ಆಗ್ನೇಯ ಏಷ್ಯಾದ ಮಲೇಷ್ಯಾ ದೇಶ: ಡಾ ವೆಂಕಟಸ್ವಾಮಿ ಪ್ರವಾಸ ಕಥನ
ಅಲ್ಲಿಂದ ಇಳಿದು ಬಂದು ಕಟ್ಟಡದ ಮುಂದಿನ ಪ್ರಾಂಗಣದಲ್ಲಿ ನಿಂತುಕೊಂಡು ಅವಳಿ ಗೋಪುರಗಳನ್ನೇ ನೋಡತೊಡಗಿದೆವು. ಒಂದು ರೀತಿಯಲ್ಲಿ ತವರು/ಉಕ್ಕಿನ ಬಣ್ಣಹೊಂದಿರುವ ಕಟ್ಟಡದ ಮೇಲೆ ಚಂದ್ರನು ನಗುತ್ತಿದ್ದರೂ ಕಟ್ಟಡದ ಬೆಳಕಿನ ಮುಂದೆ ಅವನ ಮುಖ ಮಂಕಾದಂತೆ ಕಾಣಿಸುತ್ತಿತ್ತು. ಸುಮಾರು ಹೊತ್ತು ನಾವು ಆ ಕಟ್ಟಡದ ಕಡೆಗೆ ನೋಡುತ್ತಲೆ ನಿಂತಿದ್ದೆವು. ನಮ್ಮ ಸುತ್ತಲೂ ಮಂಗೋಲಿಯನ್ ಬಣ್ಣದ ತೆಳು ದೇಹಗಳ ಯುವ ಜೋಡಿಗಳು ಉಲ್ಲಾಸದ ಮಾತುಗಳಲ್ಲಿ ತೊಡಗಿಕೊಂಡಿದ್ದವು.
ಡಾ. ಎಂ. ವೆಂಕಟಸ್ವಾಮಿ ಮಲೇಷ್ಯಾ ಪ್ರವಾಸದ ಅನುಭವಗಳು ನಿಮ್ಮ ಓದಿಗೆ