Advertisement

ನೀಲಿ ನೋಡಿದ ಕಾಡು: ಸುಧಾ ಆಡುಕಳ ಅಂಕಣ

ಒಮ್ಮೆ ಅವನೂ, ನೀಲಿಯ ತಂದೆಯೂ ಅಂಟುವಾಳದ ಕಾಯಿಗಳನ್ನು ಹುಡುಕುತ್ತ ಕಾಡಿನಲ್ಲಿ ಬಹುದೂರದವರೆಗೆ ಸಾಗಿದರಂತೆ. ಚೀಲಗಟ್ಟಲೆ ಕಾಯಿಗಳನ್ನು ಕೊಯ್ದು ಮೂಟೆಗಟ್ಟಿ ದಣಿವಾರಿಸಿಕೊಳ್ಳಲೆಂದು ಮರವೊಂದರ ಬೇರಿನ ಮೇಲೆ ಕುಳಿತು ಕವಳ ತಿನ್ನತೊಡಗಿದರಂತೆ. ಸುಮಾರು ಹೊತ್ತಿಗೆ ನೋಡಿದರೆ ಅವರು ಕುಳಿತಿದ್ದ ಬೇರು ನಿಧಾನಕ್ಕೆ ಚಲಿಸಲು ಪ್ರಾರಂಭವಾಯಿತಂತೆ. ಅರೆ! ಇದೇನಿದು? ಎಂದು ಎದ್ದು ದೂರ ನಿಂತರೆ ಮರದ ಬೇರೆಂದು ಅವರು ಕುಳಿತದ್ದು ಮಾದೊಡ್ಡ ಹೆಬ್ಬಾವಿನ ಮೇಲಂತೆ! ಅದೇನಾದರೂ ತಿರುಗಿ ಸುತ್ತುಹಾಕಿದ್ರೆ ನಾನೂ ಇಲ್ಲ, ನಿನ್ನಪ್ಪನೂ ಇಲ್ಲ ಎಂದು ಅವನು ಕತೆ ಮುಗಿಸುವಾಗ ನೀಲಿ ಕುಳಿತಲ್ಲೇ ಬೆವರುತ್ತಿದ್ದಳು!
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಎಂಟನೆಯ ಕಂತು ನಿಮ್ಮ ಓದಿಗೆ

Loading

ಅಂಕಣ

Latest

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳು: ಎಂ.ವಿ ಶಶಿಭೂಷಣ ರಾಜು ಅಂಕಣ

ಹೀಗೆ ಹೊತ್ತಿಲ್ಲದ ಹೊತ್ತಿನಲ್ಲಿ ಕೆಲಸಮಾಡುವುದರಿಂದ, ಓಡಾಡಲು ಸ್ವಂತ ವಾಹನ ಇಲ್ಲದಿರುವುದರಿಂದ, ರೈಲು, ಬಸ್ಸುಗಳಲ್ಲಿ ಅಥವಾ ನಡೆದು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಬೇಕಾಗಿರುವುದರಿಂದ, ಕೆಲವು ಅನಾಹುತಗಳಿಗೆ ತೆರೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಇದೇ ಹೆಚ್ಚಿನ ಅನಾಹುತಗಳಿಗೆ ಕಾರಣ. ಇದು ಭಾರತೀಯ ವಿದ್ಯಾರ್ಥಿಗಳೇ ಅಲ್ಲ, ಎಲ್ಲಾ ದೇಶಗಳ ವಿದ್ಯಾರ್ಥಿಗಳಿಗೂ ಜರುಗುತ್ತದೆ. ಎಂ.ವಿ. ಶಶಿಭೂಷಣ ರಾಜು ಅಂಕಣ

ಸಾಹಿತ್ಯ

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಕೆಂಪು ಬಣ್ಣದ ರೇಷ್ಮೆ ಸೀರೆಯನ್ನು ಹಿಂದಿನೆರಡು ಬಟ್ಟೆ ತುಂಡುಗಳ ಜೊತೆಗೆ ಜೋಡಿಸುತ್ತಿದ್ದ ಶಂಕ್ರಜ್ಜಿಗೆ ಮದುವೆಯ ನೆನಪು ಬಂದರೂ ಅದು ಮನಸ್ಸಿಗೆ ಖುಷಿ ಕೊಡಲಿಲ್ಲ. ಹಸಿರು, ಹಳದಿ, ಕೆಂಪು ಬಣ್ಣಗಳಿಂದ ತಯಾರಾಗುತ್ತಿದ್ದ ಕೌದಿಗೆ ಸೇರಿಸಲು ಇನ್ನೊಂದೆರಡು ಬಟ್ಟೆಗಳಷ್ಟೇ ಬೇಕಿದ್ದದ್ದು. ಅವಳ ಮಡಿಲ ಬುಡದಲ್ಲಿಯೇ ಇತ್ತು ನೀಲಿ ಬಣ್ಣದ ಫ್ಯಾನ್ಸಿ ಸೀರೆ. ಅದನ್ನು ಎತ್ತಿಕೊಂಡು ಉಳಿದವುಗಳ ಜೊತೆಗೆ ಸೇರಿಸಿ ಹೊಲಿಯಲಾರಂಭಿಸಿದಳು. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಕೌದಿ” ನಿಮ್ಮ ಓದಿಗೆ

ಸರಣಿ

ಇದು ರಾಜಕೀಯ ಕಾಲ: ಚೈತ್ರಾ ಶಿವಯೋಗಿಮಠ ಸರಣಿ

ಶಿಂಬೋರ್ಸ್ಕಾರ ಜನಪ್ರಿಯತೆ ಮತ್ತು ಯಶಸ್ಸಿಗೆ ಕಾರಣವೇನು ಗೊತ್ತೇ? ವಿಶಿಷ್ಟ ಕಾವ್ಯ ಶೈಲಿ, ವಿಭಿನ್ನತೆ. ಯಾವುದೇ ಒಂದು ಕಾವ್ಯ ಶೈಲಿಗೆ ಜೋತು ಬೀಳದೆ, ತನ್ನದೇ ಆದ ನುಡಿಗಟ್ಟನ್ನು ಮತ್ತು ತನ್ನದೇ ಆದ ಭಾಷೆಯನ್ನು ಠಂಕಿಸಿದರು. ದೊಡ್ಡ ಐತಿಹಾಸಿಕ ಘಟನೆಗಳು, ಮಾನವ ಅಸ್ತಿತ್ವದ ಜೈವಿಕ ಸ್ಥಿತಿಗತಿ, ಕವಿಯ ಸಾಮಾಜಿಕ ಪಾತ್ರ ಮತ್ತು ತಾತ್ವಿಕ ವ್ಯವಸ್ಥೆಗಳು, ಸಿದ್ಧಾಂತಗಳಿಂದ ದೂರವೇ ಉಳಿಯಿತು ಅವರ ಕಾವ್ಯ. ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿ

ಪ್ರವಾಸ

ಅನ್ನ ದೇವರ ಮುಂದೆ ಇನ್ನ ದೇವರು ಉಂಟೆ?: ಅಂಜಲಿ ರಾಮಣ್ಣ ಪ್ರವಾಸ ಕಥನ

ಐಶ್ವರ್ಯಾಳ ಸೌಂದರ್ಯ, ಅಮಿತಾಬನ ಎತ್ತರ ಜೊತೆಗೆ ಮಂಗಲ ನಾಥನ ಶಕ್ತಿ ಎಲ್ಲವೂ ಗೌಣ ಹಸಿವಿನ ಮುಂದೆ. ಅಲ್ಲಿಯೇ ನಾಲ್ಕಾರು ರಸ್ತೆಯ ಮುಂದೆ ಇದ್ದ, ದೊಡ್ಡ ಶಾಮಿಯಾನ ಹಾಕಿ ಮದುವೆ ಮನೆಯ ಊಟದ ಹಜಾರದಂತೆ ಇದ್ದ ಜಾಗಕ್ಕೆ ಕರೆದುಕೊಂಡು ಬಂದ ಪವನ್. 'ಸಾಯು ಕ್ರುಪಾ’ ಎನ್ನುವ ಬೋರ್ಡ್ ಇತ್ತು. ಅಂಜಲಿ ರಾಮಣ್ಣ ಬರೆಯುವ ‘ಕಂಡಷ್ಟೂ ಪ್ರಪಂಚ’ ಪ್ರವಾಸ ಅಂಕಣದಲ್ಲಿ ಮಧ್ಯಪ್ರದೇಶನ ಸಾಂದೀಪನಿ ಆಶ್ರಮಕ್ಕೆ ಭೇಟಿಕೊಟ್ಟ ಅನುಭವದ ಕುರಿತ ಬರಹ

ವ್ಯಕ್ತಿ ವಿಶೇಷ

ಅಪ್ಪಯ್ಯ ಎಂದರೆ….: ಇಂದಿರಾ ಜಾನಕಿ ಎಸ್. ಶರ್ಮ ಬರಹ

ಒಂದುದಿನ ಅಪ್ಪಯ್ಯ 'ಚಂದಮಾಮ' ಪುಸ್ತಕ ಓದುತ್ತಿದ್ದಾಗ ಬಂದ ಪರಿಚಿತರೊಬ್ಬರು ...... ನೀವೂ ಚಂದಮಾಮ ಓದ್ತೀರಾ...?” ಎಂದು ಆಶ್ಚರ್ಯದಿಂದ ಕೇಳಿದ್ದರು. ಆಗ ಅಪ್ಪಯ್ಯ .... ಯಾರ ಮನೆ ಹಾಳುಮಾಡುವುದು... ಎಂದು ಯೋಚಿಸುವುದಕ್ಕಿಂತ ಚಂದಮಾಮ ಓದುವುದೇ ಒಳ್ಳೆದಲ್ವೋ.....!” ಅಂತ ಹೇಳಿದ್ದರು. ಲೇಖಕ-ಪ್ರವಚನಕಾರ-ಯಕ್ಷಗಾನ ಕಲಾವಿದರೂ ಆಗಿದ್ದ ದೇರಾಜೆ ಸೀತಾರಾಮಯ್ಯನವರ ಮಗಳು ಇಂದಿರಾ ಜಾನಕಿ ಎಸ್. ಶರ್ಮ ತಮ್ಮ ತಂದೆಯ ಕುರಿತು ಹಂಚಿಕೊಂಡ ಕೆಲವು ನೆನಪುಗಳು...

ಸಂಪಿಗೆ ಸ್ಪೆಷಲ್

ಸ್ಯಾನಿಟರಿ ಇಂಜಿನಿಯರ್ಸ್..: ಪೂರ್ಣೇಶ್ ಮತ್ತಾವರ ಪ್ರಬಂಧ

ಹೀಗೆ ನೀರು ಹೊತ್ತುಕೊಂಡು ಹೋದರೂ ಯಾವಾಗಲೂ ಉದ್ದನೆಯ ಸಾಲು, ನೂಕು ನುಗ್ಗಲು! ಸರಿ, ಈ ಎಲ್ಲಾ ಕಿರಿಕಿರಿ, ಪಡಿಪಾಟಲುಗಳನ್ನು ಅನುಭವಿಸುತ್ತಲೇ ಹತ್ತಾರು ನಿಮಿಷ ಕಾದು ಒಳ ಹೋದರೂ, ಹೋದವರು ಬಾಗಿಲು ಹಾಕಿ, ಬಾಗಿಲಿನ ಚಿಲಕ ಸರಿ ಇಲ್ಲವೆಂದು ಬಕೆಟನ್ನೇ ಬಾಗಿಲಿಗೆ ಅಡ್ಡವಾಗಿ ಇಟ್ಟು, ಕುಕ್ಕರುಗಾಲು ಹಾಕಿ ಕೂತು ಒಂದು ಕೈಲಿ ಬಕೆಟ್, ಮತ್ತೊಂದು ಕೈಲಿ ಸಹಿಸಲಾರದ ವಾಸನೆಗೆ ಮೂಗು ಮುಚ್ಚಿ ಶೌಚ ನಡೆಸಬೇಕೆನ್ನುವಷ್ಟರಲ್ಲೇ ದಡಬಡ ಬಾಗಿಲು ಬಡಿತ, ಸ್ವಲ್ಪ ತಡವಾದರೂ ಬಾಗಿಲನ್ನೇ ಮುರಿಯುವ ಬೆದರಿಕೆ, ಇತ್ಯಾದಿ, ಇತ್ಯಾದಿ.. ಪೂರ್ಣೇಶ್‌ ಮತ್ತಾವರ ಬರೆದ ಪ್ರಬಂಧ ನಿಮ್ಮ ಓದಿಗೆ

ಈ ದಿನದ ಚಿತ್ರ

ಎನ್. ಆರ್. ತಿಪ್ಪೇಸ್ವಾಮಿ ಚಿಕ್ಕಹಳ್ಳಿ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ಎನ್. ಆರ್. ತಿಪ್ಪೇಸ್ವಾಮಿ ಚಿಕ್ಕಹಳ್ಳಿ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ವಾಸವಾಗಿದ್ದಾರೆ. ತಾ.ಪಂ ಕಚೇರಿ, ಹಿರಿಯೂರು ಇಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಹಂಪಿಯ ಕನ್ನಡ ವಿ.ವಿ.ಯಲ್ಲಿ ಪಿ.ಹೆಚ್ ಡಿ ಸಂಶೋಧನಾ ಅಧ್ಯಯನ ಮಾಡುತ್ತಿದ್ದಾರೆ. ಹಲವು ಪತ್ರಿಕೆಗಳಲ್ಲಿ ಇವರ ಕತೆಗಳು ಪ್ರಕಟವಾಗಿವೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ. ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

  • ದಿನದ ಕವಿತೆ
  • ವಾರದ ಕಥೆ
  • ಮಿನಿಕಾಯ್ ಫೋಟೋ ಕಥನ
  • ದಿನದ ಕಾರ್ಟೂನ್

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಕೆಂಪು ಬಣ್ಣದ ರೇಷ್ಮೆ ಸೀರೆಯನ್ನು ಹಿಂದಿನೆರಡು ಬಟ್ಟೆ ತುಂಡುಗಳ ಜೊತೆಗೆ ಜೋಡಿಸುತ್ತಿದ್ದ ಶಂಕ್ರಜ್ಜಿಗೆ ಮದುವೆಯ ನೆನಪು ಬಂದರೂ ಅದು ಮನಸ್ಸಿಗೆ ಖುಷಿ ಕೊಡಲಿಲ್ಲ. ಹಸಿರು, ಹಳದಿ, ಕೆಂಪು ಬಣ್ಣಗಳಿಂದ ತಯಾರಾಗುತ್ತಿದ್ದ ಕೌದಿಗೆ ಸೇರಿಸಲು ಇನ್ನೊಂದೆರಡು ಬಟ್ಟೆಗಳಷ್ಟೇ ಬೇಕಿದ್ದದ್ದು. ಅವಳ ಮಡಿಲ ಬುಡದಲ್ಲಿಯೇ ಇತ್ತು ನೀಲಿ ಬಣ್ಣದ ಫ್ಯಾನ್ಸಿ ಸೀರೆ. ಅದನ್ನು ಎತ್ತಿಕೊಂಡು ಉಳಿದವುಗಳ ಜೊತೆಗೆ ಸೇರಿಸಿ ಹೊಲಿಯಲಾರಂಭಿಸಿದಳು. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಕೌದಿ” ನಿಮ್ಮ ಓದಿಗೆ

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು


ನಮ್ಮ ಫೇಸ್ ಬುಕ್


ನಮ್ಮ ಟ್ವಿಟ್ಟರ್



ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ


ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ