಿವಿಜಿ ಪ್ರತ್ಯಕ್ಷ ಆದರು. ಪದ ಕುಸಿಯೆ ನೆಲವಿಹುದು… ಅಂತ ಅವರು ತಾನೇ ಹೇಳಿದ್ದು? ಕಾಲು ಕುಸಿಯಿತು ಮತ್ತು ನೆಲ ಸಹ ಇತ್ತು. ಆದರೆ ಅದು ಕೆಳಗೆ ಇದ್ದದ್ದು. ನಾನು ಸುಮಾರು ಹತ್ತು ಹನ್ನೆರೆಡು ಅಡಿ ಮೇಲಿಂದ ನೆಲಕ್ಕೆ ಕುಸಿದೆ…
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತೊಂದನೆಯ ಕಂತು

Read More

ಮಳೆ ತಂದ ನೆನಪಿನ ಚಿತ್ರಮಾಲೆ!!: ಭವ್ಯ ಟಿ.ಎಸ್. ಸರಣಿ

ಶಾಲೆಗೆ ಹೋದೊಡನೆ ನಮ್ಮ ಕೊಪ್ಪೆ ತೆಗೆದು, ತೊಯ್ದು ತೊಪ್ಪೆಯಾದ ಯೂನಿಫಾರಂ ಲಂಗಗಳನ್ನು ಹಿಂಡಿ ಕೊಡವಿಕೊಂಡು ಹೋಗಿ ತರಗತಿಯಲ್ಲಿ ಕೂರುತ್ತಿದ್ದೆವು. ಇಡೀ ದಿನ ಸುತ್ತೆಲ್ಲ ಬಟ್ಟೆಯ ಹಸಿವಾಸನೆ ಹರಡಿರುತ್ತಿತ್ತು. ಜೋರಾಗಿ ಮಳೆ ಬರುವಾಗ ಮೇಷ್ಟ್ರು ಪಾಠ ಮಾಡುತ್ತಿರುವಾಗಲೂ ಗಲಾಟೆ ಮಾಡುತ್ತಿದ್ದೆವು. ಇನ್ನೂ ಶಿಕ್ಷಕರು ಬರದ ತರಗತಿಯಲ್ಲಿ ‌ಮಳೆ ಸುರಿಯುವಾಗ ಮನಸೋ ಇಚ್ಛೆ ಕೂಗುತ್ತ ಮಳೆಯೊಂದಿಗೆ ಜುಗಲ್ ಬಂಧಿ ನಡೆಸುತ್ತಿದ್ದೆವು.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ಮಳೆದಿನಗಳಲ್ಲಿ ಶಾಲಾಮಕ್ಕಳ ಸಂಭ್ರಮದ ಕುರಿತ ಬರಹ ನಿಮ್ಮ ಓದಿಗೆ

Read More

ಏಳು ಸುತ್ತಿನ ಕೋಟೆಯ ನಡುವೆ ಜಾಂಬಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಜಾಂಬಿಯಾದ ಸುಮಾರು ಅರುವತ್ತೇಳು ಸಾವಿರ ಚದರ ಕಿಲೋಮೀಟರ್‌ಗಳಷ್ಟು ಕಾಡನ್ನು ಮೀಸಲು ಅರಣ್ಯ ಪ್ರದೇಶ ಎಂದು ಗುರುತಿಸಲಾಗಿದೆ. ಕಾಪರ್‌ಬೆಲ್ಟ್‌ನಲ್ಲಿ ವ್ಯಾಪಾರದ ಉದ್ದೇಶಕ್ಕಾಗಿಯೇ ಮರಗಳನ್ನು ನೆಡಲಾಗಿದೆ. ಇಲ್ಲಿ ಪ್ರಮುಖವಾಗಿ ಸಾಫ್ಟ್‌ವುಡ್ ಮರಗಳಿವೆ. ನೈಋತ್ಯ ಭಾಗದಲ್ಲಿ ಜಾಂಬೆಜಿ ನದಿತೀರದ ಪ್ರದೇಶಗಳಲ್ಲಿ ತೇಗದ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಜಾಂಬಿಯಾದಲ್ಲಿ ಅರಣ್ಯ ನಾಶವಾಗುತ್ತಿರುವುದಕ್ಕೆ ಪ್ರಮುಖ ಕಾರಣ ಅಡುಗೆಗಾಗಿ ಇದ್ದಿಲಿನ ಬಳಕೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಜಾಂಬಿಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ

Read More

“ಡೆಸರ್ಟ್ಸ್‌” ಮಾತ್ರ ಬೇಡಪ್ಪ….: ದರ್ಶನ್‌ ಜಯಣ್ಣ ಸರಣಿ

ಈ ಪ್ರಯಾಣದ ನಡುವೆಲ್ಲಾ ನನ್ನನ್ನು ಕಾಡಿದ ವಿಷಯ ಮಧ್ಯದಲ್ಲೆಲ್ಲೋ ಗಾಡಿ ಪಂಕ್ಚರ್ ಆದರೆ ಏನು ಮಾಡುವುದು? ಎಸಿ ಕೈಕೊಟ್ಟರೆ ಹೇಗೆ ಸಂಭಾಳಿಸುವುದು? ಮರಳ ಮಳೆ ಬಂದು ದಾರಿ ಕಾಣದಾದರೆ ಏನು ಗತಿ, ಇತ್ಯಾದಿ. ಹಾಗೇನೂ ಆಗದಿದ್ದರೂ ರಿಯಾದ್ ತಲುಪುವವರೆಗೂ ಮತ್ತು ಎರಡು ದಿನದ ನಂತರ ವಾಪಾಸು ಬರುವಾಗಲೂ ನನ್ನನ್ನು ಬಿಟ್ಟು ಬಿಡದೆ ಕಾಡಿದ ಪ್ರಶ್ನೆಗಳು ಇವು. ದಾರಿ ಅತ್ಯಂತ ಬ್ಯುಸಿಯಾಗಿದ್ದರೂ, ಅಲ್ಲಲ್ಲಿ ಹತ್ತಾರು ಕಿಲೋಮೀಟರ್‌ಗಳ ನಂತರವೇ ಪೆಟ್ರೋಲ್, ತಿಂಡಿ ತಿನಿಸು, ಪಂಕ್ಚರ್ ಅಂಗಡಿ ಮತ್ತು ಇನ್ನಿತರೆ ಅಂಗಡಿಗಳು ನಿಗದಿತ ಜಾಗದಲ್ಲಿ ಮಾತ್ರವೇ ಇರುವುದು ಪರಿಸ್ಥಿತಿಯನ್ನ ಇನ್ನಷ್ಟು ಬಿಗಡಾಯಿಸಿತ್ತು.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿ

Read More

ಬೋಧಿಸುವಾಗ ಮಕ್ಕಳನ್ನು ನಿಭಾಯಿಸಿದ ರೀತಿ..: ಬಸವನಗೌಡ ಹೆಬ್ಬಳಗೆರೆ ಸರಣಿ

ಒಬ್ಬ ಹುಡುಗ ಮಾತ್ರ ‘ಡ್ಯಾನ್ಸಿಂಗ್’ ಪದ ಹೇಳಿದಾಗ ಜಾಸ್ತಿಯೇ ಕುಣಿಯುತ್ತಾ ಬಂದು ನನ್ನ ಹತ್ತಿರವೇ ಬಂದುಬಿಟ್ಟ. ನನಗೆ ತಕ್ಷಣಕ್ಕೆ ಸಿಟ್ಟು ಬಂದು ಒಂದು ಏಟನ್ನು ಕೊಟ್ಟುಬಿಟ್ಟೆ. ಅವನು ಜೋರಾಗಿ ಅಳಲು ಶುರು ಮಾಡಿದ. ಹಿಂದೆ ಪಾಠ ನೋಡಲು ಕುಳಿತ ಲೆಕ್ಚರ್ ನನಗೆ ಬಯ್ಯುತ್ತಾರೆಂದು ನಾನು ತಕ್ಷಣ ಅಳುತ್ತಿದ್ದ ಹುಡುಗನ ಬಳಿ ಹೋಗಿ ಮತ್ತೆ ಟಚ್ ಮಾಡಿದಂತೆ ಮಾಡಿ ‘ಬೀಟಿಂಗ್’ ಎಂದು ಹೇಳಿದೆ. ಹುಡುಗರೂ ‘ಬೀಟಿಂಗ್…… ಬೀಟಿಂಗ್’ ಎಂದರು. ಅವನು ಅಳುವುದನ್ನು ತೋರಿಸಿ ‘ಕ್ರೈಯಿಂಗ್.. ಕ್ರೈಯಿಂಗ್’ ಎಂದು ಹೇಳಿದೆನು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತೆಂಟನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ